ಬೆಂಗಳೂರಿನಲ್ಲಿರುವ ಪಿಜಿಗಳ ಗತ್ತು ಇಡೀ ದೇಶಕ್ಕೆ ಗೊತ್ತು ಎನ್ನುವಂತೆ ಮಾಡಿದೆ, ದೆಹಲಿ ಮಹಿಳೆಯೊಬ್ಬರ ಟ್ವೀಟ್. ಬೆಂಗಳೂರಿನಲ್ಲಿ ಪಿಜಿಗಳ ಬಾಡಿಗೆ ಎಷ್ಟು ಅನ್ನೋದನ್ನ, ದೆಹಲಿ ಮಹಿಳೆಯೊಬ್ಬರು ಹಂಚಿಕೊಂಡಿರುವ ವ್ಯಂಗ್ಯಾತ್ಮಕ ಪೋಸ್ಟ್ ಹೇಳುತ್ತಿದೆ. ಅವರು ಹೇಳಿರುವ ಹಾಗೆಯೇ ಬೆಂಗಳೂರಿನ ಪಿಜಿಗಳ ಬೆಲೆ ಚಿನ್ನಕ್ಕಿಂತ ದುಬಾರಿಯಾಗುತ್ತಿದೆ. ವರ್ಷ ವರ್ಷ ಏನೋ ಒಂದು ನೆಪ ಹೇಳಿ, ಪಿಜಿ ಬಾಡಿಗೆ ಹೆಚ್ಚಿಸುವ ಮಾಲೀಕರ ವಿರುದ್ಧ ವ್ಯಂಗ್ಯಾತ್ಮಕವಾಗಿ ತಿರುಗಿಬಿದ್ದಿರುವುದೋ, ಅಥವಾ ಹಾಸ್ಯಾತ್ಮಕವಾಗಿ ಪೋಸ್ಟ್ ಹಂಚಿಕೊಂಡಿರುವುದೋ ಗೊತ್ತಿಲ್ಲ. ಆದರೆ ಈ ಒಂದು ಪೋಸ್ಟ್ ಎಲ್ಲೆಡೆ ವೈರಲ್ ಆಗುತ್ತಿದೆ.

ಮೊನಾಲಿಕಾ ಪಾಟ್ನಕ್ ಎಂಬುವರು, ನಾನು ಬೆಂಗಳೂರಿನಲ್ಲಿ ಪಿಜಿ ಓನರ್ ಆಗಬೆಕು. ಇದು ನನ್ನ ಕನಸಿನ ವೃತ್ತಿ. ಇಲ್ಲಿ ಏನೂ ಕೆಲಸ ಮಾಡುವ ಅಗತ್ಯವಿಲ್ಲ. ತಿಂಗಳಿಡೀ ಸುಮ್ಮನೆ ಕುಳಿತು ತಿಂಗಳಾಂತ್ಯದಲ್ಲಿ ಪಿಜಿ ಬಾಡಿಗೆ ವಸೂಲಿ ಮಾಡಿದರೆ ಮುಗೀತು ಎಂದು ಬರೆದುಕೊಂಡಿದ್ದರು. X ಖಾತೆಯಲ್ಲಿ ಹಂಚಿಕೊಂಡ ಈ ಒಂದು ಪೋಸ್ಟ್ ಕೇವಲ 24 ಗಂಟೆಗಳಲ್ಲಿ 4 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದು ವೈರಲ್ ಆಗಿದೆ. ಸೋಷಿಯಲ್ ಮೀಡಿಯಾ ತುಂಬೆಲ್ಲಾ ಹಲ್‌ಚಲ್ ಎಬ್ಬಿಸಿದೆ.
ಈ ಪೋಸ್ಟ್ ನೋಡ್ತಾ ಇದ್ರೆ ನಿಜಕ್ಕೂ ಆ ಮಹಿಳೆ, ಇದನ್ನು ವ್ಯಂಗ್ಯಾತ್ಮಕವಾಗಿ ಬರೆದುಕೊಂಡಿದ್ದಾರೆ ಅನಿಸೋದು ಸತ್ಯ. ಏಕೆಂದರೆ ಆಕೆ ಹೇಳಿರುವುದು ನಾನು ಬೆಂಗಳೂರಿನಲ್ಲಿ ಪಿಜಿ ಓನರ್ ಆದರೆ, ಪ್ರತಿ ತಿಂಗಳು ಕೈತುಂಬಾ ಹಣ ಗಳಿಸಬಹುದು. ಹೀಗಾಗಿ ನಾನು ಇದನ್ನೇ ನನ್ನ ಡ್ರೀಮ್ ಜಾಬ್ ಎಂದು ಹೇಳಿಕೊಳ್ಳುತ್ತೇನೆ ಎಂದು ವ್ಯಕ್ತಪಡಿಸಿದ್ದಾರೆ.
