ಅದೆಷ್ಟೋ ಯುವಕರು ಬೆಂಗಳೂರು (Bengaluru), ಹೈದರಾಬಾದ್, ಮುಂಬೈನಂತಹ ಮಹಾನಗರಗಳಲ್ಲಿ ಕೆಲಸ ಮಾಡಿಕೊಂಡೇ, ಸೈಡ್ ಇಂಕಮ್‌ಗಾಗಿ ಹೋಟೆಲ್, ಫ್ರೀಲ್ಯಾನ್ಸ್ ವರ್ಕ್, ರ್ಯಾಪಿಡೋ, ಊಬರ್‌ನಂತಹ ಕೆಲಸಗಳನ್ನು ಮಾಡುತ್ತಾರೆ. ಅದರಲ್ಲೂ ಹೆಚ್ಚಿನ ಯುವಕರು ಬೈಕ್, ಸ್ಕೂಟರ್ ಇದ್ರೆ ಸಾಕು ರ್ಯಾಪಿಡೋ, ಊಬರ್‌ನಂತರ ರೈಡಿಂಗ್ ಆಪ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು, ಅದರಲ್ಲೇ ರಿಜಿಸ್ಟರ್ ಮಾಡಿಕೊಂಡು ಹಣ ಗಳಿಸುತ್ತಾರೆ. ಹಾಗಿದ್ರೆ ಇಂದು ನಾವು ಒಬ್ಬ ವ್ಯಕ್ತಿ ಕೆಲಸ ಮಾಡಿಕೊಂಡು, ಪಾರ್ಟ್‌ಟೈಮ್‌ನಲ್ಲಿ (Part Time) ಊಬರ್ ಬೈಕ್ ಟ್ಯಾಕ್ಸಿ (Uber Bike Taxi) ಸರ್ವಿಸ್ ಮಾಡಿಕೊಂಡು ಎಷ್ಟು ಸಂಪಾದನೆ ಮಾಡುತ್ತಾರೆ ಎಂದು ಹೇಳುತ್ತೇವೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಊಬರ್, ರ್ಯಾಪಿಡೋನಂತಹ ಆಪ್‌ಗಳಿಂದ ಅದೆಷ್ಟೋ ಯುವಕರು ಇಂದು ಯಾವ ಐಟಿ ಕಂಪನಿಗಳಲ್ಲೂ ಸಿಗದಷ್ಟೂ ಹಣ ಸಂಪಾದನೆ ಮಾಡುತ್ತಿದ್ದಾರೆ. ಆದ್ರೆ ಇಲ್ಲೊಬ್ಬರು ಪಾರ್ಟ್ ಟೈಮ್‌ನಲ್ಲೂ ಊಬರ್ ಮೂಲಕ ಉತ್ತಮ ಸಂಪಾದನೆ ಮಾಡುತ್ತಿದ್ದಾರೆ.
ಇವರ ಹೆಸರು ಇರ್ಷಾದ್. ಮೂಲತಃ ಮಂಗಳೂರಿನವರು. ಇದೀಗ ಹೈದರಾಬಾದ್‌ನಲ್ಲಿ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡು, ಊಬರ್ ಆಪ್ ಮೂಲಕ ಬೈಕ್ ಟ್ಯಾಕ್ಸಿ ಸೇವೆ ಸಲ್ಲಿಸಿ ಹಣ ಗಳಿಸುತ್ತಿದ್ದಾರೆ. ಪಾರ್ಟ್ ಟೈಂ ಕೆಲಸ ಮಾಡುವುದು ಬೆಸ್ಟ್ ಅಂತಾರೆ ಇರ್ಷಾದ್.
ಸಂಪಾದನೆ ಬಗ್ಗೆ ಇರ್ಷಾದ್ ಹೇಳುವುದೇನು?
