ಸೈಬರ್ ವಂಚನೆಗೆ ನಾನಾ ತಂತ್ರ ಹೆಣೆಯುವ ವಂಚಕರು, ಎಲ್ಲೋ ಕುಳಿತು ಹಣ ದೋಚುತ್ತಿದ್ದಾರೆ. ತಂತ್ರಜ್ಞಾನದ ಬಳಕೆ ಹೆಚ್ಚಾಗುತ್ತಿದ್ದಂತೆ, ಜನರ ದುರಾಸೆಯನ್ನು ಹಾಗೂ ಅಮಾಯಕತೆಯನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್ ಖದೀಮರು ತಮ್ಮ ಗಾಳದಲ್ಲಿ ಸುಲಭವಾಗಿ ಜನರನ್ನು ಸಿಲುಕಿಸುತ್ತಿದ್ದಾರೆ.
ಒಟಿಪಿ ಪಡೆದುಕೊಂಡು, ಬ್ಯಾಂಕ್ ನಿಂದ ಕರೆ ಮಾಡಿದಂತೆಯೋ ನಕಲಿ ಕಾಲ್ ಮಾಡಿ ಮಾಹಿತಿ ಪಡೆದುಕೊಂಡು ಅಮಾಯಕರಿಗೆ ವಂಚಿಸಿದ್ರೆ, ವಿದ್ಯಾವಂತರಿಗೆ ಹಣ ದುಪ್ಪಟ್ಟು ಮಾಡುವ, ಷೇರು ಮಾರುಕಟ್ಟೆಯಲ್ಲಿ ಯಥೇಚ್ಚವಾಗಿ ಹಣ ಗಳಿಸುವ ಆಮಿಷವೊಡ್ಡಿ ಹಣ ದೋಚುತ್ತಾರೆ ಸೈಬರ್ ವಂಚಕರು. ಈ ಕುರಿತು ಅದೆಷ್ಟೇ ವರದಿಗಳಾದರೂ ಜನರು ಮೋಸ ಹೀಗುವುದು ತಪ್ಪುತ್ತಿಲ್ಲ.

ಈ ವಂಚಕರು ಅನೇಕರ ಇಮೇಲ್, ವಾಟ್ಸ್ ಅಪ್ ಸೇರಿದಂತೆ ಎಲ್ಲ ಬಗೆಯ ಸಾಮಾಜಿಕ ಜಾಲತಾಣಗಳ ಲಾಗ್‌ಇನ್ ಮಾಹಿತಿ ಹ್ಯಾಕ್ ಮಾಡಿ ಅದರ ಮಾಹಿತಿ ಅನುಸರಿಸಿ ಮೊಬೈಲ್ ಗ್ರಾಹಕನ ಕಾಂಟ್ಯಾಕ್ಟ್‌ಗಳಿಗೆ ರೇಪಿಸ್ವ್, ವಂಚಕ ಎಂದು, ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಪ್ರಕರಣಗಳಿವೆ ಎಂದೆಲ್ಲಾ ಸಂದೇಶ ರವಾನೆ ಮೂಲಕ ಮಾನ ಹರಾಜು ಮಾಡಿ ಹಣ ದೋಚುವುದು ಹೊಸದಲ್ಲ. ಸೈಬರ್ ಕ್ರೈಂ ಜಾಲದ ಕುಕೃತ್ಯಕ್ಕೆ ಅಂಜಿದ ಅನೇಕ ಯುವಕರು ಅವಮಾನಕ್ಕೆ ಅಂಜಿ ಸಾವಿನ ಕುಣಿಕೆಯತ್ತ ಹೆಜ್ಜೆ ಹಾಕಿರುವುದು ಹೊಸದಲ್ಲ.
ಈ ಎಲ್ಲಾ ವಂಚನೆ ಬಗ್ಗೆ ಜನಕ್ಕೆ ಅರಿವು ಮೂಡುತ್ತಿದ್ದಂತೆ, ಡಿಜಿಟಲ್ ಅರೆಸ್ಟ್ ತಂತ್ರ , ಎಪಿಕೆ ಫೈಲ್ಸ್ ಗಳನ್ನ ಕಳುಹಿಸಿ ಹೊಸ ರೀತಿಯ ಅಪರಾಧಗಳನ್ನು ಎಸಗುತ್ತಿದ್ದಾರೆ. ಇದೀಗ ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿರುವ ಖದೀಮರು ಮತ್ತೊಂದು ಹೊಸ ತಂತ್ರ ಹೆಣೆದು ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ.
ವ್ಯಾಟಸ್ಪ್ ನಲ್ಲಿ ಮದುವೆ ಆಮಂತ್ರಣ ಬಂತೆಂದು ಆತುರಪಡಬೇಡಿ.!
