ಹೊಸ ವರ್ಷಕ್ಕೆ ಈ ದೇಶದಲ್ಲಿ ಇ-ಸಿಗರೇಟ್ ನಿಷೇಧ, ಭಾರತದಲ್ಲಿ ಸಿಗರೇಟ್ ಆರ್ಥಿಕತೆ ಹೇಗಿದೆ ತಿಳಿಯಿರಿ.

ಹೊಸ ವರ್ಷದ ಆಗಮನಕ್ಕೂ ಮುನ್ನ ಸಾಕಷ್ಟು ಬದಲಾವಣೆಗಳನ್ನ ನಾವೀಗಾಗಲೇ ಕಾಣಬಹುದು. ಹಾಗೆ ಇಲ್ಲೊಂದು ದೇಶ ಹೊಸ ವರ್ಷದಿಂದ ಬಿಸಾಡಬಹುದಾದ ಇ-ಸಿಗರೇಟ್‌ ಅನ್ನು ನಿಷೇಧಿಸಲಿದೆ. ಹೌದು ಬೆಲ್ಜಿಯಂ ಸರ್ಕಾರದ ಹೊರಡಿಸಿದ ಪ್ರಕಟಣೆಯ ಪ್ರಕಾರ 2025ರಿಂದ ಈ ದೇಶದಲ್ಲಿ ಇ-ಸಿಗರೇಟ್‌ಗಳನ್ನ ನಿಷೇದಿಸಲಾಗಿದೆ. ಆರೋಗ್ಯ ಮತ್ತು ಸ್ವಚ್ಛತೆಯ ದೃಷ್ಟಿಯಿಂದ ಬೆಲ್ಜಿಯಂ ದೇಶ ಈ ನಿರ್ಧಾರವನ್ನ ತೆಗೆದುಕೊಂಡಿದೆ.

ಇನ್ನು ಬೆಲ್ಜಿಯಂ ಸರ್ಕಾರ ಹೇಳಿರುವ ಪ್ರಕಾರ ಮುಂಬರುವ 2025ರಲ್ಲಿ ಇ-ಸಿಗರೇಟ್‌ಗಳನ್ನು ಮಾರಾಟ ಮಾಡಲಾಗುವುದಿಲ್ಲ. ಸಂಪೂರ್ಣವಾಗಿ ದೇಶದಲ್ಲಿ ಇ-ಸಿಗರೇಟ್‌ಗಳನ್ನ ನಿಷೇಧ ಮಾಡಿದೆ. ಅಲ್ಲದೆ ಹೊಸ ವರ್ಷದಲ್ಲಿ ಬೆಲ್ಜಿಯಂನಲ್ಲಿ ಹೊರಡಿಸಲಾದ ಮುಖ್ಯವಾದ ಪ್ರಕಟಣೆ ಎಂದೇ ಹೇಳಬಹುದು. ಹಾಗಾದ್ರೆ ಇ-ಸಿಗರೇಟ್‌ ಎಂದರೇನು. ಭಾರತದಲ್ಲಿ ಸಿಗರೇಟ್‌ ಆರ್ಥಿಕತೆ ಬಗ್ಗೆ ಇಲ್ಲಿ ತಿಳಿಯಿರಿ.

ಹೊಸ ವರ್ಷಕ್ಕೆ ಈ ದೇಶದಲ್ಲಿ ಇ-ಸಿಗರೇಟ್ ನಿಷೇಧ!

ಇ-ಸಿಗರೇಟ್‌ ಎಂದರೇನು?

