ಸಂವತ್ 2081 ದೀಪಾವಳಿಯ ಮಹೂರ್ತ ವಹಿವಾಟು: ಷೇರು ಮಾರುಕಟ್ಟೆಯ ನಿಗದಿತ ಶುಭ ಸಮಯ ಇಲ್ಲಿದೆ

ಭಾರತದಲ್ಲಿ ಈಗ ಹಬ್ಬಗಳ ಸೀಸನ್. ಹಬ್ಬದ ಋತುವಿನಲ್ಲಿ ಪ್ರತಿದಿನವೂ ವಿಶೇಷ. ಯಾಕೆಂದರೆ ಭಾರತದ ಯಾವುದಾದರೂ ಭಾಗದಲ್ಲಿ ಸ್ಥಳೀಯ ಹಬ್ಬಗಳ ಆಚರಣೆಗಳು ನಡೆಯುತ್ತಿರುತ್ತದೆ. ಹಬ್ಬ ಹರಿದಿನಗಳೇ ಭಾರತದ ಸಂಸ್ಕೃತಿಯಾಗಿದ್ದರೂ ಇವುಗಳಿಂದ ಭಾರತಕ್ಕೆ ಅರ್ಥಿಕ ಲಾಭ ತರುತ್ತದೆ ಎಂಬ ವಿಚಾರ ಕೂಡ ಗುಟ್ಟಾಗಿ ಉಳಿದಿಲ್ಲ. ಹಬ್ಬದ ಸಮಯದಲ್ಲೇ ಜಾಗತಿಕ ಮಟ್ಟದಲ್ಲಿ ಶಾಪಿಂಗ್‌ ಸೇರಿದಂತೆ ಆರ್ಥಿಕ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತಿರುತ್ತದೆ. ಅದರಲ್ಲೂ ಶಾಪಿಂಗ್‌ ವಿಚಾರದಲ್ಲಿ ಭಾರತೀಯರ ಪರಾಕ್ರಮದ ಬಗ್ಗೆ ವಿಶೇಷವಾಗಿ ಹೇಳುವ ಅಗತ್ಯವಿಲ್ಲ. ಇದೇ ಕಾರಣಕ್ಕಾಗಿ ಭಾರತದಲ್ಲಿ ಹಬ್ಬ ಹರಿದಿನಗಳ ಸಮಯದಲ್ಲಿ ದೇಶದ ಆರ್ಥಿಕ ಚಟುವಟಿಕೆಗಳು ಕೂಡ ಹೆಚ್ಚಿನ ವೇಗ, ಚುರುಕುತನ ಪಡೆದುಕೊಳ್ಳುತ್ತದೆ.

ದೀಪಾವಳಿಯಲ್ಲಿ ಆರ್ಥಿಕ ಚಟುವಟಿಕೆ ಹೆಚ್ಚು: ಭಾರತದ ಬಹುತೇಕ ಎಲ್ಲಾ ಕಡೆಗಳಲ್ಲಿ ಭರ್ಜರಿಯಾಗಿ ಆಚರಿಸಲ್ಪಡುವ ಹಬ್ಬಗಳಲ್ಲಿ ದೀಪಾವಳಿ ಕೂಡ ಒಂದಾಗಿದೆ. ಈ ಸಮಯದಲ್ಲಿ ಭಾರತದಲ್ಲಿ ಹೆಚ್ಚು ಹೆಚ್ಚು ವಸ್ತುಗಳ ಖರೀದಿ, ಆಭರಣ ಖರೀದಿ, ಎಲೆಕ್ಟ್ರಾನಿಕ್ಸ್‌ ವಸ್ತುಗಳು, ಷೇರುಗಳ ಖರೀದಿ ಸೇರಿದಂತೆ ಒಟ್ಟಾರೆಯಾಗಿ ಆರ್ಥಿಕ ಚಟುವಟಿಕೆಗಳು ಗರಿಗೆದರುತ್ತದೆ. ಹಬ್ಬದ ಸಮಯದಲ್ಲಿ ಖರೀದಿಸಿದ ವಸ್ತುಗಳಿಂದ ಮನೆಗೆ ಹಾಗೂ ಕುಟುಂಬಕ್ಕೆ ಸಂಪತ್ತಿನ ಅಕ್ಷಯವಾಗುತ್ತದೆ ಎಂಬ ನಂಬಿಕೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇದೇ ಕಾರಣಕ್ಕೆ ಭಾರತೀಯರು ದೀಪಾವಳಿ ಹಬ್ಬದ ಸಮಯದಲ್ಲಿ ಹೊಸ ವಸ್ತುಗಳ ಖರೀದಿಗೆ ಹೆಚ್ಚು ಆದ್ಯತೆ ನೀಡುತ್ತಾರೆ.

