ಇಂತು ಅಂತಿಂಥ ಶ್ವಾನವಲ್ಲ, ಅಪರೂಪದಲ್ಲೇ ಅಪರೂಪವಾಗಿರುವ ತಳಿ. ಜಗತ್ತಿನಲ್ಲಿ ವಿರಳವಾಗಿರುವ ನಾಯಿಯನ್ನು ಬರೋಬ್ಬರಿ ಐವತ್ತು ಕೋಟಿ ಖರ್ಚು ಮಾಡಿ ಖರೀದಿಸಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದ ಬೆಂಗಳೂರಿನ ವ್ಯಕ್ತಿಯೊಬ್ಬರ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಕಣ್ಣಿಟ್ಟಿದ್ದರು. ಒಂದು ಶ್ವಾನಕ್ಕಾಗಿ 50 ಕೋಟಿ ರೂ.ಯಷ್ಟು ಖರ್ಚು ಮಾಡಿದ್ದೇನೆ ಎನ್ನುವ ಮಾತು ಕೇಳಿ ಜನ ದಂಗಾಗಿದ್ದರು. ಅಲ್ಲದೇ ಆ ವ್ಯಕ್ತಿ ಕೇವಲ ಒಂದು ತಿಂಗಳ ತಿಂದೆಯಷ್ಟೇ ಹಾಕಿದ್ದ ಪೋಸ್ಟ್ ಸಖತ್ ವೈರಲ್ ಬೇರೆ ಆಗಿತ್ತು.
ಅಂದಹಾಗೆ ಬೆಂಗಳೂರಿನ ಆ ವ್ಯಕ್ತಿಯ ಹೆಸರು ಸತೀಶ್ ಎಂದು. 51 ವರ್ಷದ ಅವರು ಅಪರೂಪದ ಸಾಕುಪ್ರಾಣಿ ಸಾಕಣೆ ವ್ಯವಹಾರಕ್ಕೆ ಹೆಸರುವಾಸಿಯಾಗಿದ್ದಾರೆ. ಅಲ್ಲದೇ ಸೆಲೆಬ್ರಿಟಿ ಶ್ವಾನ ತಳಿಗಾರ, ಶ್ವಾನ ಪ್ರೇಮಿ ಎಂದು ಗುರುತಿಸಿಕೊಳ್ಳುತ್ತಾರೆ. ಸುಮಾರು 50 ಕೋಟಿ ರೂ. ನೀಡಿ ಫೆಬ್ರವರಿಯಲ್ಲಿ ಈ ಅಪರೂಪದ ಕಾಡಬಾಂಬ್ ಒಕಾಮಿ ಎಂಬ ವುಲ್ಫ್ ಡಾಗ್ ಖರೀದಿಸಿದ್ದೇನೆ ಎಂದು ಹೇಳಿಕೊಂಡಿರುವುದು ಮಾತ್ರವಲ್ಲದೇ, ಅತ್ಯಂತ ವಿರಳ ಹಾಗೂ ಅಪರೂಪದ ಈ ತಳಿಯು ತೋಳ ಮತ್ತು ಕಾಕೇಶಿಯನ್ ಶೆಫರ್ಡ್ ತಳಿಯ ಮಿಶ್ರತಳಿ (wolfdog) ಎಂದು ಬಣ್ಣಿಸಿದ್ದರು. ಅಮೇರಿಕನ್ ಕೆನಲ್ ಕ್ಲಬ್‌ನಂತಹ ದಾಖಲೆಗಳಲ್ಲೂ ಈ ತಳಿಯನ್ನು ಗುರುತಿಸಲಾಗಿಲ್ಲ. ಈ ಕಾರಣಕ್ಕಾಗಿ ಬ್ರೋಕರ್ ಮೂಲಕ 49 ಕೋಟಿ (4.4 ಮಿಲಿಯನ್ ಪೌಂಡ್‌ಗಳು) ರೂ.ಗೆ ಇದನ್ನು ಖರೀದಿಸಿದ್ದೇನೆ ವಿಶ್ವದ ಅಪರೂಪದ ನಾಯಿ ಎಂದು ಹೇಳಲಾಗುವ ಒಕಾಮಿ ಕೇವಲ ಎಂಟು ತಿಂಗಳ ವಯಸ್ಸು, ಮತ್ತು 75 ಕೆಜಿ ತೂಕ, 30 ಇಂಚು ಎತ್ತರವಿದೆ ಎಂದು ಬಣ್ಣಿಸಿದ್ದರು ಸತೀಶ್.

