ಚೀನಾ ಭಾರತ ಗಡಿಯಲ್ಲಿ ಸೇನಾ ಉದ್ವಿಗ್ನತೆ ಹೆಚ್ಚಾಗಿ ಇದೀಗ ಚೀನಾದ ಮೇಲೆ ಭಾರತದ ಕರಿನೆರಳು ಬಿದ್ದಿದೆ. ಬಾಯ್ಕಾಟ್ ಚೀನಾ ಎಂಬ ಅಭಿಯಾನ ಶುರುವಾಗಿದೆ. ಚೀನಾದಿಂದ ಆಮದು ನಿಲ್ಲಿಸಬೇಕು ಎಂಬ ಕೂಗುಗಳು ಕೇಳಿ ಬರುತ್ತಿವೆ. ಆದರೆ, ಇನ್ನೂ ಕೆಲವರು ಬ್ಯಾನ್ ಮಾಡುವುದು ಸರಿಯಲ್ಲ ಇದರಿಂದ ಭಾರತದ ಆರ್ಥಿಕತೆಗೆ ಹೊಡೆತ ಬಿಳ್ಳುತ್ತದೆ ಎಂದು ಹೇಳುತ್ತಿದ್ದಾರೆ. ಭಾರತ ಚೀನಾ ವಿರುದ್ಧ ಆರ್ಥಿಕವಾಗಿಯೇ ಪ್ರತಿಕಾರದ ಹೆಜ್ಜೆ ತೆಗೆದುಕೊಳ್ಳಬೇಕು ಎಂಬ ವಾದ ಜೋರಾಗಿದೆ. ಈಗಾಗಲೇ ಕೇಂದ್ರ ಸರ್ಕಾರ ಆ ನಿಟ್ಟಿನಲ್ಲಿ ಚೀನಾ ಮೂಲದ ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿಷೇಧ ಮಾಡಿ ಬಿಸಿ ಮುಟ್ಟಿಸಿದೆ.
ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಲು ಭಾರತ ಸರ್ಕಾರ ನೋಡುತ್ತಿದೆ. ನೆರೆಯ ದೇಶದಿಂದ ವಿದ್ಯುತ್ ಉಪಕರಣಗಳನ್ನು ಆಮದು ಮಾಡಿಕೊಳ್ಳುವುದಕ್ಕೆ ಸಂಪೂರ್ಣ ನಿಷೇಧ ಹೇರಲಾಗುವುದು ಎಂದು ಕೇಂದ್ರ ಇಂಧನ ಸಚಿವ ಆರ್ ಕೆ ಸಿಂಗ್ ಶುಕ್ರವಾರ ಹೇಳಿದ್ದಾರೆ. ಈ ಹೇಳಿಕೆ ಚೀನಾದಲ್ಲಿ ತಲ್ಲಣ ಮೂಡಿಸಿದೆ.
ವಿದ್ಯುತ್ ಸರಬರಾಜು ವ್ಯವಸ್ಥೆಯಲ್ಲಿ ಬಳಸಲು ಆಮದು ಮಾಡಿಕೊಳ್ಳುವ ಎಲ್ಲಾ ಉಪಕರಣಗಳನ್ನು ದೇಶದಲ್ಲಿ ಪರೀಕ್ಷಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ. ಪೂರ್ವ ದೇಶಗಳಿಂದ ಯಾವುದೇ ಉಪಕರಣಗಳನ್ನು ಆಮದು ಮಾಡಿಕೊಳ್ಳಲು ಸರ್ಕಾರದ ಪೂರ್ವಾನುಮತಿ ಅಗತ್ಯವಿರುತ್ತದೆ ಎಂದು ಹೇಳಿದ್ದಾರೆ.
ವಿದ್ಯುತ್ ಉಪಕರಣಗಳನ್ನು ತಯಾರಿಸುವ ದೇಶೀಯ ಸಾಮರ್ಥ್ಯವನ್ನು ಹೊಂದಿದೆ
ಭಾರತದಲ್ಲಿ ವಿದ್ಯುತ್ ಯೋಜನೆಗಳ ವೇಗ ನಿಧಾನವಾಗುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಿಂಗ್, ದೇಶವು ಎಲ್ಲಾ ರೀತಿಯ ವಿದ್ಯುತ್ ಉಪಕರಣಗಳನ್ನು ತಯಾರಿಸುವ ದೇಶೀಯ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದರು. ಆಮದು ಮಾಡಿದ ವಿದ್ಯುತ್ ಉಪಕರಣಗಳ ಉದ್ಯಮವು ದೇಶೀಯ ಮಾರುಕಟ್ಟೆಯಲ್ಲಿ 35% ಪಾಲನ್ನು ಹೊಂದಿದೆ. ಆಮದುಗಳು ೨೦೦೬ ರಿಂದ ೨೦೧೯ ರ ನಡುವೆ 13.5% ನಷ್ಟು ವಾರ್ಷಿಕ ಬೆಳವಣಿಗೆಯನ್ನು ದಾಖಲಿಸಿವೆ. ದೇಶೀಯ ಉದ್ಯಮವು ೨೦19 ರಲ್ಲಿ `52,910 ಕೋಟಿ ಮೌಲ್ಯದ ವಿದ್ಯುತ್ ಉಪಕರಣಗಳನ್ನು ರಫ್ತು ಮಾಡಿದೆ.
