ನವದೆಹಲಿ, ಆಗಸ್ಟ್ 3: ಭಾರತದ ಯುವ ಮತ್ತು ಸಿರಿವಂತ ಮಹಿಳಾ ಉದ್ಯಮಿಗಳಲ್ಲಿ ದೇವಿತಾ ಸರಾಫ್ ಕೂಡಾ ಒಬ್ಬರಾಗಿದ್ದಾರೆ. ದೇವಿತಾ ಅವರು Vu ಟೆಲಿವಿಷನ್‌ನ ಸಂಸ್ಥಾಪಕರು, ಅಧ್ಯಕ್ಷರು ಮತ್ತು CEO ಆಗಿದ್ದಾರೆ. ದೇವಿತಾ ತಮ್ಮ ಕೇವಲ 24ನೇ ವಯಸ್ಸಿನಲ್ಲಿ ಸ್ಥಾಪಿಸಿದ ಕಂಪನಿ ಇಂದು ವಾರ್ಷಿಕ 900 ಕೋಟಿಗೂ ಅಧಿಕ ವಹಿವಾಟು ನಡೆಸುತ್ತಿದೆ.
ದೇವಿತಾ ಇಂದು ಯಶಸ್ವಿ ಉದ್ಯಮಿಯಾಗಿ, ಸ್ವಯಂ ನಿರ್ಮಿತ ಮಿಲಿಯನೇರ್ ಗಳಲ್ಲಿ ಓರ್ವರಾಗಿ ಬೆಳೆದು ನಿಂತಿದ್ದು, ಆದರೆ ಅವರಿಗೆ ಈ ಯಶಸ್ಸು ಸುಲಭವಾಗಿ ಒಲಿದುಬಂದಿಲ್ಲ. ತಮ್ಮ ಉದ್ಯಮ ಕಲ್ಪನೆಯನ್ನು ಲಾಭದಾಯಕ ವ್ಯವಹಾರವಾಗಿ ಪರಿವರ್ತಿಸಲು ಅವರು ಹಲವು ವರ್ಷಗಳ ಕಾಲ ಕಾಯಬೇಕಾಯಿತು. ಇಂದು ಅವರ ಕಂಪನಿಯು ಸ್ಥಾಪನೆಯಾದ ಮೊದಲ 8 ವರ್ಷಗಳಲ್ಲಿ 30 ಕೋಟಿ ರೂಪಾಯಿ ವ್ಯವಹಾರ ಮಾಡಿದ್ದು, ಆದಾದ ಮುಂದಿನ 4 ವರ್ಷಗಳಲ್ಲಿ ವಾರ್ಷಿಕ ಆದಾಯ 900 ಕೋಟಿ ರೂ ಸಂಗ್ರಹಿಸಿದ್ದು ಈ ವರ್ಷ 1000 ಕೋಟಿ ರೂ.ಗಳ ಗಡಿಯನ್ನು ಮುಟ್ಟುವ ಗುರಿಯನ್ನು ಕಂಪನಿ ಹೊಂದಿದೆ.

