ಈಗಾಗಲೇ ವಿಶ್ವದ ಶ್ರೀಮಂತ ವ್ಯಕ್ತಿ ಎಂದು ಗುರುತಿಸಿಕೊಂಡಿರುವ ಉದ್ಯಮಿ ಎಲಾನ್ ಮಸ್ಕ್ ಇದೀಗ ಮತ್ತೊಂದು ಗೌರವಕ್ಕೆ ಪಾತ್ರರಾಗಿದ್ದಾರೆ. ಮಸ್ಕ್ ಇದೀಗ ತನ್ನ ಸಂಪತ್ತನ್ನು ಬರೊಬ್ಬರಿ 400 ಶತಕೋಟಿ ಡಾಲರ್‌ಗೂ ಹೆಚ್ಚು ವೃದ್ದಿಸಿಕೊಂಡಿದ್ದು, ಈ ಮೂಲಕ 21ನೇ ಶತಮಾನದಲ್ಲಿ ಈ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದ ವಿಶ್ವದ ಮೊದಲ ವ್ಯಕ್ತಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಡೊನಾಲ್ಡ್ ಟ್ರಂಪ್ ಅವರ ಕಟ್ಟಾ ಅಭಿಮಾನಿಯಾಗಿರುವ ಎಲಾನ್ ಮಸ್ಕ್ ಅವರು ಮುಂದೆ ಟ್ರಂಪ್ ಅವರ ಸಚಿವ ಸಂಪುಟ ಸೇರುವುದು ಬಹುತೇಕ ಖಚಿತ ಎನ್ನಲಾಗಿದೆ. ಇದರಿಂದ ಎಲಾನ್ ಮಸ್ಕ್ ಅವರ ಒಡೆತನದಲ್ಲಿರುವ ಸ್ಪೇಸ್ ಎಕ್ಸ್ ನ ಕೆಲವೊಂದು ಷೇರುಗಳನ್ನು ಮಾರಾಟದ ಮೂಲಕ ಭಾರೀ ದೊಡ್ಡ ಲಾಭ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ ಸ್ಪೇಸ್ ಎಕ್ಸ್ ಷೇರುಗಳ ಮಾರಾಟದಿಂದ ಮಸ್ಕ್ ಅವರು ಸರಿಸುಮಾರು $50 ಶತಕೋಟಿ ಹೆಚ್ಚಿಗೆ ಗಳಿಸಿಕೊಂಡಿದ್ದು, ಒಟ್ಟಾರೆಯಾಗಿ ಅವರ ಸಂಪತ್ತಿನ ಮೌಲ್ಯ ಸುಮಾರು 439.2 ಶತಕೋಟಿ ಡಾಲರ್ ಮೊತ್ತಕ್ಕೆ ಏರಿಕೆಯಾಗಿದೆ.
ಲಾಭ ತಂದುಕೊಟ್ಟ ಟ್ರಂಪ್ ಆಯ್ಕೆ
ಎಲ್ಲರಿಗೂ ತಿಳಿದಿರುವಂತೆ ಮಸ್ಕ್ ಅವರು ಟ್ರಂಪ್ ಅವರ ಕಟ್ಟಾ ಅಭಿಮಾನಿಯಾಗಿದಾರೆ. ಈಗಾಗಲೇ ಟ್ರಂಪ್ ಅವರ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಕೂಡ ಮಸ್ಕ್ ಕಾಣಿಸಿಕೊಂಡು, ವಿಶ್ವದ ಗಮನ ಸೆಳೆದಿದ್ದರು. ಇನ್ನು ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಭಾರೀ ಅಂತರದಲ್ಲಿ ಗೆಲುವು ಸಾಧಿಸಿದ್ದು, ಮುಂದಿನ ಜನವರಿ ಅಂತ್ಯದಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಸದ್ಯ ಈ ಎಲ್ಲಾ ಬೆಳವಣಿಗೆಗಳು ಮಸ್ಕ್‌ಗೆ ಲಾಭವಾಗಿ ಪರಿಣಮಿಸಿದೆ. ಟ್ರಂಪ್ ಆಗಮನದ ಪರಿಣಾಮವಾಗಿ ಮಸ್ಕ್ ಅವರ ಉದ್ಯಮ ಕೂಡ ರಾಕೆಟ್ ವೇಗದಲ್ಲಿ ಮುನ್ನುಗ್ಗಿರುವುದು ಅಂಕಿ ಅಂಶಗಳು ತಿಳಿಸಿದೆ. 