ಇನ್ನು ಸಂಪಾದನೆ ಬಗ್ಗೆ ಕೇಳಿದಾಗ ಇರ್ಷಾದ್, "ನಾನು ನನ್ನ ಆಫೀಸ್ ಕೆಲಸ ಮುಗಿಸಿ ಈ ಊಬರ್ ಡ್ರೈವರ್ ಆಪ್ ಮೂಲಕ ರೈಡಿಂಗ್ ಸೇವೆ ನೀಡುತ್ತೇನೆ. ಅಂದರೆ ರಾತ್ರಿ 7:40 ಗಂಟೆಗೆ ಶುರು ಮಾಡಿದರೆ, ರಾತ್ರ 11 ಗಂಟೆ ತನಕ, ಒಟ್ಟು 3 ಗಂಟೆ ಕೆಲಸ ಮಾಡುತ್ತೇನೆ. ಈ ವೇಳೆ ನಾನು ಹೆಚ್ಚೆಂದರೆ 500 ರೂ.ನಿಂದ 600 ರೂ. ತನಕ ದುಡಿಯುತ್ತೇನೆ. ಅದರಲ್ಲಿ ಪೆಟ್ರೋಲ್, ಕಮಿಷನ್ ಖರ್ಚು ಹೋದರೂ 400 ರೂ. ತನ ಉಳಿತಾಯ ಮಾಡುತ್ತೇನೆ ಎಂದು ಹೇಳಿದರು. ಇನ್ನೂ ಕೆಲವೊಮ್ಮೆ ಪೀಕ್ ಅವರ್‌ನಲ್ಲಿ ಇದಕ್ಕಿಂತೂ ಹೆಚ್ಚು ಗಳಿಸಲು ಸಾಧ್ಯವಾಗುತ್ತದೆ. ಇನ್ನೂ ಕೆಲವೊಮ್ಮೆ ಇದಕ್ಕಿಂತಲೂ ಕಡಿಮೆ ಗಳಿಸಬಹುದು. ಸಂಪಾದನೆಯಲ್ಲಿ ಏರಿಳಿತಗಳಾಗುತ್ತಿರುತ್ತದೆ ಎಂದು ಹೇಳಿದರು."
"ಇನ್ನು ಕೇವಲ ಆಫೀಸ್ ಸಂಬಳ ಸಾಕಾಗುವುದಿಲ್ಲ ಎಂದು ಹೇಳುವವರಿಗೆ ಇದು ಉತ್ತಮ ಐಡಿಯಾ. ತಮಗೆ ಬೇಕಾದ ಸಮಯದಲ್ಲಿ ಇದನ್ನು ಆರಂಭಿಸಬಹುದು. ಅಲ್ಲದೇ ಉತ್ತಮ ಲಾಭವನ್ನೂ ಗಳಿಸಬಹುದು" ಎನ್ನುತ್ತಾರೆ ಇರ್ಷಾದ್.
ಸೋಷಿಯಲ್ ಮೀಡಿಯಾ ವರದಿಗಳು ಹೇಳುವುದೇನು?
ಸಾಮಾನ್ಯವಾಗಿ ಒಬ್ಬ ವ್ಯಕ್ತಿ ದಿನಕ್ಕೆ 10 ರಿಂದ 12 ಗಂಟೆ ಊಬರ್ ರೈಡಿಂಗ್‌ನಲ್ಲಿ ಚಾಲಕನಾಗಿದ್ದರೆ, ದಿನದಲ್ಲಿ 1,500 ದಿಂದ 2,500 ರೂ.ವರೆಗೆ ಸಂಪಾದನೆ ಮಾಡಬಹುದು. ಒಂದು ವೇಳ ಪೀಕ್ ಟೈಮ್ ಇದ್ದರೆ ಇನ್ಸೆಂಟಿವ್ ಜೊತೆಗೆ ಹೆಚ್ಚು ಸಂಪಾದಿಸಬಹುದು.
ಖರ್ಚುಗಳು ಎಷ್ಟು?
