ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ಸ್ ಫೆಡರೇಶನ್ (ಎಫ್‌ಎಡಿಎ) ಸೆಪ್ಟೆಂಬರ್ 2023 ರ ವಾಹನ ರಿಟೇಲ್ ಡೇಟಾವನ್ನು ಬಿಡುಗಡೆ ಮಾಡಿದೆ. ಅಕ್ಟೋಬರ್ 9 ರಂದು ಬಿಡುಗಡೆಯಾದ ಡೇಟಾದ ಪ್ರಕಾರ ಆಟೋಮೊಬೈಲ್ ರಿಟೇಲ್ ಮಾರಾಟವು ವರ್ಷದಿಂದ ವರ್ಷಕ್ಕೆ ಬರೋಬ್ಬರಿ ಶೇಕಡ 20 ರಷ್ಟು ಬೆಳವಣಿಗೆಯನ್ನು ಕಂಡಿದೆ.
ಎಫ್‌ಎಡಿಎ ಭಾರತದಲ್ಲಿ ಆಟೋಮೊಬೈಲ್ ರೀಟೇಲ್ ಅನ್ನು ಪ್ರತಿನಿಧಿಸುವ ಒಂದು ಉನ್ನತ ರಾಷ್ಟ್ರೀಯ ಸಂಸ್ಥೆಯಾಗಿದೆ. ಈ ಸಂಸ್ಥೆ ಬಿಡುಗಡೆ ಮಾಡಿದ ಡೇಟಾವು ಟೋಮೊಬೈಲ್ ರಿಟೇಲ್ ಮಾರಾಟದಲ್ಲಿ ಬೆಳವಣಿಗೆ ತೋರಿಸಿದೆ. "ಸೆಪ್ಟೆಂಬರ್ 2023 ರಲ್ಲಿ ವಾಹನದ ರಿಟೇಲ್ ವ್ಯಾಪಾರವು ಶೇಕಡ 20 ರಷ್ಟು ಎರಡಂಕಿಯ ವರ್ಷದಿಂದ ವರ್ಷಕ್ಕೆ ಬೆಳವಣಿಗೆಯನ್ನು ದಾಖಲಿಸಿದೆ," ಎಮದು ಸಂಸ್ಥೆ ಹೇಳಿಕೊಂಡಿದೆ.

ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ಸ್ ಫೆಡರೇಶನ್ (ಎಫ್‌ಎಡಿಎ) ಹೇಳಿಕೆಯ ಪ್ರಕಾರ, ತಿಂಗಳಿನಿಂದ ತಿಂಗಳಿಗೆ ಉದ್ಯಮವು ಸ್ವಯಂ ಮಾರಾಟದಲ್ಲಿ ಶೇಕಡ 3.5 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಆದರೆ ಟ್ರಾಕ್ಟರ್ ವಿಭಾಗವು ಕುಸಿಯುತ್ತಲೇ ಇದೆ. ಟ್ರಾಕ್ಟರ್ ವಿಭಾಗ ಶೇಕಡ 26 ರಷ್ಟು ಕುಸಿತಗೊಂಡಿದೆ.
ವಿಭಾಗವಾರು ಸಂಖ್ಯೆಗಳು
ವಿಭಾಗವಾರು, ದ್ವಿಚಕ್ರ ವಾಹನಗಳು ವರ್ಷಕ್ಕೆ ಶೇಕಡ 21.68 ರಷ್ಟು ಬೆಳವಣಿಗೆ ಕಂಡಿದೆ. ಸೆಪ್ಟೆಂಬರ್ 2022 ರಲ್ಲಿ 1,078,286 ಯುನಿಟ್‌ಗಳು ಮಾರಾಟವಾಗಿದ್ದು, ಸೆಪ್ಟೆಂಬರ್ 2023 ರಲ್ಲಿ 1,312,101 ಯುನಿಟ್‌ಗಳು ಮಾರಾಟವಾಗಿದೆ. ಅಂದರೆ ಭಾರೀ ಪ್ರಮಾಣದಲ್ಲಿ ಬೆಳವಣಿಗೆ ನಾವು ಕಾಣಬಹುದಾಗಿದೆ.
