ದೀಪಾವಳಿ ಹಬ್ಬಕ್ಕೆಂದು ಹಲವಾರು ಕಂಪನಿಗಳು ರಿಯಾಯಿತಿ ದರದಲ್ಲಿ ತಮ್ಮ ಸಾಧನಗಳನ್ನು ಮಾರಾಟ ಮಾಡಲು ಆರಂಭಿಸಿವೆ. ದೀಪಾವಳಿ ಸಂದರ್ಭದಲ್ಲಿ ಅತ್ಯಂತ ಕಡಿಮೆ ದರದಲ್ಲಿ ಕೆಲ ಕಂಪನಿಗಳು ಟಿವಿ, ಫ್ರಿಡ್ಜ್, ಮೊಬೈಲ್ ಇತರ ವಸ್ತುಗಳನ್ನು ಮಾರಾಟ ಮಾಡುತ್ತವೆ. ಇದಕ್ಕಾಗಿನೇ ಕೆಲ ಗ್ರಾಹಕರು ದೀಪವಳಿಯಲ್ಲಿ ಹೆಚ್ಚೆಚ್ಚು ದುಬಾರಿ ವಸ್ತುಗಳನ್ನು ಕಡಿಮೆ ದರದಲ್ಲಿ ಖರೀದಿ ಮಾಡುತ್ತಾರೆ.
ಈಗಾಗಲೇ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ದೀಪಾವಳಿ ಮಾರಾಟ ಪ್ರಾರಂಭವಾಗಿದೆ. ಅನೇಕ ವಸ್ತುಗಳ ಮೇಲೆ ಭಾರಿ ರಿಯಾಯಿತಿಗಳು ಮತ್ತು ಕೊಡುಗೆಗಳು ಲಭ್ಯವಿವೆ. ನೀವು ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಬಹಳ ಸಮಯದಿಂದ ಯೋಚಿಸುತ್ತಿದ್ದರೆ, ಈ ಸಮಯ ನಿಮಗೆ ಉತ್ತಮ ಆಯ್ಕೆಯಾಗಿದೆ. ಈ ದೀಪಾವಳಿ ಸಮಯದಲ್ಲಿ ನೀವು 15,000 ರೂ.ಗಿಂತ ಕಡಿಮೆ ಬೆಲೆಯಲ್ಲಿ ಟಾಪ್ ಫೀಚರ್‌ಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್ ಖರೀದಿಸಬಹುದು. ಹಾಗಾದರೆ ಅಂತಹ ಕೆಲವು ಸ್ಮಾರ್ಟ್‌ಫೋನ್‌ಗಳ ಬಗ್ಗೆ ಮಾಹಿತಿ ಇಲ್ಲಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ35
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ35 ಈ ಫೋನನ್ನು ಕೇವಲ 14,999 ರೂಪಾಯಿಗೆ ಮಾರಾಟ ಮಾಡುಲಾಗುತ್ತಿದೆ. ಇದರಲ್ಲಿ ನೀವು 6ಜಿಬಿ ರ್ಯಾಮ್ ಮತ್ತು 128ಜಿಬಿ ಸ್ಟೋರೇಜ್ ಅನ್ನು ಪಡೆಯುತ್ತೀರಿ. ಈ ಸ್ಮಾರ್ಟ್‌ಫೋನ್ ಎಸ್‌ಬಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ರಿಯಾಯಿತಿಯೊಂದಿಗೆ 13,749 ರೂಪಾಯಿಗೆ ಲಭ್ಯವಿದೆ. ಹ್ಯಾಂಡ್‌ಸೆಟ್ 120Hz ರಿಫ್ರೆಶ್ ದರದೊಂದಿಗೆ 6.6-ಇಂಚಿನ ಸೂಪರ್ AMOLED ಡಿಸ್‌ಪ್ಲೇಯೊಂದಿಗೆ ಸಿಗಲಿದೆ.
ಇನ್ನೂ ಇದು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ + ನಿಂದ ರಕ್ಷಿಸಲ್ಪಟ್ಟಿದೆ. ಇದು ಸ್ಯಾಮ್‌ಸಂಗ್‌ನ Exynos 1380 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಅಲ್ಲದೆ ಫೋಟೋಗಾಗಿ ಇದು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಇರುತ್ತದೆ. ಇದಲ್ಲದೆ 50MP ಪ್ರಾಥಮಿಕ ಶೂಟರ್, 8MP ಅಲ್ಟ್ರಾ-ವೈಡ್ ಶೂಟರ್, 2MP ಮ್ಯಾಕ್ರೋ ಶೂಟರ್ ಮತ್ತು ಮುಂಭಾಗದಲ್ಲಿ 13MP ಸೆಲ್ಫಿ ಕ್ಯಾಮೆರಾ ಇರಲಿದೆ. ಈ ಸಾಧನ ಬಹು RAM ಮತ್ತು ಶೇಖರಣಾ ಸಂರಚನೆಗಳಲ್ಲಿ ಲಭ್ಯವಿದೆ.
ಸಿಎಂಎಫ್ ಫೋನ್ 1
ಇನ್ನೂ ಸಿಎಂಎಫ್ ಫೋನ್ 1 ಅಮೇಸಾನ್ ಮತ್ತು ಫ್ಲಿಪ್ ಕಾರ್ಟ್‌ನಲ್ಲಿ 6ಜಿಬಿ ರ್ಯಾಮ್ ಮತ್ತು 128ಜಿಬಿ ಸಂಗ್ರಹದ ಸಾಮಾರ್ಥ್ಯದೊಂದಿಗೆ 14,999 ರೂಪಾಯಿಗೆ ಲಭ್ಯವಿರುತ್ತದೆ. ಅಲ್ಲದೆ ಬ್ಯಾಂಕ್ ರಿಯಾಯಿತಿಗಳೊಂದಿಗೆ 12,999 ರೂಪಾಯಿಗಳ ಪರಿಣಾಮಕಾರಿ ಬೆಲೆಯಲ್ಲಿ ಇದನ್ನು ಖರೀದಿಸಬಹುದು.
