2025ರಲ್ಲಿ ಕೋಟಿ ಸಂಪಾದಿಸುವ ಕನಸು ಕಾಣ್ತಿದ್ದೀರಾ? ಹಾಗಾದ್ರೆ ಕೋಟಿ ಪ್ರಯಾಣವನ್ನ ಆರಂಭಿಸುವುದು ಹೇಗೆ ತಿಳಿಯಿರಿ.

2025ರಲ್ಲಿ ಕೋಟಿ ಗಳಿಸುವ ಕನಸು ಕಾಣ್ತಿದ್ರೆ ಇದು ನಿಮಗಾಗಿ. ನಿಮ್ಮ ಕೋಟಿ ಗಳಿಸುವ ಪ್ರಯಾಣವನ್ನ ಆರಂಭ ಮಾಡುವುದು ಹೇಗೆ ಎಂಬ ಚಿಂತೆ ನಿಮಗಿದ್ದರೆ, ಆ ಚಿಂತೆ ಈಗ ಬೇಡ. ಅದರಲ್ಲೂ ಈಗಿನ ಯುವಕರು ಕೋಟಿ ಸಂಪಾದನೆ ಮಾಡುವ ಕನಸು ಕಾಣ್ತಿರುತ್ತಾರೆ ಅವರಿಗಾಗಿ ಇಲ್ಲಿದೆ ಉತ್ತಮ ಮಾರ್ಗದರ್ಶನ.

ನೀವು ಕೋಟಿ ಸಂಪಾದನೆ ಮಾಡುವ ಗುರಿಯನ್ನ ಹೊಂದಿದ್ದರೆ ನಿಮ್ಮ ವ್ಯವಸ್ಥಿತ ಹೂಡಿಕೆ, ಶಿಸ್ತುಬದ್ಧ ಹಣಕಾಸು ಯೋಜನೆಯಿಂದ ನೀವು ಈ ಗುರಿಯನ್ನ ತಲುಪಬಹುದು. ನೀವೀಗ ತಾನೆ ಕಾಲೇಜು ಮುಗಿಸಿ ವೃತ್ತಿಯನ್ನ ಮಾಡುತ್ತಿದ್ದರೆ ನಿಮಗೀಗ ಸರಿಯಾದ ಮಾರ್ಗದರ್ಶನದ ಅವಶ್ಯಕತೆ ಹೆಚ್ಚಿರುತ್ತದೆ. 2025 ನಿಮಗೆ ಲಾಭದಾಯಕ ವರ್ಷವಾಗಬೇಕಾದ್ರೆ ನೀವು ನಿಮ್ಮ ಕೋಟಿ ಸಂಪಾದನೆಯ ಕನಸಿನ ಕಡೆಗೆ ಮೊದಲು ಹೆಜ್ಜೆ ಹಾಕಬೇಕಾಗುತ್ತದೆ. ಈಗಲೂ ಕೂಡ ಏನು ತಡವಾಗಿಲ್ಲ ನೀವು ಈಗ ಕೂಡ ಹೂಡಿಕೆಯನ್ನ ಆರಂಭ ಮಾಡಬಹುದು. ಆದ್ರೆ ಇದಕ್ಕಾಗಿ ನೀವು ಮೊದಲ ಹೆಜ್ಜೆಯನ್ನ ಇಡಬೇಕಾಗುತ್ತದೆ. ಅಲ್ಲದೆ ಈ ಹಣಕಾಸಿನ ಪ್ರಯಾಣಕ್ಕಾಗಿ ನಿಮಗೆ ಉತ್ತಮ ಮಾರ್ಗದರ್ಶನದ ಅವಶ್ಯಕತೆ ಹೆಚ್ಚಿರುತ್ತದೆ.

2025ರಲ್ಲಿ ಕೋಟಿ ಸಂಪಾದನೆ ಮಾಡುವುದು ಹೇಗೆ ಇಲ್ಲಿ ತಿಳಿಯಿರಿ.