ತ್ರಿಚಕ್ರ ವಾಹನಗಳ ವಿಭಾಗದಲ್ಲಿ ಹೊಸ ದಾಖಲೆ
ತ್ರಿಚಕ್ರ ವಾಹನಗಳ ವಿಭಾಗದಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ. ಈ ವಿಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಮಾರಾಟ ವೇಗವನ್ನು ಕಂಡಿದೆ. ಸಾರ್ವಕಾಲಿಕ ರಿಟೇಲ್ ಮಾರಾಟ ಕಂಡು ಬಂದಿದೆ. ಸೆಪ್ಟೆಂಬರ್ 2022 ರಲ್ಲಿ 68,937 ಯುನಿಟ್‌ಗಳಷ್ಟು ತ್ರಿಚಕ್ರ ವಾಹನಗಳ ಮಾರಾಟವಾಗಿದೆ.
ನಾವು ಈ ಹಿಂದಿನ ವರ್ಷದ ಮಾರಾಟ ಪ್ರಮಾಣಕ್ಕೆ ಹೋಲಿಕೆ ಮಾಡಿದಾಗ ಈ ವರ್ಷದ ಸೆಪ್ಟೆಂಬರ್‌ನಲ್ಲಿ ತ್ರಿಚಕ್ರ ವಾಹನಗಳ ಮಾರಾಟವು 102,426 ಯುನಿಟ್‌ಗಳಿಗೆ ತಲುಪಿದ್ದು, ಸುಮಾರು ಶೇಕಡ 48.58 ರಷ್ಟು ಬೆಳವಣಿಗೆಯಾಗಿದೆ. ಇನ್ನು ತಿಂಗಳಿನಿಂದ ತಿಂಗಳಿಗೆ ಶೇಕಡ 5 ರಷ್ಟು ಬೆಳವಣಿಗೆ ಕಂಡಿದೆ. 1 ಲಕ್ಷ ಯುನಿಟ್ ಗಡಿ ದಾಟಿದೆ.
ಪ್ರಯಾಣಿಕ ವಾಹನಗಳ (ಪಿವಿ) ವಿಭಾಗವು ಸೆಪ್ಟೆಂಬರ್ 2023 ರಲ್ಲಿ 332,248 ಯೂನಿಟ್‌ಗಳಿಗೆ ಅಂದರೆ ಶೇಕಡ 19.03 ರಷ್ಟು ಏರಿಕೆಯಾಗಿದೆ. ಹಿಂದಿನ ವರ್ಷದ ಅದೇ ಅವಧಿಯಲ್ಲಿ 279,137 ಯುನಿಟ್‌ಗಳಷ್ಟು ಮಾರಾಟವಾಗಿದೆ. ಇನ್ನು ವಾಣಿಜ್ಯ ವಾಹನಗಳ (ಸಿವಿ) ಮಾರಾಟವು ಸೆಪ್ಟೆಂಬರ್ 2023 ರಲ್ಲಿ 80,804 ಯುನಿಟ್ ಆಗಿದ್ದು, ಸೆಪ್ಟೆಂಬರ್ 2022 ರಲ್ಲಿ 77,054 ಮಾರಾಟವಾಗಿದೆ.
ಎಲ್ಲ ವಿಭಾಗಗಳು ಏರಿಕೆಯನ್ನು ಕಾಣುತ್ತಾ ಬಂದಿದ್ದರೂ ಕೂಡಾ ಟ್ರಾಕ್ಟರ್‌ಗಳ ವಿಭಾಗ ಮಾತ್ರ ಕುಸಿತ ಕಂಡಿದೆ. ಸೆಪ್ಟೆಂಬರ್ 2022 60,321 ಯುನಿಟ್ ಮಾರಾಟವಾಗಿದ್ದು, 2023 ರ ಸೆಪ್ಟೆಂಬರ್‌ನಲ್ಲಿ 54,492 ಯುನಿಟ್‌ಗಳಷ್ಟು ಮಾರಾಟವಾಗಿದೆ. ಅಂದರೆ ವರ್ಷದಿಂದ ವರ್ಷಕ್ಕೆ ಟ್ರಾಕ್ಟರ್‌ಗಳ ವಿಭಾಗದ ಮಾರಾಟ ಶೇಕಡ 9.66 ರಷ್ಟು ಕುಸಿತ ಕಂಡಿದೆ.


Click it and Unblock the Notifications