ಡಿಜಿಟಲ್ ಪಾವತಿ ಕ್ರಾಂತಿ: ಹತ್ತೇ ತಿಂಗಳಲ್ಲಿ 223 ಲಕ್ಷ ಕೋಟಿ ರೂ.ಮೌಲ್ಯದ ವಹಿವಾಟು ನಡೆಸಿದ ಯುಪಿಐ

21ನೇ ಶತಮಾನದಲ್ಲಿ ಭಾರತದ ಮಟ್ಟಿಗೆ ಹೇಳುವುದಾದರೆ ಡಿಜಿಟಲ್‌ ಯುಗದಲ್ಲಿ ಯುನಿಫೈಡ್‌ ಪೇಮೆಂಟ್‌ ಇಂಟರ್‌ಫೇಸ್ ಅಂದರೆ ಯುಪಿಐ ಕ್ರಾಂತಿಕಾರಕ ಬದಲಾವಣೆಯಾಗಿದೆ. ಸದ್ಯ ಜಾಗತಿಕ ಮಟ್ಟದಲ್ಲಿ ನಡೆಯುವ 100 ಪ್ರತಿಶತ ಡಿಜಿಟಲ್‌ ವ್ಯವಹಾರದಲ್ಲಿ 30 ಪ್ರತಿಶತ ಭಾರತದಿಂದಲೇ ದಾಖಲಾಗುತ್ತದೆ. ಈ ಮೂಲಕ ದೇಶದ ಜನತೆ ಡಿಜಿಟಲ್‌ ವ್ಯವಹಾರಕ್ಕೆ ಹೇಗೆ ಒಗ್ಗಿಕೊಂಡಿದ್ದಾರೆ ಎಂಬುದನ್ನು ಸುಲಭವಾಗಿಯೇ ತಿಳಿದುಕೊಳ್ಳಬಹುದು. ಇದರಲ್ಲಿ ಯುಪಿಐ ಪಾತ್ರ ಮಹತ್ತರವಾಗಿದೆ. ಸದ್ಯ ಯುಪಿಐ ವಿಚಾರದಲ್ಲಿ ಭಾರತವು ಮತ್ತೊಂದು ಐತಿಹಾಸಿಕ ಸಾಧನೆ ಮಾಡಿಕೊಂಡಿದೆ. 2024ರ ಅಕ್ಟೋಬರ್‌ ತಿಂಗಳಲ್ಲಿ ಸುಮಾರು 16.58 ಶತಕೋಟಿ ಹಣಕಾಸಿನ ವಹಿವಾಟುಗಳನ್ನು ಯುಪಿಐ ನಡೆಸಿದ್ದು, ಇವುಗಳ ಒಟ್ಟು ಮೌಲ್ಯ ಬರೊಬ್ಬರಿ 23.49 ಲಕ್ಷ ಕೋಟಿ ರೂ. ಆಗಿದೆ. ಇನ್ನು ಇದೇ ಮೊತ್ತವನ್ನು ಕಳೆದ ವರ್ಷದ ಅಕ್ಟೋಬರ್‌ಗೆ ಹೋಲಿಕೆ ಮಾಡಿದರೆ ಆ ಅವಧಿಯಲ್ಲಿ 11.40 ಶತಕೋಟಿ ವಹಿವಾಟುಗಳು ನಡೆದಿದ್ದು, ಈ ಮೂಲಕ 45 ಪ್ರತಿಶತ ವ್ಯವಹಾರಗಳ ಏರಿಕೆ ಕಂಡಿದೆ.

