ಅಲ್ಲು ಅರ್ಜುನ್ ನಟನೆಯ ಬಹುನಿರೀಕ್ಷಿತ ಸಿನಿಮಾ ಪುಷ್ಪ2 ದೇಶದೆಲ್ಲೆಡೆ ತೆರೆಕಂಡು ಒಳ್ಳೆ ಪ್ರದರ್ಶನವನ್ನ ನೀಡ್ತಿದೆ. ಈ ಹಿಂದೆ ರಿಲೀಸ್ ಆಗಿದ್ದ ಪುಷ್ಪಾ ಸಿನಿಮಾ ಕೂಡ ಬಾಕ್ಸ್ ಆಫೀಸ್ ದಾಖಲೆಗಳನ್ನ ಮುರಿದು ಅತ್ಯುತ್ತಮ ಪ್ರದರ್ಶನವನ್ನ ನೀಡಿತ್ತು. ಇನ್ನು ಈ ಎಲ್ಲಾ ಯಶಸ್ಸುಗಳ ಮಧ್ಯೆ ಅಲ್ಲು ಅರ್ಜುನ್ ಅವರನ್ನ ಅರೆಸ್ಟ್ ಮಾಡಲಾಗಿತ್ತು, ನಂತರ ಅವರಿಗೆ ಜಾಮೀನು ಮೂಲಕ ಬಿಡುಗಡೆಯನ್ನ ಕೂಡ ಮಾಡಲಾಗಿದೆ. ಓರ್ವ ಮಹಿಳೆ ನಿಧನಕ್ಕೆ ಕಾರಣವಾದ ಆರೋಪದ ಮೇಲೆ ಅವರನ್ನ ಬಂಧಿಸಲಾಗಿತ್ತು. ಆದರೆ ಬಂಧಿಸಿದ ಅದೇ ದಿನ ಅಲ್ಲು ಅರ್ಜುನ್ ಅವರು ಜಾಮೀನು ಮೇಲೆ ಹೊರ ಬಂದಿದ್ದಾರೆ.
ಡಿಸೆಂಬರ್ 5ರಂದು ಪುಷ್ಪ2 ಸಿನಿಮಾ ದೇಶದಾದ್ಯಂತ ಬಿಡುಗಡೆಯಾಗಿತ್ತು. ಇನ್ನು ಬಿಡುಗಡೆಗು ಹಿಂದಿನ ದಿನ ಪುಷ್ಪ2 ಚಿತ್ರದ ಪ್ರಸಾರದ ವೇಳೆ ಹೈದ್ರಾಬಾದ್‌ನ ಸಂಧ್ಯ ಥಿಯೇಟರ್‌ಗೆ ಅಲ್ಲು ಅರ್ಜುನ್ ಭೇಟಿ ನೀಡಿದ್ರು. ಈ ವೇಳೆ ಹಲವಾರು ಅಭಿಮಾನಿಗಳು ಅಲ್ಲ ಅರ್ಜುನ್ ನೋಡಲು ಆಗಮಸಿದ್ದರು. ಆ ವೇಳೆ ಅಪಾರ ಪ್ರಮಾಣದ ಕಾಲ್ತುಳಿತ ಉಂಟಾಗಿ ಓರ್ವ ಮಹಿಳೆ ಸಾವನ್ನಪ್ಪಿದ್ದರೆ, ಆಕೆಯ ಮಗ ಗಂಭೀರ ಗಯಗೊಂಡಿದ್ದ. ಈ ಹಿನ್ನಲೆ ಮಹಿಳೆಯ ಪತಿ ಅಲ್ಲು ಅರ್ಜುನ್ ಮತ್ತು ಥಿಯೇಟರ್‌ನ ಮಲೀಕರ ಮೇಲೆ ಪ್ರಕರಣ ದಾಖಲಿಸಿದ್ದರು. ಹೀಗಾಗಿ ಅಲ್ಲು ಅರ್ಜುನ್ ಅವರನ್ನ ಪೊಲೀಸರು ಬಂಧಿಸಿದ್ದರು ನಂತರ ಅವರು ಜಮೀು ಮೇಲೆ ಬಿಡುಗಡೆಯಗಿದ್ದಾರೆ.

ಪುಷ್ಪ2 ಕಲೆಕ್ಷನ್ ಎಷ್ಟು ಗೊತ್ತಾ?
