ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ (World's Richest Man) ಎಲಾನ್ ಮಸ್ಕ್ (Elon Musk) ಅವರ ಖಜಾನೆ ಇದೀಗ ಮತ್ತಷ್ಟು ತುಂಬಲು ಸಿದ್ಧವಾಗಿದೆ. ಟೆಸ್ಲಾ ಕಂಪನಿಯ ಸಿಇಒ ಎಲಾನ್ ಮಸ್ಕ್ ಅವರಿಗೆ ಇತಿಹಾಸದಲ್ಲೇ ಯಾವುದೇ ಕಂಪನಿಯ ಮುಖ್ಯಸ್ಥರಿಗೆ ನೀಡದಷ್ಟು ದೊಡ್ಡ ಮೊತ್ತದ ವೇತನವನ್ನು ನೀಡಲು ಆಡಳಿತ ಮಂಡಳಿ ಸಜ್ಜಾಗಿದೆ.ಸುಮಾರು ಒಂದು ಟ್ರಿಲಿಯನ್ ಡಾಲರ್ (1 Trillion Dollar), ಅಂದರೆ ಭಾರತೀಯ ಮೌಲ್ಯದಲ್ಲಿ ಅಂದಾಜು 82 ಲಕ್ಷ ಕೋಟಿ ರೂ. ಮೌಲ್ಯದ ಈ ವೇತನಕ್ಕೆ ನಿನ್ನೆ (ನವೆಂಬರ್ 6) ಆಸ್ಟಿನ್‌ನಲ್ಲಿ ನಡೆದ ಟೆಸ್ಲಾದ (Tesla) ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪಾಲುದಾರರು ನಿರೀಕ್ಷೆಗೂ ಮೀರಿ ಭಾರಿ ಬೆಂಬಲ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಎಲಾನ್ ಮಸ್ಕ್ ಖಜಾನೆ ಮತ್ತಷ್ಟು ಹೆಚ್ಚಳ
ಎಲಾನ್ ಮಸ್ಕ್ ಅವರು ಕೃತಕ ಬುದ್ಧಿಮತ್ತೆ (AI) ಮತ್ತು ರೋಬೋಟಿಕ್ಸ್‌ನಂತಹ ಟೆಸ್ಲಾ ಕಂಪನಿಯಿಂದ ಭವಿಷ್ಯದ ಯೋಜನೆಗಳಲ್ಲಿ ನಿರಂತರವಾಗಿ ಗಮನಹರಿಸಲು ಮತ್ತು ಬದ್ಧರಾಗಿರಲು ಈ ಬೃಹತ್ ವೇತನವನ್ನು ನೀಡಲಾಗುತ್ತಿದೆ. ಈ ಬಂಪರ್ ವೇತನಕ್ಕೆ ಶೇ. 75 ಕ್ಕಿಂತ ಹೆಚ್ಚು ಪಾಲುದಾರರು ಬೆಂಬಲ ನೀಡಿದ್ದಾರೆ. ಈ ಸೌಲಭ್ಯವನ್ನು ಪಡೆಯುವ ಮೂಲಕ, ಮಸ್ಕ್ ಕನಿಷ್ಠ ಏಳೂವರೆ ವರ್ಷಗಳ ಕಾಲ ಟೆಸ್ಲಾದಲ್ಲಿ ಮುಂದುವರಿಯಬೇಕು ಎಂದು ಒಪ್ಪಂದ ಮಾಡಿಕೊಳ್ಳಲಾಗಿದೆ. ಅಲ್ಲದೆ, ಕಂಪನಿಯಲ್ಲಿ ಅವರ ಪಾಲುದಾರಿಕೆ ಕೂಡಾ ಇನ್ನು ಶೇ. 25 ಕ್ಕಿಂತ ಹೆಚ್ಚಾಗುತ್ತದೆ.
ವದಂತಿ ಬೆನ್ನಲ್ಲೇ ಶಾಕಿಂಗ್ ನಿರ್ಧಾರ
ಮಸ್ಕ್ ಟೆಸ್ಲಾವನ್ನು ತೊರೆಯುವ ಬಗ್ಗೆ ಈ ಹಿಂದೊಮ್ಮೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದರು. ಅಲ್ಲದೇ ಕಂಪನಿಯ ಬೆಳವಣಿಗೆಯಲ್ಲಿ ತಮಗೆ ಸಂಪೂರ್ಣ ಅಧಿಕಾರ ಬೇಕು ಮತ್ತು ಅದಕ್ಕೆ ಅನುಗುಣವಾಗಿ ತಮ್ಮ ಪಾಲುದಾರಿಕೆಯೂ ಹೆಚ್ಚಾಗಬೇಕು ಎಂದು ಹೇಳಿದ್ದರು. ಆದರೆ ಎಲಾನ್ ಮಸ್ಕ್ ನಿರ್ಗಮಿಸಿದರೆ ಟೆಸ್ಲಾ ಷೇರುಗಳು ದೊಡ್ಡ ಪ್ರಮಾಣದಲ್ಲಿ ಕುಸಿಯುತ್ತವೆ ಎಂದು ಆಡಳಿತ ಮಂಡಳಿಯ ಅಧ್ಯಕ್ಷ ರಾಬಿನ್ ಡೆನ್‌ಹಾಮ್ ಎಚ್ಚರಿಸಿದ ಬೆನ್ನಲ್ಲೇ ಪಾಲುದಾರರು ಈ ನಿರ್ಧಾರವನ್ನು ಬೆಂಬಲಿಸಿದ್ದಾರೆ.
