ಬೆಂಗಳೂರು, ಜುಲೈ 17: ಪ್ರತಿ ಸಾರಿ ಬಜೆಟ್ ಎದುರಾದಾಗ ನಿವೃತ್ತಿ ಪಡೆದುಕೊಂಡು ಪಿಂಚಣಿ ಪಡೆಯುತ್ತಿರುವವರ ನಿರೀಕ್ಷೆಗಳು ಗರಿಗೆದರುತ್ತವೆ. ಮಕ್ಕಳ ಶಿಕ್ಷಣ, ಮಕ್ಕಳ ಮದುವೆ ಎಂದು ಕಾಸೆಲ್ಲ ಖರ್ಚು ಮಾಡಿಕೊಂಡು ಪಿಂಚಣಿಯನ್ನೇ ನಂಬಿಕೊಂಡು ಜೀವವನ ನಡೆಸುತ್ತಿರುವ ಹಿರಿಯ ಜೀವಗಳಿಗೂ ಈ ಬಜೆಟ್ ನಲ್ಲಿ ಏನಾದರೂ ದೊಡ್ಡ ರಿಲೀಫ್ ಸಿಗುತ್ತದೆಯಾ ಎನ್ನುವುದರ ಮೇಲೂ ಗಮನ ಹರಿಸಬೇಕಿದೆ.
ಸರ್ಕಾರಿ ಕೆಲಸದಿಂದ ನಿವೃತ್ತಿ ಪಡೆದುಕೊಂಡವರು ತಕ್ಕ ಮಟ್ಟಿನ ಪಿಂಚಣಿ ಪಡೆದುಕೊಳ್ಳುತ್ತಿದ್ದಾರೆ ಎಂದು ಭಾವಿಸೋಣ. ಅದರೆ ಖಾಸಗಿ ಕೆಲಸದಿಂದ ನಿವೃತ್ತಿ ಪಡೆದುಕೊಂಡವರು? ವೈದ್ಯಕೀಯ ಪರೀಕ್ಷೆ, ಚಿಕಿತ್ಸೆ, ಹಾಗೂ ಔಷಧಗಳಿಗೂ ಹಿರಿಯ ನಾಗರಿಕರು ತಮ್ಮ ಜವಾಬ್ದಾರಿ ತಾವೇ ನಿರ್ವಹಿಸಿಕೊಳ್ಳಬೇಕಾದ ಸ್ಥಿತಿ ಇದೆ.

ಮುಂಬರುವ ಬಜೆಟ್ 2024 ಗೆ ಕೆಲವೇ ದಿನ ಬಾಕಿ ಉಳಿದಿದ್ದು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಅಡಿಯಲ್ಲಿ ದಾಖಲಾದ ಕೇಂದ್ರ ಸರ್ಕಾರಿ ನೌಕರರಿಗೆ ಸರ್ಕಾರವು ಅಂತಿಮ ವೇತನದ ಶೇ.50 ರಷ್ಟನ್ನು ಪಿಂಚಣಿಯಾಗಿ ನೀಡಬಹುದು ಎನ್ನುವ ಮಾತುಗಳು ಇವೆ, ವಿಶೇಷವಾಗಿ 2004 ರ ನಂತರ ನೇಮಕಗೊಂಡವರಿಗೆ NPS ಆಕರ್ಷಕ ಆದಾಯವನ್ನು ನೀಡುತ್ತದೆ ಎಂದು ಸರ್ಕಾರವು ಭರವಸೆ ನೀಡಿದ್ದರೂ ಒಂದಿಷ್ಟು ಗೊಂದಲಗಳಿಗೆ ಪರಿಹಾರ ಸಿಕ್ಕಿಲ್ಲ.
ಹಳೆ ಪಿಂಚಣಿ ಯೋಜನೆ ಮತ್ತು ಹೊಸ ಪಿಂಚಣಿ ಯೋಝನೆ ನಡುವಿನ ಗೊಂದಲಗಳು ಹಾಗೇ ಇವೆ. ಕೆಲವು ರಾಜ್ಯ ಸರ್ಕಾರಗಳು ಯಹಳೆಯ ಪಿಂಚಣಿ ಯೋಜನೆಯ ಕಡೆ ಒಲವು ಹಾಗೆ ಇಟ್ಟುಕೊಂಡಿವೆ. ಹೊಸ ಪಿಂಚಣಿ ಯೋಜನೆ ವಿರೋಧಿಸಿ ಪ್ರತಿಭಟನೆಗಳು ನಡೆದಿದ್ದವು. ಒಟ್ಟಿನಲ್ಲಿ ಪಿಂಚಣಿಯ ಕುರಿತಾದ ಎಲ್ಲ ಗೊಂದಲಗಳಿಗೆ ಈ ಬಾರಿಯ ಬಜೆಟ್ನಲ್ಲಿ ಫುಲ್ ಸ್ಟಾಫ್ ಬೀಳಬೇಕಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications