ಟೆಸ್ಲಾ ಒಡೆಯ, ವಿಶ್ವದ ಅತೀ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಎಲಾನ್ ಮಸ್ಕ್ ಟ್ವಿಟ್ಟರ್ ಅನ್ನು ಖರೀದಿ ಮಾಡಿದ ಬಳಿಕ ಅದರಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿದ್ದಾರೆ. ಬೇರೆ ಬೇರೆ ವಲಯದ ಸಂಪರ್ಕವನ್ನು ಕೂಡಾ ಆರಂಭಿಸಿದ್ದಾರೆ. ಈಗ ಬರವಣಿಗೆ ಸ್ವಾತಂತ್ರ್ಯವನ್ನು ಬಯಸುವ, ಅಧಿಕ ಸಂಪಾದನೆ ಮಾಡಲು ಬಯಸುವ ಪತ್ರಿಕೋದ್ಯಮಿಗಳಿಗೆ ಎಲಾನ್ ಮಸ್ಕ್ ಆಫರ್ ನೀಡಿದ್ದಾರೆ.
ಈ ಹಿಂದೆ ಟ್ವಿಟ್ಟರ್ ಎಂದು ಕರೆಯಲಾಗುತ್ತಿದ್ದ, ಎಕ್ಸ್‌ನಲ್ಲಿ ಪತ್ರಕರ್ತರು ತಮ್ಮ ವರದಿಯನ್ನು ನೇರವಾಗಿ ಪ್ರಕಟಿಸುವಂತೆ ಎಲಾನ್ ಮಸ್ಕ್ ಹೇಳಿದ್ದಾರೆ. ಪತ್ರಕರ್ತರು ನೇರವಾಗಿ ಎಕ್ಸ್ (ಟ್ವಿಟ್ಟರ್) ಮೂಲಕ ಪ್ರಕಟಿಸಿದರೆ, ಹೂಡಿಕೆದಾರರು ನಿಮಗೆ ಹೆಚ್ಚಿನ ಆದಾಯವನ್ನು ಮತ್ತು ಅಧಿಕ ಸ್ವಾತಂತ್ರ್ಯವನ್ನು ನೀಡುತ್ತಾರೆ ಎಂದು ಎಲಾನ್ ಮಸ್ಕ್ ಹೇಳಿದ್ದಾರೆ.

ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಎಲಾನ್ ಮಸ್ಕ್
"ನೀವು ನಿಮ್ಮ ಬರವಣಿಗೆಗೆ ಹೆಚ್ಚಿನ ಸ್ವಾತಂತ್ರ್ಯ ಮತ್ತು ಹೆಚ್ಚಿನ ಆದಾಯವನ್ನು ಬಯಸುವ ಪತ್ರಕರ್ತರಾಗಿದ್ದರೆ, ಈ ವೇದಿಕೆಯಲ್ಲಿ ನೇರವಾಗಿ ನಿಮ್ಮ ವರದಿಯನ್ನು ಪ್ರಕಟಿಸಿ," ಎಂದು ಎಲಾನ್ ಮಸ್ಕ್ ಎಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಹಿಂದೆ ಎಲಾನ್ ಮಸ್ಕ್ ತಮ್ಮ ಲೇಖನಗಳನ್ನು ಓದಲು ಬಳಕೆದಾರರಿಗೆ ಶುಲ್ಕ ವಿಧಿಸುವ ಎಕ್ಸ್ ಪ್ಲಾಟ್‌ಫಾರ್ಮ್ ಅನ್ನು ಬಳಸಲು ಪತ್ರಕರ್ತರಿಗೆ ಅನುಮತಿ ನೀಡುವ ತನ್ನ ಯೋಜನೆಗಳ ಬಗ್ಗೆ ಮಾತನಾಡಿದರು. ಮಾಸಿಕ ಚಂದಾದಾರಿಕೆಗೆ ಸೈನ್ ಅಪ್ ಮಾಡದಿದ್ದರೆ ಬಳಕೆದಾರರಿಗೆ "ಪ್ರತಿ ಲೇಖನದ ಆಧಾರದ ಮೇಲೆ" ಶುಲ್ಕ ವಿಧಿಸಲಾಗುತ್ತದೆ ಎಂದು ಮಸ್ಕ್ ಹೇಳಿದ್ದರು.
