ಲಕ್ಷದ್ವೀಪ, ಮಾರ್ಚ್ 18: ಲಕ್ಷದ್ವೀಪದ ಜನರಿಗೆ ಕೇಂದ್ರ ಸರ್ಕಾರ ಭರ್ಜರಿ ಗಿಫ್ಟ್ ಕೊಟ್ಟಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಗಮನಾರ್ಹ ಇಳಿಕೆ ಮಾಡಲಾಗಿದ್ದು, ಇತಿಹಾಸದಲ್ಲೇ ದರ ಕಡಿಮೆಯಾದ ಪ್ರಮಾಣದ ಪೈಕಿ ಇದೇ ದಾಖಲೆಯ ಇಳಿಕೆಯಾಗಿದೆ.
ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಶನಿವಾರ ಹೊಸ ಆದೇಶ ಮಾಡಿದ್ದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಈ ಇಳಿಕೆಯಾಗಿದೆ.ಲಕ್ಷದ್ವೀಪ ದ್ವೀಪಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಗೆ ರೂ 15.3 ವರೆಗೆ ದರ ಕಡಿತವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 24 ರಂದು ಇದೇ ಲಕ್ಷದ್ವೀಪದ ದ್ವೀಪಗಳಿಗೆ ಭೇಟಿ ನೀಡಿದ ಚಿತ್ರಗಳು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು ಮತ್ತು ಭಾರತ ಹಾಗೂ ಮಾಲ್ಡಿವ್ಸ್ ನಡುವಿನ ದ್ವಿಪಕ್ಷೀಯ ಸಂಬಂಧ ಹದಗೆಡುತ್ತಿರುವ ಮಧ್ಯೆ ಮಾಲ್ಡೀವ್ಸ್ ಟಕ್ಕರ್ ಕೊಡಲು ಲಕ್ಷದ್ವೀಪವನ್ನು ಪ್ರವಾಸಿ ಸ್ವರ್ಗವನ್ನಾಗಿ ಅಭಿವೃದ್ಧಿಪಡಿಸಲು ಸರ್ಕಾರ ಮುಂದಾಗಿದೆ.
ವೇಗ ಪಡೆಯಲಿದೆ ಲಕ್ಷದ್ವೀಪದ ಅಭಿವೃದ್ಧಿ !
ಲಕ್ಷದ್ವೀಪದ ದೂರದ ದ್ವೀಪಗಳಿಗೆ ಇಂಧನವನ್ನು ಸಾಗಿಸಲು ಮತ್ತು ವಿತರಿಸಲು ಮತ್ತು ಅಲ್ಲಿನ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಹೆಚ್ಚಿನ ತೆರಿಗೆ ಶುಲ್ಕವನ್ನು ಇಲ್ಲಿ ಇದುವರೆಗೂ ವಿಧಿಸಲಾಗಿತ್ತು.. ಇದೀಗ ಈ ಶುಲ್ಕಗಳನ್ನು ಕಡಿತಗೊಳಿಸಲಾಗಿದ್ದು ಇದರಿಂದ ೬.೯ ರೂಪಾಯಿ ಕಡಿತವಾಗಿದೆ. ಇದರ ಮೇಲೆ ಮತ್ತೆ ೭ ರೂಪಾಯಿ ದರ ಇಳಿಕೆ ಮಾಡಿದ್ದು, ಪ್ರತಿ ಲೀಟರ್ ಪೆಟ್ರೋಲ್ ಗೆ ೧೫.೩ ರೂಪಾಯಿ ಹಾಗೂ ಪ್ರತಿ ಲೀಟರ್ ಡೀಸೆಲ್ ಗೆ ೬.೯ ರೂಪಾಯಿಗೆ ದರ ಕಡಿತವಾಗಿದೆ.
ಒಟ್ಟು ಪ್ರಮುಖ ೪ ಧ್ವೀಪಗಳನ್ನ ಗಮನಲ್ಲಿಟ್ಟುಕೊಂಡು ಆಯಾ ಆಯಾ ದ್ವೀಪಗಳಲ್ಲಿ , ಅದರ ಪರಿಸ್ಥಿತಿಗಳ ಆಧಾರದ ಮೇಲೆ , ಅಲ್ಲಿಗೆ ತಕ್ಕಹಾಗೆ ವೆಚ್ಚವನ್ನು ಸರಿದೂಗಿಸಲಾಗಿದೆ. ಇದು ಕ್ರಾಂತಿಕಾರಿ ದರ ಕಡಿತ ಎಂದು ಬಣ್ಣಿಸಲಾಗಿದ್ದು ದೇಶದ ಇತರೇ ಭಾಗಗಳಲ್ಲೂ ಇದೇ ದರ ಜಾರಿಯಾದ್ರೆ ಎಷ್ಟು ಅಧ್ಬುದ್ಥ ಅಂತ ಭಾರತೀಯರು ಔಹಾರಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳನ್ನು ಲಕ್ಷದ್ವೀಪದ ಬೆಳವಣಿಗೆಯಲ್ಲಿ ಸರ್ಕಾರ ಕೈಗೊಂಡ ಕ್ರಾಂತಿಕಾರಿ ನಿರ್ಧಾರ ಎಂದೇ ಹೇಳಾಗಿದ್ದು , ಮುಂಬರುವ ದಿನಗಳಲ್ಲಿ ಈ ಬದಲಾವಣೆಯಿಂದ ನಿರೀಕ್ಷೆಗೂ ಮೀರಿ ಲಕ್ಷದ್ವೀಪ ವೇಗದ ಅಭಿವೃದ್ಧಿ ಕಾಣಲಿದೆ ಎಂದು ವಿಶ್ಲೇಷಿಸಲಾಗಿದೆ. ಈಗಾಗಲೇ ಭಾರತವನ್ನು ಎದುರುಹಾಕಿಕೊಂಡಿರುವ ಮಾಲ್ಡ್ವೀಸ್ ತತ್ತರಿಸಿಹೋಗಿದ್ದು ಈ ಬೆಳವಣಿಗೆ ಆ ಸಣ್ಣ ರಾಷ್ಟ್ರಕ್ಕೆ ಮತ್ತೊಂದು ಮಾಸ್ಟರ್ ಸ್ಟ್ರೋಕ್ ಅಂತಲೇ ಹೇಳಲಾಗ್ತಿದೆ.


Click it and Unblock the Notifications