ಸತತ 5 ವರ್ಷಗಳಿಂದ ಸ್ಥಗಿತಗೊಂಡಿದ್ದ ಭಾರತ-ಚೀನಾ (India-China) ನೇರ ವಿಮಾನ ಸಂಚಾರ ಇದೀಗ ಮತ್ತೊಮ್ಮೆ ಆರಂಭವಾಗಲಿದೆ. ಮಹಾಮಾರಿ ಕೊರೊನಾದಿಂದಾಗಿ 2020ರಲ್ಲಿ ಭಾರತ-ಚೀನಾ ನಡುವಿನ ನೇರ ವಿಮಾನ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಸತತ ಐದು ವರ್ಷಗಳ ನಂತರ ಮತ್ತೆ ಪ್ರಾರಂಭವಾಗುತ್ತಿವೆ. ಇಂದು ರಾತ್ರಿ 10 ಗಂಟೆಗೆ ಕೊಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಚೀನಾದ ಗುವಾಂಗ್‌ಝೌಗೆ (Kolkata-China) ಮೊದಲ ವಿಮಾನ ಹೊರಡಲಿದೆ.

ಭಾರತ ಮತ್ತು ಚೀನಾ ನಡುವೆ ನೇರ ವಿಮಾನಯಾನ ಸೇವೆಗಳು ಇಂದಿನಿಂದ ಮತ್ತೆ ಪುನರಾರಂಭಗೊಂಡಿವೆ. ಐದು ವರ್ಷಗಳ ನಂತರ ಈ ಸೇವೆಗಳು ಮತ್ತೆ ಶುರುವಾಗಿದ್ದು, ಮೊಟ್ಟಮೊದಲ ವಿಮಾನವು ಇಂದು ರಾತ್ರಿ 10 ಗಂಟೆಗೆ ಟೇಕ್ ಆಫ್ ಆಗಲಿದೆ.
ಭಾರತ-ಚೀನಾ ವಿಮಾನ ಮತ್ತೆ ಆರಂಭ!
ಇದೀಗ ಆರಂಭವಾದ ಚೀನಾದ ಚೈನಾ ಸದರ್ನ್ ಏರ್‌ಲೈನ್ಸ್ ನಡೆಸಲಿದೆ. ಭಾರತ-ಚೀನಾ ನೇರ ವಿಮಾನದಿಂದಾಗಿ ಎರಡೂ ಬಲಿಷ್ಠ ರಾಷ್ಟ್ರಗಳ ನಡುವಿನ ವಾಣಿಜ್ಯ ಮತ್ತು ಪ್ರವಾಸೋದ್ಯಮ ಸಂಪರ್ಕ ಇನ್ನಷ್ಟು ಉತ್ತೇಜನ ಸಿಗಲಿದೆ ಎನ್ನಲಾಗಿದೆ. ಕೋವಿಡ್ ಹೆಚ್ಚಳದಿಂದಾಗಿ, ರಾಜತಾಂತ್ರಿಕ ಸಮಸ್ಯೆಗಳಿಂದಾಗಿ ಮತ್ತು ಗಡಿ ವಿವಾದಗಳಿಂದಾಗಿ ಸ್ಥಗಿತಗೊಂಡಿದ್ದ ನೇರ ವಿಮಾನ ಸೇವೆ ಇದೀಗ ಮತ್ತೆ ಆರಂಭಕ್ಕೆ ಸಜ್ಜಾಗಿ ನಿಂತಿದೆ.
ಜನರಿಗೆ ಮತ್ತಷ್ಟು ಸುಲಭ
ಕಳೆದ ಐದು ವರ್ಷಗಳಿಂದ ಸ್ಥಗಿತಗೊಂಡಿದ್ದ ವಿಮಾನ ಸೇವೆ ಇದೀಗ ಪ್ರಾರಂಭವಾಗುತ್ತಿದೆ. ಆದರೆ ಈ ಹಿಂದೆ ಭಾರತೀಯ ಮತ್ತು ಚೀನಾದ ನಾಗರಿಕರು ಥೈಲ್ಯಾಂಡ್, ಸಿಂಗಾಪುರ್ ಅಥವಾ ಮಲೇಷ್ಯಾದಂತಹ ಬೇರೆ ದೇಶಗಳ ಮೂಲಕ ಪ್ರಯಾಣ ಮಾಡುತ್ತಿದ್ದರು. ಇದರಿಂದ ಸಮಯವೂ ವ್ಯರ್ಥ, ಹಣವೂ ಹೆಚ್ಚು ಬೇಕಾಗಿತ್ತು. ಆದ್ರೆ ನೇರ ವಿಮಾನ ಸೇವೆಯಿಂದ ಈ ಎಲ್ಲಾ ಸಮಸ್ಯೆಗಳಿಗೆ ಅಂತ್ಯ ಸಿಗಲಿದೆ.
