ದೇಶದ ಪ್ರಮುಖ ಇಂಧನ ತಂತ್ರಜ್ಞಾನ ಕಂಪನಿಗಳ ಪೈಕಿ ಒಂದಾಗಿರುವ ಜೆನ್ಸೋಲ್ ಕಂಪನಿ ಒಂದಾದ ಮೇಲೊಂದು ವಿವಾದಗಳಿಗೆ ಗುರಿಯಾಗಿತ್ತು. ಆರೋಪಗಳ ಸರಮಾಲೆಯನ್ನು ನೇತುಹಾಕಿಕೊಂಡಿತ್ತು. ಇದೀಗ ಈ ಆರೋಪಗಳು ಕಠಿಣ ಕ್ರಮಗಳ ರೂಪದಲ್ಲಿ ಕಂಪನಿಗೆ ಕಾಡುತ್ತಿದೆ. ಅಂದರೆ ಜೆನ್ಸೋಲ್ ಎಂಜಿನಿಯರ್ ಲಿಮಿಟೆಡ್‌ನ ಪುನೀತ್ ಸಿಂಗ್ ಜಗ್ಗಿ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಅದೇನೆಂದರೆ ಗಂಭೀರ ಹಣಕಾಸು ಅಕ್ರಮ ಆರೋಪಗಳು ಕೇಳಿಬಂದ ಹಿನ್ನೆಲೆ, ಜಾರಿ ನಿರ್ದೇಶನಾಕಯ ದಾಳಿ ನಡೆಸಿದೆ. ಈ ದಾಳಿಯನ್ನು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಅಡಿಯಲ್ಲಿ ನಡೆಸಲಾಗಿದ್ದು, ಕಂಪನಿಯ ಸಹ-ಸ್ಥಾಪಕರಾದ ಪುನೀತ್ ಸಿಂಗ್ ಜಗ್ಗಿ ಅವರನ್ನು ಬಂಧಿಸಲಾಗಿದೆ. ದೆಹಲಿಯ ಗುರುಗ್ರಾಮ್ ಮತ್ತು ಅಹಮದಾಬಾದ್‌ನಲ್ಲಿ ಬೃಹತ್ ಪ್ರಮಾಣದ ದಾಳಿಗಳು ನಡೆದಿದ್ದು, ದೆಹಲಿಯ ಹೋಟೆಲ್‌ವೊಂದರಿಂದ ಪುನೀತ್ ಸಿಂಗ್ ಜಗ್ಗಿ ಅವರನ್ನು ಬಂಧಿಸಲಾಗಿದೆ.