ಎಲೆಕ್ಟ್ರಾನಿಕ್‌ ಸಿಗರೇಟ್‌ ಅಥವಾ ಇ-ಸಿಗರೇಟ್‌ ಸಾಮಾನ್ಯವಾಗಿ ಎಲ್ಲಾ ಸಿಗರೇಟ್‌ಗಳಿಗಿಂತ ಭಿನ್ನವಾಗಿರುತ್ತವೆ. ಇವುಗಳನ್ನು ವೇಪ್‌ಗಳು ಎಂದೂ ಕರೆಯುತ್ತಾರೆ. ಇವು ಬ್ಯಾಟರಿ-ಚಾಲಿತ ಸಾಧನಗಳಾಗಿವೆ, ಅದು ಇನ್ಹಲೇಷನ್‌ಗಾಗಿ ದ್ರವವನ್ನು (ಇ-ದ್ರವ ಅಥವಾ ವೇಪ್ ಜ್ಯೂಸ್) ಆವಿಯಾಗಿ ಪರಿವರ್ತಿಸುತ್ತದೆ. ಇ-ದ್ರವವು ವಿಶಿಷ್ಟವಾಗಿ ನಿಕೋಟಿನ್ ಮತ್ತು ಇತರ ರಾಸಾಯನಿಕಗಳನ್ನು ಒಳಗೊಂಡಿರುತ್ತದೆ ಮತ್ತು ಸಾಂಪ್ರದಾಯಿಕ ಧೂಮಪಾನಕ್ಕೆ ಸುರಕ್ಷಿತ ಪರ್ಯಾಯವಾಗಿ ಮಾರಾಟ ಮಾಡಲಾಗುತ್ತದೆ.

ಇ-ಸಿಗರೇಟ್‌ಗಳು ಸಾಮಾನ್ಯವಾಗಿ ದಹಿಸುವ ಸಿಗರೇಟ್‌ಗಳಿಗಿಂತ ಕಡಿಮೆ ಹಾನಿಕಾರಕವೆಂದು ಪ್ರಚಾರ ಮಾಡಲಾಗಿದ್ದರೂ, ಅವು ಕೂಡ ಆರೋಗ್ಯದ ಅಪಾಯಗಳನ್ನು ಉಂಟುಮಾಡುತ್ತವೆ. ಹೆಚ್ಚು ವ್ಯಸನಕಾರಿ ವಸ್ತುವಾದ ನಿಕೋಟಿನ್ ಹೆಚ್ಚಿನ ಇ-ಸಿಗರೇಟ್ ಉತ್ಪನ್ನಗಳಲ್ಲಿ ಇರುತ್ತದೆ ಮತ್ತು ದೀರ್ಘಾವಧಿಯ ಬಳಕೆಯು ಶ್ವಾಸಕೋಶ ಮತ್ತು ಹೃದಯ ಸಮಸ್ಯೆಗಳಿಗೆ ಕಾರಣವಾಗಬಹುದು. ಇದಲ್ಲದೆ, ಇ-ದ್ರವಗಳಲ್ಲಿ ಬಳಸಲಾಗುವ ಇತರ ರಾಸಾಯನಿಕಗಳ ಸುರಕ್ಷತೆಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲಾಗಿಲ್ಲ, ಇದು ಆರೋಗ್ಯದ ಮೇಲೆ ಅವುಗಳ ಸಂಭಾವ್ಯ ಪ್ರಭಾವದ ಬಗ್ಗೆ ಕಳವಳವನ್ನು ಉಂಟುಮಾಡುತ್ತದೆ.

ಬೆಲ್ಜಿಯಂನಲ್ಲಿ ಇ-ಸಿಗರೇಟ್‌ ನಿಷೇಧಿಸಲು ಕಾರಣವೇನು?

ಬೆಲ್ಜಿಯಂ ದೇಶದಲ್ಲಿ 1, 2025ರಿಂದ ಇ-ಸಿಗರೇಟ್‌ಗಳನ್ನ ನಿಷೇದಿಸಲು ಆ ದೇಶದ ಸರ್ಕಾರ ಮುಂದಾಗಿದೆ. ಆರೋಗ್ಯ ಮತ್ತು ಪರಿಸರದ ಸುರಕ್ಷತೆಯನ್ನು ಪರಿಗಣಿಸಿ ಇದನ್ನು ನಿಷೇಧಿಸಲಾಗಿದೆ. ಅಲ್ಲದೆ ಇ-ಸಿಗರೇಟ್‌ಗಳು ಜನರನ್ನ ಧೂಮಪಾನ ಚಟಕ್ಕೆ ಬೀಳುವಂತೆ ಮಾಡುತ್ತದೆ. ಹೀಗಾಗಿ ಸರ್ಕಾರ ಇ-ಸಿಗರೇಟ್‌ಗಳನ್ನ ನಿಷೇಧಿಸಲು ಮುಂದಾಗಿದೆ. ಇದರಲ್ಲಿ ನಿಕೋಟಿನ್ ಇರೋದ್ರಿಂದ ಆರೋಗ್ಯ ಮತ್ತು ಪರಿಸರ ಎರಡಕ್ಕೂ ಹಾನಿ ಮಾಡುತ್ತದೆ. ಇ-ಸಿಗರೇಟ್‌ಗಳಲ್ಲಿ ಬಳಸುವ ಪ್ಲಾಸ್ಟಿಕ್‌ಗಳು, ಬ್ಯಾಟರಿಗಳು ಮತ್ತು ಸರ್ಕ್ಯೂಟ್‌ಗಳು ಪರಿಸರದ ಸ್ವಚ್ಚತೆಯನ್ನ ಕೂಡ ಹಾಳು ಮಾಡುತ್ತದೆ.

