ಭಾರತೀಯರಿಗೆ ಚಿನ್ನದ ಮೇಲಿನ ಹೂಡಿಕೆ (Gold Investment) ಹೆಚ್ಚು. ಹೆಚ್ಚಿನವರು ಹೂಡಿಕೆ ಮಾಡುವುದು ಸುರಕ್ಷಿತ ಎಂದು ಹೇಳಲಾಗುತ್ತದೆ. ಒಮ್ಮೆ ಚಿನ್ನದ ಮೇಲೆ ಹಣ ಹೂಡಿಕೆ ಮಾಡಿದ್ರೆ, ಮುಂದಿನ ದಿನಗಳಲ್ಲಿ ಭಾರೀ ಹಣ ಗಳಿಸಬಹುದು ಎನ್ನಲಾಗಿದೆ. ಹಾಗಾದರೆ, ಮುಂದಿನ ಕೆಲವು ವರ್ಷಗಳಲ್ಲಿ ಚಿನ್ನದ ಮೇಲಿನ ಬೆಲೆ ಭಾರೀ ಏರಿಕೆಯಾಗುವ ನಿರೀಕ್ಷೆಯಿದ್ದು, ಹಾಗಿದ್ರೆ 10 ಗ್ರಾಂ ಚಿನ್ನದ ಬೆಲೆ ಮುಂದಿನ ವರ್ಷಗಳಲ್ಲಿ ಎಷ್ಟಾಗಬಹುದು ಎಂಬುದರ ಮಾಹಿತಿ ಇಲ್ಲಿದೆ.

25 ವರ್ಷಗಳ ಹಿಂದೆ ಚಿನ್ನದ ಬೆಲೆ:
24 ಕ್ಯಾರೆಟ್ ಚಿನ್ನದ ಬೆಲೆ, 2000 ಇಸವಿಯಲ್ಲಿ 10 ಗ್ರಾಂಗೆ ಕೇವಲ 4,400 ರೂ. ಇತ್ತು. ಆದರೆ, 2025ರ ಅಕ್ಟೋಬರ್‌ನಲ್ಲಿ ಅದೇ 10 ಗ್ರಾಂ ಚಿನ್ನದ ಬೆಲೆ 1.32 ಲಕ್ಷ ರೂ. ಆಗಿದೆ. ಅಂದರೆ, ಕೇವಲ 25 ವರ್ಷಗಳಲ್ಲಿ ಚಿನ್ನದ ಬೆಲೆ 30 ಪಟ್ಟು ಹೆಚ್ಚಾಗಿದೆ.
ಇತರ ಸೇವಿಂಗ್ಸ್ ಸ್ಕೀಮ್‌ಗಳಿಗೆ ಹೋಲಿಸಿದ್ರೆ ಚಿನ್ನದ ಮೇಲಿನ ಹೂಡಿಕೆ ಮಾಡಿದ್ರೆ ಹೆಚ್ಚು ಲಾಭ ಪಡೆಯಬಹುದು. ಕಳೆದ 25 ವರ್ಷಗಳಲ್ಲಿ ಚಿನ್ನವು ಸರಾಸರಿ 14.6% ವಾರ್ಷಿಕ ಆದಾಯವನ್ನು ನೀಡಿದೆ ಎಂದು ವರದಿಯಾಗಿದೆ. ಆದ್ದರಿಂದ ಹಣಕಾಸು ತಜ್ಞರು ಚಿನ್ನದ ಮೇಲಿನ ಹೂಡಿಕೆ ಮಾಡಿ ಎಂದು ಸಲಹೆ ನೀಡುತ್ತಾರೆ.
ಚಿನ್ನದ ಬೆಲೆ ಏರಿಕೆಗೆ ಕಾರಣಗಳೇನು?
ಚಿನ್ನದ ಬೆಲೆ ಇತ್ತೀಚೆಗೆ ಭಾರೀ ಏರಿಕೆಯಾಗುತ್ತಿದೆ. ಇದಕ್ಕೆ ಹಲವು ಕಾರಣಗಳಿವೆ. ಜಾಗತಿಕವಾಗಿ ಆರ್ಥಿಕತೆಯಲ್ಲಿ ಹಿನ್ನಡೆ, ಡಾಲರ್‌ನ ಏರಿಳಿತ, ರಾಷ್ಟ್ರಗಳ ನಡುವಿನ ವ್ಯಾಪಾರ ಸಮರ ಮತ್ತು ಭೌಗೋಳಿಕ ಉದ್ವಿಗ್ನತೆಗಳು ಈ ಎಲ್ಲಾ ಬೆಲೆ ಏರಿಕೆಗೆ ಕಾರಣಗಳಿವೆ. ಅಷ್ಟೇ ಅಲ್ಲದೇ, ಹಬ್ಬಗಳ ಸೀಸನ್ ಮತ್ತು ಮದುವೆಯ ಸೀಸನ್‌ನಲ್ಲಿ ಚಿನ್ನದ ಮೇಲಿನ ಹೂಡಿಕೆ ಹೆಚ್ಚಾಗುತ್ತದೆ. ಇನ್ನು ಕಳೆದ ಒಂದೇ ವರ್ಷದಲ್ಲಿ, 24 ಕ್ಯಾರೆಟ್ ಚಿನ್ನದ ಬೆಲೆ ಶೇ. 67% ರಷ್ಟು ಹೆಚ್ಚಾಗಿದೆ.
