ವಿದೇಶಿ ವಿದ್ಯಾರ್ಥಿಗಳಿಗಾಗಿ, ವೃತ್ತಿಪರರಿಗಾಗಿ ಅಮೆರಿಕಾ ಅಧ್ಯಕ್ಷ ಹೊಸ ಕ್ರಮ ಕೈಗೊಂಡಿದ್ದಾರೆ. ಹೌದು, ಇದೀಗ ಅಮೆರಿಕಾದ ಪೌರತ್ವಕ್ಕಾಗಿ, 'ಟ್ರಂಪ್ ಗೋಲ್ಡ್ ಕಾರ್ಡ್' (Trump Gold Card) ಎಂಬ ಮಿಲಿಯನ್-ಡಾಲರ್ ವೀಸಾ ಕಾರ್ಯಕ್ರಮವನ್ನು ಡೊನಾಲ್ಡ್ ಟ್ರಂಪ್ ಆರಂಭ ಮಾಡಿದ್ದಾರೆ. ಶ್ವೇತ ಭವನದಲ್ಲಿ (White House) ಆರಂಭಿಸಲಾದ ಈ ಸೇವೆಯು, ಹೊಸ ವೀಸಾ ವ್ಯವಸ್ಥೆಯಾಗಿದೆ (New Visa System). ಇದಕ್ಕಾಗಿ ವಿದೇಶಿ ವಲಸಿಗರು, ನಿರ್ದಿಷ್ಟ ಮೊತ್ತವನ್ನು ಪಾವತಿಸುವ ಮೂಲಕ ಅಮೆರಿಕದಲ್ಲಿ ವಾಸಿಸಲು ಅಥವಾ ಕೆಲಸ ಮಾಡುವುದಕ್ಕಾಗಿ, ಅಂತಿಮವಾಗಿ ಪೌರತ್ವವನ್ನು ಪಡೆಯಲು ಅನುಕೂಲವಾಗುತ್ತದೆ. ಅಮೆರಿಕದ ಕಂಪನಿಗಳು ಮತ್ತು ವಿದೇಶಿ ಪ್ರಜೆಗಳಿದೆ ಅಮೆರಿಕದಲ್ಲಿ ಜೀವನ ಕಲ್ಪಿಸಲು ಇದು ದೊಡ್ಡ ಅವಕಾಶ ಎಂದು ಟ್ರಂಪ್ ಬಣ್ಣಿಸಿದ್ದಾರೆ. ಅಲ್ಲದೇ ಇದೀಗ ವೇಳೆ ಭಾರತ ಸೇರಿ ಕೆಲವು ದೇಶಗಳ ವಿದ್ಯಾರ್ಥಿಗಳ ವಿರುದ್ಧ ಕಿಡಿಕಾರಿದ್ದಾರೆ.

ವಿದ್ಯಾರ್ಥಿಗಳ ವಿರುದ್ಧ ರೊಚ್ಚಿಗೆದ್ದ ಟ್ರಂಪ್!
ಅಮೆರಿಕನ್ ವಿಶ್ವವಿದ್ಯಾಲಯಗಳಿಂದ ಪದವಿ ಪಡೆದ ನಂತರವೂ ಭಾರತ, ಚೀನಾದ ಸಾವಿರಾರು ವಿದೇಶಿ ವಿದ್ಯಾರ್ಥಿಗಳು ದೇಶ ತೊರೆಯುವುದು "ನಾಚಿಕೆಗೇಡಿನ ಸಂಗತಿ" ಎಂದು ಅವರು ಬಣ್ಣಿಸಿದ್ದಾರೆ. ಆದರೆ ಈ ಗೋಲ್ಡ್ ಕಾರ್ಡ್ ಅಮೆರಿಕನ್ ಕಂಪನಿಗಳಿಗೆ ಪ್ರತಿಭೆಗಳನ್ನು ನೇಮಿಸಿ ಉಳಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಹೇಳಿದರು.
