ನವದೆಹಲಿ, ಅಕ್ಟೋಬರ್ 18: ಡಿಮಾರ್ಟ್ ರಿಟೇಲ್ ಸ್ಟೋರ್‌ಗಳ ನಿರ್ವಹಣೆ ಮಾಡುತ್ತಿರುವ ಅವೆನ್ಯೂ ಸೂಪರ್ಮಾರ್ಟ್ಸ್ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(ಸಿಇಒ) ಇಗ್ನೇಷಿಯಸ್ ನವಿಲ್ ನೊರೊನ್ಹಾ ಈಗ ಬಿಲಿಯನೇರ್ (ಶತ ಕೋಟ್ಯಧಿಪತಿ) ಆಗಿದ್ದಾರೆ.
ಪ್ರಸ್ತುತ ದೇಶಾದಾದ್ಯಂತ ಡಿಮಾರ್ಟ್ ರಿಟೇಲ್ ಸ್ಟೋರ್‌ಗಳಲ್ಲಿ ವ್ಯಾಪಾರವು ಅಧಿಕವಾಗಿದೆ. ಕಡಿಮೆ ದರದಲ್ಲಿ ಅಗತ್ಯ ಸಾಮಾಗ್ರಿಗಳು ದೊರೆಯುತ್ತದೆ ಎಂಬ ನಿಟ್ಟಿನಲ್ಲಿ ಹೆಚ್ಚಿನ ಜನರು ಡಿಮಾರ್ಟ್‌ನತ್ತ ಮುಖಮಾಡಿದ್ದಾರೆ. ಈ ನಡುವೆ ಡಿಮಾರ್ಟ್‌ನ ಲಾಭವು ಕೂಡಾ ಅಧಿಕವಾಗಿದೆ. ಡಿಮಾರ್ಟ್ ರಿಟೇಲ್ ಸ್ಟೋರ್‌ಗಳ ನಿರ್ವಹಣೆ ಮಾಡುತ್ತಿರುವ ಅವೆನ್ಯೂ ಸೂಪರ್ಮಾರ್ಟ್ಸ್ ಲಿಮಿಟೆಡ್‌ನ ತೆರಿಗೆಯ ಬಳಿಕದ ಲಾಭವು 417.76 ಕೋಟಿ ರೂಪಾಯಿ ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 198.55 ಕೋಟಿ ರೂಪಾಯಿ ಲಾಭವನ್ನು ಡಿಮಾರ್ಟ್ ಹೊಂದಿತ್ತು. ಇದಕ್ಕೆ ಹೋಲಿಕೆ ಮಾಡಿದಾಗ ಅಂದರೆ 2020ರ ಸೆಪ್ಟೆಂಬರ್ ತ್ರೈಮಾಸಿಕಕ್ಕಿಂತ ಶೇ 110.4ರಷ್ಟು ಹೆಚ್ಚು ಲಾಭ ದಾಖಲಾಗಿದೆ.
2020ರ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಡಿಮಾರ್ಟ್ ರಿಟೇಲ್ ಸ್ಟೋರ್‌ಗೆ ಒಟ್ಟು ಆದಾಯವು 5306.20 ಕೋಟಿ ರೂಪಾಯಿ ಆಗಿತ್ತು. ಆದರೆ ಈ ವರ್ಷದಲ್ಲಿ ಈ ಆದಾಯವು ಭಾರೀ ಏರಿಕೆ ಆಗಿದೆ. ಶೇಕಡ 46.8ರಷ್ಟು ಆದಾಯವು ಹೆಚ್ಚಳವಾಗಿದ್ದು, ಈಗ 7789 ಕೋಟಿ ರೂಪಾಯಿ ಆದಾಯವನ್ನು ಈ ತ್ರೈಮಾಸಿಕದಲ್ಲಿ ಡಿಮಾರ್ಟ್ ಹೊಂದಿದೆ. ಇನ್ನು ಡಿಮಾರ್ಟ್ ಷೇರುಗಳು ಶೇಕಡ 113 ಏರಿಕೆ ಕಂಡಿದೆ ಎಂದು ಹೇಳಲಾಗಿದೆ.
ನೊರೊನ್ಹಾ ಆದಾಯ 7,744 ಕೋಟಿಗೆ ಏರಿಕೆ
ಈ ಎಲ್ಲಾ ಬೆಳವಣಿಗೆಯ ನಡುವೆ ಡಿಮಾರ್ಟ್ ರಿಟೇಲ್ ಸ್ಟೋರ್‌ಗಳ ನಿರ್ವಹಣೆ ಮಾಡುತ್ತಿರುವ ಅವೆನ್ಯೂ ಸೂಪರ್ಮಾರ್ಟ್ಸ್ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ 47 ವರ್ಷ ಪ್ರಾಯದ ಇಗ್ನೇಷಿಯಸ್ ನವಿಲ್ ನೊರೊನ್ಹಾ ಈಗ ಬಿಲಿಯನೇರ್ (ಶತ ಕೋಟ್ಯಧಿಪತಿ) ಆಗಿದ್ದಾರೆ. ಇಗ್ನೇಷಿಯಸ್ ನವಿಲ್ ನೊರೊನ್ಹಾರ ಆದಾಯವು ಈಗ 7,744 ಕೋಟಿ ರೂಪಾಯಿಗೆ ಏರಿಕೆ ಕಂಡಿದೆ.
ಸಂಸ್ಥೆಯಲ್ಲಿ ಶೇಕಡ 2.03 ಪಾಲು ಹೊಂದಿರುವ ನೊರೊನ್ಹಾ
