ನೀವು ಒಂದು ವೇಳೆ ಒಳ್ಳೆಯ ಸ್ಮಾರ್ಟ್‌ಫೋನ್ ತೆಗೆದುಕೊಳ್ಳುವ ಯೋಚನೆಯನ್ನು ಮಾಡುತ್ತಿದ್ದರೆ ಒಂದು ಹದಿನೈದು ದಿನ ಕಾಯಿರಿ. ಒಳ್ಳೆಯ ಫಿಚರ್ ಹೊಂದಿರುವ ಸ್ಮಾರ್ಟ್‌ಫೋನ್ ನಿಮ್ಮ ಕೈ ಸೇರಲಿದೆ. ಚೀನಾ ಕಂಪನಿ ಬಿಡುಗಡೆ ಮಾಡಲಿರುವ ಈ ಫೋನ್ ಬಗ್ಗೆ ಈಗಾಗಲೇ ಎಲ್ಲರಲ್ಲೂ ಕುತೂಹಲ ಮನೆ ಮಾಡಿದೆ.
Xiaomi ಯ ಪ್ರಮುಖ ಸ್ಮಾರ್ಟ್‌ಫೋನ್ Xiaomi 14 ಬಿಡುಗಡೆಯನ್ನು ಘೋಷಿಸಿದೆ. ಭಾರತದಲ್ಲಿ ಮಾರ್ಚ್ 7 ರಂದು ಈ ಫೋನ್ ಬಿಡುಗಡೆಯಾಗಲಿದೆ. ಫೋನ್ ಉತ್ತಮ ಕ್ಯಾಮೆರಾ ಸಂವೇದಕವನ್ನು ಹೊಂದಿರಲಿದೆ. ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಫೋನ್ ಅನ್ನು ನೀಡಬಹುದಾಗಿದೆ. ಆದಾಗ್ಯೂ, ಫೋನ್‌ನ ಅಧಿಕೃತ ವಿಶೇಷಣಗಳ ವಿವರಗಳನ್ನು ಬಿಡುಗಡೆ ಇನ್ನು ಬಹಿರಂಗ ಪಡಿಸಿಲ್ಲ.

ಸೋರಿಕೆಯಾದ ವರದಿಯನ್ನು ನಂಬುವುದಾದರೆ, ಮುಂಬರುವ ಫೋನ್‌ನಲ್ಲಿ ಇತ್ತೀಚಿನ Snapdragon 8 Gen 3 ಚಿಪ್‌ಸೆಟ್ ಅನ್ನು ಒದಗಿಸಲಾಗುತ್ತದೆ. ಅಲ್ಲದೆ, ಫೋನ್ 4610mAh ಬ್ಯಾಟರಿಯನ್ನು ಹೊಂದಿರಲಿದೆ. ಫೋನ್ 8 GB ಯಿಂದ 16 GB RAM ಹೊಂದಿರಲಿದೆ. ಫೋನ್ ಇಂಟರ್ನಲ್ ಸ್ಟೋರೆಜ್ 256 GB RAM ಮತ್ತು 512 GB ನೀಡಲಿದೆ. ಫೋನ್ 6.36 ಇಂಚಿನ ಡಿಸ್‌ಪ್ಲೇ ಹೊಂದಿರಲಿದೆ.
ಫೋನ್ 120Hz ರಿಫ್ರೆಶ್ ರೇಟ್ ಹೊಂದಿರುತ್ತದೆ ಎಂದು ಸೋರಿಕೆ ಆದ ಮಾಹಿತಿಯಲ್ಲಿ ಬಹಿರಂಗವಾಗಿದೆ. ಫೋನ್ ಡಾಲ್ಬಿ ವಿಷನ್, HDR10+ ಬೆಂಬಲ ಹೊಂದಿರಲಿದೆ. ಈ ಫೋನ್‌ನಲ್ಲಿ Android 14 ಆಧಾರಿತ HyperOS ಬೆಂಬಲವನ್ನು ಫೋನ್ ಇರಲಿದೆ.
ಟ್ರಿಪಲ್ ರಿಯರ್ ಕ್ಯಾಮೆರಾ
ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಹೊರ ಬರುತ್ತಿದೆ. ಇದರ ಕ್ಯಾಮೆರಾ 50 ಮೆಗಾ ಫಿಕ್ಸಲ್ ಆಗಿರುತ್ತದೆ. ಇದಲ್ಲದೆ, 50 ಮೆಗಾ ಫಿಕ್ಸಲ್ ಟೆಲಿಫೋಟೋ ಲೆನ್ಸ್ ಅನ್ನು ಹೊಂದಿರುವ ಸಾಧ್ಯತೆ ಇದೆ. ಇದು 3X ಜೂಮ್ ಬೆಂಬಲದೊಂದಿಗೆ ಗ್ರಾಹಕರ ಕೈ ಸೇರುವ ಸಾಧ್ಯತೆ ಇದೆ. 50MP ಅಲ್ಟ್ರಾ ವೈಡ್ ಕ್ಯಾಮೆರಾವನ್ನು ನೀಡಲಾಗುವುದು.

ಫೋನ್‌ನಲ್ಲಿ 8k ಮತ್ತು 4k ವೀಡಿಯೊ ರೆಕಾರ್ಡಿಂಗ್ ಅನ್ನು ನೀಡಲಾಗುವುದು. ಫೋನ್‌ನ ಮುಂಭಾಗದಲ್ಲಿ 32MP ಕ್ಯಾಮೆರಾ ಒದಗಿಸುವ ಸಾಧ್ಯತೆ ಇದೆ. 90W ವೈರ್ಡ್ ಚಾರ್ಜಿಂಗ್ ಬೆಂಬಲವನ್ನು ಫೋನ್‌ನಲ್ಲಿ ಒದಗಿಸಲಾಗುತ್ತದೆ. ಆದರೆ 50W ವೈರ್‌ಲೆಸ್ ಚಾರ್ಜಿಂಗ್ ಬರುವ ಸಾಧ್ಯತೆ ಇದೆ.


Click it and Unblock the Notifications