For Quick Alerts
ALLOW NOTIFICATIONS  
For Daily Alerts

ಚುನಾವಣಾ ಆಯುಕ್ತ ಅಶೋಕ್ ಲವಾಸಾ ಎಡಿಬಿ ಗೆ ಉಪಾಧ್ಯಕ್ಷ

|

ಚುನಾವಣಾ ಆಯುಕ್ತ ಅಶೋಕ್ ಲವಾಸಾ ಅವರು ಫಿಲಿಪೈನ್ಸ್ ಮೂಲದ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ಎಡಿಬಿ) ಗೆ ಉಪಾಧ್ಯಕ್ಷರಾಗಿ ನೇಮಕವಾಗಿದ್ದಾರೆ.

ಭಾರತದ ಚುನಾವಣಾ ಆಯೋಗದಲ್ಲಿ ಲವಾಸಾ ಅವರ ಅಧಿಕಾರಾವಧಿಯಲ್ಲಿ ಇನ್ನೂ ಎರಡು ವರ್ಷಗಳು ಉಳಿದಿವೆ. ಅವರು 2022 ರ ಅಕ್ಟೋಬರ್‌ನಲ್ಲಿ ಮುಖ್ಯ ಚುನಾವಣಾ ಆಯುಕ್ತರಾಗಿ (ಸಿಇಸಿ) ನಿವೃತ್ತರಾಗುತ್ತಿದ್ದರು.

ಅವರ ಅಕಾಲಿಕ ನಿರ್ಗಮನ - ಚುನಾವಣಾ ಆಯೋಗದ ಇತಿಹಾಸದಲ್ಲಿ ಎರಡನೆಯದು. 1973 ರಲ್ಲಿ, ಮುಖ್ಯ ಚುನಾವಣಾ ಆಯುಕ್ತ ನಾಗೇಂದರ್ ಸಿಂಗ್ ಅವರು ಚುನಾವಣಾ ಆಯೋಗದಲ್ಲಿ ತಮ್ಮ ಅವಧಿಯನ್ನು ಪೂರ್ಣಗೊಳಿಸುವ ಮೊದಲು ರಾಜೀನಾಮೆ ನೀಡಿದ್ದರು.

ಏಷ್ಯಾ ರಾಷ್ಟ್ರಗಳ ಆರ್ಥಿಕ ಭವಿಷ್ಯದ ಬಗ್ಗೆ ಎಡಿಬಿ ಹೇಳಿತು ಕರಾಳ ಸತ್ಯಏಷ್ಯಾ ರಾಷ್ಟ್ರಗಳ ಆರ್ಥಿಕ ಭವಿಷ್ಯದ ಬಗ್ಗೆ ಎಡಿಬಿ ಹೇಳಿತು ಕರಾಳ ಸತ್ಯ

ಎಡಿಬಿ ಉಪಾಧ್ಯಕ್ಷರನ್ನು ಮೂರು ವರ್ಷಗಳ ಅವಧಿಗೆ ನೇಮಕ ಮಾಡುತ್ತದೆ, ಅದನ್ನು ಇನ್ನೂ ಎರಡು ವರ್ಷಗಳವರೆಗೆ ವಿಸ್ತರಿಸಬಹುದು. ಎಡಿಬಿ ಅಧ್ಯಕ್ಷರು ಆರು ಉಪಾಧ್ಯಕ್ಷರನ್ನು ಒಳಗೊಂಡ ನಿರ್ವಹಣಾ ತಂಡದ ಮುಖ್ಯಸ್ಥರಾಗಿದ್ದಾರೆ.

ಚುನಾವಣಾ ಆಯುಕ್ತ ಅಶೋಕ್ ಲವಾಸಾ ಎಡಿಬಿ ಗೆ ಉಪಾಧ್ಯಕ್ಷ

ಲವಾಸಾ ಜನವರಿ 23, 2018 ರಂದು ಚುನಾವಣಾ ಆಯುಕ್ತರಾಗಿ ಸೇರಿಕೊಂಡರು. ಅವರು ಹರಿಯಾಣ ಕೇಡರ್ (1980 ಬ್ಯಾಚ್) ನ ನಿವೃತ್ತ ಐಎಎಸ್ ಅಧಿಕಾರಿ. ಅವರು ಹಣಕಾಸು ಕಾರ್ಯದರ್ಶಿಯಾಗಿ ನಿವೃತ್ತರಾದರು ಮತ್ತು ಪರಿಸರ ಮತ್ತು ನಾಗರಿಕ ವಿಮಾನಯಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. 2001-02ರಲ್ಲಿ ಆರ್ಥಿಕ ವ್ಯವಹಾರಗಳ ಇಲಾಖೆಯಲ್ಲಿ ಜಂಟಿ ಕಾರ್ಯದರ್ಶಿಯಾಗಿ ಅವರು ಎಡಿಬಿಗೆ ಸಂಬಂಧಿಸಿದ ವಿಷಯಗಳನ್ನು ನೋಡಿಕೊಂಡಿದ್ದರು.

Read more about: bank ಬ್ಯಾಂಕ್
English summary

Election Commissioner Ashok Lavasa Is Appionted As A Vice President for ADB

Election Commissioner Ashok Lavasa Is Appionted As A Vice President for ADB
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X