ಅಕ್ರಮ ಹಣ ವರ್ಗಾವಣೆ ಆರೋಪ:
ಜೆನ್ಸೋಲ್ ಇಂಜಿನಿಯರಿಂಗ್ ಕಂಪನಿಯ ವಿರುದ್ಧ ಕೇಳಿಬಂದಿರುವುದು ಮಹಾ ಆರೋಪ. ಇಂಧನ ಪರಿಹಾರ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇವರಿಗೆ, ಭಾರತ ಸರ್ಕಾರದ ವಿದ್ಯುತ್ ಹಣಕಾಸು ನಿಗಮ ಹಾಗೂ IREDA..ಅಂದರೆ ಇಂಡಿಯನ್ ರಿನಿವಬಲ್ ಎನರ್ಜಿ ಡೆವಲಪ್‌ಮೆಂಟ್ ಏಜೆನ್ಸಿಗಳಿಂದ ಈ ಕಂಪನಿ ಸಾಲ ಪಡೆದುಕೊಂಡಿತ್ತು ಎನ್ನಲಾಗಿದೆ. ಈ ಸಾಲಗಳನ್ನು ಎಲೆಕ್ಟ್ರಿಕ್ ವಾಹನ ಖರೀದಿ ಮತ್ತು ಇಪಿಸಿ ಒಪ್ಪಂದಗಳ ಅನುಷ್ಠಾನಕ್ಕಾಗಿ ಬಳಸಲಾಗುವುದು ಎಂಬ ಉದ್ದೇಶದಿಂದ ಪಡೆಯಲಾಗಿತ್ತು.
ಆದರೆ, ಆರಂಭಿಕ ತನಿಖೆಯಲ್ಲಿ ತಿಳಿದಿದ್ದೇನೆಂದರೆ, ಈ ಹಣವನ್ನು ಬೇರೆಯ ಉದ್ದೇಶಕ್ಕೆಂದೇ ಬಳಕೆಯಾಗಿದೆ ಎಂಬುದು. ಅಂದರೆ ಈ ಹಣವನ್ನು ಕಂಪನಿಯ ಪ್ರವರ್ತಕರು, ತಮ್ಮ ಸಂಬಂಧಿಕರ ಹೆಸರಿನಲ್ಲಿ, ಕಂಪನಿಯೊಂದಿಗೆ ನೇರ ಅಥವಾ ಪರೋಕ್ಷವಾಗಿ ಸಂಬಂಧಿಸಿದ ಶೆಲ್ ಕಂಪನಿಗಳ ಹೆಸರಿನಲ್ಲಿ ನೊಂದಾಯಿತ ಆಸ್ತಿಗಳನ್ನು ಖರೀದಿಸಲು ಬಳಸಿರುವುದು ಬೆಳಕಿಗೆ ಬಂದಿದೆ. ಈ ಮೂಲಕ, ನಿಜವಾದ ವ್ಯಾಪಾರದ ಹೆಸರಿನಲ್ಲಿ ಸರ್ಕಾರದ ನಾಣ್ಯವನ್ನು ದುರ್ಬಳಕೆ ಮಾಡಿದ ಶಂಕೆ ವ್ಯಕ್ತವಾಗಿದೆ.
ಅನ್ಮೋಲ್ ಸಿಂಗ್ ದುಬೈನಲ್ಲಿ:
ಇನ್ನು ಹೋಟೆಲ್‌ವೊಂದರಲ್ಲಿ ಅಡಗಿಸಿಕೊಂಡಿದ್ದ ಪುನೀತ್ ಸಿಂಗ್ ಜಗ್ಗಿ ಅವರನ್ನೇನೋ, ಪೋಲೀಸರು ಬಂಧನ ಮಾಡಿದ್ದಾರೆ. ಆದರೆ ಇವರ ಸಹೋದರನಾದ ಜೆನ್ಸೋಲ್‌ನ ಸಹ-ಸ್ಥಾಪಕ ಅನ್ಮೋಲ್ ಸಿಂಗ್ ಜಗ್ಗಿ ಮಾತ್ರ ದುಬೈನಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ED ಅವರ ಪತ್ತೆ ಹಚ್ಚಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಹಕಾರವನ್ನು ಬಳಸುವ ಸಾಧ್ಯತೆಯಿದೆ ಎಂಬ ಮಾಹಿತಿ ತಿಳಿದುಬಂದಿದೆ.
Gensol ಮತ್ತು BluSmart ನಡುವೆ ಹೇಗೆ ಸಂಬಂಧ?
ಜೆನ್ಸೋಲ್ ತನ್ನ EV ಲೀಸಿಂಗ್ ವಿಭಾಗದ ಮೂಲಕ ಬ್ಲೂಸ್ಮಾರ್ಟ್ ಮೊಬಿಲಿಟಿಗೆ ಸಾವಿರಾರು ಎಲೆಕ್ಟ್ರಿಕ್ ಕಾರುಗಳನ್ನು ಲೀಸ್ ಮಾಡಿತ್ತು. ಈಗ ಬ್ಲೂಸ್ಮಾರ್ಟ್ ಈ ಕಾರುಗಳನ್ನು ಬಾಡಿಗೆಗೆ ತೆಗೆದುಕೊಂಡಿದೆ. ಈ ಕಾರುಗಳನ್ನು ಖರೀದಿ ಮಾಡಲು, ಈಗ ಜೆನ್ಸೋಲ್ ಕಂಪನಿಯು, ₹978 ಕೋಟಿಯ ಸಾಲವನ್ನು ಭಾರತೀಯ ಪವರ್ ಫೈನಾನ್ಸ್ ಕಾರ್ಪೊರೇಷನ್ಮ ತ್ತು IREDA ನಂತಹ ಸಂಸ್ಥೆಗಳ ಮೂಲಕ ಪಡೆದಿದೆ. ಆದರೆ, ಈ ಹಣವನ್ನು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಬಳಸಬೇಕಾಗಿತ್ತು. ಆದರೆ ಅದು ಬೇರೆ ರೀತಿಯಲ್ಲೇ ದುರ್ಬಳಕೆಯಾಗಿದೆ ಎಂದು ಸೆಬಿ ತಿಳಿಸಿದೆ.