2024ರಿಂದ ಆರಂಭವಾದ ದಾಖಲೆ ವಹಿವಾಟು

ಇನ್ನು ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ಈ ವರ್ಷದ ಜನವರಿಯಿಂದ ನವೆಂಬರ್‌ವರೆಗೆ 223 ಲಕ್ಷ ಕೋಟಿ ರೂಪಾಯಿ ಮೌಲ್ಯದ 15,547 ಕೋಟಿ ವಹಿವಾಟುಗಳನ್ನು ಮಾಡಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಇನ್ನು ಸಚಿವಾಲಯವು ಟ್ವಿಟರ್‌ನಲ್ಲಿ ಹೆಚ್ಚಿನ ಮಾಹಿತಿ ನೀಡಿದ್ದು, UPI ವಹಿವಾಟಿನ ಅಂಕಿಅಂಶಗಳು ಭಾರತದಲ್ಲಿನ ಹಣಕಾಸಿನ ವಹಿವಾಟಿನ ಮೇಲೆ ಅದರ ಪರಿವರ್ತಕ ಪರಿಣಾಮವನ್ನು ಪ್ರದರ್ಶಿಸಿದೆ ಎಂದು ತಿಳಿಸಿದೆ. ಇನ್ನು ಭಾರತದ ಯುಪಿಐ ವ್ಯವಹಾರವು ಕೇವಲ ಭಾರತಕ್ಕೆ ಸೀಮಿತವಾಗಿರದೆ ವಿದೇಶಿ ರಾಷ್ಟ್ರಗಳಲ್ಲೂ ಹೆಚ್ಚಿನ ಪ್ರಚಾರ ಪಡೆದುಕೊಳ್ಳುತ್ತಿದೆ. ಸದ್ಯ ಯುಪಿಐ ಯುಎಇ, ಸಿಂಗಾಪುರ್, ಭೂತಾನ್, ನೇಪಾಳ, ಶ್ರೀಲಂಕಾ, ಫ್ರಾನ್ಸ್ ಮತ್ತು ಮಾರಿಷಸ್‌ನಂತಹ ಪ್ರಮುಖ ಮಾರುಕಟ್ಟೆಗಳನ್ನು ಒಳಗೊಂಡಂತೆ ಏಳು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.

ಯುಪಿಐ: 223 ಲಕ್ಷ ಕೋಟಿ ರೂ. ಮೌಲ್ಯದ ವಹಿವಾಟು

ಏನಿದು ಯುಪಿಐ?

ಹೆಚ್ಚಿನವರಿಗೆ ಈಗಾಗಲೇ ಯುಪಿಐ ನ ಮಹತ್ವದ ಬಗ್ಗೆ ಅರಿವಿದೆ. ಆದರೆ ಇನ್ನೂ ಕೆಲವರಿಗೆ ಇದರ ಬಗ್ಗೆ ಗೊತ್ತಿದ್ದರೂ ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದು ಅರಿವಿರುವುದಿಲ್ಲ. ಇನ್ನು UPI ಎನ್ನುವುದು ಡಿಜಿಟಲ್ ಪಾವತಿ ವ್ಯವಸ್ಥೆಯಾಗಿದ್ದು, ಬ್ಯಾಂಕ್ ಖಾತೆಗಳ ನಡುವೆ ತ್ವರಿತ ಹಣ ವರ್ಗಾವಣೆ ಮಾಡಲು ಬಳಕೆದಾರರಿಗೆ ಅವಕಾಶ ನೀಡುತ್ತದೆ. 2016 ರಲ್ಲಿ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ನಿಂದ ಈ ಕ್ರಾಂತಿಕಾರಕ ಯೋಜನೆಯನ್ನು ಪ್ರಾರಂಭಿಸಲಾಯಿತು. UPI ಅನೇಕ ಬ್ಯಾಂಕ್ ಗಳ ಖಾತೆಗಳನ್ನು ಒಂದೇ ಮೊಬೈಲ್ ಅಪ್ಲಿಕೇಶನ್‌ಗೆ ಸಂಯೋಜಿಸುವ ಮೂಲಕ ದೇಶದ ಪಾವತಿ ವ್ಯವಸ್ಥೆಯನ್ನು ಪ್ರಖರಗೊಳಿಸಿದೆ. ಈ ವ್ಯವಸ್ಥೆಯು ತಡೆರಹಿತ ಹಣದ ವರ್ಗಾವಣೆಗಳು, ವ್ಯಾಪಾರಿ ಪಾವತಿಗಳನ್ನು ಚುರುಕುಗೊಳಿಸಿದೆ. UPI ಕೇವಲ ಹಣಕಾಸಿನ ವಹಿವಾಟುಗಳನ್ನು ವೇಗವಾಗಿ, ಸುರಕ್ಷಿತ ಮತ್ತು ಶ್ರಮರಹಿತವನ್ನಾಗಿ ಮಾಡಿಲ್ಲ. ಬದಲಾಗಿ ಇದು ವ್ಯಕ್ತಿಗಳು, ಸಣ್ಣ ವ್ಯಾಪಾರ ಮತ್ತು ವ್ಯಾಪಾರಿಗಳನ್ನು ಸಶಕ್ತರನ್ನಾಗಿ ಮಾಡಿದೆ. ಅದೂ ಅಲ್ಲದೆ ಇದರಿಂದ ನಗದು ರಹಿತ ಆರ್ಥಿಕತೆಯ ಕಡೆಗೆ ದೇಶದ ಬದಲಾವಣೆಗೆ ಹೆಚ್ಚಿನ ಕೊಡುಗೆ ನೀಡಿದೆ. ಈಗಾಗಲೇ ಹೇಳಿದರೆ ಅಕ್ಟೋಬರ್ 2024 ರಲ್ಲಿ, ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಒಂದೇ ತಿಂಗಳಲ್ಲಿ 16.58 ಶತಕೋಟಿ ಹಣಕಾಸು ವಹಿವಾಟುಗಳನ್ನು ನಡೆಸುವ ಮೂಲಕ ಹೊಸ ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿದೆ. ಇದು ಭಾರತದ ಡಿಜಿಟಲ್ ವ್ಯವಹಾರವು ಎಷ್ಟು ವೇಗದಲ್ಲಿ ವಿಸ್ತರಿಸಿಕೊಳ್ಳುತ್ತಿದೆ ಎಂಬುದಕ್ಕೆ ಪುರಾವೆ ನೀಡಿದಂತಾಗಿದೆ.

