ಮುಸ್ಲಿಮರ ಪವಿತ್ರ ಹಬ್ಬ ಈದ್ ಉಲ್-ಫಿತರ್ (Eid ul-Fitr) ಅಥವಾ ರಂಜಾನ್ ಹಬ್ಬವನ್ನು (Ramadan) ಬಹಳ ಅದ್ಧೂರಿಯಿಂದ ಆಚರಿಸಲಾಗುತ್ತದೆ. ಇದು ರಂಜಾನ್ ತಿಂಗಳ 30 ದಿನಗಳ ಉಪವಾಸ ಮುಗಿದ ನಂತರ ಆಚರಿಸಲಾಗುತ್ತದೆ. ಸಾಮಾನ್ಯವಾಗಿ ರಂಜಾನ್ ಹಬ್ಬವನ್ನು ಚಂದ್ರನ ದರ್ಶನದ ನಂತರ ಹಬ್ಬದ ದಿನವನ್ನು ಘೋಷಣೆ ಮಾಡಲಾಗುತ್ತದೆ. ಈಗಾಗಲೇ ಹಲವಾರು ದೇಶಗಳಲ್ಲಿ ಈದ್ ಉಲ್-ಫಿತರ್ ಅನ್ನು ಮಾರ್ಚ್ 20, ಶುಕ್ರವಾರದಂದು ಆಚರಿಸುವ ನಿರೀಕ್ಷೆಯಿದೆ. ಆದರೆ ಅಂತಿಮ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಆದ್ರೆ ಶವ್ವಾಲ್ ಅರ್ಧಚಂದ್ರನ ಗೋಚರತೆ ನಂತರ ನಿರ್ಧಾರವಾಗುತ್ತದೆ.

ಇನ್ನು ದೆಹಲಿಯಲ್ಲಿ, ಇಂದು ಅಂದರೆ ಮಾರ್ಚ್ 19 ರಂದು ಚಂದ್ರನು ಗೋಚರಿಸುವ ಸಾಧ್ಯತೆ ಇದೆ. ಬಹುತೇಕ ಸಂಜೆ 6:24 ರಿಂದ 6:58 ರ ವೇಳೆಗೆ ಚಂದ್ರ ಗೋಚರಿಸುವ ಸಾಧ್ಯತೆ ಇದೆ.
ಗಲ್ಫ್ ದೇಶಗಳಲ್ಲಿ ಯಾವಾಗ?
ಸೌದಿ ಅರೇಬಿಯಾ ಸುಪ್ರೀಂ ಕೋರ್ಟ್ ಮತ್ತು ಮೂನ್ ಸೈಟಿಂಗ್ ಕಮಿಟಿ ಘೋಷಣೆ ಪ್ರಕಾರ, ಮಾರ್ಚ್ 18 ರಂದು ಶವ್ವಾಲ್ ಚಂದ್ರ ಎಲ್ಲೂ ಕಾಣಿಸಿಕೊಂಡಿಲ್ಲ ಎಂದು ಹೇಳಲಾಗಿದೆ. ಆದ್ದರಿಂದ ರಂಜಾನ್ 30 ದಿನಗಳು ಪೂರ್ಣಗೊಂಡು, ಈದ್ ಉಲ್-ಫಿತರ್ ಮಾರ್ಚ್ 20 ರಂದು ಆಚರಿಸಲಾಗುತ್ತದೆ ಎಂದು ಘೋಷಿಸಲಾಗಿದೆ. ಅಲ್ಲದೇ ಯುಎಇ, ಕುವೈತ್, ಖತಾರ್ ಸೇರಿದಂತೆ ಹಲವು ಗಲ್ಫ್ ದೇಶಗಳು ಸಹ ಸೌದಿಯೊಂದಿಗೆ ಒಂದೇ ದಿನದಲ್ಲಿ ಮಾರ್ಚ್ 20 ರಂದು ಆಚರಿಸಲಿದೆ ಎಂದು ಹೇಳಲಾಗಿದೆ.
