ಭಾರತ (India) ಈ ಹಿಂದಿನಿಂದಲೂ ಡಿಜಿಟಲ್ ವ್ಯವಸ್ಥೆಗೆ (Digital India) ಬಹಳಷ್ಟು ಪ್ರಾಶಸ್ತ್ಯ ನೀಡುತ್ತಿದೆ. ಪ್ರಸ್ತುತ ದೇಶದಾದ್ಯಂತ ಇ-ಪಾಸ್‌ಪೋರ್ಟ್ ವ್ಯವಸ್ಥೆ ಜಾರಿಯಲ್ಲಿದೆ. ತನ್ನ ಹೊಸ ಇ-ಪಾಸ್‌ಪೋರ್ಟ್ ವ್ಯವಸ್ಥೆಯನ್ನು ಪಾಸ್‌ಪೋರ್ಟ್ ಸೇವಾ ಕಾರ್ಯಕ್ರಮ V2.0 ಅಡಿಯಲ್ಲಿ ಸಂಪೂರ್ಣವಾಗಿ ಈಗಾಗಲೇ ಜಾರಿಗೊಳಿಸಿದೆ. ಆದ್ದರಿಂದ ಸದ್ಯ ಭಾರತದಲ್ಲಿ ಮತ್ತು ವಿದೇಶಗಳಲ್ಲಿರುವ ರಾಯಭಾರ ಕಚೇರಿಗಳಲ್ಲಿ ಸಲ್ಲಿಸುವ ಎಲ್ಲಾ ಹೊಸ ಅರ್ಜಿಗಳಿಗಾಗಿ ಅಥವಾ ತಿದ್ದುಪಡ್ಡಿಗಳಿಗೆ ಚಿಪ್ ಅಳವಡಿಸಿದ ಪಾಸ್‌ಪೋರ್ಟ್‌ಗಳನ್ನು ನೀಡಲಾಗುತ್ತಿದೆ. ಇದನ್ನೇ ಇ-ಪಾಸ್‌ಪೋರ್ಟ್ (e-Passport) ಎಂದು ಕರೆಯುತ್ತಾರೆ.

ಹೊಸ ಬದಲಾವಣೆ ಜೊತೆ ಭದ್ರತೆ!
ಈ ಬದಲಾವಣೆಯು ಡಿಜಿಟಲ್ ಭದ್ರತೆಯನ್ನು ಬಲಪಡಿಸುವುದು ಮತ್ತು ವಲಸೆ ಪರಿಶೀಲನೆಗಳನ್ನು ವೇಗಗೊಳಿಸುವುದಾಗಿದೆ. ಇದೇ ಕಾರಣದಿಂದ ಸದ್ಯ ದೇಶಾದ್ಯಂತ ಜಾರಿಗೆ ತರಲಾಗಿದೆ. ಆದರೆ, ಪ್ರಸ್ತುತ ಸಾಮಾನ್ಯ ಪಾಸ್‌ಪೋರ್ಟ್ ಹೊಂದಿರುವ ಪ್ರಯಾಣಿಕರಿಗೆ ತಕ್ಷಣಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದೆ.
ಹಾಗಿದ್ರೆ ಈಗಿರುವ ಪಾಸ್‌ಪೋರ್ಟ್‌ಗಳಿಗೆ ಏನಾಗುತ್ತದೆ?
ಇ-ಪಾಸ್‌ಪೋರ್ಟ್ ಬಂದ ತಕ್ಷಣ ಇದೀಗ ಪ್ರಸ್ತುತ ಇರುವ ಪಾಸ್‌ಪೋರ್ಟ್ ಏನ್ ಮಾಡ್ಬೇಕು ಅನ್ನೋದು ಬಳಕೆದಾರರಿಗೆ ಪ್ರಶ್ನೆಯಾಗಿದೆ. ಆದರೆ ಈಗಿರುವ ಪಾಸ್‌ಪೋರ್ಟ್‌ಗಳು ಅವುಗಳ ಮುಕ್ತಾಯ ದಿನಾಂಕದವರೆಗೆ ಮಾನ್ಯವಾಗಿರುತ್ತವೆ ಎಂದು ವರದಿಯಾಗಿದೆ. ಅಂದರೆ ನಿಮ್ಮ ಪಾಸ್‌ಪೋರ್ಟ್ ಹಾನಿಗೊಳಗಾಗಿದ್ದರೆ, ಪುಟಗಳು ಮುಗಿದಿದ್ದರೆ ಅಥವಾ ನವೀಕರಣದ ಅವಧಿ ಬರುತ್ತಿದ್ದರೆ ಬದಲಾವಣೆ ಮಾಡುವುದು ಉತ್ತಮ. ಇಲ್ಲದಿದ್ರೆ ಅವುಗಳನ್ನು ಬದಲಾಯಿಸುವ ಅಗತ್ಯವಿಲ್ಲ.
ಆದ್ದರಿಂದ ಇನ್ಮೇಲೆ ಯಾರಾದರೂ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದರೆ, ಭಾರತದಲ್ಲಿ ಅಥವಾ ವಿದೇಶದಲ್ಲಿ ಅರ್ಜಿ ಸಲ್ಲಿಸಿದ್ದರೂ, ಚಿಪ್-ಅಳವಡಿಸಿದ ಇ-ಪಾಸ್‌ಪೋರ್ಟ್ ಅನ್ನೇ ಪಡೆಯುತ್ತಾರೆ.