ಈ ಹಿನ್ನೆಲೆಯಲ್ಲಿ ಅವರು ಫೆಬ್ರವರಿಯಲ್ಲಿ ಹಾಕಿದ್ದ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಈ ಚಿತ್ರಗಳು ಆನ್‌ಲೈನ್‌ನಲ್ಲಿ ಭಾರಿ ಕುತೂಹಲವನ್ನು ಹುಟ್ಟುಹಾಕಿತ್ತು., ಅನೇಕರು ಸತೀಸ್ ಅವರನ್ನು ದುಬಾರಿ ಮೌಲ್ಯದ ವಿಲಕ್ಷಣ ನಾಯಿ ತಳಿಗಾರ ಎಂದು ಕರೆದಿದ್ದರು. ಒಂದೆರಡು ಕೋಟಿ ಅಂದ್ರೆ ಸುಮನಿರಬಹುದಿತ್ತಪ್ಪ, ಬರೋಬ್ಬರಿ ಐವತ್ತು ಕೋಟಿ ಅಂದ್ರೆ ಸುಮ್ಮನೇನಾ. ಶೀಘ್ರದಲ್ಲೇ, ಈ ಖರೀದಿಯ ಹಿಂದೆ ಹವಾಲಾ ವಹಿವಾಟು ಅಥವಾ ಅಕ್ರಮ ಹಣದ ಹರಿವಿನ ಸಾಧ್ಯತೆ ಇದೆ ಎಂದು ಆರೋಪಿಸಿ ಇಡಿಗೆ ದೂರುಗಳು ದಾಖಲಾಯಿತು. ದೊಡ್ದ ಮಟ್ಟದ ಖರೀಯದ್ದರಿಂದ ಸಂಭಾವ್ಯವಾದ ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ (ಫೆಮಾ) ಉಲ್ಲಂಘನೆಯಾಗಿರಬಹುದು ಎಂಬ ಅನುಮಾನದಲ್ಲಿ ಏ. 17 ರ ಗುರುವಾರದಂದು ಸತೀಸ್ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ .ಆದ್ರೆ, ಇದೀಗ ಇಡಿ ದಾಳಿ ಮಾಡಿ ಸತೀಶ್ ಅವರ ಬಂಡವಾಳವನ್ನು ಇಡಿ ಅಧಿಕಾರಿಗಳು ಬಯಲು ಮಾಡಿದ್ದಾರೆ.
ಸತೀಶ್ ಶ್ವಾನಪ್ರಿಯರಾಗಿರುವ ಕಾರಣಕ್ಕಾಗಿ ಶ್ವಾನ ತಳಿ ಸಂಘಗಳನ್ನು ಮುನ್ನಡೆಸುತ್ತಿದ್ದಾರೆ. ಹಲವು ವರ್ಷಗಳ ಹಿಂದೆಯೇ ನಾಯಿ ಸಾಕುವುದನ್ನು ಬಿಟ್ಟಿದ್ದರೂ ಆಗಾಗ್ಗೆ ಅಪರೂಪದ ನಾಯಿಗಳೊಂದಿಗೆ ಪ್ರದರ್ಶನದಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ.ಅಲ್ಲದೇ ಸತೀಶ್ ಯಾವುದೇ ಕಾರ್ಯಕ್ರಮಕ್ಕೆ ತಮ್ಮ ವಿರಳ ತಳಿಯ ಶ್ವಾನದೊಂದಿಗೆ ಹೋದರೆ ಅದಕ್ಕೆ ನಿರ್ದಿಷ್ಟ ಮೊತ್ತವನ್ನು ಪಡೆಯುವುದಾಗಿ ಹಿಂದೆ ಹೇಳಿಕೊಂಡಿದ್ದರು.
ವಿಚಾರಣೆಯ ಸಂದರ್ಭದಲ್ಲಿ, ಇಡಿ ಸತೀಶ್ ಅವರನ್ನು ನಾಯಿಯನ್ನು ಹಾಜರುಪಡಿಸುವಂತೆ ತಿಳಿಸಿದಾಗ ಪ್ರಸ್ತುತ ಶ್ವಾನ ಸ್ನೇಹಿತನ ಬಳಿ ಇದೆ. ಅದು ನನ್ನದಲ್ಲ. ತಾನು ಕೇವಲ ಛಾಯಾಚಿತ್ರಗಳಿಗೆ ಪೋಸ್ ನೀಡಿದ್ದೇನೆ ಎಂಡು ಹೇಳಿಕೊಂಡಿದ್ದಾರೆ. ಇದಲ್ಲದೇ ಸ್ವಾನದ ವಿಚಾರವಾಗಿ ಹೇಳಿರುವುದು ಸುಳ್ಳು. ಕೋಟ್ಯಾಂತರ ರೂಪಾಯಿ ಗೆ ವಿದೇಶಿ ನಾಯಿ ಖರೀದಿ ಎಂದುರುವುದು ಕೂಡಾ ಸುಳ್ಳು ಎಂಬ ಬಯಲಾಗಿದೆ. ಬೇರೆಯವರ ನಾಯಿಯೊಂದಿಗೆ ಕೇವಲ ಪೋಟೋ ಕ್ಲಿಕ್ಕಿಸಿಕೊಂಡಿದ್ದೇನೆ ಎಂದು ಆರ್ಥಿಕ ಅಕ್ರಮಗಳ ಆರೋಪ ನಿರಾಕರಿಸಿದ್ದಾರೆ. ಆತನ ಆದಾಯ ಮತ್ತು ಜಿಎಸ್‌ಟಿ ಬಗ್ಗೆ ಮಾಹಿತಿ ಪಡೆಯಲು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮುಂದಾಗಿದ್ದಾಗ ಆತನ ಇಡೀ ವ್ಯವಹಾರ ಬಯಲಾಗಿದ್ದು, ಶ್ವಾನ ಕೂಡಾ ವಿದೇಶಿ ತಳಿಯಾಗಿರದೆ, ಭಾರತೀಯ ತಳಿಯಾಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ


Click it and Unblock the Notifications