ಧನ್‌ತೇರಸ್ ಅಥವಾ ಧನ ತ್ರಯೋದಶಿ ಹಬ್ಬಕ್ಕೆ ಕೆಲವೇ ದಿನಗಳು ಮಾತ್ರ ಉಳಿದಿವೆ. ಈ ದಿನ ಆರೋಗ್ಯ ಮತ್ತು ಸಂಪತ್ತಿನ ದೇವರಾದ ಧನ್ವಂತರಿ ದೇವರನ್ನು ಪೂಜಿಸಲಾಗುತ್ತದೆ. ಈ ದಿನ ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ.
ಈ ದಿನದಂದು ಆಭರಣಗಳನ್ನು ಖರೀದಿಸುವುದು ವಿಶೇಷ ಮಹತ್ವವನ್ನು ಹೊಂದಿದೆ. ಏಕೆಂದರೆ ಇದು ಸಮೃದ್ಧಿ ಮತ್ತು ಅದೃಷ್ಟದ ಸಂಕೇತವಾಗಿದೆ. ನೀವು ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸಲು ಯೋಜಿಸುತ್ತಿದ್ದರೆ, ಧನ್‌ತೇರಸ್ ಅಥವಾ ಧನ ತ್ರಯೋದಶಿ 2024 ರ ದಿನ ಖರೀದಿಸಬಹುದು. ಹಾಗಾದರೆ ನೀವು ಯಾವ ಚಿನ್ನ ಮತ್ತು ಬೆಳ್ಳಿ ವಸ್ತುಗಳನ್ನು ಈ ದಿನ ಖರೀದಿಸಬಹುದು ಎಂಬುದನ್ನು ನಾವು ನಿಮಗೆ ಹೇಳುತ್ತೇವೆ.

ಚಿನ್ನದ ಬಳೆಗಳನ್ನು ಖರೀದಿಸಿ
ಧನ್‌ತೇರಸ್ ದಿನ ಚಿನ್ನದ ಬಳೆಗಳನ್ನು ಖರೀದಿಸುವುದು ಅನೇಕ ಮಹಿಳೆಯರ ಮೊದಲ ಆಯ್ಕೆಯಾಗಿರುತ್ತದೆ. ಇದನ್ನು ಖರೀದಿಸುವುದು ಕೂಡ ಶುಭ ಫಲ ನೀಡುತ್ತದೆ. ಇದು ಸಮೃದ್ಧಿ, ಸಂಪತ್ತು ಮತ್ತು ವೈವಾಹಿಕ ಸಂತೋಷದ ಸಂಕೇತವಾಗಿದೆ. ಅನೇಕ ಸಂಸ್ಕೃತಿಗಳಲ್ಲಿ ಬಳೆಗಳನ್ನು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ವಿವಾಹಿತ ಮಹಿಳೆಯರು ತಮ್ಮ ವೈವಾಹಿಕ ಸಂಕೇತವಾಗಿ ಬಳೆಗಳನ್ನು ಹೆಚ್ಚಾಗಿ ಧರಿಸುತ್ತಾರೆ. ಈ ಬಳೆಗಳು ಮನೆಗೆ ಸಾಮರಸ್ಯ ಮತ್ತು ಸಂತೋಷವನ್ನು ತರುತ್ತವೆ. ಹೀಗಾಗಿ ನೀವು ಅವುಗಳನ್ನು ಧನ್‌ತೇರಸ್ ದಿನ ಖರೀದಿಸಬಹುದು.
ಚಿನ್ನದ ಸರವನ್ನು ಖರೀದಿಸಿ
ಇದಲ್ಲದೇ ನೀವು ಚಿನ್ನದ ನೆಕ್ಲೇಸ್ ಖರೀದಿಸಬಹುದು. ಇದು ಕೇವಲ ಆಭರಣವಲ್ಲ, ಆದರೆ ಇದು ಸಂಪತ್ತು ಮತ್ತು ಸ್ಥಾನಮಾನವನ್ನು ಪ್ರತಿನಿಧಿಸುತ್ತದೆ. ಅನೇಕ ಸಂಪ್ರದಾಯಗಳಲ್ಲಿ ಇದು ಪ್ರತಿ ಮಹಿಳೆಗೆ ಸಮೃದ್ಧಿಯ ಆಶೀರ್ವಾದವನ್ನು ಸಂಕೇತಿಸುತ್ತದೆ. ಚಿನ್ನವನ್ನು ಧರಿಸುವುದರಿಂದ ಧನಾತ್ಮಕ ಶಕ್ತಿ ಕೂಡ ಆಕರ್ಷಿತವಾಗುತ್ತದೆ.
ಇದರೊಂದಿಗೆ ನೀವು ಚಿನ್ನದ ಉಂಗುರಗಳನ್ನು ಸಹ ಖರೀದಿಸಬಹುದು. ಇದು ಬದ್ಧತೆ, ಪ್ರೀತಿ ಮತ್ತು ಸಮೃದ್ಧಿಯ ಸಂಕೇತವಾಗಿದೆ. ಇವುಗಳನ್ನು ಹೆಚ್ಚಾಗಿ ಮದುವೆ ಮತ್ತು ವಿಶೇಷ ಸಂದರ್ಭಗಳಲ್ಲಿ ಉಡುಗೊರೆಯಾಗಿ ನೀಡಲಾಗುತ್ತದೆ. ಹಾಗೆ ಧನ್‌ತೇರಸ್ ದಿನ ಚಿನ್ನದ ಉಂಗುರವನ್ನು ಖರೀದಿಸುವುದು ಮಂಗಳಕರವಾಗಿದೆ.
