ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (America President Donald Trump) ತಾನು ಆಡಿದ್ದೇ ಆಟ ಎಂಬಂತಾಗಿದೆ. ಸುಪ್ರೀಂ ಕೋರ್ಟ್ ಆದೇಶವನ್ನೂ ಕ್ಯಾರೇ ಅನ್ನದೇ, ಟ್ರಂಪ್ ತನ್ನ ಸುಂಕದ ಸಮರವನ್ನು ಮತ್ತೆ ಮುಂದುವರೆಸಿದ್ದಾರೆ. ಈ ಮೂಲಕ ಜಾಗತಿಕ ಮಾರುಕಟ್ಟೆಯಲ್ಲಿ ಡೊನಾಲ್ಡ್ ಟ್ರಂಪ್ ಮತ್ತೆ ಚರ್ಚೆಗೆ ಗುರಿಯಾಗಿದ್ದಾರೆ. ರಾಷ್ಟ್ರೀಯ ತುರ್ತು ಕಾನೂನಿನಡಿಯಲ್ಲಿ ಟ್ರಂಪ್ ವಿಧಿಸಿದ ಎಲ್ಲಾ ಸುಂಕಗಳನ್ನು ಇದೀಗ ಅಮೆರಿಕ ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಆದ್ರೆ ಸುಪ್ರೀಂ ಕೋರ್ಟ್ (US Supreme Court) ಆದೇಶದಿಂದ ರೊಚ್ಚಿಗೆದ್ದಿರುವ ಟ್ರಂಪ್, ಎಲ್ಲಾ ದೇಶಗಳ ಮೇಲೆ ವಿಧಿಸಲಾಗಿದ್ದ, ಶೇ.10% ರಷ್ಟು ಮೂಲ ಸುಂಕದ ಬದಲಾಗಿ, ಶೇ. 15% ಕ್ಕೆ ಏರಿಕೆ ಮಾಡಿ ಆದೇಶ ಹೊರಡಿಸಿದ್ದಾರೆ.

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಶುಕ್ರವಾರ (ಫೆ.20) ಸುಪ್ರೀಂ ಕೋರ್ಟ್‌ನ ತೀರ್ಪಿನಿಂದ ಭಾರೀ ಹಿನ್ನಡೆಯಾಗಿದೆ. ಸುಪ್ರೀಂ ಕೋರ್ಟ್, ಟ್ರಂಪ್ ಅವರು ಇಂಟರ್ನ್ಯಾಷನಲ್ ಎಮರ್ಜೆನ್ಸಿ ಎಕಾನಮಿಕ್ ಪವರ್ಸ್ ಆಕ್ಟ್ (IRRPA) ಬಳಸಿ ಹೇರಿದ್ದ ಜಾಗತಿಕ ಟ್ಯಾರಿಫ್‌ಗಳನ್ನು ಅಕ್ರಮ ಎಂದು ಘೋಷಿಸಿತು. ಈ ಬೆನ್ನಲ್ಲೇ ಟ್ರಂಪ್ ಮತ್ತೆ ತನ್ನ ಸುಂಕದ ಸಮರ ಸಾರಿದ್ದಾರೆ.
ಏನಿದು ಶೇ. 15% ಸುಂಕ?