ಇನ್ನು ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಪುಷ್ಪ2 ಸಿನಮಾ ಮಾತ್ರ ಭರ್ಜರಿ ಪರ್ದಶನವನ್ನ ನೀಡ್ತಿದೆ. ಸತತವಾಗಿ 9ನೇ ದಿನ ಕೂಡ ಉತ್ತಮ ಕಲೆಕ್ಷನ್ ಮಾಡುವ ಮೂಲಕ ಮತ್ತೆ ಸದ್ದು ಮಾಡ್ತಿದೆ. ಡಿಸೆಂಬರ್ 5 ಗುರುವಾರದಂದು ಬಿಡುಗಡೆಯಾದ ಪುಷ್ಪಾ 2 ಇದೀಗ ತನ್ನ 8ದಿನಗಳ ಪ್ರದರ್ಶನವನ್ನ ಪರ್ಣಗೊಳಿಸಿದೆ. ಅಲ್ಲದೆ ಈಗಾಗಲೇ ಎಲ್ಲಾ ಸಿನಿಮಾ ದಾಖಲೆಗಳನ್ನ ಮುರಿದು ಮತ್ತೆ 9ನೇ ದಿನ ಮತ್ತೆ ಮುನ್ನುಗ್ಗುತ್ತಿದೆ. ಈ ಸಿನಿಮಾ ಐದು ಭಾಷೆಗಳಲ್ಲಿ ಬಿಡುಗಡೆಯಾಗದ್ದು, ತೆಲುಗು ಭಾಷೆಗಿಂತ ಹಿಂದಿಯಲ್ಲೇ ಉತ್ತಮ ಪ್ರದರ್ಶನವನ್ನ ಕಾಣ್ತಿದೆ.
ಅಲ್ಲು ಅರ್ಜನ್ ನಟನೆಯ ಪುಷ್ಪ2 ಸಿನಿಮಾ ಮೊದಲ ವಾರದಲ್ಲೇ 725 ಕೋಟಿ ಗಳಿಸುವ ಮೂಲಕ ದಾಖಲೆನ್ನ ಮಾಡಿತ್ತು. ನಂತರ ಎರಡನೇ ಶುಕ್ರವಾರದಂದು ಎಲ್ಲಾ ಬಾಷೆಗಳಲ್ಲಿ ಒಟ್ಟು 36.25 ಕೋಟಿ ಗಳಿಸಿದೆ. ಇನ್ನು ಇದರಲ್ಲಿ ಹಿಂದಿ ಭಾಷೆಯಲ್ಲಿ 36.25 ಕೋಟಿ ಗಳಿಸಿದೆ. ಈ ಹಿಂದಿ ಭಾಷೆಯಲ್ಲಿ 27 ಕೋಟಿ ಬಂದಿದ್ದರೆ ತೆಲುಗು ವರ್ಷನ್‌ನಿಂದ 7.5 ಕೋಟಿ ಗಳಿಸಿದೆ. ಈಗಾಗಲೇ ಪುಷ್ಪಾ 2 ಸಿನಿಾ ವಿಶ್ವದಾದ್ಯಂತ ಸಾವಿರ ಕೋಟಿ ರೂಪಾಯಿ ಗಳಿಕೆಯನ್ನ ಮಾಡ್ತಿದೆ. ಆದ್ರೆ ಈ ಭಾರದಲ್ಲೂ ಆ ದಾಖಲೆಯನ್ನ ಮುರಿಯುವ ಗುರಿಯನ್ನ ಹೊಂದಿದೆ. ಬಾಲಿವುಡ್‌ನ ಎಲ್ಲಾ ಸೂಪರ್ ಸ್ಟಾರ್ ದಾಖಲೆಗಳನ್ನ ಪುಷ್ಪಾ 2 ಮುರಿದಿದೆ. ಪುಷ್ಪ ದಿ ರೈಸ್ ಸಿನಿಮಾ ಕೂಡ ಮೊದಲ ದಿನವೇ 40 ಕೋಟಿ ರೂಪಾಯಿಯನ್ನ ಗಳಿುವ ಮೂಲಕ ದಾಖಲೆಯನ್ನ ಬರೆದಿತ್ತು. ಪುಷ್ಪಾ2 ಸಿನಿಮಾ 9ನೇ ದಿನ ಭಾರತದಲ್ಲಿ 760 ಕೋಟಿ ದಾಖಲೆಯ ಹಣವನ್ನ ಗಳಿಸುವ ಮೂಲಕ ಮತ್ತೆ ಹೊಸ ದಾಖಲೆಯನ್ನ ಬರೆಯಲು ಮಂದಾಗಿದೆ.
ಇನ್ನು ಈ ಪುಷ್ಪಾ 2 ಸಿನಿಮಾದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮತ್ತು ಫಹದ್ ಫಾಸಿಲ್ ಪ್ರಮುಖ ಪತ್ರದಲ್ಲಿ ನಟಿಸಿದ್ದು, ಸುಕುಮಾರ್ ನಿರ್ದೇಶನವನ್ನ ಮಾಡಿದ್ದಾರೆ. ಪುಷ್ಪಾ 2 ದಿ ರೂಲರ್ ಉತ್ತಮ ಪದರ್ಶನವನ್ನ ನೀಡುವ ಮೂಲಕ ಬಾಕ್ಸ್ ಆಫೀಸ್ ದಾಖಲೆಗಳನ್ನೆಲ್ಲ ಮುರಿದು ಇಂದು ಕೂಡ ಬರ್ಜರಿ ಪದರ್ಶನವನ್ನ ಕಾಣ್ತಿದೆ.