ಬೆಳ್ಳಿ ನಾಣ್ಯ
ಧನ್‌ತೇರಸ್‌ನಲ್ಲಿ ಬೆಳ್ಳಿ ನಾಣ್ಯಗಳನ್ನು ಖರೀದಿಸುವುದು ಉತ್ತಮ ಆಯ್ಕೆಯಾಗಿದೆ. ಈ ನಾಣ್ಯಗಳಲ್ಲಿ ಸಾಮಾನ್ಯವಾಗಿ ದೇವರು ಮತ್ತು ದೇವತೆಗಳ ಚಿತ್ರಗಳನ್ನು ಕೆತ್ತಲಾಗಿರುತ್ತದೆ. ಅಲ್ಲದೆ ಇದು ಅದೃಷ್ಟವನ್ನು ಹೆಚ್ಚಿಸುತ್ತದೆ. ನಕಾರಾತ್ಮಕ ಶಕ್ತಿಗಳಿಂದ ರಕ್ಷಣೆ ನೀಡುತ್ತದೆ. ಇವುಗಳನ್ನು ಹೂಡಿಕೆಯಾಗಿಯೂ ಬಳಸಲಾಗುತ್ತದೆ. ನೀವು ಇಷ್ಟಪಡುವ ವಿಶಿಷ್ಟ ವಿನ್ಯಾಸಗಳು ಅಥವಾ ಶಾಸನಗಳನ್ನು ಹೊಂದಿರುವ ನಾಣ್ಯಗಳನ್ನು ಆಯ್ಕೆಮಾಡಿ ಖರೀದಿಸಿ ಇವುಗಳನ್ನು ಅಲಂಕಾರಿಕ ಪೆಟ್ಟಿಗೆಯಲ್ಲಿ ಇಡಬಹುದು ಅಥವಾ ಮನೆಯ ದೇವಸ್ಥಾನದಲ್ಲಿಯೂ ಇಡಬಹುದು.
ಬೆಳ್ಳಿಯ ಕಾಲುಂಗುರಗಳನ್ನು ಖರೀದಿಸಿ
ಬೆಳ್ಳಿಯ ಕಾಲುಂಗುರಗಳನ್ನು ಖರೀದಿಸುವುದು ಸಾಂಪ್ರದಾಯಿಕವಾಗಿದೆ. ಇವುಗಳನ್ನು ಹೆಚ್ಚಾಗಿ ಮಹಿಳೆಯರು ಧರಿಸುತ್ತಾರೆ. ಇದು ಸೌಂದರ್ಯದ ಸಂಕೇತವೂ ಆಗಿದೆ. ಅಷ್ಟೇ ಅಲ್ಲ ಬೆಳ್ಳಿಯು ರಕ್ಷಣಾತ್ಮಕ ಗುಣಗಳನ್ನು ಹೊಂದಿದೆ. ಇದು ಆರೋಗ್ಯ ಪ್ರಯೋಜನಗಳನ್ನೂ ನೀಡುತ್ತದೆ.
ಚಿನ್ನದ ಕಿವಿಯೋಲೆಗಳು
ಆಭರಣ ಮಳಿಗೆಯಲ್ಲಿ ನೀವು ವಿವಿಧ ಶೈಲಿಯ ಕಿವಿಯೋಲೆಗಳನ್ನು ಕಾಣಬಹುದು. ನೀವು ಇವುಗಳನ್ನು ಧನ್‌ತೇರಸ್‌ನಲ್ಲಿ ಖರೀದಿಸಿದರೆ ತುಂಬಾ ಒಳ್ಳೆಯದು. ಧನ್ತೇರಸ್ನಲ್ಲಿ ಇವುಗಳನ್ನು ಖರೀದಿಸುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಇದಲ್ಲದೇ ಇವು ನಿಮ್ಮ ಹಬ್ಬದ ಅಂದವನ್ನು ಇಮ್ಮಡಿಗೊಳಿಸುತ್ತವೆ. ಇದರ ಹೊರತಾಗಿ, ನೀವು ಮದುವೆ ಅಥವಾ ಹಬ್ಬಕ್ಕಾಗಿ ಕುಂದನ್ ನೆಕ್ಲೇಸ್ ಅನ್ನು ಆಯ್ಕೆ ಮಾಡಬಹುದು. ಇವು ಸಾಂಪ್ರದಾಯಿಕ ಬಟ್ಟೆಗಳೊಂದಿಗೆ ಸುಂದರವಾಗಿ ಹೊಂದಿಕೆಯಾಗುತ್ತವೆ. ಹೀಗೆ ಚಿನ್ನ ಹಾಗೂ ಬೆಳ್ಳಿಯಲ್ಲಿ ಹಲವಾರು ವಸ್ತುಗಳನ್ನು ನೀವು ಧನ್‌ತೇರಸ್ ಅಲ್ಲಿ ಖರೀದಿ ಮಾಡಿದರೆ ತುಂಬಾ ಮಂಗಳಕರ ಎಂದು ಹೇಳಲಾಗುತ್ತದೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ನಿಫ್ಟಿ ಏರಿಕೆ: ಈಗಲೇ ಹೂಡಿಕೆ ಮಾಡಬೇಕಾ ಅಥವಾ ಕಾಯಬೇಕಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!



Click it and Unblock the Notifications