ದೇವಿತಾ ಸರಾಫ್ ಮುಂಬೈ ಮೂಲದವರಾಗಿದ್ದು, ಅವರ ಕುಟುಂಬ ವ್ಯಾಪಾರವನ್ನೇ ನೆಚ್ಚಿಕೊಂಡಿತ್ತು. ಜೆನಿತ್ ಕಂಪ್ಯೂಟರ್ಸ್‌ನ ಅಧ್ಯಕ್ಷರಾಗಿದ್ದ ರಾಜ್‌ಕುಮಾರ್ ಸರಾಫ್ ಅವರ ಪುತ್ರಿಯಾಗಿದ್ದ ದೇವಿಕಾ ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ.
ಕುಟುಂಬವೂ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರಿಂದ, ದೇವಿತಾ ಕೂಡಾ ಉದ್ಯಮಿಯಾಗುವ ಒಲವನ್ನೇ ಹೊಂದಿದ್ದರು. ತಂದೆಯ ಕಂಪನಿಯಾದ ಜೆನಿತ್ ಕಂಪ್ಯೂಟರ್ಸ್‌ನಲ್ಲಿ ತನ್ನ ಪ್ರಯಾಣವನ್ನು ಪ್ರಾರಂಭಿಸಿದರು. ತಮ್ಮ 21 ನೇ ವಯಸ್ಸಿನಲ್ಲಿ ಮಾರ್ಕೆಟಿಂಗ್ ನಿರ್ದೇಶಕರಾಗಿ 25 ನೇ ವಯಸ್ಸಿನಲ್ಲಿ CEO ಆಗಿ ಅಧಿಕಾರ ವಹಿಸಿಕೊಂಡರು. ಈ ಸಮಯದ ನಡುವೆ, ಅಂದರೆ 2005 ರಲ್ಲಿ ದೇವಿಕಾ ಕೇವಲ 24 ವರ್ಷವಿದ್ದಾಗ ಅವರು Vu ಟೆಕ್ನಾಲಜೀಸ್ ಎಂಬ ಪ್ರತ್ಯೇಕ ಸಂಸ್ಥೆಯನ್ನು ಪ್ರಾರಂಭಿಸಲು ಮುಂದಡಿ ಇಟ್ಟರು.
ಇದೇ ವೇಳೆ ತಮ್ಮ ಭವಿಷ್ಯವನ್ನು ಉತ್ತಮವಾಗಿಸಲು , ದೇವಿತಾ ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‌ನಿಂದ ಆನ್‌ಲೈನ್ ಮೂಲಕ ಮ್ಯಾನೇಜ್‌ಮೆಂಟ್ ಕೋರ್ಸ್ ಅಭ್ಯಾಸಿಸಿದರು. ಇದರ ನಂತರ ,ತಮ್ಮ ಆದ ಟೆಲಿವಿಷನ್ ಕಂಪನಿಯನ್ನು ಸ್ಥಾಪಿಸಲು ನಿರ್ಧರಿಸಿ 2006 ರಲ್ಲಿ Vu ಟೆಲಿವಿಷನ್ಸ್ ಅನ್ನು ಸ್ಥಾಪಿಸಿದರು. ಇಂದು Vu ಟೆಲಿವಿಷನ್ಸ್ ಎಲ್ಇಡಿ ಟಿವಿಗಳು ಮತ್ತು ಇತರ ಟೆಲಿವಿಷನ್ಗಳನ್ನು ತಯಾರಿಸುವ ಭಾರತೀಯ ಎಲೆಕ್ಟ್ರಾನಿಕ್ಸ್ ಕಂಪನಿಯಾಗಿ ಬೆಳೆದುನಿಂತಿದೆ. ಇದು ಭಾರತದಲ್ಲಿ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಾದ್ಯಂತ ಅತಿ ಹೆಚ್ಚು ಮಾರಾಟವಾಗುವ ಟಾಪ್ 10 ಟಿವಿ ಬ್ರ್ಯಾಂಡ್‌ಗಳಲ್ಲಿ ಒಂದಾಗಿದೆ.
"ವಿದೇಶದಲ್ಲಿ ಮಾಡಿದ ಅಧ್ಯಯನವೂ ಜಾಗತಿಕ ಕಂಪನಿಗಳು ಹೇಗೆ ರಚಿಸಲ್ಪಡುತ್ತವೆ ಮತ್ತು ಸ್ಪರ್ಧಿಸುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಮತ್ತು ನಾನು ಸ್ಮರ್ಧಾತ್ಮಕ ಜಗತ್ತಿನಲ್ಲಿ ಯಾವ ರೀತಿಯ ಉತ್ಪನ್ನಗಳನ್ನು ಹೊರತರಬಹುದು ಎಂಬುವುದನ್ನು ಅರ್ಥಮಾಡಿಕೊಳ್ಳಲು ನನಗೆ ಸಹಾಯ ಮಾಡಿದೆ" ಎನ್ನುತ್ತಾರೆ ದೇವಿತಾ.
ಸಂಸ್ಥೆ ಹುಟ್ಟುಹಾಕುವ ಕಲ್ಪನೆಯು ಹೇಗೆ ಮೊಳಕೆಯೊಡೆಯಿತು?
