ಇಡೀ ದೇಶವೇ ಬಜೆಟ್‌ಗಾಗಿ ಎದುರು ನೋಡುತ್ತಿದೆ. ದೇಶದ ಆರ್ಥಿಕ ಬೆಳವಣಿಗೆಗಾಗಿ ಯಾವೆಲ್ಲ ಯೋಜನೆಗಳನ್ನ ಸರ್ಕಾರ ತರಬಹುದು ಎಂಬ ನಿರೀಕ್ಷೆಯಲ್ಲಿ ಎಲ್ಲರೂ ಇದ್ದಾರೆ. ಹೀಗಾಗಿ ಕೇಂದ್ರ ಸಕಲ ಸಿದ್ಧತೆಗಳನ್ನ ಮಾಡಿಕೊಳ್ಳೂತ್ತಿದೆ. ಇದೆ ವೇಳೆ ಅಂದರೆ ಬಜೆಟ್ ಪೂರ್ವದಲ್ಲಿ ಪ್ರತೀ ವರ್ಷ ಆರ್ಥಿಕ ಸಮೀಕ್ಷೆಗಳ ಕುರಿತು ಮಾಹಿತಿಯನ್ನ ಹಂಚಿಕೊಳ್ಳಲಾಗುತ್ತದೆ. ಆರ್ಥಿಕ ತಜ್ಞರು ಒಳಗೊಂಡಂತೆ ಹಣಕಾಸು ಸಚಿವರು ಹಾಗು ಸರ್ಕಾರದ ಮೌಲ್ಯಮಾನದ ಅಡಿ ಆರ್ಥಿಕ ಸಮೀಕ್ಷೆಯನ್ನ ಮಾಡಲಾಗುತ್ತದೆ. ಈ ಆರ್ಥಿಕ ಸಮೀಕ್ಷೆಯ ಮಂಡನೆ ಜನವರಿ 31, 2025ರಂದು ಹಣಕಾಸು ಸಚಿವರು ಸಂಸತ್ತಿನಲ್ಲಿ ಮಂಡಿಸಲಿದ್ದಾರೆ. ಇನ್ನು ಈ ವೇಳೆ ಇದಕ್ಕೆ ಹಲವು ತಜ್ಞರು ಅಧಿಕಾರಿಗಳು ಹಾಗೆ ಸರ್ಕಾರ ಸಾಕ್ಷಿಯಾಗಲಿದೆ.
ಆರ್ಥಿಕ ಸಮೀಕ್ಷೆ 2025: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ 2025ಕ್ಕೂ ಮುನ್ನ ಸಂಸತ್ತಿನಲ್ಲಿ ಆರ್ಥಿಕ ಸಮೀಕ್ಷೆಯನ್ನ ಮಂಡಿಸುತ್ತಾರೆ. ಜನವರಿ 31, 2025ರಂದು ಸಂಸತ್ತಿನಲ್ಲಿ ಬಜೆಟ್ ಅಧಿವೇಶನ ನಡೆಯಲಿದೆ. ಇದರ ಜೊತೆಗೆ ಫೆಬ್ರವರಿ 1, 2025 ರಂದು ನಡೆಯಲಿರುವ ಬಜೆಟ್‌ಗಾಗಿ ಅಂದು ತಯಾರಿಯನ್ನ ಮಾಡಿಕೊಳ್ಳಲಾಗುತ್ತದೆ.

ಪ್ರತೀ ವರ್ಷ ಆರ್ಥಿಕ ತಜ್ಞರು ಆರ್ಥಿಕ ಸಮೀಕ್ಷೆ ದಾಖಲೆಗಳನ್ನ ವೀಕ್ಷಿಸುತ್ತಾರೆ. ಹಾಗೆ ಆ ವರ್ಷ ಭಾರತೀಯ ಆರ್ಥಿಕತೆ ಹೇಗೆ ಕಾರ್ಯ ನಿರ್ವಹಿಸಿದೆ ಎಂಬುದನ್ನು ನೋಡುತ್ತಾರೆ. ಇದರ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಇರುವ ಆರ್ಥಿಕ ನಿರೀಕ್ಷೆಗಳ ಕುರಿತು ತಿಳಿಯುತ್ತಾರೆ.
ಆರ್ಥಿಕ ಸಮೀಕ್ಷೆ ಎಂದರೇನು? ಇದನ್ನು ಯಾರು ಸಿದ್ಧಪಡಿಸುತ್ತಾರೆ?
ಆರ್ಥಿಕ ಸಮೀಕ್ಷೆಯನ್ನ ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯ ಆರ್ಥಿಕ ವಿಭಾಗ ಸಿದ್ಧಪಡಿಸುತ್ತದೆ. ಈ ಆರ್ಥಿಕ ಸಮೀಕ್ಷೆಯು ವಾರ್ಷಿಕ ಸಾಖಲೆಗಳನ್ನ ಒಳಗೊಂಡಿದ್ದು, ಆರ್ಥಿಕತೆಯ ಕಾರ್ಯಕ್ಷಮತೆ, ಹಣಕಾಸಿನ ವರ್ಷದ ಆರ್ಥಿಕ ಸೂಚಕಗಳು ಮತ್ತು ಮುಂದಿನ ಯೋಜನೆಗಳ ಕುರಿತು ವಿವರವಾದ ಮಾಹಿತಿಯನ್ನ ನೀಡುತ್ತದೆ. ಅಲ್ಲದೆ ಇದು 2025-26ರ ಕೇಂದ್ರ ಬಜೆಟ್‌ನ ದಿಕ್ಕನ್ನ ಸೂಚಿಸುತ್ತದೆ.