ಮಾರುಕಟ್ಟೆ ನಿಯಂತ್ರಣ ಸಂಸ್ಥೆಗಳ ಗಮನ ಸೆಳೆದ ಪ್ರಕರಣ:
ಅಂದಹಾಗೆ ಈ ಹಣಕಾಸು ಅಕ್ರಮ ಪ್ರಕರಣವು ಮೊದ ಮೊದಲಿಗೆ, ಮಾರುಕಟ್ಟೆ ನಿಯಂತ್ರಣ ಸಂಸ್ಥೆಯಾದ ಸೆಬಿಯ ಗಮನಕ್ಕೆ ಬಿದ್ದಿತ್ತು. ಸೆಬಿಯ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದ್ದೇನೆಂದರೆ, ಇದರಲ್ಲಿ ಅಕ್ರಮ ಹಣ ವರ್ಗಾವಣೆ ಆಗಿದೆ ಎಂಬುದು. ಅಷ್ಟೇ ಅಲ್ಲ ಸಂಬಂಧಿಕರ ಹೆಸರಿನಲ್ಲಿ ಶೆಲ್ ಕಂಪನಿಗಳ ಬಳಕೆಯಾಗಿದೆ, ಹಾಗೆಯೇಕಂಪನಿಯ ಲೆಕ್ಕಪತ್ರಗಳಲ್ಲಿನ ನಿಖರತೆಯ ಕೊರತೆಗಳನ್ನು ಗುರುತಿಸಲಾಗಿದೆ. ಈ ಮಾಹಿತಿ ಆಧರಿಸಿ ED ತನಿಖೆ ಪ್ರಾರಂಭಿಸಿದೆ.
ICAI ತನಿಖೆಗೆ ಮುಂದಾದ ಹಿನ್ನಲೆ:
ಇದಿಷ್ಟೇ ಅಲ್ಲ, ಇಂಡಿಯನ್ ಚಾರ್ಟರ್ಡ್ ಅಕೌಂಟೆಂಟ್ಸ್ ಇನ್‌ಸ್ಟಿಟ್ಯೂಟ್ (ICAI) ಕೂಡ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ICAI ಅಧ್ಯಕ್ಷ ಚರಣ್‌ಜೋತ್ ಸಿಂಗ್ ನಂದಾ ಅವರ ಪ್ರಕಾರ, ಈ ಹಣಕಾಸು ವರದಿ ಪರಿಶೀಲನಾ ಮಂಡಳಿ ತನಿಖೆ ನಡೆಸಲು ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ. 2023-24ರ ಹಣಕಾಸು ವರ್ಷದ ಜೆನ್ಸೋಲ್ ಎಂಜಿನಿಯರಿಂಗ್ ಮತ್ತು ಅದರ ಸಂಬಂಧಿತ ಸಂಸ್ಥೆ ಬ್ಲೂಸ್ಮಾರ್ಟ್ ಮೊಬಿಲಿಟಿ ಪ್ರೈವೇಟ್ ಲಿಮಿಟೆಡ್ ಕಂಪನಿಗಳ ಲೆಕ್ಕಪತ್ರಗಳನ್ನು ಪರಿಶೀಲಿಸಲಾಗುವುದು ಎನ್ನಲಾಗಿದೆ.
ICAI ತನಿಖೆಯಿಂದ ಕಂಪನಿಯ ಲೆಕ್ಕಪತ್ರಗಳ ನಿಖರತೆ, ನೈತಿಕತೆ ಮತ್ತು ಲೆಕ್ಕ ಪರಿಶೋಧಕರ ಜವಾಬ್ದಾರಿಯ ಕುರಿತು ಹೆಚ್ಚಿನ ವಿವರಗಳು ಹೊರಬರುವ ನಿರೀಕ್ಷೆಯಿದೆ. ಹಣಕಾಸು ನಿಯಂತ್ರಣ ಸಂಸ್ಥೆಗಳ ದೃಷ್ಟಿಯಿಂದ ಈ ಕ್ರಮಗಳು ಭವಿಷ್ಯದ ಬೃಹತ್ ಕಂಪನಿಗಳ ಲೆಕ್ಕಪತ್ರಗಳ ಮೇಲ್ವಿಚಾರಣೆಯ ದಿಟ್ಟ ಉದಾಹರಣೆಯಾಗಬಹುದು.
ಇನ್ನು ಈ ಪ್ರಕರಣದ ಮೂಲಕ, ಆರ್ಥಿಕವಾಗಿ ನಿಖರ ಲೆಕ್ಕಪತ್ರಗಳ ನಿರ್ವಹಣೆ ಮತ್ತು ಸಾರ್ವಜನಿಕ ಹಣದ ಜವಾಬ್ದಾರಿತ್ವಪೂರ್ಣ ಬಳಕೆಯ ಅಗತ್ಯತೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಇಂಥ ಅಕ್ರಮಗಳು ಅನಾವಶ್ಯಕವಾಗಿ ಉದ್ಯಮಗಳ ಮೇಲೆ ಗಂಭೀರ ನಂಬಿಕೆ ಕುಸಿತಕ್ಕೆ ಕಾರಣವಾಗುತ್ತವೆ. ಸರ್ಕಾರ, ಸೆಬಿ, ED ಮತ್ತು ICAI ಸೇರಿ ಹಲವಾರು ಸಂಸ್ಥೆಗಳು ಇಂಥ ಘಟನೆಗಳ ಪುನರಾವೃತ್ತಿ ತಪ್ಪಿಸಲು ಮತ್ತು ಪ್ರಾಮಾಣಿಕ ಕಂಪನಿಗಳನ್ನು ರಕ್ಷಿಸಲು ನಿರಂತರ ಕ್ರಮ ಕೈಗೊಳ್ಳುವ ಅಗತ್ಯವಿದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ ಸ್ಥಳ ಆಯ್ಕೆ ಬಗ್ಗೆ ಹೊಸ ಅಪ್ಡೇಟ್; ಡಿ.ಕೆ ಶಿವಕುಮಾರ್ ಬಳಿ ಸುಳಿವು

