ಭಾರತದ ಅತಿದೊಡ್ಡ ವಾಣಿಜ್ಯ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಕ್ರಿಕೆಟ್ ದಿಗ್ಗಜ ಮಹೇಂದ್ರ ಸಿಂಗ್ ಧೋನಿಯನ್ನು ತನ್ನ ಬ್ಯಾಂಕ್‌ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ಘೋಷಣೆ ಮಾಡಿದೆ. ಎಂಎಸ್ ಧೋನಿಯನ್ನು ಬ್ಯಾಂಕ್‌ನ ಅಧಿಕೃತ ಬ್ರ್ಯಾಂಡ್ ಅಂಬಾಸಿಡರ್ ಎಂದು ಘೋಷಿಸಲಾಗಿದೆ ಎಂದು ಬ್ಯಾಂಕ್ ಹೇಳಿಕೆಯಲ್ಲಿ ತಿಳಿಸಿದೆ.
ಈ ಬಗ್ಗೆ ಮಾಹಿತಿ ನೀಡಿದ ಎಸ್‌ಬಿಐ ಅಧ್ಯಕ್ಷ ದಿನೇಶ್ ಖಾರಾ, "ಎಸ್‌ಬಿಐನ ಬ್ರ್ಯಾಂಡ್ ಅಂಬಾಸಿಡರ್ ಆಗಿ ಎಂಎಸ್ ಧೋನಿಯನ್ನು ನೇಮಕ ಮಾಡಲು ನಾವು ಸಂತೋಷ ಪಡುತ್ತೇವೆ. ತೃಪ್ತ ಗ್ರಾಹಕರಾಗಿ ಎಸ್‌ಬಿಐ ಜೊತೆಗಿನ ಧೋನಿ ಒಡನಾಟವು ನಮ್ಮ ಬ್ರ್ಯಾಂಡ್‌ನ ನೈತಿಕತೆಯ ಪರಿಪೂರ್ಣ ಸಾಕಾರಗೊಳಿಸುತ್ತದೆ," ಎಂದು ಹೇಳಿದರು.

"ಈ ಪಾಲುದಾರಿಕೆಯೊಂದಿಗೆ, ನಮ್ಮ ಬದ್ಧತೆಯನ್ನು ಬಲಪಡಿಸುವ ಗುರಿಯನ್ನು ನಾವು ಹೊಂದಿದ್ದೇವೆ. ನಂಬಿಕೆ, ಸಮಗ್ರತೆ ಮತ್ತು ಅಚಲವಾದ ಸಮರ್ಪಣೆಯೊಂದಿಗೆ ರಾಷ್ಟ್ರ ಮತ್ತು ನಮ್ಮ ಗ್ರಾಹಕರಿಗೆ ಸೇವೆ ಸಲ್ಲಿಸಲು ನಾವು ಬದ್ಧರಾಗಿದ್ದೇವೆ," ಎಂದು ಕೂಡಾ ಎಸ್‌ಬಿಐ ಅಧ್ಯಕ್ಷ ದಿನೇಶ್ ಖಾರಾ ತಿಳಿಸಿದರು.
ಎಸ್‌ಬಿಐ ಬ್ರ್ಯಾಂಡ್ ಅಂಬಾಸಿಡರ್ ಆಗಿ, ಎಂಎಸ್ ಧೋನಿ ವಿವಿಧ ಮಾರ್ಕೆಟಿಂಗ್ ಮತ್ತು ಪ್ರಚಾರ ಅಭಿಯಾನಗಳಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. "ಒತ್ತಡದ ಸಂದರ್ಭಗಳಲ್ಲಿ ಹಿಡಿತವನ್ನು ಕಾಯ್ದುಕೊಳ್ಳುವ ಗಮನಾರ್ಹ ಸಾಮರ್ಥ್ಯ ಮತ್ತು ಸ್ಪಷ್ಟವಾದ ಆಲೋಚನೆ ಮಾಡುವ, ಒತ್ತಡದ ಅಡಿಯಲ್ಲಿದ್ದರೂ ಕ್ಷಿಪ್ರ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಧೋನಿ ಹೊಂದಿದ್ದಾರೆ. ಅವರನ್ನು ದೇಶಾದ್ಯಂತ ತನ್ನ ಗ್ರಾಹಕರು ಮತ್ತು ಪಾಲುದಾರರೊಂದಿಗೆ ಸಂಪರ್ಕಿಸುವುದು ಎಸ್‌ಬಿಐ ಆದರ್ಶ ಆಯ್ಕೆಯಾಗಿದೆ," ಎಂದು ಕೂಡಾ ಬ್ಯಾಂಕ್ ಹೇಳಿಕೊಂಡಿದೆ.
ಜಿಯೋ ಮಾರ್ಟ್ ಬ್ರ್ಯಾಂಡ್ ಅಂಬಾಸಿಡರ್
ಇತ್ತೀಚೆಗೆ ರಿಲಯನ್ಸ್ ರಿಟೇಲ್‌ನ ಜಿಯೋಮಾರ್ಟ್ ಜನಪ್ರಿಯ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರನ್ನು ತನ್ನ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿಕೊಂಡಿದೆ. ಇದಲ್ಲದೆ, ಜಿಯೋಮಾರ್ಟ್ ತನ್ನ ಪೆಸ್ಟಿವ್ ಸೀಸನ್ ಪ್ರಚಾರವನ್ನು "ಜಿಯೋ ಉತ್ಸವ್: ಸೆಲೆಬ್ರೇಷನ್ ಆಫ್ ಇಂಡಿಯಾ" (ಜಿಯೋ ಉತ್ಸವ- ಭಾರತದ ಸಂಭ್ರಮ) ಎಂದು ಮರುಬ್ರಾಂಡ್ ಮಾಡಿದೆ.
ಈ ಬಗ್ಗೆ ಮಾಹಿತಿ ನೀಡಿದ ಜಿಯೋಮಾರ್ಟ್ ಸಿಇಒ ಸಂದೀಪ್ ವರಗಂಟಿ, "ಮಹೇಂದ್ರ ಸಿಂಗ್ ಧೋನಿ ಅವರು ಜಿಯೋಮಾರ್ಟ್‌ನಂತೆಯೇ ನಂಬಿಕೆ, ವಿಶ್ವಾಸಾರ್ಹತೆ ಮತ್ತು ಭರವಸೆಯನ್ನು ಒಳಗೊಂಡಿರುವ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಅವರನ್ನು ನಮ್ಮ ಬ್ರಾಂಡ್ ಅಂಬಾಸಿಡರ್ ಆಗಿ ಮಾಡಿರುವ ಆದರ್ಶ ಆಯ್ಕೆಯಾಗಿದ್ದಾರೆ," ಎಂದು ಶ್ಲಾಘಿಸಿದ್ದಾರೆ.


Click it and Unblock the Notifications