ಭಾರತದಲ್ಲಿ ಇ-ಸಿಗರೆಟ್‌ಗಳು

ಭಾರತದಲ್ಲಿ ಇ-ಸಿಗರೆಟ್‌ಗಳನ್ನು ಅಕ್ರಮ ಎಂದು ಘೋಷಿಸಲಾಗಿದೆ. ಅದರ ಉತ್ಪಾದನೆ, ಆಮದು, ರಫ್ತು, ಸಂಗ್ರಹಣೆ ಮತ್ತು ಮಾರಾಟವನ್ನ ಭಾರತದಲ್ಲಿ ಈಗಾಗಲೇ ನಿಷೇಧಿಸಿದೆ. ಕೆಲವು ಕಡೆ ನಿಷೇಧವಿದ್ದರೂ ಕೂಡ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಹೀಗಾಗಿ ಭಾರತ ಈ ಬಗ್ಗೆ ಸಾಖಷ್ಟು ಕ್ರಮವನ್ನ ವಹಿಸುತ್ತಿದೆ.

ಭಾರತದ ಸಿಗರೇಟ್ ಆರ್ಥಿಕತೆ ಎಷ್ಟು ದೊಡ್ಡದಾಗಿದೆ ತಿಳಿಯಿರಿ?

ಭಾರತದಲ್ಲಿ ಸಿಗರೇಟ್ ಆರ್ಥಿಕತೆ ಭಹಳ ದೊಡ್ಡದಾಗಿದೆ. ಈ ಸಿಗರೇಟ್ ಉತ್ಪಾದನೆ ಹಾಗೆ ಬಳಕೆಯಲ್ಲಿ ಕೂಡ ಭಾರತ ವಿಶ್ವದಲ್ಲೇ ಮೂರನೇ ಸ್ಥಾನವನ್ನ ಹೊಂದಿದೆ. ಅತಿದೊಡ್ಡ ಸಿಗರೇಟ್ ಉತ್ಪಾದಕ ರಾಷ್ಟ್ರಗಳಲ್ಲಿ ಒಂದಾಗಿದೆ. ಇಲ್ಲಿ ಸಿಗರೇಟ್ ಸೇವನೆ ಎಷ್ಟರಮಟ್ಟಿಗಿದೆ ಹೆಚ್ಚಿದೆ ಎಂದರೆ ಬೇಡಿಕೆಗಿಂತಲೂ ಕೂಡ ಹೆಚ್ಚು ಹೊರಗಿನಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಹಾಗೆ ಭಾರತದಲ್ಲಿ ಸಿಗರೇಟ್ ಮೇಲೆ 16% ಆಮದು ಸುಂಕವಿದೆ. ಸಿಗರೇಟಿನ ಮೇಲೆ ತುಂಬಾ ತೆರಿಗೆ ಇರುವುದರಿಂದ ೀ ತೆರಿಗೆ ಮೂಲಕ ಸರ್ಕಾರದ ಖಜಾನೆಗೆ ಸಾಕಷ್ಟು ಹಣ ಕೂಡ ಸೇರುತ್ತಿದೆ. ಡೀಸೆಲ್, ಪೆಟ್ರೋಲ್ ಮತ್ತು ಕಬ್ಬಿಣ-ಉಕ್ಕಿನ ನಂತರ ಸರ್ಕಾರ ಸಿಗರೇಟ್‌ಗಳ ಮೇಲೆ ಅತಿ ಹೆಚ್ಚು ತೆರಿಗೆ ಇದೆ. ಹಾಗೆ ಇ-ಸಿಗರೇಟ್‌ಗಳನ್ನ ನೋಡುವುದಾದ್ರೆ ಭಾರತದಲ್ಲಿ ಇ-ಸಿಗರೇಟ್‌ಗಳನ್ನ ನಿಷೇಧಿಸಲಾಗಿದೆ.

