ನವದೆಹಲಿ, ಮೇ 6: ಅನಿಲ್ ಅಂಬಾನಿ ಮತ್ತು ಮುಕೇಶ್ ಅಂಬಾನಿ ಭಾರತದ ಅತ್ಯಂತ ಸಿರಿವಂತ ಕುಟುಂಬದ ಮಕ್ಕಳು ಹಾಗೂ ವಿಶ್ವದ ಪ್ರಮುಖ ಉದ್ಯಮಿಗಳು. ಅದರಲ್ಲೂ ಮುಕೇಶ್ ಅಂಬಾನಿ ಬರೋಬ್ಬರಿ 9,70,678 ಕೋಟಿ ರೂ.ಗಳ ಬೃಹತ್ ನಿವ್ವಳ ಮೌಲ್ಯದೊಂದಿಗೆ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಯೆಂದು ಗುರುತಿಸಿಕೊಂಡಿದ್ದಾರೆ.
ಇನ್ನೊಂದೆಡೆ ದಿವಾಳಿಯಾಗಿದ್ದ ಅನಿಲ್ ಅಂಬಾನಿ ಈಗ ಫೀನಿಕ್ಸ್ನಂತೆ ಮೇಲೇಳುತ್ತಿದ್ದಾರೆ. ಸಾಲಗಳನ್ನು ಹಂತ ಹಂತವಾಗಿ ತೀರಿಸುತ್ತಿದ್ದಾರೆ. ಒಂದು ಕಾಲದಲ್ಲಿ ವಿಶ್ವದ ಆರನೇ ಅತಿದೊಡ್ಡ ಶ್ರೀಮಂತರಾಗಿದ್ದ ಅನಿಲ್, ಈಗ ಮತ್ತೆ ಬೆಳೆದು ನಿಲ್ಲುತ್ತಿದ್ದಾರೆ. 'ರಿಲಯನ್ಸ್' ಕಂಪನಿಗಳ ಶ್ರೇಣಿಯು ಮುಖೇಶ್ ಮತ್ತು ಅನಿಲ್ ಅಂಬಾನಿ ಇಬ್ಬರ ಒಡೆತನದಲ್ಲಿದೆ. ಇಂದು "ರಿಲಯನ್ಸ್ ಗ್ರೂಪ್" ಎಂಬ ಯಶಸ್ಸಿನ ಕಥೆಯೂ ಭಾರತದ ಬಹುತೇಕ ಎಲ್ಲರಿಗೂ ತಿಳಿದಿರುವಂತೆ ಬೆಳೆದುನಿಂತಿದೆ.

ಇಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಭಾರತದ ಅತಿದೊಡ್ಡ ಮತ್ತು ಅತ್ಯಂತ ವೈವಿಧ್ಯಮಯ ವಾಣಿಜ್ಯ ಸಾಮ್ರಾಜ್ಯವನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದೆ. ಇದು ಮಾಧ್ಯಮ, ಡಿಜಿಟಲ್ ಸೇವೆಗಳು, ದೂರಸಂಪರ್ಕ, ರಿಟೇಲ್ ವ್ಯಾಪಾರ, ಪೆಟ್ರೋಕೆಮಿಕಲ್ಸ್ ಮತ್ತು ಪವರ್ ಸೇರಿದಂತೆ ಹಲವಾರು ಉದ್ಯಮಗಳಲ್ಲಿ ಹೊಂದಿದೆ. 1958 ರಲ್ಲಿ ಸಂಘಟಿತ ಸಂಸ್ಥೆ ರಿಲಯನ್ಸ್ ಅನ್ನು ಅವರ ತಂದೆ ಧೀರೂಭಾಯಿ ಅಂಬಾನಿ ಸ್ಥಾಪಿಸಿದರು.
'ರಿಲಯನ್ಸ್' ದೇಶದ ಅತ್ಯಂತ ಪ್ರಸಿದ್ಧ ಬ್ರಾಂಡ್ ಹೆಸರುಗಳಲ್ಲಿ ಒಂದಾಗಿದ್ದರೂ, ಇದರ ಸಾಂಪ್ರದಾಯಿಕ ಹೆಸರಿನ ಹಿಂದಿನ ಕಥೆ ಅನೇಕರಿಗೆ ತಿಳಿದಿಲ್ಲ. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಧೀರೂಭಾಯಿ ಅಂಬಾನಿ ಅವರು ತಮ್ಮ ಕಂಪನಿಗೆ "ರಿಲಯನ್ಸ್ "ಎಂದು ಹೆಸರಿಟ್ಟರು, ಇದು ಸ್ವಾತಂತ್ರ್ಯ ಮತ್ತು ಸ್ವಾವಲಂಬನೆಯಲ್ಲಿ ಅವರ ಬಲವಾದ ನಂಬಿಕೆಯನ್ನು ಸಂಕೇತಿಸುತ್ತದೆ.