ಇನ್ನು ಈ ಪೋಸ್ಟ್ ಕೆಲವೊಬ್ಬರಿಗೆ ಹಾಸ್ಯಾತ್ಮಕವಾಗಿ ಕಾಣಿಸಿದೆ. ಇದು ಹಾಸ್ಯವಾದರೂ, ವ್ಯಂಗ್ಯವಾದರೂ ಇದೇ ಸತ್ಯ. ಏಕೆಂದರೆ ಬೆಂಗಳೂರಿನಲ್ಲಿ ಪಿಜಿ ಬ್ಯುಸಿನೆಸ್‌ಗಿಂತ ದೊಡ್ಡದಿಲ್ಲ ಎನ್ನುವಂತಾಗಿದೆ. ದಿನದಿಂದ ದಿನಕ್ಕೆ ಪಿಜಿಗಳು ಬೆಳೆಯುತ್ತಲೇ ಇವೆ. ಬೇರೆ ಕಡೆಯಿಂದ ವಲಸೆ ಬಂದ ಬಹಳಷ್ಟು ಜನ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಉದ್ಯೋಗ, ಶಿಕ್ಷಣ, ತರಬೇತಿ ಹೀಗೆ ನಾನಾ ಕಾರಣಗಳಿಂದ ಬೆಂಗಳೂರಿನಲ್ಲಿ ನೆಲೆಸಿರುತ್ತಾರೆ. ಈ ಪೈಕಿ ಕೆಲವೇ ಕೆಲವರು ಮಾತ್ರ ಮನೆಗಳನ್ನು ಮಾಡಿಕೊಂಡಿರುತ್ತಾರೆ. ಇನ್ನುಳಿದ ಬಹುತೇಕ ಮಂದಿ ಪಿಜಿಗಳನ್ನೇ ಅವಲಂಬಿಸಿರುತ್ತಾರೆ. ಆದರೆ ಪಿಜಿ ಓನರ್‍ಗಳು ಬಾಡಿಗೆ ರೂಪದಲ್ಲಿ ಬರೆ ಎಳೆಯುತ್ತಾರೆ ಎಂಬುದು ಈ ಪೋಸ್ಟ್‌ನ ಮೂಲ ಅರ್ಥವೂ ಆಗಿದೆ.
ಇನ್ನು ಇಲ್ಲಿ ಕೇಳಿ ಬಂದಿರುವ ಮತ್ತೊಂದು ಆರೋಪವೇನೆಂದರೆ, ಪಿಜಿ ಓನರ್‍ಗಳು ಬಹಳ ಸೊಕ್ಕಿನಿಂದ ಬಾಡಿಗೆದಾರರ ಜೊತೆ ವರ್ತಿಸುತ್ತಾರೆ ಎಂತಲೂ ಇದೆ. ಹಾಗೆಯೇ ಸೆಕ್ಯೂರಿಟಿ ಡೆಪಾಸಿಟ್ ಮಾಡುವ ಹಣವನ್ನು ಹಿಂತಿರುಗಿಸಲು ನಾನಾ ಕಾರಣ ಹೇಳುತ್ತಾರೆ. ಇದರಿಂದ ಎಷ್ಟೋ ಜನ ಪಿಜಿಯಲ್ಲಿ ಉಳಿಯರು ಬಂದವರಿಗೆ ತೊಂದರೆಯಾಗಿದೆ ಎಂದು ಆರೋಪ ಮಾಡಿದ್ದಾರೆ.
ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದಂತೆ, ನೆಟ್ಟಿಗರು ಕೂಡ ಈ ಬಗ್ಗೆ ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿ, ಯಾರಾದರೂ ಸ್ಟಾರ್ಟ್ ಅಪ್ ಬ್ಯುಸಿನೆಸ್ ಮಾಡಬೇಕೆಂಬ ಆಸೆ ಇದ್ದರೆ ಮರೆತುಬಿಡಿ. ಏಕೆಂದರೆ ಬೆಂಗಳೂರಿನಲ್ಲಿ ನಿಜಕ್ಕೂ ಓಡುವ ಕುದುರೆ ಎಂದರೆ ಪಿಜಿ ಓನರ್‍ಗಳು. ಪಿಜಿಗೆ ಹೆಚ್ಚು ಬಂಡವಾಳ ಬೇಕಿಲ್ಲ. ಒಂದು ಮನೆ ಇದ್ದರೆ ಸಾಕು. ಮಿತಿ ಇಲ್ಲದ ಆದಾಯ ಬರುತ್ತದೆ. ಮತ್ತು ಇಲ್ಲಿ ಯಾರಿಗೂ ಮರುಪಾವತಿ ಮಾಡುವ ಅಗತ್ಯವಿಲ್ಲ. ಇದೊಂದು ಲೆಜೆಂಡರಿ ಬ್ಯುಸಿನೆಸ್ ಎಂದು ಟೀಕಿಸಿದ್ದಾರೆ.
ಮತ್ತೊಬರ್‍ಯಾರೋ ಕಾಮೆಂಟ್ ಮಾಡಿ ಬೆಂಗಳೂರಿನ ಪಿಜಿಗಳಲ್ಲಿ, ಸರಿಯಾದ ರೀತಿಯ ಆಹಾರ ಒದಗಿಸುವುದಿಲ್ಲ. ದಿನಕ್ಕೆ ಮೂರು ಬಾರಿ ಊಟ ಎನ್ನುತ್ತಾರೆ. ಅಲ್ಲಿ ಅನ್ನ ಬಿಟ್ಟರೆ ಬೇರೇನು ಸರಿಯಾಗಿರುವುದಿಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ. ಹೀಗೆ ಬೆಂಗಳೂರಿನ ಪಿಜಿಗಳ ಕುರಿತು ಈ ಒಂದು ಪೋಸ್ಟ್ ವೈರಲ್ ಆಗಿದ್ದೇ ಆಗಿದ್ದು, ಪಿಜಿಗಳಲ್ಲಿ ನೆಲೆಸಿರುವವರೆಲ್ಲಾ ಯುದ್ಧಕ್ಕೆ ಹೊರಟವರಂತೆ ಬಂದು ಕಮೆಂಟ್, ಶೇರ್ ಮಾಡುತ್ತಿದ್ದಾರೆ. ಈ ಪೋಸ್ಟ್‌ನ ಮತ್ತಷ್ಟು ವೈರಲ್ ಮಾಡುತ್ತಿದ್ದಾರೆ.


Click it and Unblock the Notifications