ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2022-24ನೇ ಸಾಲಿನ ಆರ್ಥಿಕ ಸಮೀಕ್ಷೆಯನ್ನು ಲೋಕಸಭೆಯಲ್ಲಿ ಮಂಡಿಸಿದ್ದಾರೆ. ಆರ್ಥಿಕ ಸಮೀಕ್ಷೆ ಪ್ರಕಾರ ಭಾರತದ ಜಿಡಿಪಿ ಬೆಳವಣಿಗೆ ದರವನ್ನು ಶೇಕಡ 6.5 ಎಂದು ಅಂದಾಜು ಮಾಡಲಾಗಿದೆ. ಭಾರತದ ಜಿಡಿಪಿ ದರವು ಶೇಕಡ 6-6.8ಕ್ಕೆ ತಗ್ಗುವ ಅಂದಾಜು ಮಾಡಲಾಗಿದೆ.
2023-24ರಲ್ಲಿ ಜಿಡಿಪಿಯು ಶೇಕಡ 6.5ಕ್ಕೆ ಬೆಳೆಯುವ ಅಂದಾಜು ಮಾಡಲಾಗಿದೆ. ಪ್ರಸ್ತುತ ಹಣಕಾಸು ವರ್ಷದಲ್ಲಿ ಜಿಡಿಪಿ ದರ ಶೇಕಡ 7 ಆಗಿದೆ. 2021-22ರಲ್ಲಿ ಶೇಕಡ 8.7 ಆಗಿತ್ತು. ಆರ್ಥಿಕ ಕೊರತೆ ಇನ್ನಷ್ಟು ಮುಂದುವರಿಯಲಿದೆ. ರೂಪಾಯಿಯು ಇನ್ನಷ್ಟು ಒತ್ತಡಕ್ಕೆ ಒಳಗಾಗಬಹುದು ಎಂದು ಆರ್ಥಿಕ ಸಮೀಕ್ಷೆ ಹೇಳಿದೆ.
"ಈ ಹಣಕಾಸು ವರ್ಷದಲ್ಲಿ ಹಣದುಬ್ಬರವು ಶೇಕಡ 6.8 ಆಗಿದೆ. ಇದು ಖಾಸಗಿ ಬಳಕೆಯನ್ನು ತಡೆಯುವಷ್ಟು ಅಧಿಕವಾಗಿಲ್ಲ ಮತ್ತು ಹೂಡಿಕೆಯನ್ನು ತಗ್ಗಿಸುವಷ್ಟು ಕಡಿಮೆಯಾಗಿಲ್ಲ. ಬಡ್ಡಿದರವು ದೀರ್ಘಾವಧಿಯವರೆಗೆ ಅಧಿಕವಾಗಿಯೇ ಉಳಿಯಬಹುದು," ಎಂದು ಕೂಡಾ ಆರ್ಥಿಕ ಸಮೀಕ್ಷೆ ಉಲ್ಲೇಖಿಸಿದೆ.

ಆರ್ಥಿಕ ಸಮೀಕ್ಷೆ ಬಗ್ಗೆ ಮಾಹಿತಿ
ಇನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದ ಬಳಿಕ, ಕೇಂದ್ರದ ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತ ನಾಗೇಶ್ವರನ್ ತಾನು ಸಿದ್ಧಪಡಿಸಿದ ಆರ್ಥಿಕ ಸಮೀಕ್ಷೆಯನ್ನು ಪ್ರಸ್ತುತ ಪಡಿಸಿ, ವಿವರಣೆ ನೀಡಿದ್ದಾರೆ. ಪ್ರಸಕ್ತ ಮತ್ತು ಮುಂದಿನ ಹಣಕಾಸು ವರ್ಷದ ಭಾರತದ ಜಿಡಿಪಿ ಬೆಳವಣಿಗೆಯ ಅಂದಾಜನ್ನು ಐಎಂಎಫ್ ನೀಡಿದೆ. ಐಎಂಎಫ್ ಅಂದಾಜಿನ ಪ್ರಕಾರ ಭಾರತದ ಜಿಡಿಪಿ ಬೆಳವಣಿಗೆ ದರವು ವೇಗವಾಗಲಿದೆ ಎಂದು ತೋರಿಸುತ್ತಿದೆ ಎಂದು ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತ ನಾಗೇಶ್ವರನ್ ತಿಳಿಸಿದ್ದಾರೆ.
