ಮುಂದಿನ ವಾರ ಬಿಹಾರದಲ್ಲಿ ವಿಧಾನಸಭಾ ಚುನಾವಣೆ (Bihar Assembly Election 2025) ನಡೆಯಲಿದೆ. ಬಿಹಾರದಲ್ಲಿ ಚುನಾವಣಾ ಕಣ ರಂಗೇರಿದೆ. ಪಕ್ಷಗಳು ಈಗಾಗಲೇ ವೇಗದ ಪ್ರಚಾರವನ್ನು ಆರಂಭಿಸಿದ್ದು, ಯಾರು ಗೆಲ್ಲಲಿದ್ದಾರೆ ಎಂದು ಕಾದುನೋಡಬೇಕಿದೆ. ಇನ್ನು ಬಿಹಾರ ವಿಧಾನಸಭೆ 243 ಸ್ಥಾಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಈ ಮಧ್ಯೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar), ಬೆಂಗಳೂರಿನಲ್ಲಿರುವ ಬಿಹಾರದ ಜನರ ಹಿತದೃಷ್ಟಿಯಿಂದ ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ.

ಹೌದು, ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಬೆಂಗಳೂರಿನಲ್ಲಿರುವ ಬಿಹಾರದ ಜನರಿಗೆ ರಜೆ ನೀಡುವಂತೆ ಮನವಿ ಮಾಡಿದ್ದಾರೆ. ವಿಧಾನ ಸಭಾ ಚುನಾವಣೆ ಹಿನ್ನೆಲೆ, ಬೆಂಗಳೂರಿನ ವ್ಯವಹಾರ ಸಂಸ್ಥೆಗಳು, ಕಂಪನಿಗಳಲ್ಲಿ ಬಿಹಾರದ ಜನರು ಕೆಲಸ ಮಾಡುತ್ತಿದ್ದರೆ ಅವರಿಗೆ ಮೂರರಿಂದ ನಾಲ್ಕು ದಿನಗಳ ರಜೆ ನೀಡುವಂತೆ ಮನವಿ ಮಾಡಿದ್ದಾರೆ. ಈ ಮೂಲಕ ಮತ ಚಲಾಯಿಸುವ ಹಕ್ಕನ್ನು ಪ್ರತಿನಿಧಿಸಿದ್ದಾರೆ.
ರಜಾ ಜೊತೆಗೆ ಡಿಕೆಶಿ ಪ್ರಚಾರ!
ಬಿಹಾರದಲ್ಲಿ ಈ ಬಾರಿ ಮಹಾಘಟಬಂಧನ್ vs ಎನ್‌ಡಿಎ ಆಗಲಿದೆ. ಆದರೆ ಯಾರು ಗೆಲ್ಲುತ್ತಾರೆ ಎಂದು ಕಾದು ನೋಡಬೇಕಿದೆ. ಆರ್‌ಜೆಡಿ ಮತ್ತು ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ್‌ಗೆ ಮತ ಚಲಾಯಿಸಿ ಎಂದು ಬೆಂಗಳೂರಿನಲ್ಲಿ ವಾಸಿಸುವ ಬಿಹಾರದ ಜನರಿಗೆ ಡಿಕೆಶಿ ಮನವಿ ಮಾಡಿದರು. ಅಲ್ಲದೇ ಬಿಹಾರದ ಪ್ರಗತಿಗಾಗಿ ನೀವು ಮಹಾಘಟಬಂಧನ್‌ಗೆ ಮತ ಚಲಾಯಿಸಬೇಕು ಎಂದು ಹೇಳಿದರು.
"ಬಿಹಾರದ ಜನರನ್ನು ಶ್ರಮಜೀವಿಗಳು ಎಂದು ಹೇಳಿದ ಡಿಕೆಶಿ, ಅವರೊಂದಿಗೆ ಮಾತನಾಡಲು ನನಗೆ ಸಂತೋಷವಾಗುತ್ತದೆ. ಬಿಹಾರದ ಜನರು ಶ್ರಮಜೀವಿಗಳು. ಬಿಹಾರದ ಹಲವು ಜನರು ಇಲ್ಲಿ ವಾಸಿಸುತ್ತಾರೆ. ಜೊತೆಗೆ ಕನ್ನಡನೂ ಮಾತನಾಡುತ್ತಾರೆ. ಕೆಲವರು ಇಲ್ಲೇ ಮತ ಚಲಾಯಿಸಿದರೆ, ಇನ್ನೂ ಕೆಲವರು ಬಿಹಾರದಲ್ಲೇ ಇಂದಿಗೂ ಮತ ಚಲಾಯಿಸುತ್ತಿದ್ದಾರೆ. ಆದ್ದರಿಂದ ಮಹಾಘಟಬಂಧನ್‌ಗೆ ಮತ ಚಲಾಯಿಸಿ ಎಂದು ಮನವಿ ಮಾಡಲು ನಾನು ಇಲ್ಲಿಗೆ ಬಂದಿದ್ದೇನೆ" ಎಂದು ಹೇಳಿದ್ದಾರೆ.