ಪ್ರಸ್ತುತ ಏಸರ್‌ನ ಅಧ್ಯಕ್ಷ ಮತ್ತು CEO ಆಗಿರುವ ಜೇಸನ್ ಚೆನ್ ಅವರೊಂದಿಗೆ 2005 ರಲ್ಲಿ ನಡೆಸಿದ ಮೀಟಿಂಗ್ ನ್ನು ದೇವಿತಾ ನೆನಪಿಸಿಕೊಳ್ಳುತ್ತಾರೆ. ಆಗ, ಚೆನ್ ಇಂಟೆಲ್‌ನೊಂದಿಗೆ ಇದ್ದಾಗ, ಇಂಟೆಲ್‌ನ ಸಹಯೋಗದೊಂದಿಗೆ ಜೆನಿತ್‌ಗಾಗಿ ಉತ್ಪನ್ನಗಳ ಅಭಿವೃದ್ಧಿ ಲ್ಯಾಬ್ ಅನ್ನು ಸ್ಥಾಪಿಸುವ ಕಲ್ಪನೆಯನ್ನು ದೇವಿತಾ ಚರ್ಚಿಸಿದ್ದರು. ಇವರೊಂದಿಗೆ ಚರ್ಚಿಸಿದ ನಂತರ ದೇವಿತಾ ಪ್ರೀಮಿಯಂ ವಿಭಾಗದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ತಯಾರಿಸುವ ಕಂಪನಿಯನ್ನು ಪ್ರಾರಂಭಿಸುವ ಸ್ಪಷ್ಟ ನಿರ್ಧಾರ ತಳೆದಿದ್ದರು.
Vu ಸಂಸ್ಥೆಯು ಇಂದು ಕೊರಿಯನ್ ಮತ್ತು ಜಪಾನೀಸ್ ದೈತ್ಯ ಸಂಸ್ಥೆಗಳೊಂದಿಗೆ ಸ್ಪರ್ಧಿಸುವ ಸ್ವದೇಶಿ ಟಿವಿ ಬ್ರ್ಯಾಂಡ್ ಆಗಿ ಬೆಳೆದುನಿಂತಿದೆ. ಪ್ರೀಮಿಯಂ ವಿಭಾಗದಲ್ಲಿ ಅವರು ಆರಂಭಿಕ ಸವಾಲು ಗೆದ್ದಿದ್ದು Vu ಪ್ರಬಲ ಬ್ರಾಂಡ್ ಆಗಿ ಹೊರಹೊಮ್ಮುತ್ತಿದೆ. ಸದ್ಯ ಅವರ ನೆಟ್ ವರ್ಕ್ ನ್ನು ಮಧ್ಯಪ್ರಾಚ್ಯಕ್ಕೆ ವಿಸ್ತರಿಸಿದ್ದು, ಅವರ ಮುಂದಿನ ಗುರಿ ಜಾಗತಿಕ ವ್ಯಾಪ್ತಿಯನ್ನು ಮತ್ತಷ್ಟು ಹೆಚ್ಚಿಸುವುದಾಗಿದೆ.
ಸಿಇಒ ಆಗಿ, ದೇವಿಕಾ ಸಂಸ್ಥೆಯು ಲಾಭದಾಯಕ ಮತ್ತು ಸಾಲ ಮುಕ್ತ ಬೆಳೆದು ನಿಂತಿದೆ ಎಂದು ಖಚಿತಪಡಿಸಿದ್ದಾರೆ. ನಾವು FY23 ರಲ್ಲಿ ಸುಮಾರು 900 ಕೋಟಿ ರೂಪಾಯಿಗಳ ವಹಿವಾಟು ನಡೆಸಿದ್ದೇವೆ ಮತ್ತು FY24 ಕ್ಕೆ, ನಾವು ಖಂಡಿತವಾಗಿಯೂ 1,000 ಕೋಟಿ ರೂಪಾಯಿಗಳಿಗೆ ಬೆಳೆಯಲಿದ್ದೇವೆ" ಎಂದು ಹೇಳಿದ್ದಾರೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

India Oil: ಇಸ್ರೇಲ್, ಯುಎಸ್ ಮತ್ತು ಇರಾನ್ ನಡುವೆ ವಾರ್! ಭಾರತದ ಕಚ್ಚಾ ತೈಲದ ಮೇಲೆ ಪರಿಣಾಮ ಬೀರಿದ್ದು ಹೇಗೆ?

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

Bank Holidays: ಮಾರ್ಚ್ನಲ್ಲಿ ಬ್ಯಾಂಕ್ಗಳಿಗೆ 18 ದಿನ ರಜೆ! ಗ್ರಾಹಕರೇ ಇಲ್ಲಿ ಗಮನಿಸಿ

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Silver Rate Today: ಒಂದೇ ದಿನ 10,000 ಇಳಿಕೆ ಕಂಡ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Market Prediction: ನಾಳೆ ಹೇಗಿರಲಿದೆ ಷೇರು ಮಾರುಕಟ್ಟೆ? ಲಾಭವೋ? ನಷ್ಟವೋ? ಇಲ್ಲಿದೆ ಓದಿ



Click it and Unblock the Notifications