ನಿಮ್ಮ ಈ ಕೋಟಿ ಪ್ರಯಾಣದಲ್ಲಿ ನಿಮ್ಮ ಮೊದಲ 20 ವರ್ಷಗಳ ಹೂಡಿಕೆ ತಿಂಗಳಿಗೆ 8800 ಇರಬಹುದು. ಆದ್ರೆ ಅದೇ ಮುಂದಿನ 10 ವರ್ಷಗಳಲ್ಲಿ ತಿಂಗಳಿಗೆ 40,000 ಆಗಬಹುದು ಎಂದು ತಜ್ಞರು ಹೇಳುತ್ತಾರೆ.

ಇಬ್ಬರು ಹಣಕಾಸು ತಜ್ಞರಾದ ಫಿನ್‌ಎಡ್ಜ್‌ನ ಸಹ-ಸಂಸ್ಥಾಪಕ ಮತ್ತು ಸಿಒಒ ಮಾಯಾಂಕ್ ಭಟ್ನಾಗರ್ ಮತ್ತು ಅಬಾನ್ಸ್ ಇನ್ವೆಸ್ಟ್‌ಮೆಂಟ್ ಮ್ಯಾನೇಜರ್ ಪ್ರೈವೇಟ್ ಲಿಮಿಟೆಡ್‌ನ ಸಿಇಒ ಭಾವಿಕ್ ಠಕ್ಕರ್ ಪ್ರಕಾರ 25 ವರ್ಷಕ್ಕಿಂತ ಕಡಿಮೆ ಇರುವ ಯುವಕರು ಜೀವನದ ಚಿಕ್ಕ ಚಿಕ್ಕ ಸಂಭ್ರಮವನ್ನ ಕಳೆದುಕೊಳ್ಳದೆ ತಮ್ಮ ಹೂಡಿಕೆಯ ಯೋಜನೆಯನ್ನ ಅವರು ಆರಂಭ ಮಾಡಬಹುದು ಎಂದು ಅವರು ಹೇಳಿದ್ದಾರೆ. ಇದನ್ನ ಹೇಗೆ ಆರಂಭ ಮಾಡಬೇಕು ಎನ್ನುವುದರ ಕುರಿತು ಅವರು ತಮ್ಮ ಒಳನೋಟಗಳನ್ನು ಹಂಚಿಕೊಂಡಿದ್ದಾರೆ.

ಬೇಗ ಪ್ರಾರಂಭ ಮಾಡುವುದರ ಲಾಭಗಳು

ನೀವು ನಿಮ್ಮ ಹೂಡಿಕೆ ಪ್ರಯಾಣವನ್ನ ಬೇಗ ಆರಂಭ ಮಾಡಿದರೆ, ನಿಮ್ಮ ಅನುಕೂಲಗಳೀಗೆ ತಕ್ಕಂತೆ ಇದನ್ನ ಸಂಯೋಜನೆ ಮಾಡಬಹುದು. ತರ್ಕಬದ್ಧವಾದ ನಿರೀಕ್ಷೆ ಮತ್ತು ವ್ಯವಸ್ಥಿತ ಹೂಡಿಕೆಯ ಜೊತೆಗೆ ನೀವು ಆರಂಭ ಮಾಡುವುದು ಬಹಳ ಮುಖ್ಯವಾಗುತ್ತದೆ ಎಂದು ಮಾಯಾಂಕ್ ಭಟ್ನಾಗರ್ ಹೇಳುತ್ತಾರೆ. ನೀವು 10 ವರ್ಷಗಳಲ್ಲಿ ಒಂದು ಕೋಟಿಯನ್ನು ಸಂಪಾದನೆ ಮಾಡಲು ನೀವು ತಿಂಗಳಿಗೆ 40,000 ರೂಪಾಯಿಗಳನ್ನ ಹೂಡಿಕೆ ಮಾಡಲು ಆಗದಿದ್ದರೂ ಕೂಡ ನೀವು ಸಣ್ಣದಾಗಿ ಪ್ರಾರಂಭ ಮಾಡಿ. ತಿಂಗಳಿಗೆ 8,800 ರೂ.ಗಳಂತೆ ನೀವು 20 ವರ್ಷಗಳು ಹೂಡಿಕೆ ಮಾಡಿದ್ರೆ ನೀವು ಆ ಗುರಿಯನ್ನ ಸುಲಭವಾಗಿ ತಲುಪಲು ಸಹಾಯವಾಗುತ್ತದೆ ಎಂದು ಅವರು ಅಭಿಪ್ರಾಯಪಡುತ್ತಾರೆ.