ಬಿಹಾರದ ಅಭಿವೃದ್ಧಿಗೆ ಮಹಾಘಟಬಂಧನ್ ಏಕೈಕ ಪರಿಹಾರ; ಡಿಕೆಶಿ
ಇನ್ನು ಮಾಧ್ಯಮದೊಂದಿಗೆ ಮಾತನಾಡಿದ ಡಿಕೆಶಿ, "ಬಿಹಾರದ ಪ್ರಗತಿಗೆ ಮಹಾಘಟಬಂಧನ್ ಏಕೈಕ ಪರ್ಯಾಯವಾಗಿದೆ. ಆದ್ದರಿಂದ ಬಿಹಾರದಲ್ಲಿ ಮಹಾಘಟಬಂಧನ್ ಅಧಿಕಾರಕ್ಕೆ ಬರಬೇಕು, ತೇಜಸ್ವಿ ಯಾದವ್ ಮುಖ್ಯಮಂತ್ರಿಯಾಗಬೇಕು" ಎಂದು ಹೇಳಿದರು. ಅಲ್ಲದೇ "ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಹಾರದ ಜನರಿಗೆ ಬಿಹಾರ ವಿಧಾನಸಭೆಯಲ್ಲಿ ಮತ ಚಲಾಯಿಸಲು ಅನು ಮಾಡಿಕೊಡಲು, ಮೂರಿಂದ ನಾಲ್ಕು ದಿನಗಳವರೆಗೆ ರಜೆ ನೀಡುವಂತೆ ಮನವಿ ಮಾಡುತ್ತೇನೆ" ಎಂದು ಹೇಳಿದರು.
ಎನ್‌ಡಿಎ ಪ್ರಣಾಳಿಕೆ ಬಿಡುಗಡೆ
ಈಗಾಗಲೇ ಬಿಜೆಪಿ-ಜೆಡಿಯು ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ತನ್ನ ಪ್ರಚಾರವನ್ನು ಶುರು ಮಾಡಿದೆ. ಅಲ್ಲದೇ 5 ವರ್ಷಗಳಲ್ಲಿ 1 ಕೋಟಿ ಸರ್ಕಾರಿ ಉದ್ಯೋಗಗಳು ಮತ್ತು ಬಿಹಾರವನ್ನು ಪ್ರವಾಹ ಮುಕ್ತ ರಾಜ್ಯವನ್ನಾಗಿ ನಿರ್ಮಿಸಲಿದೆ ಎಂದು ಭರವಸೆ ನೀಡಿದೆ. ಇನ್ನು ಪ್ರಣಾಳಿಕೆಯಲ್ಲಿ ಹಲವು ಯೋಜನೆಯ ಭರವಸೆಗಳನ್ನು ನಿರ್ಧರಿಸಿದ್ದು, ಯುವಕರಿಗೆ ಉದ್ಯೋಗ, ಕರ್ಪುರಿ ಠಾಕೂರ್‌ಕಿಸಾನ್ ಸಮ್ಮಾನ್ ನಿಧಿಗೆ ಚಾಲನೆ, ರೈತರಿಗೆ ಆರ್ಥಿಕ ಬೆಂಬಲ ಹೀಗೆ ಹಲವು ಯೋಜನೆಗಳನ್ನು ಜಾರಿಗೆ ತರಲು ಮುಂದಾಗಿದೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಚಿನ್ನದ ಬೆಲೆ ಇಂದು ಏರಿಕೆ? ಖರೀದಿಸುವ ಮುನ್ನ ಇದನ್ನು ನೋಡಿ



Click it and Unblock the Notifications