ನೀವು ಆಗ್ಗಾಗ್ಗೆ ಉಬರ್ ಬಳಸುತ್ತಿರಾ? ಅದರಲ್ಲೂ ನೀವು ಉಬರ್ ಆಟೋ ಹೆಚ್ಚಾಗಿ ಬಳಕೆ ಮಾಡುತ್ತಿದ್ದರೆ ಈ ಸುದ್ದಿ ಓದಲೇಬೇಕು. ಉಬರ್ ಮಂಗಳವಾರದಿಂದ ತನ್ನ ಆಟೋ ಸವಾರಿಯನ್ನು ಮಾಡುವ ಪ್ರಯಾಣಿಕರಿಗೆ ನವೀಕರಿಸಿದ ನಿಯಮಗಳು ಮತ್ತು ಷರತ್ತುಗಳನ್ನು ಪರಿಚಯಿಸಿದ್ದು ಇದು ಫೆಬ್ರವರಿ 18 ರಿಂದ ಜಾರಿಗೆ ಬಂದಿದೆ.
ನೀವು ಉಬರ್ ಆಟೋ ಬುಕ್ ಮಾಡಿ ಆನ್‌ಲೈನ್‌ನಲ್ಲಿ ಪಾವತಿ ಮಾಡುತ್ತಿದ್ದರೆ, ಮಂಗಳವಾರದಿಂದ ಇದರಲ್ಲಿ ಮಹತ್ವದ ಬದಲಾವಣೆ ಆಗಿದ್ದು, ಇನ್ನು ಮುಂದೆ ಇದು ಕೆಲಸ ಮಾಡುವುದಿಲ್ಲ. ಯಾಕೆಂದರೆ ನೀವು ಉಬರ್ ಆಟೋ ಬುಕ್ ಮಾಡಿದಾಗಲೆಲ್ಲಾ, ನೀವು ಪ್ರಯಾಣ ದರವನ್ನು ನಗದು ಅಥವಾ UPI ಮೂಲಕ ಮಾತ್ರ ಪಾವತಿಸಬೇಕಾಗುತ್ತದೆ. ಇದಕ್ಕೆ ಪೂರಕವಾಗಿ ಬಳಕೆದಾರರು ಉಬರ್ ಅಪ್ಲಿಕೇಶನ್‌ನಲ್ಲಿ " ನಗದು-ಮಾತ್ರ"(Auto is now cash-only) ಎಂಬ ನೋಟಿಫಿಕೇಷನ್ ಕಂಡುಬರಲಾರಂಭಿಸಿದೆ.

ಇನ್ಮುಂದೆ ಉಬರ್ ಆಟೋ ಬುಕಿಂಗ್ ಇಂಟರ್ಫೇಸ್‌ನಲ್ಲಿ ನಗದು ಆಯ್ಕೆ ಮಾತ್ರ ಗೋಚರಿಸುತ್ತದೆ ಹೀಗಾಗು ಉಬರ್ ಬುಕ್ ಮಾಡುವಾಗ ಕೊಂಚ ಯೋಚಿಸುವುದು ಒಳ್ಳೆಯದು. ವಾಸ್ತವವಾಗಿ, ರೈಡ್ ಹೇಲಿಂಗ್ ಪ್ಲಾಟ್‌ಫಾರ್ಮ್ ಉಬರ್ ತನ್ನ ಆಟೋ ಚಾಲಕರಿಗಾಗಿ ಕಮಿಷನ್ ಆಧಾರಿತ ಮಾದರಿಯಿಂದ SaaS ಚಂದಾದಾರಿಕೆ ಆಧಾರಿತ ಮಾದರಿಗೆ ಬದಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.
ಉಬರ್ ನ ಈ ಹಿಂದಿನ ನಿರ್ಧಾರದ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿದಾಗ, ಆಟೋ ಸವಾರಿಗಳಿಗೆ ಪಾವತಿ ಆಯ್ಕೆಗಳನ್ನು ಕಡಿಮೆ ಮಾಡುವ ಉಬರ್ ನಿರ್ಧಾರದ ಹಿಂದಿನ ಕಾರಣಗಳು ಸ್ಪಷ್ಟವಾಗುತ್ತವೆ. ಉಬರ್‌ನ ಇತ್ತೀಚಿನ ಬದಲಾವಣೆಗಳು ಹೊಸ "ಆಟೋ ಸಾಫ್ಟ್‌ವೇರ್-ಆಸ್-ಎ-ಸರ್ವಿಸ್ / ಕ್ಯಾಶ್ ಓನ್ಲಿ" ಮಾದರಿಯ ಅಡಿಯಲ್ಲಿ ಪಾವತಿ, ಸೇವಾ ನಿಬಂಧನೆಗಳು ಮತ್ತು ವಿವಾದ ಪರಿಹಾರಕ್ಕೆ ಸಂಬಂಧಿಸಿದ ಪ್ರಮುಖ ಅಂಶಗಳನ್ನು ವಿವರಿಸಿದೆ.