ವಿದ್ಯುತ್ ಉಪಕರಣಗಳ ಪ್ರಮುಖ ಮೂಲ
ಕಳೆದ ಕೆಲವು ವರ್ಷಗಳಿಂದ ಚೀನಾ ಭಾರತಕ್ಕೆ ವಿದ್ಯುತ್ ಉಪಕರಣಗಳ ಪ್ರಮುಖ ಮೂಲವಾಗಿದೆ. ಮೌಲ್ಯದ ದೃಷ್ಟಿಯಿಂದ ಒಟ್ಟು ಆಮದು ಮಾಡಿದ ಯಂತ್ರಗಳಲ್ಲಿ ಮೂರನೇ ಒಂದು ಭಾಗದಷ್ಟು ಪಾಲು ಹೊಂದಿದೆ. ಯಂತ್ರಗಳ ಆಮದು ಸಾಕಷ್ಟು ಇದ್ದರೂ, ಭಾರತವುವೂ ಕೂಡ ಅಂತಹ ಉಪಕರಣಗಳ ರಫ್ತುದಾರನಾಗಿರುವುದರ ಹೊರತಾಗಿಯೂ ಚೀನಾದ ಆಮದು ವೇಗವಾಗಿ ಏರಿಕೆಯಾಗುತ್ತಿದೆ.
ಸೌಲಭ್ಯ ಸಿಗುತ್ತದೆಯೇ ಎಂಬುದು ತಕ್ಷಣ ಸ್ಪಷ್ಟವಾಗಿಲ್ಲ
ಈಗಾಗಲೇ ಚೀನಾದ ಸಲಕರಣೆಗಳ ಸರಬರಾಜುದಾರರೊಂದಿಗೆ ಒಪ್ಪಂದ ಮಾಡಿಕೊಂಡಿರುವ ಭಾರತೀಯ ವಿದ್ಯುತ್ ಉತ್ಪಾದಕರಿಗೆ ಇತ್ತೀಚಿನ ನಿರ್ಧಾರದಿಂದ ಸೌಲಭ್ಯ ಸಿಗುತ್ತದೆಯೇ ಎಂಬುದು ತಕ್ಷಣ ಸ್ಪಷ್ಟವಾಗಿಲ್ಲ. ಪ್ರಸ್ತುತ ನಿರ್ಮಾಣ ಹಂತದಲ್ಲಿರುವ ವಿದ್ಯುತ್ ಸ್ಥಾವರಗಳಲ್ಲಿ ಎಲ್ಲಾ ಖಾಸಗಿ ವಲಯದವರು ಬಾಯ್ಲರ್, ಟರ್ಬೈನ್ ಮತ್ತು ಜನರೇಟರ್ ಸರಬರಾಜು ಮಾಡಲು ಚೀನಾದ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.
ಭಾರತೀಯ ವಿದ್ಯುತ್ ಉಪಕರಣಗಳ ತಯಾರಕರ ಸಂಘ
ಈ ಕ್ರಮವನ್ನು ಸ್ವಾಗತಿಸಿದ ಭಾರತೀಯ ವಿದ್ಯುತ್ ಉಪಕರಣಗಳ ತಯಾರಕರ ಸಂಘ (ಐಇಇಎಂಎ) ಈ ನಿರ್ಧಾರವು ದೀರ್ಘಕಾಲದ ಬೇಡಿಕೆಯನ್ನು ಪರಿಹರಿಸಿದೆ ಮತ್ತು ದೇಶದ "30-40% ಹೆಚ್ಚುವರಿ ಉತ್ಪಾದನಾ ಸಾಮರ್ಥ್ಯವನ್ನು" ಬಳಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಹೇಳಿದರು. "ಇದು ಚೀನಾದಿಂದ ಅಗ್ಗದ ಮತ್ತು ಕೆಳಮಟ್ಟದ-ಗುಣಮಟ್ಟದ ಆಮದನ್ನು ನಿರ್ಬಂಧಿಸುತ್ತದೆ ಮತ್ತು ನಮ್ಮ ನಿರ್ಣಾಯಕ ವಿದ್ಯುತ್ ಮೂಲಸೌಕರ್ಯದ ಮೇಲೆ ಸೈಬರ್ ದಾಳಿಯ ಅಪಾಯವನ್ನು ಕಡಿಮೆ ಮಾಡುತ್ತದೆ" ಎಂದು ಐಇಇಎಂಎ ಅಧ್ಯಕ್ಷ ಆರ್.ಕೆ.ಚುಗ್ ಹೇಳಿದ್ದಾರೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ನಿಫ್ಟಿ ಏರಿಕೆ: ಈಗಲೇ ಹೂಡಿಕೆ ಮಾಡಬೇಕಾ ಅಥವಾ ಕಾಯಬೇಕಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!



Click it and Unblock the Notifications