ಡಿಸೆಂಬರ್ 5, 2025ರಂದು ರಿಲೀಸ್ ಆದ ರಣವೀರ್ ಸಿಂಗ್ ಅಭಿನಯದ, ಧುರಂಧರ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದೆ. ಇಡೀ ಭಾರತವೇ ತಿರುಗಿ ನೋಡುವಂತೆ ಮಾಡಿದ ಈ ಸಿನಿಮಾ, 2025ರಲ್ಲಿ ಎಲ್ಲಾ ಸಿನಿಮಾಗಳ ದಾಖಲೆಯನ್ನ ಉಡೀಸ್ ಮಾಡಿದೆ. ಸ್ಪೈ ಥ್ರಿಲ್ಲರ್ ಆಗಿ ಕಾಣಿಸಿಕೊಂಡಿರುವ ರಣವೀರ್ ಸಿಂಗ್ ಪಾತ್ರವನ್ನು ನೋಡುಗರು ಅಪ್ಪಿಕೊಂಡು ಅಭಿನಂದಿಸಿದ್ದಾರೆ. ಈ ಸಿನಿಮಾ ನೋಡಿ ಮೆಚ್ಚಿದ ವೀಕ್ಷಕರಿಗೆ, ಮತ್ತೊಂದು ಸಿಹಿಸುದ್ದಿ ಸಿಗುತ್ತಿದೆ. ಅದೇನೆಂದು ತಿಳಿಯಿರಿ.

ಹೌದು, ಧುರಂಧರ್ ಸಿನಿಮಾ ರಿಲೀಸ್ ಆಗಿ ಒಂದು ತಿಂಗಳು ಕಳೆದರು ಕೂಡ, ಬಾಕ್ಸ್ ಆಫೀಸ್‌ನಲ್ಲಿ ಅಬ್ಬರ ಕಡಿಮೆ ಮಾಡಿಕೊಂಡಿಲ್ಲ. ನೋಡುಗರ ಮೆಚ್ಚುಗೆಗೆ ಪಾತ್ರವಾದ ಈ ಸಿನಿಮಾ ಇನ್ನೂ ಕನಸಿನ ಓಟದಲ್ಲಿದೆ. ಹೀಗಿರುವಾಗಲೇ ಜನರು ಯಾವ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಧುರಂಧರ್ ನೋಡಬಹುದು. ಯಾವಾಗ ಓಟಿಟಿಗೆ ಬರುತ್ತದೆ ಎಂದು ಕಾಯುತ್ತಿದ್ದಾರೆ. ಅವರಿಗಾಗಿಯೇ ಈ ಸುದ್ದಿ. ನಿರೀಕ್ಷೆಯಂತೆಯೇ ಧುರಂಧರ್ ಓಟಿಟಿಗೆ ಬರಲು ಸಜ್ಜಾಗಿದೆ.
ಹೌದು, ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ ಮುಂಚೂಣಿಯಲ್ಲಿರುವ ಧುರಂಧರ್ ಸಿನಿಮಾ, ಇನ್ನಷ್ಟು ದಾಖಲೆಗಳನ್ನು ಮುರಿಯಬಹುದು ಎಂಬ ನಿರೀಕ್ಷೆಯಲ್ಲಿದೆ. ಹಾಗೆಯೇ ಇನ್ನೇನು ಕೆಲವೇ ದಿನಗಳಲ್ಲಿ ಓಟಿಟಿಗೆ ಲಗ್ಗೆ ಇಡಲಿದೆ ಎಂಬ ಮಾಹಿತಿಗಳು ಕೂಡ ಹರಿದಾಡುತ್ತಿವೆ.
OTTಯಲ್ಲಿ ಧುರಂಧರ್ ಅಬ್ಬರ:
ಅಂದಹಾಗೆ ರಣವೀರ್ ಸಿಂಗ್ ಅಭಿನಯಿಸಿರುವ ಈ ಸ್ಪೈ ಥ್ರಿಲ್ಲರ್ ಸಿನಿಮಾ ಎಲ್ಲಿ ವೀಕ್ಷಣೆ ಮಾಡಬೇಕು? ಧುರಂಧರ್ ಸಿನಿಮಾ ಯಾವ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬರಲಿದೆ ಅಂತೀರಾ...ಸದ್ಯ ಬಾಲಿವುಡ್ ಹಂಗಾಮ ವರದಿ ಮಾಡಿರುವ ವರದಿ ಪ್ರಕಾರ, ಧುರಂಧರ್ ಓಟಿಟಿ ಬಿಡುಗಡೆ ಮತ್ತು ಅದರ ಡಿಜಿಟಲ್ ಹಕ್ಕನ್ನು ನೆಟ್‌ಫ್ಲಿಕ್ಸ್ ಪಡೆದುಕೊಂಡಿದೆ ಎನ್ನಲಾಗ್ತಿದೆ. ಒಟ್ಟು 130 ಕೋಟಿ ರೂ.ಗಳಿಗೆ ಹಕ್ಕು ಮಾರಾಟವಾಗಿದೆ ಎಂಬ ಮಾಹಿತಿ ತಿಳಿದುಬMದಿದೆ. ಆದರೆ ಧುರಂಧರ್ ಸಿನಿಮಾ ಯಾವ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗುತ್ತಿದೆ ಮತ್ತು ಯಾವಾಗ ಬಿಡುಗಡೆ ಆಗುತ್ತಿದೆ ಎಂದು ಗುಡ್‌ರಿಟರ್ನ್ಸ್ ಕಡೆಯಿಂದ ಸ್ವತಂತ್ರವಾಗಿ ಹೇಳಲು ಸಾಧ್ಯವಾಗುವುದಿಲ್ಲ.