2022ರ ಬಳಿಕ ಮಸ್ಕ್ ಅವರ ಅದೃಷ್ಟ ನಾಟಕೀಯ ತಿರುವು ಕೂಡ ಪಡೆದುಕೊಂಡಿದೆ. ಒಂದು ಹಂತದಲ್ಲಿ 200 ಶತಕೋಟಿ ಡಾಲರ್ ಮೊತ್ತದ ಸಂಪತ್ತಿನ ಆಸುಪಾಸಿನಲ್ಲಿದ್ದ ಮಸ್ಕ್ ಇತ್ತೀಚಿಗಿನ ಕೆಲವರು ತಿಂಗಳುಗಳಲ್ಲಿ ಅವರ ಆಸ್ತಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿರುವುದು ಕಂಡುಬಂದಿದೆ. ಅದೂ ಅಲ್ಲದೆ ಎಲ್ಲಕ್ಕಿಂತ ಮುಖ್ಯವಾಗಿ ಮಸ್ಕ್ ಅವರ ಸ್ಪೇಸ್ ಎಕ್ಸ್ ಹಲವು ತಂತ್ರಜ್ಞಾನಗಳನ್ನು ಆವಿಷ್ಕರಿಸುತ್ತಿದ್ದು, ಆಧುನಿಕ ರೀತಿಯಲ್ಲಿ ಮುನ್ನುಗ್ಗುತ್ತಿದೆ. ಇದರ ಪರಿಣಾಮವಾಗಿ ಸ್ಪೇಸ್ ಎಕ್ಸ್ ಷೇರುಗಳನ್ನು ಖರೀದಿಸುತ್ತಿರುವವರ ಸಂಖ್ಯೆಯಲ್ಲಿ ಭಾರೀ ಹೆಚ್ಚಳ ಕಂಡಿದೆ. ಷೇರುಗಳ ಖರೀದಿ ಪ್ರಕ್ರಿಯೆಯಿಂದಲೇ ಮಸ್ಕ್ ಇತ್ತೀಚಿಗಿನ ಕೆಲ ದಿನಗಳಲ್ಲಿ 50 ಶತಕೋಟಿ ಡಾಲರ್ ಸಂಪತ್ತು ಹೆಚ್ಚಿಗೆ ಗಳಿಸಿಕೊಂಡಿದ್ದಾರೆ ಎನ್ನಲಾಗಿದೆ.

ಟೆಸ್ಲಾದ ಮೌಲ್ಯ ಕೂಡ ಏರಿಕೆ!
ಮಸ್ಕ್ ಅವರ ಕೇವಲ ಸ್ಪೇಸ್ ಎಕ್ಸ್ ಅಲ್ಲದೆ ಕಾರುಗಳ ತಯಾರಿಕಾ ಸಂಸ್ಥೆಯಾಗಿರುವ ಟೆಸ್ಲಾ ಷೇರುಗಳ ಮೌಲ್ಯ ಚುನಾವಣೆಯ ಆರಂಭದಿಂದಲೇ ಹೆಚ್ಚಳ ಆರಂಭವಾಗಿದ್ದು, ಸುಮಾರು 65 ಪ್ರತಿಶತ ಏರಿಕೆ ಕಂಡಿದೆ. ಟ್ರಂಪ್ ಸ್ವಯಂ-ಚಾಲನಾ ಕಾರುಗಳ ಆಗಮನವನ್ನು ಮತ್ತಷ್ಟು ಸುಗಮಗೊಳಿಸುತ್ತಾರೆ ಮತ್ತು ಟೆಸ್ಲಾದ ಪ್ರತಿಸ್ಪರ್ಧಿಗಳಿಗೆ ಸಹಾಯ ಮಾಡುವ ಎಲೆಕ್ಟ್ರಿಕ್ ವಾಹನಗಳಿಗೆ ತೆರಿಗೆ ವಿನಾಯಿತಿಗಳನ್ನು ತೆಗೆದುಹಾಕುತ್ತಾರೆ ಎಂಬ ನಿರೀಕ್ಷೆಗಳಿಂದ ಇದು ಏರಿಕೆ ಕಂಡಿದೆ. ಅದೂ ಅಲ್ಲದೆ ಮುಂದೆ ಟ್ರಂಪ್ ಅವರ ಹೊಸ ಸರ್ಕಾರದ ದಕ್ಷತೆಯ ಇಲಾಖೆಯ ಸಹ-ಮುಖ್ಯಸ್ಥರಾಗಿ ಹೊಸ ಆಡಳಿತದಲ್ಲಿ ಮಸ್ಕ್ ಕೂಡ ಪ್ರಮುಖ ಸ್ಥಾನ ಅಲಂಕರಿಸಲಿದ್ದಾರೆ ಎಂಬ ಮಾತುಗಳು ಕೂಡ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಏರಿಕೆಗೆ ಕಾರಣವಾಗಿದೆ.