ಇನ್ನು ಈ ಕೋಟಿ ಸಂಪಾದನೆ ಅಂದರೆ ಬರೀ ಹಣವನ್ನ ಸಂಗ್ರಹ ಮಾಡುವುದಲ್ಲ ಆದರೆ ಸಮತೋಲನವಾದ ಆರ್ಥಿಕ ಜೀವನವನ್ನ ಕಟ್ಟಿಕೊಳ್ಳುವುದು ಎಂದು ಭಾವಿಕ್ ಠಕ್ಕರ್ ಅವರು ಹೇಳುತ್ತಾರೆ. ನಿಮ್ಮ ಜೀವನದ ಅನಿರೀಕ್ಷಿತ ಘಟನೆಗಳಿಂದ ನಿಮ್ಮನ್ನ ಪಾರು ಮಾಡಲು ಸಾಕಷ್ಟು ಜೀವನ ಮತ್ತು ಆರೋಗ್ಯ ವಿಮೆಯನ್ನ ಪ್ರಾರಂಭ ಮಾಡಲು ಅವರು ಶಿಫಾರಸು ಮಾಡುತ್ತಾರೆ. ಒಮ್ಮೆ ನೀವು ಇಂತಹ ರಕ್ಷಣೆಯನ್ನ ನೀಡುವಂತಹ ಯೋಜನೆಗಳನ್ನ ಮಾಡಿಕೊಂಡರೆ ನಂತರ ನೀವು ದೀರ್ಘಾವಧಿಯ ವರೆಗೆ ನೀವು ನಿಮ್ಮ ಹೂಡಿಕೆಯ ಮೇಲೆ ಗಮನಹರಿಸಬಹುದು.

ನಿಮ್ಮ ಜೀವನ ಶೈಲಿ ಮತ್ತು ಹೂಡಿಕೆ ಎರಡೂ ಸಮತೋಲನವಾಗಿರಬೇಕು

ಇಬ್ಬರು ತಜ್ಞರು ಹೇಳುವ ಪ್ರಕಾರ ಹೂಡಿಕೆ ಮಾಡಲು ಬಯಸುವವರು ಮೊದಲು ಅವರ ಜೀವನಶೈಲಿ ಮತ್ತು ಹೂಡಿಕೆ ಎರಡನ್ನೂ ಸಮತೋಲನದಲ್ಲಿಡಬೇಕು ಎಂದು ಹೇಳುತ್ತಾರೆ. ನಿಮ್ಮ ಜೀವನ ಶೈಲಿಯಲ್ಲಿ ಏರುಪೇರುಗಳಾದ್ರೆ ನೀವು ಮಾರುಕಟ್ಟೆಯಲ್ಲಿ ಸಾಕಷ್ಟು ಚಂಚಲತೆಗಳನ್ನ ಎದುರಿಸಬೇಕಾಗುತ್ತದೆ, ಆಗ ನೀವು ನಿಮ್ಮ ಹೂಡಿಕಡಯನ್ನ ನಿಲ್ಲಿಸುವ ನಿರ್ಧಾರವನ್ನ ಕೂಡ ನೀವು ಮಾಡಬಹುದು ಎಂದು ಭಟ್ನಾಗರ್ ಹೇಳುತ್ತಾರೆ. ನೀವು ನಿಮ್ಮ ಜೀವನ ಹಾಗು ನಿಮ್ಮ ಹೂಡಿಕೆ ಸಮತೋಲದಲ್ಲಿಡುವುದರಿಂದ ನೀವು ನಿಮ್ಮ ಕೋಟಿ ಸಂಪಾದನೆ ಮಾಡುವ ಗುರಿಯನ್ನ ತಲುಪಬಹುದು.