ಫಾರ್ಮಾ ಸೆಕ್ಟರ್‌ನಲ್ಲಿ ಎಫ್‌ಡಿಐ ಸೆಪ್ಟೆಂಬರ್ 2022ರಲ್ಲಿ 20 ಬಿಲಿಯನ್ ಡಾಲರ್ ದಾಟಿದೆ. ಫಾರ್ಮಾ ವಲಯದಲ್ಲಿ ಸೆಪ್ಟೆಂಬರ್ 2022ರವರೆಗೆ ಕಳೆದ ಐದು ವರ್ಷದಲ್ಲಿ ಎಫ್‌ಡಿಐ ನಾಲ್ಕು ಪಟ್ಟು ಹೆಚ್ಚಾಗಿ 699 ಮಿಲಿಯನ್ ಯುಎಸ್ ಡಾಲರ್‌ಗೆ ತಲುಪಿದೆ. ಪ್ರತಿಕೂಲ ಸ್ಥಿತಿ ಮತ್ತು ಕೋವಿಡ್ ಸಾಂಕ್ರಾಮಿಕ ಕಡಿಮೆಯಾಗುತ್ತಿದ್ದಂತೆ ಔಷಧೀಯ ಉತ್ಪಾದನೆ ಬೆಳವಣಿಗೆ ಮಂದಗತಿಯಾಗಿದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಉತ್ಪಾದನಾ ವಲಯದಲ್ಲಿ ವಾರ್ಷಿಕವಾಗಿ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಪ್ರಮಾಣವು ಅಧಿಕವಾಗುತ್ತಾ ಸಾಗುತ್ತಿದೆ. ಹಣಕಾಸು ವಷರ್ಷ 2021ರಲ್ಲಿ ಎಫ್‌ಡಿಐ 12.1 ಬಿಲಿಯನ್ ಡಾಲರ್ ಆಗಿದ್ದು, ಹಣಕಾಸು ವರ್ಷ 2022ರಲ್ಲಿ 21.3 ಬಿಲಿಯನ್ ಡಾಲರ್‌ಗೆ ಎಫ್‌ಡಿಐ ಜಿಗಿದಿದೆ ಎಂದು ಆರ್ಥಿಕ ಸಮೀಕ್ಷೆ ವಿವರಿಸಿದೆ.
ಹಣಕಾಸು ವರ್ಷ 2021ರಲ್ಲಿ ಜಿಎಸ್‌ಟಿ ಸಂಗ್ರಹ ಕುಂಠಿತವಾದ ಬಳಿ, ಈಗ ಸಣ್ಣ ಉದ್ಯಮಗಳಿಂದ ಜಿಎಸ್‌ಟಿ ಸಂಗ್ರಹ ಹೆಚ್ಚಾಗುತ್ತಿದೆ. ಕೋವಿಡ್ ಪೂರ್ವದಲ್ಲಿ ಸಂಗ್ರಹವಾಗುತ್ತಿದ್ದ ಜಿಎಸ್‌ಟಿಗೂ ಅಧಿಕ ಜಿಎಸ್‌ಟಿಯನ್ನು ಸಣ್ಣ ಉದ್ಯಮಗಳು ಪಾವತಿಸಿದೆ ಎಂದು ಉಲ್ಲೇಖ ಮಾಡಲಾಗಿದೆ. ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತ ನಾಗೇಶ್ವರನ್ ಕೂಡಾ ಇದನ್ನು ಒತ್ತಿ ಹೇಳಿದ್ದಾರೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!



Click it and Unblock the Notifications