ಮತ್ತಷ್ಟು ವಿಸ್ತರಿಸಿಕೊಳ್ಳುತ್ತಿರುವ ಯುಪಿಐ

ಸದ್ಯ ಯುಪಿಐ ಪಾವತಿ ವ್ಯವಸ್ಥೆಯು ಸುಮಾರು 632 ಬ್ಯಾಂಕ್‌ಗಳೊಂದಿಗೆ ರ ಸಂಪರ್ಕಗೊಂಡಿದ್ದು, ಮತ್ತಷ್ಟು ವಿಸ್ತರಣೆಯಾಗುತ್ತಿದೆ. ಈ ಮೂಲಕ ಭಾರತದ ಪಾವತಿ ವ್ಯವಸ್ಥೆಯಲ್ಲಿ UPI ಯ ವಿಸ್ತರಣೆಯ ಪ್ರಾಬಲ್ಯವನ್ನು ಎತ್ತಿ ತೋರಿಸುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ UPI ಸಣ್ಣ ವ್ಯಾಪಾರಗಳು, ಬೀದಿ ವ್ಯಾಪಾರಿಗಳು ಮತ್ತು ವಲಸೆ ಕಾರ್ಮಿಕರ ಮೇಲೆ ಆಳವಾದ ಪ್ರಭಾವವನ್ನು ಬೀರಿದೆ. ಅವರಿಗೆ ಹಣವನ್ನು ವರ್ಗಾಯಿಸಲು ಮತ್ತು ಪಾವತಿಗಳನ್ನು ಸ್ವೀಕರಿಸಲು ಸುಲಭ ಮತ್ತು ಪರಿಣಾಮಕಾರಿ ಮಾರ್ಗವನ್ನು ಇದು ಒದಗಿಸಿದೆ. ಅಲ್ಲದೆ COVID-19 ಸಾಂಕ್ರಾಮಿಕ ಸಮಯದಲ್ಲಿ ಇದರ ಅಳವಡಿಕೆಯು ವಿಶೇಷವಾಗಿ ವೇಗಗೊಂಡಿದ್ದವು. ಆ ಅವಧಿಯಲ್ಲಿ ಇದ್ದ ಕಡೆಯಲ್ಲೇ ಪ್ರಯಾಣ ಮಾಡದೆ ಅನ್ಯ ಪ್ರದೇಶಕ್ಕೆ ಸುಲಭವಾಗಿಯೇ ಮೊತ್ತವನ್ನು ರವಾನಿಸಲು ಇದು ಸುಲಭ ವೇದಿಕೆಯಾಗಿತ್ತು. ಸದ್ಯ ಈಗಾಗಲೇ ಹಲವು ದೇಶಗಳಲ್ಲಿ ಯುಪಿಐ ಕಾರ್ಯಾರಂಭಗೊಂಡಿರುವುದು ಉತ್ತಮ ಅಂಶ. ಅದರಲ್ಲೂ ಯುರೋಪ್‌ ರಾಷ್ಟ್ರವಾಗಿರುವ ಫ್ರಾನ್ಸ್‌ನಲ್ಲಿ ಇದು ಆರಂಭಗೊಂಡಿರುವುದು ಅಲ್ಲಿನ ಭಾರತೀಯ ಮೂಲದ ನಾಗರಿಕರಿಗೆ ದೊಡ್ಡ ಮುನ್ನಡೆ ನೀಡಿದಂತಾಗಿದೆ. ಉದ್ಯೋಗ, ಶಿಕ್ಷಣ, ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಫ್ರಾನ್ಸ್‌ನಲ್ಲಿ ಭಾರೀ ಸಂಖ್ಯೆಯಲ್ಲಿ ಭಾರತೀಯರನ್ನು ಹೊಂದಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+