ಷೇರು ಮಾರುಕಟ್ಟೆಯ ನಿಗದಿತ  ಶುಭ ಸಮಯ ತಿಳಿಯಿರಿ

ಇನ್ನು ದೀಪಾವಳಿಯ ಸಮಯದಲ್ಲಿ ಏನಾದರೂ ಚಿನ್ನ, ವಾಹನ, ಬಟ್ಟೆ ಹೀಗೆ ಹೊಸ ವಸ್ತುಗಳ ಖರೀದಿ ಬಗ್ಗೆ ಮಾಡುತ್ತಿರುತ್ತಾರೆ. ದೀಪಾವಳಿ ಸಮಯದಲ್ಲಿ ಖರೀದಿಸಿದ ಹೊಸ ವಸ್ತುಗಳು ಅಕ್ಷಯವಾಗುತ್ತದೆ ಎಂಬ ನಂಬಿಕೆಯಿದೆ. ಸಂವತ್ 2081 ಹೊಸ ವರ್ಷದ ಮೊದಲ ದಿನವನ್ನು ಅನೇಕ ಹೂಡಿಕೆದಾರರು ಶುಭ ದಿನವೆಂದು ಪರಿಗಣಿಸುತ್ತಾರೆ.

ಈ ಹಿನ್ನೆಲೆಯಲ್ಲಿ ನವೆಂಬರ್‌ 1ರಂದು ನ್ಯಾಷನಲ್‌ ಸ್ಟಾಕ್‌ ಎಕ್ಸ್‌ಚೇಂಜ್‌ (NSE) ಹಾಗೂ ಬಾಂಬೆ ಸ್ಟಾಕ್‌ ಎಕ್ಸ್‌ಚೇಂಜ್‌ (BSE) ಒಂದು ಗಂಟೆಯ ವಿಶೇಷ ಮುಹೂರ್ತದ ಸಮಯ ನಿಗದಿ ಮಾಡಿದ್ದು, ಅದರಂತೆ ಆ ದಿನ ಸಂಜೆ 6:00 ರಿಂದ 7:00ರ ತನಕ ನಡೆಯಲಿದೆ ಎಂದು ಎರಡೂ ಘಟಕಗಳು ತಮ್ಮ ಪ್ರಕಟನೆಯಲ್ಲಿ ತಿಳಿಸಿದೆ. ಈ ದಿನ, ವಿನಿಮಯ ಕೇಂದ್ರಗಳು ವಿಶೇಷ ವ್ಯವಹಾರದ ಸಮಯವನ್ನು ನಿಗದಿಪಡಿಸಿವೆ. ಪೂರ್ವ-ಆರಂಭಿಕ ಅಧಿವೇಶನವು ಸಂಜೆ 5:45ರಿಂದ 6:00 ರವರೆಗೆ, ಬ್ಲಾಕ್ ಡೀಲ್ ವಿಂಡೋ ಸಂಜೆ 5:30 ರಿಂದ 5:45ರ ವರೆಗೆ ಮತ್ತು ಆವರ್ತಕ ಕರೆ ಹರಾಜು ಅವಧಿ ಸಂಜೆ 6:05ರಿಂದ 6:50ರ ವರೆಗೆ ನಡೆಯಲಿದೆ.