Silver Price Today: ಬೆಳ್ಳಿ ಖರೀದಿದಾರರಿಗೆ ಗುಡ್ನ್ಯೂಸ್-ಇಂದು ಭಾರತದಲ್ಲಿ 10,000 ರೂ. ಕುಸಿತ

Gold Rate: ಚಿನ್ನಪ್ರಿಯರಿಗೆ ‘ಯುಗಾದಿ’ ಸಿಹಿ; ಬೆಂಗಳೂರಿನಲ್ಲಿ 24K ಬಂಗಾರದ ಬೆಲೆಯಲ್ಲಿ 27,800 ರೂ. ಕುಸಿತ

Credit Score: ಸಾಲ ಪಡೆಯಲಷ್ಟೇ ಅಲ್ಲ, ಬ್ಯಾಂಕ್ ಉದ್ಯೋಗಕ್ಕೂ ಬೇಕಿದೆ ಕ್ರೆಡಿಟ್ ಸ್ಕೋರ್; ಈ ಬಗ್ಗೆ ತಿಳಿಯಿರಿ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka weather: ರಾಜ್ಯದ ಹಲವೆಡೆ ಆಲಿಕಲ್ಲು ಮಳೆ; ಮಾರ್ಚ್ 23ರವರೆಗೂ ಈ ಭಾಗದಲ್ಲಿ ಮಳೆ ಮುಂದುವರಿಕೆ

Silver Rates India: ಮತ್ತೆ ಗಗನಕ್ಕೇರಿದ ಬೆಳ್ಳಿ ದರ; ದಿಢೀರ್ 5,000 ರೂ. ಹೆಚ್ಚಳ

Karnataka SSLC Exam: ಇಂದಿನಿಂದ ಕರ್ನಾಟಕದಲ್ಲಿ SSLC ಪರೀಕ್ಷೆ; ವಿದ್ಯಾರ್ಥಿಗಳು ಈ ವಿಷಯ ದಿಳಿದೇ ಎಕ್ಸಾಂಗೆ ಹೋಗಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Gold Price Today: ಭಾರತದಲ್ಲಿ ಏರಿಕೆ ಕಂಡ ಚಿನ್ನದ ಬೆಲೆ! ದಿಢೀರ್ 12,000 ರೂ. ಹೆಚ್ಚಳ

Ballari Airport: ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಈ ವಿಚಾರಕ್ಕೆ ಅಡ್ಡಿಯಾಗ್ತಿದ್ಯಾ-ಏನದು ಹೊಸ ವಿಚಾರ ತಿಳಿಯಿರಿ



Click it and Unblock the Notifications