ಮತ್ತೊಂದು ಪ್ರಮುಖ ಮಾಹಿತಿ ಏನೆಂದರೆ, ಸದ್ಯ ಈ ಚಿತ್ರದ ಎರಡನೇ ಭಾಗವು ಮಾರ್ಚ್‌ನಲ್ಲಿ ಬಿಡುಗಡೆಯಾಗಿ ಚಿತ್ರಮಂದಿರಗಳಿಗೆ ಬರಲಿದೆ ಎನ್ನಲಾಗ್ತಿದೆ. ಈ ಚಿತ್ರವು ಸುಮಾರು 250 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಿಸಲಾಗಿದ್ದು, ವಿಶ್ವದಾದ್ಯಂತ ಇದರ ಕಲೆಕ್ಷನ್ 1,200 ಕೋಟಿ ಎಂದು ಹಲವು ವರದಿಗಳು ಉಲ್ಲೇಖಿಸಿವೆ.
ಓಟಿಟಿಯಲ್ಲಿ ಯಾವಾಗ?
ಸದ್ಯ ಧುರಂಧರ್ ಸಿನಿಮಾ ಇನ್ನೂ ಚಿತ್ರಮಂದಿರಗಳಲ್ಲೇ ರಾರಾಜಿಸುತ್ತಿದೆ. ಪಿವಿಆರ್, ಐನಾಕ್ಸ್, ಥಿಯೇಟರ್‌ಗಳಲ್ಲಿ ಎಲ್ಲಾ ಭಾಷಾ ವರ್ಗದವರು ಕೂಡ ನೋಡಿ ಉತ್ತಮ ರೆಸ್ಪಾನ್ಸ್ ಕೊಡುತ್ತಿದ್ದಾರೆ. ಹೀಗಾಗಿ ಓಟಿಟಿಯಲ್ಲಿ ಸಿನಿಮಾ ಬಿಡುಗಡೆ ಮಾಡುವುದಾದರೆ, ಅದು ಜನವರಿ ಅಂತ್ಯ ಅಥವಾ ಫೆಬ್ರವರಿ ಮೊದಲಾರ್ಧದಲ್ಲಿ ನಿಗದಿಯಾಗಬಹುದು ಎನ್ನಲಾಗುತ್ತಿದೆ.
ಅಂದಹಾಗೆ ಕ್ರಿಸ್‌ಮಸ್, ನ್ಯೂ ಇಯರ್, ಮುಂಬರುವ ಸಂಕ್ರಾಂತಿ ಸೇರಿ ಹಲವು ರಜೆಗಳಲ್ಲಿ ಸಿನಿಮಾ ನೋಡುವವರ ಸಂಖ್ಯೆ ಹೆಚ್ಚಾಗಬಹುದು. ಜೊತೆಗೆ ರಜೆಯ ಅವಧಿಯಲ್ಲಿ ಜನಸಂದಣಿಯು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ವರದಿಗಳು ಹೇಳುತ್ತಿವೆ. ಈಗಾಗಲೇ ಧುರಂಧರ್ ಅತಿಹೆಚ್ಚು ಗಳಿಕೆಯಲ್ಲಿ ಮುಂಚೂಣಿಯಲ್ಲಿದೆ. ಒಟ್ಟಿನಲ್ಲಿ ಧುರಂಧರ್ ಸಿನಿಮಾ ಓಟಿಟಿಗೆ ಬರುವುದು ಅಧಿಕೃತವಾಗಿ ಗುಡ್‌ರಿಟರ್ನ್ಸ್ ಕಡೆಯಿಂದ ತಿಳಿಸಲಾಗದಿದ್ರೂ, ಬಾಲಿವುಡ್ ಹಂಗಾಮ ಈ ಬಗ್ಗೆ ವರದಿ ಮಾಡಿದೆ.
(ಹಕ್ಕುತ್ಯಾಗ: ವ್ಯಕ್ತಿಗತ ವಿಶ್ಲೇಷಕರ ಅಥವಾ ಘಟಕಗಳ ಅಭಿಪ್ರಾಯಗಳು ಮತ್ತು ಶಿಫಾರಸುಗಳು ಮಾತ್ರ ಇಲ್ಲಿ ಸೂಚಿಸಲಾಗಿದೆ ಮತ್ತು ಅವು Goodreturns.in ಅಥವಾ Greynium Information Technologies Private Limited (ಒಟ್ಟಿಗೆ "ನಾವು" ಎಂದು ಉಲ್ಲೇಖಿಸಲಾಗಿದೆ) ಅವರ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಯಾವುದೇ ವಿಷಯದ ನಿಖರತೆ, ಪೂರ್ಣತೆ ಅಥವಾ ನಂಬಿಕಾರ್ಹತೆಯನ್ನು ನಾವು ಖಚಿತಪಡಿಸುವುದಿಲ್ಲ, ಸಮರ್ಥಿಸುತ್ತಿಲ್ಲ ಅಥವಾ ಹೊಣೆಗಾರರಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ_SECURITIES_ ಖರೀದಿ ಅಥವಾ ಮಾರಾಟವನ್ನು ಪ್ರೇರೇಪಿಸುವುದಿಲ್ಲ. ಎಲ್ಲಾ ಮಾಹಿತಿಯು ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ ನೀಡಲಾಗಿದ್ದು, ಯಾವುದೇ ಹೂಡಿಕೆ ನಿರ್ಧಾರಗಳನ್ನು ಕೈಗೊಳ್ಳುವ ಮೊದಲು ಲೈಸೆನ್ಸ್ ಪಡೆದ ಹಣಕಾಸು ಸಲಹೆಗಾರರಿಂದ ಸ್ವತಃ ಪರಿಶೀಲಿಸುವುದು ಅಗತ್ಯ.)


Click it and Unblock the Notifications