ಬೈಕ್ ಮಾಡುವ ಕಾರಣ ಕಾರಿಗೆ ಹೋಲಿಸಿದ್ರೆ ಖರ್ಚು ಕಡಿಮೆ. ಇನ್ನು ಉತ್ತಮ ಮೈಲೇಜ್ ಕೊಡುವ ಬೈಕ್ ಆದರೆ, ದಿನಕ್ಕೆ 200 ರಿಂದ 400 ರೂ. ಪೆಟ್ರೋಲ್ ಹಾಕಬೇಖಾಗುತ್ತದೆ. ಇನ್ನು ಬೈಕ್ ಸರ್ವೀಸ್ ಅಂತ ಒಂದಿಷ್ಟು ಹಣ. ಆಹಾರ, ನೀರು, ಇತರೆ ಖರ್ಚುಗಳೆಲ್ಲಾ ಸೇರಿ ಒಟ್ಟು 500 ರಿಂದ 700 ರೂ. ಖರ್ಚಾಗುವ ಸಾಧ್ಯತೆ ಇದೆ.
ಕಮಿಷನ್ ಹೇಗೆ?
ಈ ಹಿಂದೆ ಪ್ರತೀ ರೈಡ್‌ಗೆ 20 ರಿಂದ 30% ಕಮಿಷನ್ ತೆಗೆದುಕೊಳ್ಳಲಾಗುತ್ತಿತ್ತು. ಆದ್ರೆ 2025 ರಿಂದ ಹಲವು ಸಿಟಿಗಳಲ್ಲಿ ಸಬ್‌ಸ್ಕ್ರಿಪ್ಷನ್/ಜೀರೋ ಕಮಿಷನ್ ಮಾದರಿಗೆ ಶಿಫ್ಟ್ ಆಗುತ್ತಿದೆ. ಆದರೆ ದಿನದ ರೀತಿಯಲ್ಲಿ 30 ರಿಂದ 100 ರೂ. ತೆಗೆದುಕೊಳ್ಳಲಾಗುತ್ತದೆ ಎನ್ನಲಾಗಿದೆ. ಇಲ್ಲದಿದ್ದರೆ ಪ್ರತೀ ಕಿ.ಮೀ ಕಮಿಷನ್ ಬದಲಿಗೆ, ಒಟ್ಟು ಫೇರ್‌ನಿಂದ 20-25% ತೆಗೆದುೊಳ್ಳಲಾಗಿದೆ ಎನ್ನಲಾಗಿದೆ. ಅಂದರೆ 100 ರೂ. ದರ ಆದ್ರೆ, ಅದರಲ್ಲಿ 20 ರಿಂದ 25 ರೂ. ಕಮಿಷನ್ ಹೋಗುತ್ತದೆ. ಸದ್ಯ ಈ ಬಗ್ಗೆ ಡ್ರೈವರ್‌ಗಳು ಆಕ್ರೋಶ ವ್ಯಕ್ತಪಡಿಸಿದ್ದು, ಅದೇ ಕಾರಣದಿಂದ ಪ್ರತಿಭಟನೆಯನ್ನೂ ಕೈಗೊಂಡಿದ್ದರು. ಸಂಪಾದನೆ ಹೆಚ್ಚಿದ್ದರೂ, ಸವಾಲುಗಳು ಕೂಡಾ ಅಷ್ಟೇ ಇರುತ್ತದೆ.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ಒಬ್ಬ ಅನುಭವಿ ಚಾಲಕರಿಂದ, ಸಾಮಾಜಿಕ ಜಾಲತಾಣಗಳಿಂದ ಸಂಗ್ರಹಿಸಿದ ವಿಷಯಗಲಿಂದ ಬರೆಯಲಾಗಿದೆ. ಇದನ್ನು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯ ಎಂದು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ಇಂತಹ ಕೆಲಸಗಳನ್ನು ನೀವೂ ಮಾಡಿ ಎಂಬುದು ಸಲಹೆಯಲ್ಲ. ಬದಲಿಗೆ ಒಬ್ಬ ವ್ಯಕ್ತಿಯ ಸಂಪಾದನೆಯ ಬಗ್ಗೆ ತಿಳಿಸುವುದು ಇದರ ಉದ್ದೇಶವಾಗಿದೆ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ.)


Click it and Unblock the Notifications