ಆದರೆ ಇ-ಸಿಗರೇಟ್‌ಗಳನ್ನ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ. ಭಾರತದಲ್ಲಿ ಇದರ ಮಾರುಕಟ್ಟೆ 1500 ಕೋಟಿ ರೂ. ಇದೆ ಎಂದು ಅಮರ್ ಉಜಾಲಾ ವರದಿ ಮಾಡಿದೆ. ಅಲ್ಲದೆ ಚೀನಾ, ಕೊರಿಯಾ, ಜಪಾನ್ ಮತ್ತು ದುಬೈನಿಂದ ಭಾರತಕ್ಕೆ ಇ-ಸಿಗರೇಟ್‌ಗಳನ್ನು ಸರಬರಾಜು ಮಾಡಲಾಗುತ್ತದೆ. ಸಿಗರೇಟ್ ಮತ್ತು ತಂಬಾಕಿನ ಮೇಲಿನ ತೆರಿಗೆಯಿಂದಾಗಿ ಸರ್ಕಾರದ ಬೊಕ್ಕಸ ಹೆಚ್ಚಿದರು ಕೂಡ ಅದು ತನ್ನದೇ ಆದ ಅನಾನುಕೂಲಗಳನ್ನು ಹೊಂದಿದೆ. ಅಲ್ಲದೆ ಇದು ಆರೋಗ್ಯದ ಮೇಲೆ ಮಾತ್ರವಲ್ಲದೆ ಆರ್ಥಿಕತೆಯ ಮೇಲೂ ಕೂಡ ಪರಿಣಾಮ ಬೀರುತ್ತದೆ.

ಆರೋಗ್ಯ ಮತ್ತು ಆರ್ಥಿಕತೆಯ ಮೇಲೆ ಹೊರೆ ಆಗಲಿದೆ 'ಸಿಗರೇಟ್‌'

ಭಾರತದಲ್ಲಿ 25.3 ಕೋಟಿ ಜನರು ಸಿಗರೇಟ್‌ ಸೇವನೆ ಮಾಡುವವರಿದ್ದಾರೆ. ವಿಶ್ವದಲ್ಲಿ ಅತಿ ಹೆಚ್ಚು ತಂಬಾಕು ಸೇವಿಸುವ ದೇಶಗಳ ಪಟ್ಟಿಯಲ್ಲಿ ಚೀನಾದ ನಂತರ ಭಾರತದ ಹೆಸರಿದೆ. ಇನ್ನು WHO ವರದಿಯ ಪ್ರಕಾರ, ಭಾರತದಲ್ಲಿ ದೂಮಪಾನ ಮಾಡುವವರು 25.3 ಕೋಟಿಹಿಂದ ಹೆಚ್ಚಿನ ಜನರು 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರೇ ಎಂದು ತಿಳಿದುಬಂದಿದೆ. ಈ ಧೂಮಪಾನ ಮತ್ತು ತಂಬಾಕು ಉತ್ಪನ್ನಗಳು ಆರ್ಥಿಕತೆಯನ್ನು ಮತ್ತಷ್ಟು ಹಾಳುಮಾಡುತ್ತಿವೆ. ಆರ್ಥಿಕತೆಯ ಹೆಚ್ಚಿನ ಪಾಲು ಇದರಿಂದ ಬರುವ ತೆರಿಗೆಯ ಮೇಲೆ ಅವಲಂಬಿತವಾಗಿದೆಯಾದರೂ, ಸಿಗರೇಟಿನಿಂದ ಉಂಟಾಗುವ ರೋಗಗಳು ಆರ್ಥಿಕತೆಯ ಮೇಲೆ ಅದಕ್ಕಿಂತ ಹೆಚ್ಚು ಹೊರೆಯನ್ನು ಹೆಚ್ಚಿಸುತ್ತವೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+