ಭಾರತದ ಅರ್ಥವ್ಯವಸ್ಥೆಯನ್ನು ಧನಾತ್ಮಕವಾಗಿ ಬದಲಾಯಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದ ದೇಶದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು 92 ನೇ ವಯಸ್ಸಿನಲ್ಲಿ ಗುರುವಾರ ನಿಧನರಾದರು. ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಅವರು ಡಿ.26 ರ ರಾತ್ರಿ 9:51 ಕ್ಕೆ ಕೊನೆಯುಸಿರೆಳೆದರು.
2004 ರಿಂದ 2014 ರವರೆಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಮನಮೋಹನ್ ಸಿಂಗ್ ಅವರು ಈ ವರ್ಷದ ಆರಂಭದಲ್ಲಿ ರಾಜ್ಯಸಭೆಯಿಂದ ನಿವೃತ್ತರಾಗಿದ್ದರು. ಹತ್ತು ವರ್ಷಗಳ ಕಾಲ ದೇಶವನ್ನು ಆಳಿದ್ದ ಮನಮೋಹನ್ ಸಿಂಗ್ ಮೋದಿ ಬಳಿಕ ಸುದೀರ್ಘ ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ 4 ನೇ ಪ್ರಧಾನಿ ಎಂಬ ಹೆಗ್ಗಳಿಕೆ ಸಿಂಗ್ ಅವರದ್ದು. ಇವರು ರಾಜಕಾರಣಿ, ವಿತ್ತ ತಜ್ಞ ಮಾತ್ರವಲ್ಲದೇ ಶಿಕ್ಷಣ ತಜ್ಞರಾಗಿಯೂ ಸೇವೆ ಸಲ್ಲಿಸಿದ್ದಾರೆ. 1991ರಲ್ಲಿ ಪಿ.ವಿ ನರಸಿಂಹರಾವ್ ಪ್ರಧಾನಿಯಾಗಿದ್ದ ಸಂದರ್ಭ ದೇಶದಲ್ಲಿ ಉಂಟಾದ ಆರ್ಥಿಕ ಬಿಕ್ಕಟ್ಟು ಪರಿಹರಿಸಲು ಮನಮೋಹನ್ ಸಿಂಗ್ ರನ್ನು ಆರ್ಥಿಕ ತಜ್ಞರನ್ನಾಗಿ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಅವರು ಕೈಗೊಂಡ ಆರ್ಥಿಕ ಸುಧಾರಣೆಗಳು ದೇಶದ ದಿಕ್ಕನ್ನೇ ಬದಲಾಯಿಸಿತು.

ಮನಮೋಹನ್ ಸಿಂಗ್ ಅವರ ಸರಳ ಜೀವನ ಮತ್ತು ನಿವ್ವಳ ಮೌಲ್ಯ
ದೇಶದ ಪ್ರಧಾನಿ, ಶಿಕ್ಷಣ, ಆರ್ಥಿಕ ತಜ್ಞರಾಗಿದ್ದ ಮನಮೋಹನ್ ಸಿಂಗ್ ಅವರ ಸಂಪತ್ತು ಎಷ್ಟಿರಬಹುದು ಎಂಬ ಕುತೂಹಲ ಮೂಡುವುದು ಸಹಜ. ಹಾಗೆ ನೀಡಿದರೆ ಅತ್ಯಂತ ಸರಳ ಜೀವನ ನಡೆಸುತ್ತಿದ್ದ ಡಾ.ಮನಮೋಹನ್ ಸಿಂಗ್ ತಮ್ಮ ಜೀವನದುದ್ದಕ್ಕೂ ಇದನ್ನು ಅಳವಡಿಸಿಕೊಂಡಿದ್ದರು. 2018ರಲ್ಲಿ ಮನಮೋಹನ್ ಸಿಂಗ್ ಅವರು ರಾಜ್ಯಸಭಾ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಈ ಅಫಿಡವಿಟ್ ಪ್ರಕಾರ, ಸಿಂಗ್ ಅವರ ಒಟ್ಟು ಆಸ್ತಿ ಮೌಲ್ಯ 15.77 ಕೋಟಿ ರೂ. ಅವರು ದೆಹಲಿ ಮತ್ತು ಚಂಡೀಗಢ ಎರಡರಲ್ಲೂ ಫ್ಲಾಟ್‌ಗಳನ್ನು ಹೊಂದಿದ್ದಾರೆ ಎಂದು ಅಫಿಡವಿಟ್ ಬಹಿರಂಗಪಡಿಸಿದೆ. ಇದಲ್ಲದೇ ಯಾವುದೇ ಸಾಲವನ್ನು ಸಿಂಗ್ ಅವರು ಹೊಂದಿಲ್ಲ ಇದು ಅವರ ವಿವೇಕಯುತ ಹಣಕಾಸು ನಿರ್ವಹಣೆ ಮತ್ತು ಸಮಗ್ರತೆಯನ್ನು ಪ್ರತಿಬಿಂಬಿಸುತ್ತದೆ.
