ಸದ್ಯ ದೇಶದಲ್ಲಿ ಜಿಎಸ್‌ಟಿ ಸಂಖ್ಯೆ ಪಡೆಯುವವರ ಸಂಖ್ಯೆಯಲ್ಲಿ ಏರಿಕೆ ದಾಖಲಾಗುತ್ತಲೇ ಇದೆ. ಆದರೆ ಆರಂಭದಲ್ಲಿ ಜಿಎಸ್‌ಟಿ ಸಂಖ್ಯೆಯನ್ನು ಪಡೆಯವುದು ದೊಡ್ಡ ಬೆಟ್ಟವೇರಿದಂತೆ ಕಂಡುಬಂದರೂ ಅದು ಅಷ್ಟು ಕ್ಲಿಷ್ಟಕರವಾಗಿ ಇಲ್ಲವೆಂಬುದು ಬಹುತೇಕರಿಗೆ ಗೊತ್ತಿರದ ವಿಚಾರ. ಇನ್ನು ಉತ್ತಮ ಸಂಗತಿ ಎಂದರೆ ಜಿಎಸ್‌ಟಿ ಸಂಖ್ಯೆಯನ್ನು ನಾವು ಸಂಪೂರ್ಣವಾಗಿ ಆನ್‌ಲೈನ್ ಮೂಲಕ ಹಾಗೂ ಸರಳ ನೇರ ಪ್ರಕ್ರಿಯೆಯ ಮೂಲಕ ಪಡೆದುಕೊಳ್ಳಬಹುದು. ಸದ್ಯ ನಾವಿಲ್ಲಿ ಅದೇ ರೀತಿಯ ಸರಳ ಹಂತಗಳಲ್ಲಿ GST ನೋಂದಣಿ ಪ್ರಕ್ರಿಯೆಯನ್ನು ಹೇಗೆ ಮಾಡಬಹುದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ. ಈ ಸರಳ ಪ್ರಕ್ರಿಯೆಯನ್ನು ನಿರ್ವಹಿಸಿದರೆ ಯಾವ ರೀತಿಯಲ್ಲೂ ಕಾರ್ಯ ಕ್ಲಿಷ್ಟಕರವಾಗಿ ಕಂಡುಬರುವುದಿಲ್ಲ.
ಏನಿದು ಜಿಎಸ್‌ಟಿ ಸಂಖ್ಯೆ?
ಜಿಎಸ್‌ಟಿ ಸಂಖ್ಯೆಯನ್ನು ಹೇಗೆ ಪಡೆದುಕೊಳ್ಳಬಹುದು ಎಂಬ ಬಗ್ಗೆ ತಿಳಿಯುವುದಕ್ಕಿಂತ ಜಿಎಸ್‌ಟಿ ಎಂಬುದರ ಕುರಿತು ಜ್ಞಾನ ಹೊಂದಿರುವುದು ಕೂಡ ಅತ್ಯಗತ್ಯ. ಭಾರತ ಸರಕಾರ ನಿಗದಿಪಡಿಸಿದ ಮಿತಿಯನ್ನು ಮೀರಿದ ವ್ಯಾಪಾರ ವಹಿವಾಟು ನಡೆಸುತ್ತಿದ್ದರೆ ಸರಕು ಮತ್ತು ಸೇವಾ ತೆರಿಗೆಗೆ (GST) ನೋಂದಾಯಿಸಲು ಮತ್ತು ವಿಶಿಷ್ಟವಾದ ಜಿಎಸ್‌ಟಿ ಗುರುತಿನ ಸಂಖ್ಯೆಯನ್ನು (GSTIN) ಪಡೆಯುವುದು ಕಡ್ಡಾಯವಾಗಿದೆ. ಆದರೆ ಆರಂಭದಲ್ಲಿ ಜಿಎಸ್‌ಟಿ ಗುರುತಿನ ಸಂಖ್ಯೆ ಪಡೆಯುವ ಪ್ರಕ್ರಿಯೆಯು ಭಾರೀ ದೊಡ್ಡ ಕೆಲಸವಾಗಿ ಕಂಡುಬಂದರೂ ಸರಳ ವಿಧಾನಗಳ ಮೂಲಕ ನಾವು ಜಿಎಸ್‌ಟಿ ಸಂಖ್ಯೆಗೆ ಅರ್ಜಿ ಸಲ್ಲಿಸಬಹುದು.