ಈ ನಡುವೆ ವರದಿಗಳ ಪ್ರಕಾರ, ಎಎಫ್‌ಪಿ ಸುದ್ದಿ ಸಂಸ್ಥೆಯು ಎಕ್ಸ್ ಪ್ಲಾಟ್‌ಫಾರ್ಮ್ ವಿರುದ್ಧ ಫ್ರಾನ್ಸ್‌ನಲ್ಲಿ ಹಕ್ಕುಸ್ವಾಮ್ಯ ಪ್ರಕರಣ ದಾಖಲಿಸಿದ್ದು, ಎಲಾನ್ ಮಸ್ಕ್ ಅದರಲ್ಲಿ ಸಿಲುಕಿದ್ದಾರೆ. ಪತ್ರಕರ್ತರು ತಮ್ಮ ಲೇಖನವನ್ನು ಎಕ್ಸ್‌ನಲ್ಲಿ ಪ್ರಕಟಿಸಿ ಎಂದು ಎಲಾನ್ ಮಸ್ಕ್ ಕರೆ ನೀಡಿದ ಸಂದರ್ಭದಲ್ಲೇ ಈ ಹಕ್ಕುಸ್ವಾಮ್ಯದ ಪ್ರಕರಣ ನಡೆದಿದೆ.
ಲಿಂಕ್‌ಡಿನ್‌ಗೆ ಸ್ಪರ್ಧೆ ನೀಡುವ ಎಕ್ಸ್?
ಎಲಾನ್ ಮಸ್ಕ್ ಎಕ್ಸ್ ಎಂಬ ಜನರಿಗೆ ಎಲ್ಲ ಅಗತ್ಯಗಳನ್ನು ಪೂರೈಸುವ 'ಎವೆರಿಥಿಂಗ್ ಅಪ್ಲಿಕೇಶನ್' ಅನ್ನು ರಚಿಸುವ ಬಗ್ಗೆ ಮಾತನಾಡಿದ್ದಾರೆ. ಈ ಕಲ್ಪನೆಯನ್ನು ಚೀನಾದ ವಿಚಾಟ್‌ನೊಂದಿಗೆ ಹೋಲಿಸಲಾಗುತ್ತಿದೆ. ವಿಚಾಡ್‌ನಲ್ಲಿ ಬಳಕೆದಾರರಿಗೆ ಪಾವತಿಗಳನ್ನು ಮಾಡಲು, ಚಲನಚಿತ್ರ ಟಿಕೆಟ್‌ಗಳನ್ನು ಬುಕ್ ಮಾಡಲು, ಮತ್ತು ಹಲವಾರು ಕಾರ್ಯಗಳನ್ನು ಮಾಡಲು ಅವಕಾಶ ನೀಡುತ್ತದೆ.
ಪ್ರಾರಂಭದಿಂದಲೂ ಮೈಕ್ರೋ-ಬ್ಲಾಗಿಂಗ್ ಸೈಟ್ ಆಗಿದ್ದ ಟ್ವಿಟ್ಟರ್ ಹಂತ ಹಂತವಾಗಿ ಎಕ್ಸ್ ಆಗಿ ಬದಲಾಗಿದೆ. ಇತ್ತೀಚಿನ ವರದಿಗಳ ಪ್ರಕಾರ, ಪ್ಲಾಟ್‌ಫಾರ್ಮ್ ಶೀಘ್ರದಲ್ಲೇ ಆನ್‌ಲೈನ್‌ನಲ್ಲಿ ಉದ್ಯೋಗಗಳನ್ನು ಹುಡುಕಲು ಬಳಕೆದಾರರಿಗೆ ಅವಕಾಶ ನೀಡುತ್ತದೆ.
ಲಿಂಕ್ಡಿನ್ ಮತ್ತು ನೌಕರಿ ಡಾಟ್ ಕಾಮ್‌ನಂತ ಉದ್ಯೋಗ ಹುಡುಕಾಟ ಪೋರ್ಟಲ್‌ಗಳೊಂದಿಗೆ ಸ್ಪರ್ಧಿಸುವ ಪ್ರಯತ್ನಕ್ಕೆ ಎಕ್ಸ್ ಇರುತ್ತಿದೆ ಎಂದು ವರದಿ ಹೇಳಿದೆ. ಆನ್‌ಲೈನ್‌ನಲ್ಲಿ ಉದ್ಯೋಗ ಅವಕಾಶವನ್ನು ನೋಡಲು ಎಕ್ಸ್‌ನಲ್ಲಿ ಶೀಘ್ರದಲ್ಲೇ ಅಪ್‌ಗ್ರೇಡ್ ಇರಲಿದೆ ಎಂದು ವರದಿ ಹೇಳಿದೆ.


Click it and Unblock the Notifications