ಆಫರ್ ಜೊತೆ ಎಲಾನ್ ಮಸ್ಕ್‌ಗೆ ಹಲವು ಷರತ್ತು:
ಒಂದು ಟ್ರಿಲಿಯನ್ ಡಾಲರ್ ವೇತನವನ್ನು ಪಡೆಯಲು ಮಸ್ಕ್ ಹಲವು ಟಾರ್ಗೆಟ್ ರೀಚ್ ಆಗಬೇಕು. ವರದಿಗಳ ಪ್ರಕಾರ, ಟೆಸ್ಲಾದ ಮಾರುಕಟ್ಟೆ ಮೌಲ್ಯವನ್ನು 1.5 ಟ್ರಿಲಿಯನ್ ಡಾಲರ್‌ನಿಂದ (ಸುಮಾರು 132 ಲಕ್ಷ ಕೋಟಿ ರೂಪಾಯಿ) 8.5 ಟ್ರಿಲಿಯನ್ ಡಾಲರ್‌ಗೆ (ಸುಮಾರು 750 ಲಕ್ಷ ಕೋಟಿ ರೂಪಾಯಿ) ಹೆಚ್ಚಿಸುವುದು ಎಲಾನ್ ಮಸ್ಕ್‌ಗಿರುವ ಅತ್ಯಂತ ಮಹತ್ವದ ಗುರಿಯಾಗಿದೆ.
ಇದರ ಜೊತೆಗೆ, ಅವರು ಹತ್ತು ಲಕ್ಷ ರೋಬೋಟ್ಯಾಕ್ಸಿಗಳನ್ನು ನಿಯೋಜಿಸಬೇಕು ಮತ್ತು 1.2 ಕೋಟಿ ಕಾರುಗಳನ್ನು ಮಾರಾಟ ಮಾಡಬೇಕು. ಈ ಎಲ್ಲ ಗುರಿಗಳನ್ನು ಪೂರೈಸಿದ ನಂತರವೇ ಮಸ್ಕ್‌ಗೆ ಅವರ ವೇತನವನ್ನು ಹಂತ ಹಂತವಾಗಿ ನೀಡಲಾಗುವುದು ಎನ್ನಲಾಗಿದೆ.
$1 ಟ್ರಿಲಿಯನ್ ವೇತನ ಮಸ್ಕ್‌ಗೆ ಹೇಗೆ ಸಿಗುತ್ತದೆ?
ನಿರ್ದಿಷ್ಟ ಕೆಲಸ ಮತ್ತು ಟೆಸ್ಲಾದ ಹಣಕಾಸು ಗುರಿಗಳನ್ನು ಪೂರೈಸಿದಾಗ ಮಾತ್ರ ಮಸ್ಕ್‌ಗೆ ಈ ಮೊತ್ತ ಸಿಗುತ್ತದೆ. ಮಸ್ಕ್ ಹತ್ತು ವರ್ಷಗಳಲ್ಲಿ 20 ಮಿಲಿಯನ್ ವಾಹನಗಳನ್ನು ವಿತರಿಸಬೇಕು, ಇದು ಟೆಸ್ಲಾದ ಕಳೆದ ಹನ್ನೆರಡು ವರ್ಷಗಳ ಉತ್ಪಾದನೆಗಿಂತ ಎರಡು ಪಟ್ಟು ಹೆಚ್ಚು ಎಂದು ವರದಿಯಾಗಿದೆ. ಅಲ್ಲದೆ, ಕಂಪನಿಯ ಮಾರುಕಟ್ಟೆ ಮೌಲ್ಯ ಮತ್ತು ಕಾರ್ಯಾಚರಣಾ ಲಾಭವನ್ನು ಹೆಚ್ಚಿಸುವುದು, ಒಂದು ಮಿಲಿಯನ್ ರೋಬೋಟ್‌ಗಳನ್ನು ವಿತರಿಸುವ ಗುರಿ ಇವೆಲ್ಲವೂ ಮಸ್ಕ್ ಮೇಲಿದೆ. ಇನ್ನು ಎಲಾನ್ ಮಸ್ಕ್ ಸ್ಯಾಲರಿ ಪ್ಯಾಕೇಜ್ ಹೋಲಿಸಿದ್ರೆ, ಇತರ ದೇಶಗಳ ಜಿಡಿಪಿ ಮೌಲ್ಯ ಕೂಡಾ ಅಷ್ಟಿಲ್ಲ.
ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ (Elon Musk) ಅವರ ಖಜಾನೆ ಇದೀಗ ಮತ್ತಷ್ಟು ತುಂಬಲು ಸಿದ್ಧವಾಗಿದೆ. ಟೆಸ್ಲಾ ಕಂಪನಿಯ ಸಿಇಒ ಎಲಾನ್ ಮಸ್ಕ್ ಅವರಿಗೆ ಇತಿಹಾಸದಲ್ಲೇ ಯಾವುದೇ ಕಂಪನಿಯ ಮುಖ್ಯಸ್ಥರಿಗೆ ನೀಡದಷ್ಟು ದೊಡ್ಡ ಮೊತ್ತದ ವೇತನವನ್ನು ನೀಡಲು ಆಡಳಿತ ಮಂಡಳಿ ಸಜ್ಜಾಗಿದೆ.


Click it and Unblock the Notifications