ಹಂತ ಹಂತವಾಗಿ ತಿಳಿದುಕೊಳ್ಳೋಣ.
ಮೊದಲನೇ ಹಂತ:
ಅಧಿಕೃತ ಜಿಎಸ್‌ಟಿ ವೆಬ್‌ಸೈಟ್‌ಗೆ ಭೇಟಿ
ಇನ್ನು ಜಿಎಸ್‌ಟಿ ಸಂಖ್ಯೆ ಪಡೆಯುವ ವಿಧಾನಗಳನ್ನು ನಾವು ಹಂತ ಹಂತವಾಗಿ ತಿಳಿದುಕೊಳ್ಳುವುದು ಅತೀ ಮುಖ್ಯವಾಗಿದೆ. ಇನ್ನು ಜಿಎಸ್‌ಟಿ ಸಂಖ್ಯೆಯನ್ನು ಪಡೆಯುವ ಮೊದಲ ಹಂತದಲ್ಲಿ ಜಿಎಸ್‌ಟಿಗೆ ಸಂಬಂಧಪಟ್ಟ ನೋಂದಣಿ, ಐಟಿ ರಿಟರ್ನ್ಸ್ ಸಲ್ಲಿಸುವುದು ಮತ್ತು ಪಾವತಿಗಳನ್ನು ಟ್ರ್ಯಾಕ್ ಮಾಡುವುದು ಸೇರಿದಂತೆ ಎಲ್ಲಾ ಜಿಎಸ್‌ಟಿ ಸಂಬಂಧಿತ ಕಾರ್ಯವಿಧಾನಗಳು ನಡೆಯುವ www.gst.gov.in. ಸರಕಾರಿ ಪೋರ್ಟಲ್‌ಗೆ ಹೋಗಬೇಕಿದೆ.
ಎರಡನೇ ಹಂತ:
ಈ ಪೋರ್ಟಲ್‌ನಲ್ಲಿ ʻServicesʼ ವಿಭಾಗದ ಟ್ಯಾಬ್‌ನ ಕೆಳಭಾಗದಲ್ಲಿ "Registration" ವಿಭಾಗವನ್ನು ಆಯ್ಕೆ ಮಾಡಿದ ಬಳಿಕ "New Registrationʼಗೆ ಕ್ಲಿಕ್ ಮಾಡಬೇಕಿದೆ. ಈ ಹಂತದಲ್ಲಿ ಕೆಳಕಂಡ ಹಲವು ಮೂಲಭೂತ ವಿವರಗಳನ್ನು ಭರ್ತಿ ಮಾಡುವ ಅಗತ್ಯವಿದೆ.
* ಪ್ಯಾನ್ ಕಾರ್ಡ್‌ನಲ್ಲಿರುವಂತೆ ಉದ್ಯಮದ ಕಾನೂನು ಹೆಸರು
* ವ್ಯಾಪಾರ ಅಥವಾ ಮಾಲಕನ ಪ್ಯಾನ್
* ಇಮೇಲ್ ವಿಳಾಸ ಮತ್ತು ಮೊಬೈಲ್ ಸಂಖ್ಯೆ
* ವ್ಯಾಪಾರದ ಸ್ಥಳ
ಇನ್ನು ಮೇಲೆ ಕಾಣಿಸಿಕೊಂಡ ವಿವರಗಳನ್ನು ಸಲ್ಲಿಸಿದ ಬಳಿಕ ನಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಪರಿಶೀಲನೆಯ ಸಲುವಾಗಿ ನಮ್ಮ ಇಮೇಲ್‌ಗೆ OTP ಸಂದೇಶ ಬರುತ್ತದೆ.