ಕೃತಕ ಬುದ್ಧಿಮತ್ತೆ ಸ್ಟಾರ್ಟಪ್‌ನಲ್ಲೂ ಏರಿಕೆ
ಸದ್ಯ ಕೃತಕ ಬುದ್ದಿಮತ್ತೆ ಅಂದರೆ ಎಐ ಯುಗವಾಗಿರುವುದರಿಂದ ಸದ್ಯ ಇದಕ್ಕೆ ಸಂಬಂಧಿಸಿದ ಬಹುತೇಕ ಕಂಪೆನಿಗಳ ಮೌಲ್ಯಗಳು ಏರಿಕೆಯಾಗುತ್ತಿದೆ. ಇದಕ್ಕೆ ಮಸ್ಕ್ ಅವರ ಎಐ ಸ್ಟಾರ್ಟಪ್ xAI ಕೂಡ ಹೊರತಾಗಿಲ್ಲ. ಕಳೆದ ಮೇ ತಿಂಗಳಿನಿಂದ ಸುಮಾರು 50 ಶತಕೋಟಿ ಡಾಲರ್ ಮೌಲ್ಯ ಸಂಗ್ರಹಿಸಿದಾಗಿನಿಂದ ದ್ವಿಗುಣ ವೇಗದಲ್ಲಿ ಹೆಚ್ಚಿದೆ.
1.25 ಶತಕೋಟಿ ಷೇರು ಖರೀದಿಗೆ ಒಪ್ಪಿಗೆ
ಇನ್ನು ಬುಧವಾರ ನಡೆದ ಬೆಳವಣಿಗೆಯಲ್ಲಿ ಸ್ಪೇಸ್‌ಎಕ್ಸ್ ಉದ್ಯೋಗಿಗಳಿಂದ ಸುಮಾರು 1.25 ಶತಕೋಟಿ ಡಾಲರ್ ಷೇರುಗಳನ್ನು ಖರೀದಿಸಲು ಸ್ಪೇಸ್ ಎಕ್ಸ್ ಮತ್ತು ಸಂಸ್ಥೆಯ ಹೂಡಿಕೆದಾರರು ಒಪ್ಪಿಗೆ ಸೂಚಿಸಿದ್ದಾರೆ. ಈ ಮೂಲಕ ಖಾಸಗಿಯಾಗಿ ನಡೆಸುವ ಬಾಹ್ಯಾಕಾಶ ಪರಿಶೋಧನಾ ಸಂಸ್ಥೆಯಾಗಿರುವ ಸ್ಪೇಸ್ ಎಕ್ಸ್ ಸಂಸ್ಥೆಯನ್ನು ವಿಶ್ವದ ಅತ್ಯಂತ ಮೌಲ್ಯಯುತವಾದ ಖಾಸಗಿ ಸ್ಟಾರ್ಟ್‌ಅಪ್ ಸಂಸ್ಥೆಯನ್ನಾಗಿ ಮಾಡಲಿದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?



Click it and Unblock the Notifications