ಒಂದು ಸೇವೆ, ಹಲವು ಪ್ರಯೋಜನ:
ಭಾರತ ಮತ್ತು ಚೀನಾ ತೆಗೆದುಕೊಂಡ ಈ ಮಹತ್ವದ ನಿರ್ಧಾರದಿಂದ ಹಲವು ಪ್ರಯೋಜನಗಳು ಸಿಗಲಿದೆ. ಮೊದಲನೆಯದಾಗಿ, ಇದು ಸಂಪರ್ಕವನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲದೇ ವಿದ್ಯಾರ್ಥಿಗಳು, ಉದ್ಯಮಿಗಳು, ಪ್ರವಾಸಿಗರಿಗೆ, ಸಾಂಸ್ಕೃತಿಕ ಮತ್ತು ಆರ್ಥಿಕ ಸಂಬಂಧಗಳನ್ನು ಬಲಪಡಿಸಲು ತುಂಬಾನೇ ಸಹಕಾರಿ. ಎರಡನೆಯದಾಗಿ, ಈ ಸೇವೆಯಿಂದಾಗಿ ಆರ್ಥಿಕ ಪ್ರಯೋಜನಗಳನ್ನು ನೀಡುತ್ತದೆ. ವ್ಯಾಪಾರ ಸಂಬಂಧಗಳನ್ನು ಹೆಚ್ಚಿಸುತ್ತದೆ. ಮೂರನೆಯದಾಗಿ, ಇದು ರಾಜತಾಂತ್ರಿಕವಾಗಿ ಭಾರೀ ಮಹತ್ವವನ್ನು ಹೊಂದಿದೆ. ಎರಡು ದೇಶಗಳ ನಡುವಿನ ಸಂಬಂಧ ಹೆಚ್ಚಾಗುತ್ತದೆ ಮತ್ತು ಭವಿಷ್ಯದ ಅಭಿವೃದ್ಧಿಗೆ ಪ್ರಯೋಜನವಾಗಲಿದೆ ಎನ್ನಲಾಗಿದೆ.
ಹೊಸ ಮಾರ್ಗ-ಹೊಸ ಭರವಸೆ:
ಭಾರತ-ಚೀನಾ ನಡುವಿನ ಈ ಮಾರ್ಗಗಳು ಆರಂಭದಲ್ಲಿ ವಾರಕ್ಕೆ ಕೇವಲ ಮೂರು ಬಾರಿ ಕಾರ್ಯನಿರ್ವಹಿಸಲಿದ್ದು, ಬೇಡಿಕೆ ಹೆಚ್ಚಾದಂತೆ ಸೇವೆಯನ್ನು ಹೆಚ್ಚಿಸುವ ಯೋಜನೆ ಇದೆ ಎಂದು ವರದಿಯಾಗಿದೆ. ಆದ್ದರಿಂದ ಪ್ರಯಾಣಿಕರು ತ್ವರಿತ ಸೇವೆಯನ್ನು ಪಡೆಯಲಿದ್ದು, ವೆಚ್ಚವೂ ಕಡಿಮೆಯಾಗಲಿದೆ.
2020 ಕ್ಕಿಂತ ಮೊದಲು, ಭಾರತ ಮತ್ತು ಚೀನಾ ವಾರ್ಷಿಕವಾಗಿ 1 ಮಿಲಿಯನ್‌ಗಿಂತಲೂ ಹೆಚ್ಚು ಪ್ರಯಾಣಿಕರು ನೇರವಾಗಿ ಮತ್ತು ಬೇರೆ ಮಾರ್ಗಗಳ ಮೂಲಕ ಪ್ರಯಾಣಿಸಿದ್ದರು. ಇದೀಗ ಈ ಆರಂಭ ಹೊಸ ಭರವಸೆಯನ್ನು ಹೊಂದಿದ್ದು, ವ್ಯಾಪಾರ, ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ.


Click it and Unblock the Notifications