ಮೂರನೇ ಹಂತ:
ತಾತ್ಕಾಲಿಕ ಉಲ್ಲೇಖ ಸಂಖ್ಯೆ (TRN) ಸಲ್ಲಿಸುವುದು
*ಒಂದು ಬಾರಿ ನಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಅನ್ನು ಪರಿಶೀಲಿಸಿದ ಬಳಿಕ ಜಿಎಸ್‌ಟಿ ಪೋರ್ಟಲ್ ತಾತ್ಕಾಲಿಕ ಉಲ್ಲೇಖ ಸಂಖ್ಯೆಯನ್ನು (TRN) ನೀಡುತ್ತದೆ. ನಾವು ಈ TRN ಸಂಖ್ಯೆಯನ್ನು ಪೋರ್ಟಲ್‌ಗೆ ಮರಳಿ ಲಾಗ್ ಇನ್ ಮಾಡಲು ಮತ್ತು ನೋಂದಣಿ ಪ್ರಕ್ರಿಯೆಯೊಂದಿಗೆ ಮುಂದುವರಿಯಲು ಬಳಸಬೇಕಿದೆ.
*ಇನ್ನು TRN ಅನ್ನು ನಮೂದಿಸಿದ ಬಳಿಕ ನೋಂದಣಿ ಫಾರ್ಮ್ ಪಡೆಯಲು ಅನುಮತಿಸುವ ಭದ್ರತಾ ಉದ್ದೇಶಗಳಿಗಾಗಿ ಮತ್ತೊಂದು OTP ಪಡೆದುಕೊಳ್ಳುತ್ತೇವೆ.
ನಾಲ್ಕನೇ ಹಂತ
ಅರ್ಜಿ ನಮೂನೆಯನ್ನು ಭರ್ತಿ ಮಾಡುವುದು (ಭಾಗ ಎರಡು)
ಇನ್ನು ನಾಲ್ಕನೇ ಹಂತದಲ್ಲಿ ಅರ್ಜಿ ನಮೂನೆಯನ್ನು ಭರ್ತಿ ಮಾಡುವುದಾಗಿದೆ. ಈ ಹಂತದಲ್ಲಿ ನಾವು ಅಪ್ಲಿಕೇಶನ್‌ನ ಎರಡನೇ ಭಾಗವನ್ನು ಪೂರ್ಣಗೊಳಿಸಬೇಕಾಗುತ್ತದೆ. ಇಲ್ಲಿ ನಾವು ಅರಂಭಿಸುವ ವ್ಯಾಪಾರದ ಕುರಿತು ಹೆಚ್ಚು ವಿವರವಾದ ಮಾಹಿತಿ ನೀಡುವುದು ಅಗತ್ಯವಿದೆ. ಇಲ್ಲಿ ನಾವು ಈ ಕೆಳಕಂಡ ವಿಭಾಗಗಳನ್ನು ಭರ್ತಿ ಮಾಡಬೇಕಿದೆ.
ವ್ಯಾಪಾರದ ವಿವರಗಳು: ಕಾನೂನು ಹೆಸರು, PAN, ವ್ಯಾಪಾರದ ಪ್ರಮುಖ ಸ್ಥಳ ಮತ್ತು ಯಾವುದೇ ಹೆಚ್ಚುವರಿ ವ್ಯಾಪಾರ ಸ್ಥಳಗಳು.
ಪಾಲುದಾರರ ವಿವರಗಳು: PAN, ಸಂಪರ್ಕಕ್ಕೆ ಸಂಬಂಧಿಸಿದ ವಿವರಗಳು, ವ್ಯಾಪಾರ ಮಾಲಕರ ಹೆಸರು.
ಅಧಿಕೃತ ಹಸ್ತಾಕ್ಷರ: ವ್ಯವಹಾರದ ಪರವಾಗಿ GST ಅರ್ಜಿಗೆ ಸಹಿ ಮಾಡಲು ಮತ್ತು ಸಲ್ಲಿಸಲು ಅಧಿಕಾರ ಹೊಂದಿರುವ ವ್ಯಕ್ತಿಯ ಬಗ್ಗೆ ಮಾಹಿತಿ.