ಈ ಆರ್ಥಿಕ ಸಮೀಕ್ಷೆಯು ದೇಶದ ಆರ್ಥಿಕತೆಯ ಕುರಿತ ಸಮಗ್ರ ವಿಶ್ಲೇಷಣೆಯಾಗಿದೆ. ಹಾಗೆ ಆರ್ಥಿಕ ಸ್ವಾಭಾವಗಳನ್ನ ಮತ್ತು ಕ್ಷೇತ್ರಗಳ ಅಭಿವೃದ್ಧಿಯನ್ನ ಪ್ರಸ್ತುತಪಡಿಸುತ್ತದೆ ಹಾಗೆ ಇದು ಮುಂಬರುವ ಆರ್ಥಿಕ ವರ್ಷಕ್ಕೆ ಯೋಜನೆಗಳನ್ನ ಕೂಡ ನೀಡುತ್ತದೆ.
ಈ ವರದಿಯು ನಿರ್ಣಯಕ ಆರ್ಥಿಕ ಸೂಚಕಗಳನ್ನ ಒಳಗೊಂಡಂತೆ ನಿಧಾನವಾಗಿ ಸಾಗುತ್ತಿರುವ ಆರ್ಥಿಕ ಬೆಳವಣಿಗೆ ಯುಎಸ್ ಡಾಲರ್‌ನ ವಿರುದ್ಧ ರೂಪಾಯಿ ಕುಸಿತ ಮತ್ತು ಗ್ರಾಹಕ ವೆಚ್ಚದ ಮಾದರಿಗಳು ಕುಸಿಯುತ್ತಿರುವುದರ ಕುರಿತು ಮೌಲ್ಯಮಾಪನ ಮಾಡುವ ಸಾಧ್ಯತೆ ಇದೆ.
ಈ ಮೌಲ್ಯಮಾಪನಗಳನ್ನ ಪರಿಚಯಿಸುವ ಮುಖ್ಯ ಉದ್ದೇಶ ಬಡತನ ಕಡಿತ, ಹವಾಮಾನ ಬದಲಾವಣೆ ಉಪಶಮನ, ಶೈಕ್ಷಣಿಕ ಅಭಿವೃದ್ಧಿ, ಮೂಲಸೌಕರ್ಯ ಹೆಚ್ಚಳ ಮತ್ತು ಆರ್ಥಿಕ ಅಭಿವೃದ್ಧಿಯಂತಹ ನಿರ್ಣಯಕ ಸಮಸ್ಯೆಗಳನ್ನ ಪರಿಹರಿಸುವುದಾಗಿದೆ.
ಈ ಆರ್ಥಿಕ ಸಮೀಕ್ಷೆಯು ಮೊದಲು 1950-51ರಲ್ಲಿ ಬಜೆಟ್‌ನ ದಾಖಲಾತಿಯ ಭಾಗವಾಗಿ ಆರಂಭವಾಯಿತು. 1960ರಲ್ಲಿ ಈ ಸಮೀಕ್ಷೆಯನ್ನ ಕೇಂದ್ರ ಬಜೆಟ್‌ಗೂ ಮುನ್ನ ಅಂದರೆ ಬಜೆಟ್‌ನ ಹಿಂದಿನ ದಿನ ಪ್ರಸ್ತುತಪಡಿಸಲಾಯಿತು. ಆರ್ಥಿಕತೆಯ ಕುರಿಇತು ಗಮನಾರ್ಹ ಆಸಕ್ತಿಯನ್ನ ಹುಟ್ಟಿಸುವುದು ಈ ಸಮೀಕ್ಷೆಯ ಮುಖ್ಯ ಉದ್ದೇಶವಾಗಿದೆ.
ಈ ದಾಖಲೆಗಳು ವಲಯ ವಿಶ್ಲೇಷಣೆಗಳು, ಪ್ರಸ್ತುತ ಆರ್ಥಿಕ ಆದ್ಯತೆಗಳು ಸೇರಿದಂತೆ ಈ ಕುರಿತ ಹೆಚ್ಚಿನ ಅಧ್ಯಾಯಗಳನ್ನ ಒಳಗೊಂಡಿದೆ. ಈ ಆರ್ಥಿಕ ಸಮೀಕ್ಷೆ ಮುಖ್ಯವಾಗಿ ಹಣಕಾಸು ಸಚಿವರ ಮುಖ್ಯ ಘೋಷಣೆಗಳು ಮತ್ತು ಸರ್ಕಾರದ ಆರ್ಥಿಕ ದೃಷ್ಟಿಕೋನಗಳ ಮೇಲೆ ಕೇಂಧ್ರೀಕರಿಸುತ್ತದೆ.
ಆರ್ಥಿಕ ಸಮೀಕ್ಷೆ 2025: ದಿನಾಂಕ, ಸಮಯ
ಜನವರಿ 31, 2025ರ ಶುಕ್ರವಾರ ಮಧ್ಯಾಹ್ನ 12:00 PM ಮತ್ತು 1:00 PM ಗಂಟೆಯ ನಡುವೆ ಸಂಸತ್ತಿನಲ್ಲಿ ಈ ಸಮೀಕ್ಷಯನ್ನ ಮಂಡಿಸಲಾಗುತ್ತದೆ. ಇದಾದ ನಂತರ ಮಧ್ಯಾಹ್ನ 2:30ಕ್ಕೆ ಮುಖ್ಯ ಆರ್ಥಿಕ ಸಲಹೆಗಾರ ವಿ.ಅನಂತ ನಾಗೇಶ್ವರನ್ ಅವರು ಬಜೆಟ್ ಉದ್ದೇಶಿಸಿ ಮಾತನಾಡಲಿದ್ದಾರೆ.


Click it and Unblock the Notifications