1 ಕೋಟಿ ರೂ.ಗೆ 2025 ರಲ್ಲಿ ಚಿನ್ನ ಖರೀದಿಸಿದರೆ 758 ಗ್ರಾಂ (0.76 ಕೆಜಿ) ಚಿನ್ನ ಗ್ರಾಹಕರಿಗೆ ಸಿಗುತ್ತದೆ. ಅದೇ, 2000ರಲ್ಲಿ 1 ಕೋಟಿ ರೂ.ಗೆ ಚಿನ್ನ ಖರೀದಿಸುತ್ತಿದ್ದರೆ, ಬರೋಬ್ಬರಿ 22.7 ಕೆಜಿ ಚಿನ್ನ ಸಿಗುತ್ತಿತ್ತು. ಒಂದು ವೇಳೆ ಇದೇ ರೀತಿ ಚಿನ್ನದ ಬೆಲೆ ಹೆಚ್ಚಾದರೆ, 2050ರಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 40 ಲಕ್ಷ ರೂಪಾಯಿಗೆ ತಲುಪಬಹುದು ಎಂದು ನಿರೀಕ್ಷಿಸಲಾಗಿದೆ.
ಹತ್ತು ಗ್ರಾಂ ಚಿನ್ನಕ್ಕೆ 40 ಲಕ್ಷ ಆದ್ರೆ, 20 ಗ್ರಾಂ ಚಿನ್ನದ ನೆಕ್ಲೇಸ್ ಅಂದರೆ ಎರಡು ತೊಲದಷ್ಟು ನೆಕ್ಲೇಸ್ ಖರೀದಿಸಲು 1 ಕೋಟಿ ರೂ. ವೆಚ್ಚವಾಗುತ್ತದೆ. ಅಂದರೆ, 2050ರಲ್ಲಿ 1 ಕೋಟಿ ರೂ.ಗೆ ಕೇವಲ 25 ಗ್ರಾಂ ಚಿನ್ನವನ್ನು ನೀವು ಖರೀದಿಸಬಹುದು. ಇದನ್ನೆಲ್ಲಾ ಗಮನಿಸಿದ್ರೆ ಭವಿಷ್ಯದಲ್ಲಿ ಚಿನ್ನದ ಬೆಲೆ ಯಾವ ಮಟ್ಟಕ್ಕೆ ತಲುಪಬಹುದು ಎಂದು ಯೋಚಿಸುವಂತಾಗಿದೆ.
ಒಮ್ಮೆ ಇತಿಹಾಸದ ಬಗ್ಗೆ ತಿರುಗಿ ನೋಡಿದರೆ, ಚಿನ್ನ ಭವಿಷ್ಯದಲ್ಲಿ ಭಾರೀ ಆದಾಯ ನೀಡುತ್ತದೆ. ಆದ್ದರಿಂದ ಮೊದಲೇ ಪ್ಲಾನ್ ಮಾಡಿಕೊಂಡು, ತಜ್ಞರ ಸಲಹೆ ಮೇರೆಗೆ ಚಿನ್ನದ ಮೇಲೆ ಹೂಡಿಕೆ ಮಾಡಿದರೆ ಭವಿಷ್ಯದಲ್ಲಿ ನೀವೂ ಕೋಟ್ಯಾಧೀಶರಾಗಬಹುದು. ಈ ಭವಿಷ್ಯವನ್ನು ಇತಿಹಾಸ ಮತ್ತು ಹಣಕಾಸಿನ ಲೆಕ್ಕಾಚಾರದ ಮೇಲೆ ವರದಿ ಮಾಡಲಾಗಿದ್ದು, 2050ರಲ್ಲಿ ಚಿನ್ನದ ಬೆಲೆ, ಹಣದ ಮೌಲ್ಯ ಹೇಗಿರಬೇಕೆಂದು ಕಾದು ನೋಡಬೇಕಿದೆ.
(ಈ ವಿಶ್ಲೇಷಣೆ ಮತ್ತು ಶಿಫಾರಸುಗಳು ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited (ಒಟ್ಟಾರೆ "ನಾವು" ಎಂದು ಕರೆಯಲಾಗುತ್ತದೆ) ಅವರ ಅಭಿಪ್ರಾಯವನ್ನು ಪ್ರತಿಬಿಂಬಿಸುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆಗೆ ಖಾತರಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟವನ್ನು ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸ್ವತಂತ್ರವಾಗಿ ಪರಿಶೀಲಿಸಬೇಕು.)


Click it and Unblock the Notifications