ಬ್ಯಾಂಕ್ ವಿವರಗಳು: ಮರುಪಾವತಿ ಅಥವಾ ಯಾವುದೇ GST-ಸಂಬಂಧಿತ ವಹಿವಾಟುಗಳಿಗಾಗಿ ವ್ಯವಹಾರದ ಬ್ಯಾಂಕ್ ಖಾತೆಯ ಮಾಹಿತಿ ನೀಡಬೇಕಿದೆ.
ವ್ಯಾಪಾರದ ಪ್ರಮುಖ ಸ್ಥಳ: ಬಾಡಿಗೆ ಒಪ್ಪಂದ, ವಿದ್ಯುತ್ ಬಿಲ್ ಅಥವಾ ಆಸ್ತಿ ತೆರಿಗೆ ರಶೀದಿಯಂತಹ ದಾಖಲೆಗಳನ್ನು ವಿಳಾಸದ ಪುರಾವೆಯಾಗಿ ಅಪ್‌ಲೋಡ್ ಮಾಡಬೇಕು.
ಈ ಹಂತದಲ್ಲಿ ನಿಯಮಿತ ತೆರಿಗೆದಾರ, ಸಂಯೋಜನೆ ಯೋಜನೆ ಅಥವಾ ಕ್ಯಾಶುಯಲ್ ತೆರಿಗೆದಾರ ಮುಂತಾದ ನಮಗೆ ಅಗತ್ಯವಿರುವ ನೋಂದಣಿ ಪ್ರಕಾರವನ್ನು ಸಹ ಆಯ್ಕೆ ಮಾಡಬೇಕಾಗುತ್ತದೆ.
ಐದನೇ ಹಂತ:
ಅಗತ್ಯವಿರುವ ದಾಖಲೆಗಳನ್ನು ಅಪ್‌ಲೋಡ್ ಮಾಡುವುದು.
ಇನ್ನು ಐದನೇ ಹಂತದಲ್ಲಿ ಪರಿಶೀಲನೆಗಾಗಿ ನಾವು ಇತರೆ ದಾಖಲೆಗಳನ್ನು ಕೂಡ ಅಪ್‌ಲೋಡ್ ಮಾಡಬೇಕಾಗುತ್ತದೆ. ಅವುಗಳು ಈ ಕೆಳಗಿನಂತಿವೆ.
*ವ್ಯಾಪಾರ ಅಥವಾ ಮಾಲೀಕನ PAN ಕಾರ್ಡ್
*ಅಧಿಕೃತ ಸಹಿ ಹೊಂದಿರುವ ಆಧಾರ್ ಕಾರ್ಡ್
*ವ್ಯಾಪಾರದ ವಿಳಾಸದ ಪುರಾವೆ (ಬಾಡಿಗೆ ಒಪ್ಪಂದ, ವಿದ್ಯುತ್ ಬಿಲ್ ಮುಂತಾದವುಗಳು ಸೇರಿವೆ)
*ಬ್ಯಾಂಕ್ ಸ್ಟೇಟ್‌ಮೆಂಟ್ ಅಥವಾ ರದ್ದಾದ ಚೆಕ್
*ಒಂದು ವೇಳೆ ಅನ್ವಯಿಸಿದರೆ ವ್ಯಾಪಾರ ನೋಂದಣಿ ಪ್ರಮಾಣಪತ್ರ
*ಡಿಜಿಟಲ್ ಸಹಿ ಪ್ರಮಾಣಪತ್ರ (ಕಂಪೆನಿಗಳು ಮತ್ತು LLP ಗಳಿಗೆ)
ಈ ಹಂತದಲ್ಲಿ ಪೋರ್ಟಲ್‌ನಲ್ಲಿ ನಿರ್ದಿಷ್ಟಪಡಿಸಿದಂತೆ ಎಲ್ಲಾ ದಾಖಲೆಗಳು ಅಗತ್ಯವಿರುವ ಸ್ವರೂಪ ಮತ್ತು ಗಾತ್ರದಲ್ಲಿವೆ ಎಂದು ಖಚಿತಪಡಿಸಿಕೊಳ್ಳಬೇಕಿದೆ.