ಅಮೆರಿಕದ ಸುಪ್ರೀಂ ಕೋರ್ಟ್, ಡೊನಾಲ್ಟ್ ಟ್ರಂಪ್ ಅವರು ಇದುವರೆಗೆ ಜಾಗತಿಕವಾಗಿ ಘೋಷಿಸಿದ ಸುಂಕದ ಆದೇಶಗಳನ್ನು ಸಂವಿಧಾನಬಾಹಿರ ಎಂದು ತೀರ್ಪು ನೀಡಿದೆ. ಆದ್ರೆ ಈ ಬೆನ್ನಲ್ಲೇ ಟ್ರಂಪ್, 1974ರ ವ್ಯಾಪಾರ ಕಾಯ್ದೆಯ "ಸೆಕ್ಷನ್ 122" (Section 122 of the Trade Act Of 1974) ಅನ್ನು ಬಳಸಿಕೊಂಡು, ಜಾಗತಿಕವಾಗಿ ಎಲ್ಲಾ ದೇಶಗಳ ಮೇಳೆ ಶೇ.15% ರಷ್ಟು ಸುಂಕ ಹೇರಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪು
ಅಮೆರಿಕ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ ನೇತೃತ್ವದಲ್ಲಿ ಕೈಗೊಂಡ ಈ ತೀರ್ಪು, ಅಧ್ಯಕ್ಷರಿಗೆ ಯುಎಸ್ ಕಾಂಗ್ರೆಸ್‌ನ ಅನುಮತಿಯಿಲ್ಲದೆ ಟ್ಯಾರಿಫ್ ಹೇರಲು ಅಧಿಕಾರವಿಲ್ಲ ಎಂದು ಸ್ಪಷ್ಟಪಡಿಸಿದೆ. ಇದರಿಂದ ಟ್ರಂಪ್ ಅವರ ಆರ್ಥಿಕ ನೀತಿಗೂ ದೊಡ್ಡ ಪೆಟ್ಟು ಬಿದ್ದಿತು. ಇದೇ ಕಾರಣದಿಂದ ಟ್ರಂಪ್ 15% ಸುಂಕ ಹೆಚ್ಚಳ ಮಾಡಲಾಗಿದೆ ಎದು ಹೇಳಿದರು.
ಡೊನಾಲ್ಟ್ ಟ್ರಂಪ್ ಹೇಳಿದ್ದೇನು?
ಸುಪ್ರೀಂ ಕೋರ್ಟ್ ಆದೇಶದ ಬೆನ್ನಲ್ಲೇ ಟ್ರಂಪ್ ಶುಕ್ರವಾರ ಸಂಜೆಯೇ ಟ್ರೇಡ್ ಆಕ್ಟ್ ಆಫ್ 1974ರ ಸೆಕ್ಷನ್ 122ರ ಅಡಿಯಲ್ಲಿ ಹೊಸದಾಗಿ 10% ಶೇ.ದಷ್ಟು ಟ್ಯಾರಿ್ ಹೇರಿಕೆ ಮಾಡಿದ್ದರು. ಇದು ತಾತ್ಕಾಲಿಕವಾಗಿ ಘೋಷಣೆ ಮಾಡಲಾಗಿದ್ದು, ಈ ಟ್ಯಾರಿಫ್ ಮಂಗಳವಾರದಿಂದ ಜಾರಿಗೆ ಬರಲಿತ್ತು. ಆದ್ರೆ ಶನಿವಾರ ಬರುತ್ತಿದ್ದಂತೆ ಟ್ರಂಪ್ ತನ್ನ ದಾರಿಯನ್ನೇ ಬದಲಿಸಿದ್ದಾರೆ, ಫೆ.21 ರಂದು ಟ್ರಂಪ್ ಅವರು ತಮ್ಮ ಟ್ರೂತ್ ಸೋಷಿಯಲ್ ಪೋಸ್ಟ್‌ನಲ್ಲಿ ಈ ಟ್ಯಾರಿಫ್ ಮತ್ತಷ್ಟು ಹೆಚ್ಚಳ ಮಾಡಿ ಶೇ.15%ರ ರಷ್ಟು ಏರಿಕೆ ಮಾಡುವುದಗಿ ಘೋಷಣೆ ಮಾಡಿದರು.ಇನ್ನು ಅಮೆರಿಕದ ವ್ಯಾಪಾರ ಕೊರತೆಯನ್ನು ಸರಿಪಡಿಸುವ ಉದ್ದೇಶದಿಂದ ಮತ್ತು ಆರ್ಥಿಕತೆಯನ್ನು ಬಲಪಡಿಸುವುದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಟ್ರಂಪ್ ಹೇಳಿದರು.


Click it and Unblock the Notifications