ಏನಿದು ವ್ಯಾಪಾರ ಮುಹೂರ್ತ?: ಇನ್ನು ಮುಹೂರ್ತ ವ್ಯಾಪಾರವು ಸಂವತ್ 2081ರ ಹಿಂದೂ ಕ್ಯಾಲೆಂಡರ್ ವರ್ಷದ ಪ್ರಾರಂಭವನ್ನು ಗುರುತಿಸುತ್ತದೆ. ಹಾಗಾಗಿ ವರ್ಷದ ಮೊದಲ ದಿನವನ್ನು ಭಾರತದ ಹಲವಾರು ಷೇರುದಾರರು ಆರ್ಥಿಕ ಬೆಳವಣಿಗೆಗೆ ಮಂಗಳಕರವೆಂದು ಪರಿಗಣಿಸುತ್ತಾರೆ. ಆದರೆ ದೀಪಾವಳಿ ಹಿನ್ನೆಲೆ ನವೆಂಬರ್ 1ರಂದು ರಜೆ ಇದ್ದರೂ ವಿಶೇಷ ಸಂಜೆಯ ಒಂದು ಗಂಟೆಯ ಸಮಯವನ್ನು ಮಾತ್ರ ಇದಕ್ಕೆ ಮೀಸಲಿಡಲಾಗಿದೆ.
ನವೆಂಬರ್ 1 ರಂದು ಒಂದು ಗಂಟೆ ಕಾರ್ಯಾಚರಣೆ: ದೇಶದ ಅತಿದೊಡ್ಡ ಹಬ್ಬಗಳಲ್ಲಿ ಒಂದಾದ ದೀಪಾವಳಿಯ ಹಿನ್ನೆಲೆಯಲ್ಲಿ ನವೆಂಬರ್ 1ರಂದು ಷೇರು ಮಾರುಕಟ್ಟೆಯ ತನ್ನ ನಿಯಮಿತ ಕಾರ್ಯನಿರ್ವಹಣೆಯನ್ನು ಮುಚ್ಚಲಿದೆ. ಆದರೆ ಈ ದಿನ ಒಂದು ಗಂಟೆಯ ವಿಶೇಷ ಅವಧಿಯಲ್ಲಿ ಈಕ್ವಿಟಿಗಳ ವ್ಯಾಪಾರ, ಕರೆನ್ಸಿ ಉತ್ಪನ್ನಗಳು, ಇಕ್ವಿಟಿ ಫ್ಯೂಚರ್ಸ್ ಮತ್ತು ಆಯ್ಕೆಗಳು, ಸೆಕ್ಯುರಿಟೀಸ್ ಸಾಲ ಮತ್ತು ಎರವಲು ಮುಂತಾದವುಗಳು ನಡೆಯಲಿದೆ.

ವಾರ್ಷಿಕವಾಗಿ ದೀಪಾವಳಿಯಂದು ನಡೆಸುವ ಮುಹೂರ್ತದ ವ್ಯಾಪಾರವು ಸಾಮಾನ್ಯವಾಗಿ ಹೆಚ್ಚಿನ ಅಸ್ಥಿರತೆಗೆ ಸಾಕ್ಷಿಯಾಗುವ ಸಾಧ್ಯತೆ ಕೂಡ ಇರುತ್ತದೆ. ಯಾಕೆಂದರೆ ಮುಹೂರ್ತ ಅವಧಿಯು ಕೇವಲ ಒಂದು ಗಂಟೆ ಮಾತ್ರ ನಡೆಯುವ ಹಿನ್ನೆಲೆಯಲ್ಲಿ ಈ ಅವಧಿಯಲ್ಲಿ ಷೇರು ಮಾರುಕಟ್ಟೆಯಲ್ಲಿ ಹೆಚ್ಚಿನ ಏರಿಳಿತಗಳಿಗೆ ಸಾಕ್ಷಿಯಾಗುತ್ತದೆ.

ಇನ್ನು ಹಲವಾರು ಹೂಡಿಕೆದಾರರು ಆ ದಿನದಂದು ಸಾಂಪ್ರದಾಯಿಕ ಅಭ್ಯಾಸವಾಗಿ ಖರೀದಿಸಲು ಒಲವು ತೋರುತ್ತಾರೆ. ಆದಾಗ್ಯೂ, ಸಾಂಸ್ಥಿಕ ಭಾಗವಹಿಸುವಿಕೆಯು ಅತ್ಯಲ್ಪಕ್ಕೆ ಸೀಮಿತವಾಗಿರುತ್ತದೆ. ವಿದೇಶಿ ಬಂಡವಾಳ ಹೂಡಿಕೆದಾರರಿಂದ ಯಾವುದೇ ಭಾಗವಹಿಸುವಿಕೆ ಇರುವುದಿಲ್ಲ ಎಂದು ವೆಲ್ತ್‌ಮಿಲ್ಸ್ ಸೆಕ್ಯುರಿಟೀಸ್ ಪ್ರೈವೇಟ್‌ನ ಇಕ್ವಿಟಿ ಸ್ಟ್ರಾಟೆಜಿಸ್ಟ್‌ನ ಕ್ರಾಂತಿ ಬಥಿನಿ ಅವರು ಹೇಳಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+