ಧೀರೂಭಾಯಿ ಅಂಬಾನಿ ಪಾಲುದಾರಿಕೆಯ ಮೂಲಕ ತಮ್ಮ ಕನಸಿನ ಕಂಪನಿಯ ಭವಿಷ್ಯವನ್ನು ರೂಪಿಸಿದರು. ಯುವ ಮತ್ತು ದೂರದೃಷ್ಟಿಯುಳ್ಳ ಧೀರೂಭಾಯಿ ಅಂಬಾನಿ ಅವರು ತಮ್ಮ ಎರಡನೇ ಸೋದರಸಂಬಂಧಿ ಚಂಪಕ್ಲಾಲ್ ದಮಾನಿ ಅವರೊಂದಿಗೆ ಜೊತೆ ಸೇರಿ , ಭಾರತೀಯ ವ್ಯಾಪಾರದ ಶೈಲಿಯನ್ನು ಮರು ವ್ಯಾಖ್ಯಾನಿಸುವ ಪ್ರಯಾಣವನ್ನು ಪ್ರಾರಂಭಿಸಿದರು.
ಇವರಿಬ್ಬರು ಯೆಮೆನ್‌ನಲ್ಲಿ ಒಟ್ಟಿಗೆ ವಾಸಿಸುತ್ತಿದ್ದಾಗ ಯೆಮೆನ್ ಮತ್ತು ಭಾರತದ ನಡುವಿನ ಆರ್ಥಿಕ ಸಾಧ್ಯತೆಗಳನ್ನು ಲಾಭ ಮಾಡಿಕೊಳ್ಳುವ ಸಂಸ್ಥೆಯ ರೂಪಿಸುವ ಕನಸನ್ನು ಹೊಂದಿದ್ದರು. ಬಳಿಕ ಒಟ್ಟಾಗಿ, ಅವರು 1950 ರ ದಶಕದ ಉತ್ತರಾರ್ಧದಲ್ಲಿ ಮಸಾಲೆಗಳು ಮತ್ತು ಪಾಲಿಯೆಸ್ಟರ್ ನೂಲುಗಳನ್ನು ಯೆಮೆನ್‌ಗೆ ತರಲು "ಮಜಿನ್" ಅನ್ನು ಸ್ಥಾಪಿಸಿದರು. ಹೀಗಾಗಿ ಅವರು ಹುಟ್ಟುಹಾಕಿದ ಮೊದಲ ಕಂಪನಿಯ ಹೆಸರು ಮಜಿನ್. ನಂತರ ರಿಲಯನ್ಸ್ ಇಂಡಸ್ಟ್ರೀಸ್ ಆಗು ಹುಟ್ಟುಹಾಕಬೇಕಾಗಿದ್ದ ವ್ಯವಹಾರದ ಮೂಲಾಧಾರವನ್ನು ಈ ಪಾಲುದಾರಿಕೆಯಿಂದ ಪಡೆಯಲಾಯಿತು.
ಉದ್ಯಮಶೀಲ ಮನಸ್ಥಿತಿಯನ್ನು ಹೊಂದಿದ್ದ ಅಂಬಾನಿ ಮತ್ತು ದಮಾನಿ ಜೋಡಿಯು 1960 ರ ದಶಕದ ಆರಂಭದಲ್ಲಿ ಭಾರತಕ್ಕೆ ಮರಳಿದರು. ಬಳಿಕ "ರಿಲಯನ್ಸ್ ಕಮರ್ಷಿಯಲ್ ಕಾರ್ಪೊರೇಶನ್" ಎಂಬ ಹೆಸರಿನ ಹೊಚ್ಚಹೊಸ ಹೆಸರಿನ ಸಂಸ್ಥೆಯನ್ನು ಸ್ಥಾಪಿಸಿದರು. ಯೆಮೆನ್ ನಲ್ಲಿ ಗಳಿಸಿದ ಜ್ಞಾನ ಮತ್ತು ಅನುಭವವನ್ನು ಬಳಸಿಕೊಂಡು, ಈ ಜೋಡಿಯ ಕಂಪನಿಯು ಮೊದಲು ಆ ದೇಶಕ್ಕೆ ಮಸಾಲೆಗಳು ಮತ್ತು ಪಾಲಿಯೆಸ್ಟರ್ ನೂಲು ಮಾರಾಟದ ಮೇಲೆ ಕೇಂದ್ರೀಕರಿಸಿತು.