ಹೌದು ಹೇಳಿ ಕೇಳಿ ಈಗ ಮದುವೆ ಸೀಸನ್ . ತಂತ್ರಜ್ಞಾನ ಯುಗದಲ್ಲಿ ನೆಂಟರಿಷ್ಟರು ಮದುವೆ ಆಮಂತ್ರಣ ನೀಡಲೆಂದು ಮನೆಗೆ ಬಂದು ಅಹ್ವಾನ ನೀಡುವುದು ಕಡಿಮೆಯಾಗಿದೆ. ಈಗೇನಿದ್ರೂ ವಾಟ್ಸಮ್ , ಟೆಲಿಗ್ರಾಂ ನಲ್ಲಿ ಆಮಂತ್ರಣ ರವಾನಿಸುತ್ತಾರೆ. ಹಾಗಂತ ಅಪರಿಚಿತ ಸಂಖ್ಯೆಯಿಂದ ನಿಮಗೇನಾದ್ರೂ ಮದುವೆ ಆಮಂತ್ರಣ ಪತ್ರಿಕೆ ಬಂತು ಎಂದರೆ ತೆರೆಯಲು ಆತುರಪಡಬೇಡಿ. ಡಿಜಿಟಲ್ ವೆಡ್ಡಿಂಗ್ ಕಾರ್ಡ್‌ಗಳು ಸಾಮಾನ್ಯವಾಗುತ್ತಿದ್ದಂತೆ, ಸೈಬರ್ ಕ್ರಿಮಿನಲ್‌ಗಳು ಇದನ್ನೇ ಬಂಡವಾಳ ಮಾಡಿಕೊಂಡಿದ್ದಾರೆ. ವಾಟ್ಸಾಪ್ ಮೂಲಕ ಮದುವೆ ಆಮಂತ್ರಣ ಕಳುಹಿಸಿ ಪೋನ್ ನಲ್ಲಿರುವ ಮಾಹಿತಿಯನ್ನು ಸಂಪೂರ್ಣ ಹ್ಯಾಕ್ ಮಾಡಲಾಗುತ್ತದೆ.
ಹೇಗೆ ನಡೆಯುತ್ತೆ ಮದುವೆಯ ಆಮಂತ್ರಣದ ವಂಚನೆ:
ವಂಚಕರಿಂದ ಬಂದ ಸಂದೇಶವು ಮದುವೆಗೆ ಆಹ್ವಾನಿಸಲ್ಪಡುವ ಕುರಿತು ಕೆಲವು ಸಾಲುಗಳನ್ನು ಒಳಗೊಂಡಿರುತ್ತದೆ. ಅದರ ಜೊತೆ ಅಟ್ಯಾಚ್ ಮಾಡಿರುವುದು ಮೇಲ್ನೋಟಕ್ಕೆ ಡಿಜಿಟಲ್ ಮದುವೆ ಕಾರ್ಡ್‌ನಂತೆ ಕಾಣಿಸುತ್ತದೆ. ಆದರೆ ಇವು APK ಫೈಲ್‌ಗಳಾಗಿರುತ್ತದೆ. ಒಮ್ಮೆ ಡೌನ್‌ಲೋಡ್ ಮಾಡಿದೆ ಇದರಲ್ಲಿದ್ದ ಕುತಂತ್ರಾಂಶ(ಮಾಲ್ ವೇರ್), ನಿಮ್ಮ ಫೋನ್‌ನಲ್ಲಿ ರಹಸ್ಯವಾಗಿ ಸ್ಥಾಪಿಸಿ ಮತ್ತು ಸೂಕ್ಷ್ಮ ಡೇಟಾವನ್ನು ಕದ್ದು ನಿಮ್ಮ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಬಹುದು. ಸೈಬರ್ ಕ್ರಿಮಿನಲ್‌ಗಳು ನಿಮ್ಮ ಫೋನ್‌ನಲ್ಲಿ ಕಂಡುಬರುವ ಡೇಟಾವನ್ನು ಬಳಸಿಕೊಂಡು ಫೋನ್‌ನ ಮಾಲೀಕರಂತೆ ನಟಿಸುವ ಮೂಲಕ ಯಾರನ್ನಾದರೂ ಮತ್ತಷ್ಟು ವಂಚಿಸಲು ದಾರಿ ಕಂಡು ಹಿಡಿಯಬಹುದು. ಅಥವಾ ಹ್ಯಾಕರ್ ಗಳು ಹಣಕ್ಕಾಗಿ ಬೇಡಿಕೆ ಇಡಬಹುದು.
ಈ ಬಗ್ಗೆ ಸೈಬರ್ ಪೊಲೀಸರು ಎಚ್ಚರಿಕೆಯನ್ನು ನೀಡಿದ್ದು, ಅಪರಿಚಿತ ಸಂಖ್ಯೆಗಳಿಂದ ಇಂತಹ ಸಂದೇಶಗಳ ಬಗ್ಗೆ ಜಾಗರೂಕರಾಗಿರಿ ಎಂದು ಸಲಹೆ ನೀಡಿದ್ದಾರೆ. ಪರಿಚಯವಿಲ್ಲದ ಮೂಲಗಳಿಂದ ಕಳುಹಿಸಲಾದ ಯಾವುದೇ ಫೈಲ್‌ಗಳನ್ನು ಡೌನ್‌ಲೋಡ್ ಮಾಡಬೇಡಿ. ಸೈಬರ್ ವಂಚರ ಸುಳಿಗೆ ಸಿಲುಕದಿರಿ.


Click it and Unblock the Notifications