ಚಿನ್ನದ ಮೇಲಿನ ಹೂಡಿಕೆ ಹೆಚ್ಚಿನವರು ಸುರಕ್ಷಿತ ಎಂದು ಭಾವಿಸುತ್ತಾರೆ. ಆದ್ರೆ ಇತ್ತೀಚೆಗೆ ಚಿನ್ನ, ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆ ಕಂಡಿದ್ದು, ಹೂಡಿಕೆದಾರರು, ಖರೀದಿದಾರರು ಹಿಂದೇಟು ಹಾಕುವಂತಾಗಿದೆ. ಹಾಗಿದ್ರೆ ಇಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆ ಎಷ್ಟಿದೆ ಗೊತ್ತಾ?

ಬೆಂಗಳೂರಿನಲ್ಲಿ 24K ಚಿನ್ನದ ಬೆಲೆ:
ಬೆಂಗಳೂರಿನಲ್ಲಿ 24K ಚಿನ್ನದ 1 ಗ್ರಾಂ ಬೆಲೆ ಇಂದು 12,562 ರೂ. ಆಗಿದೆ. ನಿನ್ನೆ ಕೂಡಾ 12,562 ರೂ. ಇತ್ತು. ಅದೇ ಬೆಲೆಯನ್ನೇ ಇಂದು ಕಾಯ್ದುಕೊಂಡಿದೆ. ಇನ್ನು 8 ಗ್ರಾಂ ಚಿನ್ನದ ಬೆಲೆ 1,00,496 ರೂ. ಆಗಿದ್ದು, ನಿನ್ನೆಯ ಬೆಲೆಯಲ್ಲೇ ಸ್ಥಿರವಾಗಿದೆ. ಅದೇ ರೀತಿ 10 ಗ್ರಾಂ ಚಿನ್ನದ ಬೆಲೆ ಇಂದು 1,25,620 ರೂ. ನಷ್ಟಾಗಿದ್ದು, ನಿನ್ನೆಯಷ್ಟೇ ಸ್ಥಿರವಾಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು, ನಿನ್ನೆಯಷ್ಟೇದ ಇದ್ದು ಒಟ್ಟು ಬೆಲೆ 12,56,200 ರೂ. ಆಗಿದೆ.
ಬೆಂಗಳೂರಿನಲ್ಲಿ 22K ಚಿನ್ನದ ಬೆಲೆ:
22K ಚಿನ್ನದ ಬೆಲೆ ಇಂದು 1 ಗ್ರಾಮ್‌ಗೆ 11,515 ರೂ. ಆಗಿದೆ. ನಿನ್ನೆಯೂ ಅಷ್ಟೇ ಬೆಲೆ ಇತ್ತು. ಈ ಮೂಲಕ ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಇನ್ನು 8 ಗ್ರಾಂ ಚಿನ್ನದ ಬೆಲೆ ಇಂದು 92,120 ರೂ. ಆಗಿದೆ. 10 ಗ್ರಾಂ ಚಿನ್ನ ಬೆಲೆ ರೂ. 1,15,150 ನಷ್ಟು ಆಗಿದ್ದು, ಇಂದು ಬೆಲೆಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. 100 ಗ್ರಾಂ ಚಿನ್ನ ಬೆಲೆ ಇಂದು 11,51,500 ರೂಪಾಯಿ ಆಗಿದೆ.
18K ಚಿನ್ನದ ಬೆಲೆ ಹೇಗಿದೆ?
ಇನ್ನು ಬೆಂಗಳೂರಿನಲ್ಲಿ ಇಂದು (ಅ.26) 18K ಚಿನ್ನದ 1 ಗ್ರಾಂ ಬೆಲೆ 9,422 ರೂಪಾಯಿಯಾಗಿದೆ. ಅಂದರೆ ನಿನ್ನೆಗೂ, ಇಂದಿಗೂ ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಹಾಗೆಯೇ 8 ಗ್ರಾಂ ಚಿನ್ನದ ಬೆಲೆ ಇಂದು 75,376 ರೂ. ಆಗಿದೆ. ನಿನ್ನೆ 10 ಗ್ರಾಂ ಚಿನ್ನದ ಬೆಲೆ ರೂ. 94,220 ಇತ್ತು. ಆದ್ರೆ ಇಂದು ಕೂಡಾ ಅಷ್ಟೇ ಬೆಲೆ ಇದೆ. ಹಾಗೆಯೇ 100 ಗ್ರಾಂ ಚಿನ್ನದ ಬೆಲೆ 9,42,200 ರೂ. ಆಗಿದೆ.
ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಹೇಗಿದೆ?
ಚಿನ್ನದ ಬೆಲೆಯಂತೆ, ಬೆಳ್ಳಿ ಬೆಲೆಯಲ್ಲೂ ಏರಿಳಿತ ಆಗುತ್ತಿರುತ್ತದೆ. ಆದ್ರೆ ಇಂದು ಬೆಳ್ಳಿ ಬೆಲೆ ಮಾತ್ರ ನಿನ್ನೆಯಷ್ಟೇ ಇದೆ. ಅಂದರೆ ಯಾವುದೇ ಬದಲಾವಣೆಗಳಾಗಿಲ್ಲ. ಇಂದು ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿ ದರ 157 ರೂ. ಆಗಿದೆ. ಅದೇ ರೀತಿ 8 ಗ್ರಾಂ ಬೆಳ್ಳಿ ಬೆಲೆ ನಿನ್ನೆಯ ಬೆಲೆಯಲ್ಲೇ ಸ್ಥಿರವಾಗಿದ್ದು, ₹1,256 ರೂ. ಆಗಿದೆ. ಇನ್ನು 10 ಗ್ರಾಂ ಬೆಳ್ಳಿ ಬೆಲೆ ಇಂದು ₹1,570 ಆಗಿದ್ದು, ನಿನ್ನೆಯೂ ಅಷ್ಟೇ ಇತ್ತು. ಹಾಗೆಯೇ 100 ಮತ್ತು 1000 ಗ್ರಾಂ ಬೆಳ್ಳಿ ಬೆಲೆ ಪ್ರತಿಯಾಗಿ 15,700 ಮತ್ತು ₹1,57,000 ಆಗಿದೆ.


Click it and Unblock the Notifications