ಅಂಬಾನಿ ಮತ್ತು ದಮಾನಿಯವರ ವ್ಯಾಪಾರ ಪಾಲುದಾರಿಕೆಯು, ಇವರಿಬ್ಬರಲ್ಲಿದ್ದ ವಿಭಿನ್ನ ಅಲೋಚನೆ ಮತ್ತು ಕಾರ್ಯವಿಧಾನಗಳ ಪರಿಣಾಮವಾಗಿ 1965 ರಲ್ಲಿ ಕೊನೆಗೊಂಡಿತು. ದಮಾನಿಯವರ ರಿಸ್ಕ್ ಬಯಸದ ಎಚ್ಚರಿಕೆಯ ವ್ಯವಹಾರ ಮತ್ತು ರಿಸ್ಕ್ ತೆಗೆದುಕೊಂಡು ಮಾಡುವ ಅಂಬಾನಿಯ ವ್ಯವಹಾರದ ಅಲೋಚನೆಗಳಿಂದ ಮುಂದೆ ಇಬ್ಬರನ್ನು ಬೇರೆ ಹಾದಿಯಲ್ಲಿ ಸಾಗುವಂತೆ ಮಾಡಿತು. ಈ ವಿಭಜನೆಯ ನಂತರ, ಅಂಬಾನಿಯವರ ನಾಯಕತ್ವದಲ್ಲಿ ರಿಲಯನ್ಸ್ ಬೆಳೆಯುವುದನ್ನು ಮುಂದುವರೆಸಿತು. ಇದೇ ವೇಳೆ ಜವಳಿ ಉದ್ಯಮದ ಮೇಲೆಯೂ ತನ್ನ ವ್ಯವಹಾರವನ್ನು ಕೇಂದ್ರೀಕರಿಸಿಕೊಂಡು 1966 ರಲ್ಲಿ ತನ್ನ ಹೆಸರನ್ನು "ರಿಲಯನ್ಸ್ ಟೆಕ್ಸ್ಟೈಲ್ಸ್" ಎಂದು ಬದಲಾಯಿಸಿತು.
ಹೀಗೆ ಕಂಪನಿ ಬೇರೆ ಬೇರೆ ಉದ್ಯಮದಲ್ಲಿ ತೊಡಗಿಸಿಕೊಂಡ ಬಳಿಕ, ಧೀರೂಭಾಯಿಯವರು ತಮ್ಮ ಕಂಪನಿಯನ್ನು ಮೂಲ ರಿಲಯನ್ಸ್ ಕಮರ್ಷಿಯಲ್ ಕಾರ್ಪೊರೇಶನ್ ನ ಬದಲಾಗಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅನ್ನು ಮೂಲ ರಿಲಯನ್ಸ್ ಕಮರ್ಷಿಯಲ್ ಕಾರ್ಪೊರೇಶನ್‌ನಿಂದ ಮರುನಾಮಕರಣ ಮಾಡಿದರು. ರಾಷ್ಟ್ರದ ಅತ್ಯಂತ ವಿಶ್ವಾಸಾರ್ಹ ವ್ಯವಹಾರಗಳಲ್ಲಿ ಒಂದಾಗಿ ಹೊರಹೊಮ್ಮುವ ಮೂಲಕ ರಿಲಯನ್ಸ್ ತನ್ನ ಖ್ಯಾತಿಗೆ ತಕ್ಕಂತೆ ಬದುಕಿದೆ. 1977 ರಲ್ಲಿ ರಿಲಯನ್ಸ್ ಟೆಕ್ಸ್ಟೈಲ್ ಇಂಡಸ್ಟ್ರೀಸ್ನ IPO ಭಾರತದಲ್ಲಿ ಇತಿಹಾಸವನ್ನು ನಿರ್ಮಿಸಿತು. ತಂದೆ ಧೀರೂಭಾಯಿ ಅಂಬಾನಿ ಅವರ ನಿಧನದ ನಂತರ ರಿಲಯನ್ಸ್‌ನ್ನು ಅನಿಲ್ ಅಂಬಾನಿ ಮತ್ತು ಮುಕೇಶ್ ಅಂಬಾನಿ ನಡುವೆ ವಿಂಗಡಿಸಲಾಯಿತು.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಭಾರತದಲ್ಲಿ ಅತಿ ಹೆಚ್ಚು ಪ್ರಾಬಲ್ಯವುಳ್ಳ ಕಂಪೆನಿಯಾಗಿ ಬೆಲೆದುನಿಂತಿದ್ದು. ಇದರ ಮಾರುಕಟ್ಟೆ ಮೌಲ್ಯ 2000000 ಕೋಟಿ ರೂ. ಆಗಿದೆ. ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಈಗ ಇಂಧನ, ಪೆಟ್ರೋಕೆಮಿಕಲ್ಸ್, ನೈಸರ್ಗಿಕ ಅನಿಲ, ಚಿಲ್ಲರೆ ವ್ಯಾಪಾರ, ಮನೋರಂಜನೆ, ದೂರಸಂಪರ್ಕ, ಸಮೂಹ ಮಾಧ್ಯಮ ಮತ್ತು ಜವಳಿ ವ್ಯಾಪಾರದಲ್ಲಿ ತೊಡಗಿಸಿಕೊಂಡಿದೆ.


Click it and Unblock the Notifications