ವೈಟ್‌ಹೌಸ್‌ನಲ್ಲಿ ಕಾರ್ಯಕ್ರಮ ಪ್ರಾರಂಭಿಸಿದ ಟ್ರಂಪ್, "ವಾರ್ಟನ್, ಹಾರ್ವರ್ಡ್, ಎಂಐಟಿ ಯಂತಹ ಸಂಸ್ಥೆಗಳಿಂದ ಪದವಿ ಪಡೆದರೂ ಮೂಲ ದೇಶಗಳಿಗೆ ಮರಳುತ್ತಿದ್ದಾರೆ. ಆದರೆ ನಾವು ಅದನ್ನು ಪರಿಹರಿಸುತ್ತಿದ್ದೇವೆ." ಈ ಯೋಜನೆ ಜಾಗತಿಕ ಪ್ರತಿಭೆಗಳನ್ನು ಅಮೆರಿಕದಲ್ಲೇ ಉಳಿಸಿ, ಕೇಂದ್ರ ಸರ್ಕಾರಕ್ಕೆ "ಹಲವು ಬಿಲಿಯನ್ ಡಾಲರ್‌ಗಳನ್ನು" ಸಂಗ್ರಹಿಸುತ್ತದೆ ಎಂದು ಟ್ರಂಪ್ ಹೇಳಿದ್ದಾರೆ.
ಏನಿದು ಟ್ರಂಪ್ ಕಾರ್ಡ್?
ಗೋಲ್ಡ್ ಕಾರ್ಡ್ ಖರೀದಿಸಿದ ವ್ಯಕ್ತಿಗಳು $15,000 ಸಂಸ್ಕರಣಾ ಶುಲ್ಕ ಹಾಗೂ $1 ಮಿಲಿಯನ್ "ದೇಣಿಗೆ" ಯೊಂದಿಗೆ ವೇಗದ ಯುಎಸ್ ನಿವಾಸ ಒದಗಿಸುತ್ತದೆ. ಅಷ್ಟೇ ಅಲ್ಲ ಕಂಪನಿಗಳು $2 ಮಿಲಿಯನ್ ದೇಣಿಗೆ ನೀಡಿ ಉದ್ಯೋಗಿಗಳಿಗೆ ಸ್ಪಾನ್ಸರ್ ಮಾಡಬಹುದು. ಬುಧವಾರ ಪ್ರಾರಂಭವಾದ trumpcard.gov ವೆಬ್‌ಸೈಟ್, "ದಾಖಲೆ ಸಮಯದಲ್ಲಿ ಯುಎಸ್ ನಿವಾಸ" ಖಚಿತಪಡಿಸಿದೆ. ಟ್ರಂಪ್ ಇದನ್ನು "ಗ್ರೀನ್ ಕಾರ್ಡ್‌ಗಿಂತ ಉತ್ತಮ, ಹೆಚ್ಚು ಶಕ್ತಿಶಾಲಿ" ಎಂದು ಹೇಳಿದ್ದಾರೆ.
ವಾಣಿಜ್ಯ ಕಾರ್ಯದರ್ಶಿ ಹಾವರ್ಡ್ ಲುಟ್ನಿಕ್ ಪ್ರಕಾರ, ಈ ಕಾರ್ಡ್ ಪ್ರಯೋಜನ ಸಿಗಬೇಕೆಂದರೆ ಅರ್ಜಿದಾರರು "ಸಂಪೂರ್ಣ ಪರಿಶೀಲನೆಗೆ" ಒಳಗಾಗಬೇಕು. ಕಾರ್ಡ್ ಹೊಂದಿರುವವರು ಐದು ವರ್ಷಗಳ ನಂತರ ಪೌರತ್ವವನ್ನು ಪಡೆಯಬಹುದು. ಇದೀಗ ಗೋಲ್ಡ್ ಕಾರ್ಡ್ ಪರಿಚಯಿಸಲಾಗಿದ್ದು, ಮುಂದಿನ ದಿನಗಳಲ್ಲಿ 270 ದಿನಗಳವರೆಗೆ ಉಳಿಯಲು ಅನುಮತಿ ನೀಡುವ 'ಪ್ಲಾಟಿನಂ ಕಾರ್ಡ್' ಅನ್ನು ನಂತರ ಪ್ರಾರಂಭಿಸಲಾಗುವುದು ಎಂದು ಹೇಳಲಾಗಿದೆ.
ಈಗಾಗಲೇ ಹೊಸ ಗೋಲ್ಡ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅರ್ಜಿದಾರರು 'trumpcard.gov' ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ನಂತರ $15,000 ಸಂಸ್ಕರಣಾ ಶುಲ್ಕ ಪಾವತಿಸಿ, ಫೆಡರಲ್ ಪರಿಶೀಲನೆಗೆ ಒಳಗಾಗಬೇಕು. ಅನುಮೋದನೆ ಸಿಕ್ಕರೆ $1 ಮಿಲಿಯನ್ (ವೈಯಕ್ತಿಕ) ಅಥವಾ $2 ಮಿಲಿಯನ್ (ಕಾರ್ಪೊರೇಟ್) ಡಾಲರ್ ನೀಡಬೇಕಾಗುತ್ತದೆ..


Click it and Unblock the Notifications