ರೈತರ ಅಭಿವೃದ್ಧಿಗಾಗಿ, ಬಡವರ ಕಲ್ಯಾಣಕ್ಕಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದೇ ಈ ಯೋಜನೆಗಳ ಮುಖ್ಯ ಉದ್ದೇಶವಾಗಿದೆ. ಇದೀಗ ರೈತರ ಕಲ್ಯಾಣಕ್ಕಾಗಿ ಜಾರಿಗೆ ತಂದಿರುವ ಪ್ರಮುಖ ಯೋಜನೆಗಳಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan Samman Yojana) ಯೋಜನೆ ಕೂಡಾ ಒಂದು.

PM ಕಿಸಾನ್ ಯೋಜನೆಯು ಅರ್ಹ ರೈತ ಕುಟುಂಬಗಳಿಗೆ ವರ್ಷಕ್ಕೆ ₹6,000 ಆರ್ಥಿಕ ನೆರವು ನೀಡುತ್ತದೆ. ಈ ಮೊತ್ತವನ್ನು ತಲಾ ₹2,000 ರೂ.ನಂತೆ ಮೂರು ಸಮಾನ ಕಂತುಗಳಲ್ಲಿ, ಆಧಾರ್ ಜೋಡಣೆಯಾದ ಬ್ಯಾಂಕ್ ಖಾತೆಗಳಿಗೆ ನೇರ ಲಾಭ ವರ್ಗಾವಣೆ (DBT) ಮೂಲಕ ಜಮಾ ಮಾಡಲಾಗುತ್ತದೆ.
2025ರ ಪಿಎಂ ಕಿಸಾನ್ ಹಣ ಜಮಾ
ಸಣ್ಣ ಮತ್ತು ಅತಿ ಸಣ್ಣ ರೈತರ ಆರ್ಥಿಕ ಸಮಸ್ಯೆಗಳಿಗೆ ತಕ್ಕಮಟ್ಟಿಗೆ ಸಹಕಾರ ನೀಡುವುದು ಇದರ ಗುರಿ. 2025ರ ಫೆಬ್ರವರಿ 24ರಂದು 19ನೇ ಕಂತು, ಆಗಸ್ಟ್ 2ರಂದು 20ನೇ ಕಂತು ಮತ್ತು ನವೆಂಬರ್ 19ರಂದು 21ನೇ ಕಂತು ವಿತರಿಸಲಾಗಿದೆ. 21ನೇ ಕಂತಿನ ಮೂಲಕ ಸುಮಾರು 9 ಕೋಟಿ ರೈತರು ₹18,000 ಕೋಟಿ ನೆರವು ಪಡೆದಿದ್ದರು.
ಯಾವಾಗ ಬರುತ್ತೆ 22ನೇ ಕಂತಿನ ಹಣ?
ಸಾಮಾನ್ಯವಾಗಿ, PM ಕಿಸಾನ್ ನೆರವು ಪ್ರತಿ ನಾಲ್ಕು ತಿಂಗಳಿಗೊಮ್ಮೆ (ಏಪ್ರಿಲ್-ಜುಲೈ, ಆಗಸ್ಟ್-ನವೆಂಬರ್, ಡಿಸೆಂಬರ್-ಮಾರ್ಚ್) ಜಮಾ ಮಾಡಲಾಗುತ್ತದೆ. 22ನೇ ಕಂತು 2026ರ ಮೊದಲ ತ್ರೈಮಾಸಿಕದಲ್ಲಿ (ಜನವರಿ-ಮಾರ್ಚ್) ಅಥವಾ ಆರಂಭದಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಆದರೆ ಸರ್ಕಾರ ಈ ಬಗ್ಗೆ ಯಾವುದೇ ರೀತಿಯಲ್ಲಿ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.
ಯಾರು ಅರ್ಹರು?
ಪಿಎಂ ಕಿಸಾನ್ ಫಲಾನುಭವಿಗಳು ಆಗಬೇಕೆಂದರೆ, ತಮ್ಮ ಹೆಸರಿನಲ್ಲಿ ಕೃಷಿಯೋಗ್ಯ ಭೂಮಿಯನ್ನು ಹೊಂದಿರಬೇಕು.
ಪಿಎಂ ಕಿಸಾನ್ ಯೋಜನೆಗೆ ನೋಂದಾವಣೆ ಮಾಡುವುದು ಹೇಗೆ?
PM-KISAN ಪೋರ್ಟಲ್‌ನಲ್ಲಿರುವ Farmers Cornerನಲ್ಲಿ ಫಲಾನುಭವಿ ಸ್ಥಿತಿ ಹಾಗೂ ಕಂತು ಪಾವತಿ ವಿವರಗಳನ್ನು ಪಡೆಯಬಹುದು. ಅಲ್ಲಿ ನೀವು Know Your Status ಮೂಲಕ ಅರ್ಹತೆ ಮತ್ತು ಪಾವತಿ ಸ್ಥಿತಿಯನ್ನು ತಿಳಿಯಬಹುದು. ಆನ್‌ಲೈನ್ ಮಾತ್ರವಲ್ಲದೇ ಸ್ಥಳೀಯ ಸಾಮಾನ್ಯ ಸೇವಾ ಕೇಂದ್ರಗಳಲ್ಲೂ (CSC) ರೈತರು ಈ ಮಾಹಿತಿ ಪಡೆಯಬಹುದು.


Click it and Unblock the Notifications