ಪರಿಷ್ಕೃತ ನಿಯಮಗಳು ಮತ್ತು ಷರತ್ತುಗಳನ್ನು ಗಮನಿಸಿ
ಉಬರ್‌ನ ಆಟೋ ಸವಾರಿಗಳ ಪರಿಷ್ಕೃತ ನಿಯಮಗಳು ಮತ್ತು ಷರತ್ತುಗಳು ನವೀಕರಣದ ಪ್ರಕಾರ, ಉಬರ್ ಸ್ವತಂತ್ರ ಚಾಲಕ ಪಾಲುದಾರರೊಂದಿಗೆ ಸವಾರರನ್ನು ಸಂಪರ್ಕಿಸುವ ತಂತ್ರಜ್ಞಾನ ವೇದಿಕೆಯಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರೆಸಿದೆ. "ಉಬರ್ ಸಾರಿಗೆ ಸೇವೆಗಳನ್ನು ಒದಗಿಸುವುದಿಲ್ಲ ಅಥವಾ ಸಾರಿಗೆ ವಾಹಕವಾಗಿ ಕಾರ್ಯನಿರ್ವಹಿಸುವುದಿಲ್ಲ. ಸಾರಿಗೆ ಸೇವೆಗಳನ್ನು ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಚಾಲಕ ಪಾಲುದಾರರು ಮಾತ್ರ ಒದಗಿಸುತ್ತಾರೆ" ಎಂದು ಉಬರ್ ಹೇಳಿದೆ.
ಪ್ರಯಾಣದ ಕಾರ್ಯಾರಂಭ, ಪೂರ್ಣಗೊಳಿಸುವಿಕೆ ಅಥವಾ ಗುಣಮಟ್ಟವನ್ನು ಕಂಪನಿಯು ಮೇಲ್ವಿಚಾರಣೆ ಮಾಡುವುದಿಲ್ಲ ಅಥವಾ ಚಾಲಕ ಪಾಲುದಾರರಿಂದ ಯಾವುದೇ ರೈಡ್ ಕ್ಯಾನ್ಸಲ್ ಅಥವಾ ನಿರಾಕರಣ ಮಾಡಿದ್ರೆ ಅದು ಜವಾಬ್ದಾರನಾಗಿರುವುದಿಲ್ಲ ಎಂದು ಕಂಪನಿಗೆ ಸ್ಪಷ್ಟಪಡಿಸಿದೆ.
ಮತ್ತೊಂದು ಪ್ರಮುಖ ವಿಷಯವೆನೆಂದರೆ ಪಾವತಿಯ ವಿಷಯದಲ್ಲಿ, ಅಪ್ಲಿಕೇಶನ್‌ನಲ್ಲಿ ಪ್ರದರ್ಶಿಸಲಾದ ಶುಲ್ಕವು ಕೇವಲ ಉಲ್ಲೇಖಕ್ಕೆ ಮಾತ್ರವಾಗಿದೆ ಆದರೆ ಇದೇ ನಿಗದಿತ ಮೊತ್ತವಲ್ಲ ಎಂದು ಉಬರ್ ವಿವರಿಸಿದೆ. ಸವಾರರು ಮತ್ತು ಚಾಲಕ ಪಾಲುದಾರರು ಸವಾರಿಯ ಮೊದಲು ಅಥವಾ ಸಮಯದಲ್ಲಿ ದರದ ಬಗ್ಗೆ ಪರಸ್ಪರ ಮಾತುಕತೆ ನಡೆಸಬಹುದು ಎಂದು ಹೇಳಿದೆ.
ಉಬರ್ ಸವಾರ ಮತ್ತು ಚಾಲಕ ಪಾಲುದಾರರ ನಡುವೆ ಯಾವುದೇ ಪಾವತಿಗಳನ್ನು ಸಂಗ್ರಹಿಸುವುದಿಲ್ಲ, ಟ್ರ್ಯಾಕ್ ಮಾಡುವುದಿಲ್ಲ, ನಿಯಂತ್ರಿಸುವುದಿಲ್ಲ, ಹಸ್ತಕ್ಷೇಪ ಮಾಡುವುದಿಲ್ಲ ಅಥವಾ ಪ್ರಕ್ರಿಯೆಗೊಳಿಸುವುದಿಲ್ಲ" ಎಂದು ಕಂಪನಿ ಸ್ಪಷ್ಟಪಡಿಸಿದೆ.
ನೀವು ಹೇಗೆ ಪಾವತಿ ಮಾಡಬಹುದು?
ನೀವು ಚಾಲಕನಿಗೆ ನೇರವಾಗಿ ನಗದು ಅಥವಾ UPI ಮೂಲಕ (ಚಾಲಕರ UPI ID ಬಳಸಿ) ಪಾವತಿಸಬೇಕು. ಉಬರ್ ಅಪ್ಲಿಕೇಶನ್ ಅಥವಾ ಉಬರ್ ಕ್ರೆಡಿಟ್ ಮೂಲಕ ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳು/ಇಂಟಿಗ್ರೇಟೆಡ್ ಯುಪಿಐ ಪಾವತಿಗಳಂತಹ ಡಿಜಿಟಲ್ ಪಾವತಿ ವಿಧಾನಗಳನ್ನು ಬಳಸಲಾಗುವುದಿಲ್ಲ. ಇದು ನಿಮ್ಮ ಪ್ರಯಾಣ ಮಾಡಿದ 100% ಪಾವತಿಗಳು ನೇರವಾಗಿ ಚಾಲಕನ ಕೈ ಸೇರುತ್ತದೆ


Click it and Unblock the Notifications