ಇಗ್ನೇಷಿಯಸ್ ನವಿಲ್ ನೊರೊನ್ಹಾ ಪ್ರಸ್ತುತ ಒಟ್ಟು 13.13 ಮಿಲಿಯನ್ ಷೇರುಗಳನ್ನು ಹೊಂದಿದ್ದಾರೆ ಅಥವಾ ಕಂಪನಿಯಲ್ಲಿ ಒಟ್ಟು ಶೇಕಡ 2.03 ಪಾಲನ್ನು ಹೊಂದಿದ್ದಾರೆ. ಇನ್ನು ಡಿಮಾರ್ಟ್ ರಿಟೇಲ್ ಸ್ಟೋರ್‌ನ ಅಭಿವೃದ್ಧಿ ವಿಚಾರದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಇಗ್ನೇಷಿಯಸ್ ನವಿಲ್ ನೊರೊನ್ಹಾ, "ಕಳೆದ ವರ್ಷ ಇದೇ ತ್ರೈಮಾಸಿಕಕ್ಕಿಂತ ಈ ವರ್ಷದಲ್ಲಿ ಡಿಮಾರ್ಟ್‌ನ ಆದಾಯವು ಶೇಕಡ 46.6ರಷ್ಟು ಅಧಿಕವಾಗಿದೆ. ಈ ಹಿಂದಿಗೆ ಹೋಲಿಕೆ ಮಾಡಿದರೆ ಈಗ ಡಿಮಾರ್ಟ್ ಸ್ಟೋರ್‌ಗಳಲ್ಲಿ ಶೇಕಡ 23.7 ರಷ್ಟು ಅಭಿವೃದ್ಧಿ ಕಂಡು ಬಂದಿದೆ," ಎಂದು ತಿಳಿಸಿದ್ದಾರೆ.
ಷೇರು ಶೇಕಡ 1,800 ಪಟ್ಟು ಜಿಗಿತ!
"ನಾವು ಒಟ್ಟು 187 ಸ್ಟೋರ್ಗಳನನ್ನು ಹೊಂದಿದ್ದೇವೆ. ಈ ಪೈಕಿ ಹೆಚ್ಚಿನವು ಎರಡು ವರ್ಷ ಅಥವಾ ಅದಕ್ಕಿಂತ ಹಳೆಯದ್ದು ಆಗಿದೆ," ಎಂದು ಅವೆನ್ಯೂ ಸೂಪರ್ಮಾರ್ಟ್ಸ್ನ ಇಗ್ನೇಷಿಯಸ್ ನವಿಲ್ ನೊರೊನ್ಹಾ ಹೇಳಿದ್ದಾರೆ. ಅವೆನ್ಯೂ ಸೂಪರ್ಮಾರ್ಟ್ಸ್ ಲಿಮಿಟೆಡ್‌ನ ಷೇರು ಅಧಿಕವಾದ ಬಳಿಕ ಮಾರ್ಟ್‌ನ ವ್ಯಾಪಾರವು ಅಧಿಕವಾಗಿದೆ ಎಂದು ಹೇಳಲಾಗಿದೆ. 2017 ರ ಮಾರ್ಚ್ 21 ರಂದು ಅವೆನ್ಯೂ ಸೂಪರ್ಮಾರ್ಟ್ಸ್ ಲಿಮಿಟೆಡ್‌ನ ಷೇರು ರೂಪಾಯಿ 299 ಆಗಿತ್ತು. ಆದರೆ ಈಗ ಶೇಕಡ 1,800 ಪಟ್ಟು ಬೆಲೆಯು ಅಧಿಕವಾಗಿದೆ.
ನವಿಲ್ ನೊರೊನ್ಹಾ ಬಗ್ಗೆ ಸ್ವಲ್ಪ ತಿಳಿಯಿರಿ..
ಮುಂಬೈನಲ್ಲೇ ಹುಟ್ಟಿ ಬೆಳೆದ, ಇಗ್ನೇಷಿಯಸ್ ನವಿಲ್ ನೊರೊನ್ಹಾ ನರ್ಸೀ ಮೊಂಜಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನಿಂದ ಮ್ಯಾನೇಜ್‌ಮೆಂಟ್ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಡಿಮಾರ್ಟ್‌ಗೆ ಸೇರುವ ಮುನ್ನ, ನೊರೊನ್ಹಾ ಹಿಂದುಸ್ತಾನ್ ಯೂನಿಲಿವರ್‌ನಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದರು. ನವಿಲ್ ನೊರೊನ್ಹಾರನ್ನು ಅವೆನ್ಯೂ ಸೂಪರ್ ಮಾರ್ಟ್ಸ್ ಸಂಸ್ಥಾಪಕ ರಾಧಾಕೃಷ್ಣನ್ ದಮಾನಿ 2004 ರಲ್ಲಿ ವ್ಯವಹಾರದ ಮುಖ್ಯಸ್ಥರಾಗಿ ನೇಮಿಸಿಕೊಂಡಿದ್ದಾರೆ. 2007 ರಲ್ಲಿ ನವಿಲ್ ನೊರೊನ್ಹಾ ಸಂಸ್ಥೆಯ ಸಿಇಒ ಆಗಿ ಅಧಿಕಾರ ವಹಿಸಿಕೊಂಡರು.
More From GoodReturns