ಹಾಗೆ ಹೂಡಿಕೆಯಲ್ಲಿ ಶಿಸ್ತು ಮತ್ತು ಸಮತೋಲನ ಎರಡೂ ಬಹಳ ಮುಖ್ಯ ಎಂದು ಠಕ್ಕರ್ ಅವರು ಹೇಳುತ್ತಾರೆ. ಹಾಗೆ ನಿಜವಾದ ಸಂಪತ್ತು ಯೋಜನೆಯೆಂದರೆ ನೀವು ನಿಮ್ಮ ಜೀವನದಲ್ಲಿ ಸಾಕಷ್ಟು ಮಾಹಿತಿಗಳ ಬಗ್ಗೆ ತಿಳಿಯುವುದು, ನೀವು ನಿಮ್ಮ ಜೀವನದ ಆನಂದಗಳನ್ನ ಅನುಭವಿಸುವುದು ಎಂದು ಅವರು ಹೇಳುತ್ತಾರೆ.

ನೀವು ಮೊದಲು ಕೋಟಿ ಸಂಪಾದನೆ ಮಾಡುವುದು ಹೇಗೆ?

ನೀವು ಕೋಟಿ ಸಂಪಾದನೆ ಮಾಡಲು ನೀವು ಈ ಹೂಡಿಕೆಯ ಬಗ್ಗೆ ಒಂದಿಷ್ಟು ಮಾಹಿತಿಯನ್ನ ತಿಳಿದಿರಬೇಕಾಗುತ್ತದೆ. ನಿಮ್ಮ 1 ಕೋಟಿ ಗಳಿಕೆಗಾಗಿ ಸ್ಥಿರ ಹೂಡಿಕೆ ಮತ್ತು ದೀರ್ಘಾವದಿಯ ದೃಷ್ಟಿಕೋನದ ಅಗತ್ಯ ಇರುತ್ತದೆ. ಭಟ್ನಾಗರ್ ಪ್ರಕಾರ, ನೀವು 25 ವರ್ಷ ಇರುವಾಗ ನೀವು ತಿಂಗಳಿಗೆ 20,000 ರೂಗಳಂತೆ ಹೂಡಿಕೆ ಮಾಡಲು ಆರಂಭಿಸಿದರೆ ನೀವು ನಿಮ್ಮ 40ನೇ ವಯಸ್ಸಿನಲ್ಲಿ ನೀವು 1 ಕೋಟಿಯನ್ನ ಗಳಿಕೆ ಮಾಡಬಹುದು.

ಠಕ್ಕರ್ ಅವರ ಪ್ರಕಾರ, 12% ನಂತರದ ತೆರಿಗೆ ರಿಟರ್ನ್ ಅನ್ನು ಆಧಾರದ ಮೇಲೆ, ನೀಮ್ಮ ಕೋಟಿ ಸಂಪಾದನೆಯನ್ನ ತಲುಪಲು ಸರಿಸುಮಾರು 15 ವರ್ಷಗಳು ಬೇಕಾಗಬಹುದು ಎಂದು ಅವರು ಹೇಳುತ್ತಾರೆ.

ಅಲ್ಲದೆ ನಿಮ್ಮ ಆದಾಯ ಹೆಚ್ಚಾದಂತೆ ನೀವು ನಿಮ್ಮ ಹೂಡಿಕೆಯ ಮೊತ್ತವನ್ನ ಕೂಡಹೆಚ್ಚಿಸುವುದು ಮುಖ್ಯ ಎಂದು ಇಬ್ಬರು ತಜ್ಞರು ಹೇಳುತ್ತಾರೆ. ಇದು ಹಣದುಬ್ಬರದಂತಹ ಪ್ರಭಾವವನ್ನು ಎದುರಿಸಲು ನಿಮಗೆ ಸಹಾಯ ಮಾಡುತ್ತದೆ. ಹಾಗೆ ನಿಮ್ಮ ಹಣಕಾಸಿನ ಗುರಿಗಳೊಂದಿಗೆ ನಿಮ್ಮ ಸಂಪತ್ತು ಗಳಿಸುವ ಪ್ರಯಾಣವು ಕೂಡ ವೇಗವಾಗಿ ಸಾಗುತ್ತದೆ ಎಂದು ಅವರು ಅಭಿಪ್ರಾಯ ಪಡುತ್ತಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+