ಸ್ಮಾರ್ಟ್ಫೋನ್ MediaTek ಡೈಮೆನ್ಸಿಟಿ 7300 ನಿಂದ ಚಾಲಿತವಾಗಿದೆ. 8GB LPDDR4X RAM ಮತ್ತು 256GB UFS 2.2 ಸಂಗ್ರಹಣಾ ಸಾಮಾರ್ಥ್ಯ ಹೊಂದಿರುತ್ತದೆ. ಇದನ್ನು 2TB ವರೆಗೆ ವಿಸ್ತರಿಸಬಹುದು. ಇದಲ್ಲದೇ, ಆಂಡ್ರಾಯ್ಡ್ 14 ಆಧಾರಿತ ನಥಿಂಗ್ ಓಎಸ್ 2.6 ನಲ್ಲಿ ಸ್ಮಾರ್ಟ್‌ಫೋನ್ ಕಾರ್ಯನಿರ್ವಹಿಸುತ್ತದೆ. ಇದು 2 ವರ್ಷಗಳ OS ನವೀಕರಣಗಳು ಮತ್ತು 3 ವರ್ಷಗಳ ಭದ್ರತಾ ಪ್ಯಾಚ್‌ಗಳೊಂದಿಗೆ ಬರುತ್ತದೆ.
Infinix Note 40 Pro
ಇದರ ನಿಜವಾದ ಮೌಲ್ಯ 21,999 ರೂಪಾಯಿ. ಆದರೆ ಈ ಸ್ಮಾರ್ಟ್‌ಫೋನ್ ಅನ್ನು ದೀಪಾವಳಿ ಆಫರ್ ಆಗಿ 17,999 ಕ್ಕೆ ಲಭ್ಯವಿದೆ. ಇದರಲ್ಲಿ ದೊಡ್ಡ ಕಡಿತವನ್ನು ಮಾಡಲಾಗಿದೆ. ಹೆಚ್ಚುವರಿಯಾಗಿ, HDFC ಕಾರ್ಡ್ ರಿಯಾಯಿತಿಯೊಂದಿಗೆ, ಇದನ್ನು ಹಬ್ಬದ ಋತುವಿನಲ್ಲಿ ಸುಮಾರು 14,999 ರೂಗಳಿಗೆ ಖರೀದಿಸಬಹುದು.
Neo 40 Pro 6.78-ಇಂಚಿನ FHD+ ಕರ್ವ್ಡ್ AMOLED ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯನ್ನು ಹೊಂದಿದೆ. ಹ್ಯಾಂಡ್‌ಸೆಟ್ ಮೀಡಿಯಾ ಟೆಕ್ ಡೈಮೆನ್ಸಿಟಿ 7020 ಚಿಪ್‌ಸೆಟ್ ಮತ್ತು ಉತ್ತಮ ಛಾಯಾಗ್ರಹಣ ಅನುಭವಕ್ಕಾಗಿ OIS ಜೊತೆಗೆ 108MP ಪ್ರೈಮರಿ ರಿಯರ್ ಕ್ಯಾಮೆರಾವನ್ನು ಹೊಂದಿದೆ. ಅಲ್ಲದೆ ಇದು 32MP ಫ್ರಂಟ್ ಶೂಟರ್ ಅನ್ನು ಹೊಂದಿದೆ ಮತ್ತು 45W ವೇಗದ ಚಾರ್ಜಿಂಗ್‌ನೊಂದಿಗೆ 5,000mAh ಬ್ಯಾಟರಿಯನ್ನು ಹೊಂದಿರುತ್ತದೆ. 20W ವೈರ್‌ಲೆಸ್ ಚಾರ್ಜಿಂಗ್ ಅನ್ನು ಹೊಂದಿರುತ್ತದೆ.
Realme Narzo 70 Turbo
ಇದರ ಬೆಲೆ 16,998 ರೂಪಾಯಿ ಆಗಿತ್ತು. ಆದರೆ ಈಗ ಅಮೇಜಾನ್ ಪೇ ಐಸಿಐಸಿಐ ಕಾರ್ಡ್ ಮೂಲಕ 2,000 ಕೂಪನ್ ಮತ್ತು 750 ಕ್ಯಾಶ್‌ಬ್ಯಾಕ್ ಪಡೆಯುವ ಮೂಲಕ ಸ್ಮಾರ್ಟ್‌ಫೋನ್ ಅನ್ನು ಕೇವಲ 14,998 ರೂಪಾಯಿಗೆ ಖರೀದಿಸಬಹುದು. ಹ್ಯಾಂಡ್ಸೆಟ್ 120Hz ರಿಫ್ರೆಶ್ ದರದೊಂದಿಗೆ 6.67-ಇಂಚಿನ ಪೂರ್ಣ HD+ AMOLED ಡಿಸ್ಪ್ಲೇಯನ್ನು ಹೊಂದಿದೆ.
ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಕ್ಯಾಮೆರಾ ಕುರಿತು ಮಾತನಾಡುವುದಾದರೆ, 50MP ಪ್ರಾಥಮಿಕ ಶೂಟರ್ ಮತ್ತು 16MP ಫ್ರಂಟ್ ಕ್ಯಾಮರಾ ಇದೆ. ಇದಲ್ಲದೆ, ಸ್ಮಾರ್ಟ್ಫೋನ್ 45W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಹೊಂದಿದೆ.


Click it and Unblock the Notifications