PSP V2.0 ಮತ್ತು ವಿದೇಶಗಳಲ್ಲಿರುವ ರಾಯಭಾರ ಕಚೇರಿಗಳಿಗಾಗಿ ಜಾಗತಿಕ ಪಾಸ್‌ಪೋರ್ಟ್ ಸೇವಾ ಕಾರ್ಯಕ್ರಮದ ಅಡಿಯಲ್ಲಿ, ಪ್ರತಿ ಹೊಸ ಅಥವಾ ನವೀಕರಿಸಿದ ಪಾಸ್‌ಪೋರ್ಟ್ ಅನ್ನು ಇ-ಪಾಸ್‌ಪೋರ್ಟ್ ಆಗಿ ಬದಲಾಯಿಸಲಾಗುತ್ತಿದೆ. ಆದ್ದರಿಂದ ಹೊಸ ಪಾಸ್‌ಪೋರ್ಟ್‌ಗೆ ಅರ್ಜಿದಾರರು ಯಾವುದೇ ಪ್ರತ್ಯೇಕ ಫಾರ್ಮ್‌ಗಳನ್ನು ಭರ್ತಿ ಮಾಡುವ ಅಥವಾ ಅಪ್‌ಗ್ರೇಡ್ ಮಾಡಿದ ದಾಖಲೆಗಳನ್ನು ಆಯ್ಕೆ ಮಾಡುವ ಅಗತ್ಯವಿಲ್ಲ, ಏಕೆಂದರೆ ಈ ಬದಲಾವಣೆಯು ಎಲ್ಲಾ ಪಾಸ್‌ಪೋರ್ಟ್ ಕೇಂದ್ರಗಳು ಮತ್ತು ರಾಯಭಾರ ಕಚೇರಿಗಳಲ್ಲಿ ಸ್ವಯಂಚಾಲಿತವಾಗಿ ನಡೆಯುತ್ತಿರುತ್ತದೆ.
ಇನ್ನು ಇ-ಪಾಸ್‌ಪೋರ್ಟ್ ಮಾತ್ರವಲ್ಲದೇ, ವೆಬ್‌ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್‌ನಲ್ಲೂ ಭಾರೀ ಬದಲಾವಣೆಯಾಗಿದೆ. ಇದು ಸ್ವಯಂ-ಭರ್ತಿ ಮಾಡುವ ಫಾರ್ಮ್‌ಗಳು, ಸುಲಭವಾಗಿ ದಾಖಲೆಗಳನ್ನು ಅಪ್‌ಲೋಡ್ ಮಾಡುವ ಆಯ್ಕೆಗಳು, ಯುಪಿಐ ಮತ್ತು ಕ್ಯೂಆರ್-ಕೋಡ್ ಪೇಮೆಂಟ್‌ಗಳೂ ಹಾಗೂ ಸಹಾಯಕ್ಕಾಗಿ ಎಐ ಚಾಟ್ ಮತ್ತು ವಾಯ್ಸ್ ಬಾಟ್‌ಗಳನ್ನು ಸಹ ಒಳಗೊಂಡಿದೆ.
ಇ-ಪಾಸ್‌ಪೋರ್ಟ್‌ನ ಲಕ್ಷಣಗಳು:
ಇ-ಪಾಸ್‌ಪೋರ್ಟ್ ನೋಡಲು ಸದ್ಯ ಇರುವ ಪಾಸ್‌ಪೋರ್ಟ್ ಪುಸ್ತಕದಂತೆಯೇ ಕಾಣುತ್ತದೆ, ಅದರ ಮುಖಪುಟದಲ್ಲಿ ಸಣ್ಣದಾಗಿ ಗೋಲ್ಡ್ ಬಣ್ಣದಲ್ಲಿ ಚಿಹ್ನೆಯೊಂದು ಇರುತ್ತದೆ. ಇದು ಎಂಬೆಡೆಡ್ RFID ಚಿಪ್ ಮತ್ತು ಆಂಟೆನಾವನ್ನು ಹೊಂದಿರುತ್ತದೆ, ಇದು ಪಾಸ್‌ಪೋರ್ಟ್‌ನಲ್ಲಿ ಮುದ್ರಿತವಾಗಿರುವ ವೈಯಕ್ತಿಕ ಮತ್ತು ಬಯೋಮೆಟ್ರಿಕ್ ವಿವರಗಳನ್ನು ನೀಡುತ್ತದೆ.
ಆದ್ದರಿಂದ ಇನ್ಮೇಲೆ ನಕಲಿ ಪಾಸ್‌ಪೋರ್ಟ್ ಆಗಲಿ, ಐಡಿ ವಂಚನೆಯನ್ನು ತಡೆಯಲು ಈ ಪಾಸ್‌ಪೋರ್ಟ್ ಸಹಕಾರಿಯಾಗಲಿದೆ. ಹೊಸದಾಗಿ ಮಾಡಲಿಚ್ಛಿಸುವವರಿಗೆ ಇ-ಪಾಸ್‌ಪೋರ್ಟ್ ಇನ್ಮೇಲೆ ಕೈಸೇರಲಿದೆ.


Click it and Unblock the Notifications