ಭಾರತದಲ್ಲಿ ಯಾವಾಗ ಚಂದ್ರನ ದರ್ಶನ?
ಇನ್ನು ಭಾರತದಲ್ಲಿ ಸಾಮಾನ್ಯವಾಗಿ ಸ್ಥಳೀಯ ಚಂದ್ರ ದರ್ಶನದ ಆಧಾರದ ಮೇಲೆ ಈದ್ ಆಚರಣೆ ಮಾಡಲಾಗುತ್ತದೆ. ಇನ್ನು ಹಲವು ಮೂಲಗಳ ಪ್ರಕಾರ, ದೆಹಲಿ ಎನ್‌ಸಿಆರ್ ಸೇರಿದಂತೆ ಉತ್ತರ ಭಾರತದಲ್ಲಿ ಮಾರ್ಚ್ 19 ರ 6:24 ರಿಂದ 6:58 ರವರೆಗೆ ಚಂದ್ರ ದರ್ಶನವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನೂ ಕೆಲವು ವರದಿಗಳ ಪ್ರಕಾರ, ಚಂದ್ರ ದರ್ಶನ ಮಾರ್ಚ್ 20 ರ ಸಂಜೆ ವೇಳೆಗೆ ಆಗುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಭಾರತದಲ್ಲಿ ಈದ್ ಉಲ್-ಫಿತರ್ ಮಾರ್ಚ್ 21, 2026 ರ ಶನಿವಾರದಂದು ಆಚರಿಸಲಾಗುತ್ತದೆ ಎಂದು ವರದಿಯಾಗಿದೆ.
ಈದ್ ಉಲ್-ಫಿತರ್ ಇಸ್ಲಾಂ ಧರ್ಮದ ಅತ್ಯಂತ ಮಹತ್ವದ ಹಬ್ಬಗಳಲ್ಲಿ ಒಂದಾಗಿದೆ. ಇದನ್ನು ರಂಜಾನ್ ಈದ್ ಅಥವಾ ಮೀಥಿ ಈದ್ ಎಂದೂ ಕರೆಯುತ್ತಾರೆ. ರಂಜಾನ್ ತಿಂಗಳಿನ 29 ಅಥವಾ 30 ದಿನಗಳ ಉಪವಾಸ, ಪ್ರಾರ್ಥನೆ, ಕುರಾನ್ ಪಠಣ ಮತ್ತು ದಾನಗಳ ನಂತರ ಈ ಹಬ್ಬವನ್ನು ಆಚರಿಸಲಾಗುತ್ತದೆ.
ಇದೀಗ ರಂಜಾನ್ ಹಬ್ಬಕ್ಕೆ ದಿನಗಣನೆ ಆರಂಭವಾಗಿದ್ದು, ಚಂದ್ರನ ಗೋಚರಣೆ ಬೆನ್ನಲ್ಲೇ ಈ ಬಾರಿ ರಂಜಾನ್ ಹಬ್ಬ ಯಾವಾಗ ಆಚರಿಸಲಾಗುತ್ತದೆ ಎಂದು ಹೇಳಲಾಗುತ್ತದೆ. ಈಗಾಘಲೇ ರಂಜಾನ್ ಹಬ್ಬದ ಸಂಭಾವ್ಯ ದಿನಾಂಕವನ್ನು ಘೋಷಿಸಲಾಗಿದ್ದು, ಇನ್ನೆರಡು ದಿನಗಳಲ್ಲಿ ಹಬ್ಬದ ದಿನಾಂಕ ಘೋಷಣೆಯಾಗಲಿದೆ. ಇಸ್ಲಾಂ ಧರ್ಮದ ಪವಿತ್ರ ಹಬ್ಬ ರಂಜಾನ್‌ಗಾಗಿ ಎಲ್ಲರೂ ಕಾತುರದಲ್ಲಿದ್ದು, ಪರಸ್ಪರ ಸಹೋದರತ್ವವನ್ನು ಸಾರು ಹಬ್ಬ ಇದಾಗಲಿದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!



Click it and Unblock the Notifications