ಆರನೇ ಹಂತ: ಪರಿಶೀಲನೆ ಮತ್ತು ಸಲ್ಲಿಕೆ
ದಾಖಲೆಗಳನ್ನು ಅಪ್‌ಲೋಡ್ ಮಾಡಿದ ನಂತರ ಅಂತಿಮ ಹಂತದಲ್ಲಿ ಅಪ್ಲಿಕೇಶನ್ ಅನ್ನು ಪರಿಶೀಲಿಸುವ ಪ್ರಕ್ರಿಯೆ ನಡೆಯುತ್ತದೆ.
*ನಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಇಮೇಲ್‌ಗೆ ಎಲೆಕ್ಟ್ರಾನಿಕ್ ಪರಿಶೀಲನೆ ಕೋಡ್ (EVC) ಕಳುಹಿಸಲಾಗುತ್ತದೆ.
*ಡಿಜಿಟಲ್ ಸಿಗ್ನೇಚರ್ ಸರ್ಟಿಫಿಕೇಟ್ (DSC) (LLP ಮತ್ತು ಕಂಪೆನಿಗಳಿಗೆ ಇದು ಕಡ್ಡಾಯವಾಗಿದೆ)
ಇನ್ನು ಎಲ್ಲಾ ದಾಖಲೆಗಳನ್ನು ಸಲ್ಲಿಸಿದ ಬಳಿಕ ನಮಗೆ ಸ್ವೀಕೃತಿ ಸಂಖ್ಯೆ (acknowledgment number) ಲಭಿಸುತ್ತದೆ. ಇದರನ್ವಯ ನಾವು ಸಲ್ಲಿಸಿದ ಅರ್ಜಿ ಸಲ್ಲಿಕೆಯು ದಾಖಲಾಗಿದೆ ಎಂದು ಅರ್ಥವಾಗಿದೆ. ಈ ಹಂತದ ಬಳಿಕ ಕೆಲವೇ ದಿನಗಳಲ್ಲಿ ನಮಗೆ ಇಮೇಲ್ ಮೂಲಕ GSTIN ಮತ್ತು ನೋಂದಣಿ ಪ್ರಮಾಣಪತ್ರ ಲಭಿಸುತ್ತದೆ.
ಇನ್ನು ಭಾರತದಲ್ಲಿ GST ಸಂಖ್ಯೆಗಾಗಿ ನೋಂದಾಯಿಸಿಕೊಳ್ಳುವುದು ಹಿಂದಿಗಿಂತಲೂ ಸದ್ಯ ಸುಲಭವಾದ ಕೆಲಸವಾಗಿದೆ. ಸುವ್ಯವಸ್ಥಿತ ಆನ್‌ಲೈನ್ ಪ್ರಕ್ರಿಯೆಯಿಂದಾಗಿ ಇದು ಸಾಧ್ಯವಾಗಿದೆ. ಇನ್ನು ಜಿಎಸ್‌ಟಿ ಸಂಖ್ಯೆ ಪಡೆಯುವ ವಿಚಾರದಲ್ಲಿ ಯಾವುದೇ ವಿಳಂಬವನ್ನು ತಪ್ಪಿಸಲು ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಸಿದ್ಧವಾಗಿಡಲು ಮರೆಯಬಾರದು. ಅಂತಿಮವಾಗಿ GSTIN ನೊಂದಿಗೆ, ನಾವು ಮನಬಂದಂತೆ ತೆರಿಗೆಗಳನ್ನು ಸಂಗ್ರಹಿಸಬಹುದು, ರಿಟರ್ನ್ಸ್ ಸಲ್ಲಿಸಬಹುದು ಮತ್ತು ಭಾರತದ ತೆರಿಗೆ ವ್ಯವಸ್ಥೆಯ ರಚನಾತ್ಮಕ ಚೌಕಟ್ಟಿನೊಳಗೆ ವ್ಯಾಪಾರವನ್ನು ವೃದ್ದಿಸಬಹುದು.


Click it and Unblock the Notifications