ಅಲ್ಲು ಅರ್ಜುನ್ ಬಂಧನಕ್ಕೆ ಕಾರಣವೇನು?
ಅಲ್ಲು ಅರ್ಜುನ್ ಬಹು ನಿರೀಕ್ಷಿತ ಸಿನಿಮಾ ಪುಷ್ಪಾ 2 ದಿ ರೂಲರ್‌ನ ಪ್ರಿಮಿಯರ್ ಶೋವನ್ನ ಡಿಸೆಂಬರ್ 4ರಂದು ಆಯೋಜನೆ ಮಾಡಲಾಗಿತ್ತು. ಹೈದ್ರಾಬಾದ್‌ನ ಸಂಧ್ಯ ಥಿಯೇಟರ್‌ನಲ್ಲಿ ಪ್ರೀಮಿಯರ್ ಶೋ ವೇಳೆ ಅಲ್ಲು ಅರ್ಜುನ್ ಕೂಡ ಭೇಟಿ ನೀಡದ್ರು. ಈ ವೇಳೆ ಅಲ್ಲಿ ಸಾಕಷ್ಟು ಅಭಿಮಾನಿಗಳು ನೆರೆದಿದ್ದು, ಈ ಹಿನ್ನೆಲೆ ನೂಕು ನುಗ್ಗಲು ಉಂಟಾಗಿ ಹಲವ ಕಾಲ್ತುಳಿತಕ್ಕೆ ಒಳಗಾಗಿದ್ದರು. ಆ ವೇಳೆ ಓರ್ವ ಮಹಿಳೆ ಕಾಲ್ತುಳಿತದಿಂದ ಸಾವನ್ನಪ್ಪಿದ್ದು, ಆಕೆಯ ಮಗನಿಗೆ ಗಂಭೀರ ಗಾಯಗಳಾಗಿದ್ದವು. ಹೀಗಾಗಿ ಆಕೆಯ ಪತಿ ಅಲ್ಲು ಅರ್ಜುನ್ ಹಾಗೆ ಸಂಧ್ಯ ಥಿಯೇಟರ್ ಮಾಲೀಕರ ಮೇಲೆ ದೂರು ನೀಡದ್ದರು. ಈ ಹಿನ್ನೆಲೆ ಹೈದ್ರಾಬಾದ್‌ನ ಚೀಕಟಪಲ್ಲಿ ಪೊಲೀಸರು ಅಲ್ಲು ಅರ್ಜುನ್ ಅವರನ್ನ ಬಂಧಿಸಿ ತನಿಖೆ ನಡೆಸಿದ್ದರು. ನಂತರ ಅವರನ್ನ ಬೇಲ್ ಮೇಲೆ ರಿಲೀಸ್ ಮಾಡಲಾಗಿದೆ.
ಅಲ್ಲದೆ ಘಟನೆಯಲ್ಲಿ ಮೃತಪಟ್ಟ ಮಹಿಳೆಗೆ ಅಲ್ಲುರ್ಜುನ್ ಸಂತಾಪ ಸೂಚಿಸಿ ಆಕಯ ಕುಟುಂಬಕ್ಕೆ 25 ಲಕ್ಷ ರೂಪಾಯಿಗಳ ಪರಿಹಾರವನ್ನ ಕೂಡ ನೀಡಿದ್ದರು. ಆದ್ರೆ ಇದಾದ ನಂತರ ಈ ಘಟನ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಲ್ಲುಅರ್ಜುನ್ ಜೈಲು ಸೇುವಂಯಾಗಿತ್ತು. ಸಧ್ಯ ಅಲ್ಲು ಅರ್ಜುನ್ ಬೇಲ್ ಮೇಲೆ ಬಿಡುಗಡೆಯಾಗಿದ್ದಾರೆ. ಹಾಗೆ ಈ ಎ್ಲದರ ಮಧ್ಯೆ ಪುಷ್ಪಾ 2 ಸಿನಿಮಾದೇಶದೆಲ್ಲೆಡೆ ಉತ್ತಮ ಪ್ರದರ್ಶನವನ್ನ ನೀಡುವ ಮೂಲಕ ದಾಖಲೆ ಕಲೆಕ್ಷನ್ ಮಾಡ್ತಿದೆ.


Click it and Unblock the Notifications