Credit Score: ಸಾಲ ಪಡೆಯಲಷ್ಟೇ ಅಲ್ಲ, ಬ್ಯಾಂಕ್ ಉದ್ಯೋಗಕ್ಕೂ ಬೇಕಿದೆ ಕ್ರೆಡಿಟ್ ಸ್ಕೋರ್; ಈ ಬಗ್ಗೆ ತಿಳಿಯಿರಿ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Ballari Airport: ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಈ ವಿಚಾರಕ್ಕೆ ಅಡ್ಡಿಯಾಗ್ತಿದ್ಯಾ-ಏನದು ಹೊಸ ವಿಚಾರ ತಿಳಿಯಿರಿ

Bank Holiday: ನಾಳೆ ಕರ್ನಾಟಕದಲ್ಲಿ ಬ್ಯಾಂಕ್ ತೆರೆದಿರುತ್ತೋ, ಇಲ್ಲವೋ? ಸ್ಪಷ್ಟ ಮಾಹಿತಿ ತಿಳಿಯಿರಿ

Silver Price Today: ಬೆಳ್ಳಿ ದರದಲ್ಲಿ ಇಂದು 5,000 ಕುಸಿತ; ಭಾರತದಲ್ಲಿ ಇಂದಿನ ಬೆಲೆ ತಿಳಿಯಿರಿ

LPG Crisis Bengaluru: ಕೋಳಿ ವ್ಯಾಪಾರಕ್ಕೂ ತಟ್ಟಿದ LPG ಕೊರತೆ ಬಿಸಿ; ಬೆಂಗಳೂರಲ್ಲಿ ಮಾರಾಟ ಭಾರಿ ಕುಸಿತ

Bengaluru: ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿಲ್ಲ; ಈ ರಸ್ತೆಯ ವ್ಯಾಪಾರಿಗಳಿಗೆ ದೊಡ್ಡ ಸಂಕಷ್ಟ

Eid-ul-Fitr 2026: ರಂಜಾನ್ ಹಬ್ಬ ಇಂದೋ, ನಾಳೆಯೋ; ಕೇರಳದಲ್ಲಿ ಮಾತ್ರ ಇಂದು ಆಚರಣೆ ಯಾಕೆ?

Oil Price Tension: ಮದ್ಯಪ್ರಾಚ್ಯ ಉದ್ವಿಗ್ನತೆ ನಡುವೆ ತೈಲ ಮಾರುಕಟ್ಟೆ ತಲ್ಲಣ, ಭಾರತಕ್ಕೆ ಸವಾಲು; ಎಚ್ಚರಿಕೆ ಸೂಚನೆ

Petrol Price Hike: ಪ್ರೀಮಿಯಂ ಪೆಟ್ರೋಲ್ ದರ ಏರಿಕೆ-ಲೀಟರ್ಗೆ 2 ಹೆಚ್ಚಳ, ಸಾಮಾನ್ಯ ಇಂಧನ ದರ ಸ್ಥಿರ



Click it and Unblock the Notifications