2013ರಲ್ಲಿ ಪ್ರಧಾನಿಯಾಗಿದ್ದಾಗ ತಮ್ಮ ಆಸ್ತಿ ವಿವರದ ಪ್ರಕಾರ ಅವರು 7.27 ಕೋಟಿ ಮೌಲ್ಯದ ವಸತಿ ಆಸ್ತಿ ಹೊಂದಿದ್ದರು. 150.80 ಗ್ರಾಂ ಚಿನ್ನಾಭರಣಗಳ ಮಾಲೀಕತ್ವವನ್ನು ಹೊಂದಿದ್ದು ಇದರ ಪ್ರಸ್ತುತ ಅಂದಾಜು ಮೌಲ್ಯ 11 ಲಕ್ಷ ರೂ. ಆಗಿದೆ.
ಕೊಂಚ ವಿವರವಾಗಿ ನೋಡುವುದಾದರೆ 2018-19ನೇ ಸಾಲಿನಲ್ಲಿ ಮನಮೋಹನ್ ಸಿಂಗ್ ಅವರ ಒಟ್ಟು ಆದಾಯ ಅಂದಾಜು 90 ಲಕ್ಷ ರೂ. ಆಗಿತ್ತು. ವಸತಿ ಆಸ್ತಿಗಳು ಮತ್ತು ಬ್ಯಾಂಕ್ ಠೇವಣಿಗಳ ಜೊತೆಗೆ, ಚಂಡೀಗಢ್ ಮತ್ತು ದೆಹಲಿಯಲ್ಲಿನ ಅವರ ಅಪಾರ್ಟ್ಮೆಂಟ್ ಗಳ ಮೌಲ್ಯ 11 ವರ್ಷಗಳ ಹಿಂದೆ 7.27 ಕೋಟಿ ರೂಪಾಯಿ ಆಗಿತ್ತು, ಮತ್ತು ಅವುಗಳ ಮೌಲ್ಯವು ಆಗಿನಿಂದಲೂ ಗಣನೀಯವಾಗಿ ಹೆಚ್ಚಾಗಿದೆ. 2013 ರಲ್ಲಿ, ಅವರ ಎಸ್‌ಬಿಐ ಖಾತೆಯಲ್ಲಿ ಠೇವಣಿಗಳು ಮತ್ತು ಹೂಡಿಕೆಗಳಲ್ಲಿ ಒಟ್ಟು 3.46 ಕೋಟಿ ರೂಪಾಯಿ ಹೊಂದಿದ್ದರು. 2013 ರ ಅಫಿಡವಿಟ್ ಪ್ರಕಾರ ಅಂಚೆ ಉಳಿತಾಯ ಯೋಜನೆಯಲ್ಲಿ 12 ಲಕ್ಷ 76 ಸಾವಿರ ರೂ. ಇದ್ದು ಮನಮೋಹನ್ ಸಿಂಗ್ ಅವರು ಮಾರುತಿ 800 ಕಾರನ್ನು ಹೊಂದಿದ್ದರು.
ಒಟ್ಟಾರೆಯಾಗಿ ನೋಡುವುದಾದರೆ ಡಾ. ಮನಮೋಹನ್ ಸಿಂಗ್ ಅವರು ದೇಶದ ಅತ್ಯುತ್ತಮ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರಾಗಿದ್ದರು. ಅವರ ಅಧಿಕಾರವಧಿಯಲ್ಲಿ ದೇಶದ ಆರ್ಥಿಕತೆಯನ್ನು ಬಲಪಡಿಸಲು ಅವರು ಅನೇಕ ಐತಿಹಾಸಿಕ ಕ್ರಮಗಳನ್ನು ತೆಗೆದುಕೊಂಡಿದ್ದರು. ಹೀಗಾಗಿ ಭಾರತವು ಜಾಗತಿಕ ಮಟ್ಟದಲ್ಲಿ ಆರ್ಥಿಕ ಪ್ರಗತಿಯ ಹೊಸ ಎತ್ತರವನ್ನು ಮುಟ್ಟಿತ್ತು. ಅವರ ನಿಧನದ ಮೂಲಕ ದೇಶ ಮಹಾನ್ ಅರ್ಥಶಾಸ್ತ್ರಜ್ಞನನ್ನು ಕಳೆದುಕೊಂಡಿದೆ. ಅದರೂ ಅವರ ಕೊಡುಗೆ ಮುಂದಿನ ಪೀಳಿಗೆಗೆ ಸ್ಫೂರ್ತಿಯ ಮೂಲವಾಗಿ ಉಳಿಯುತ್ತದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications