ನೌಕರರ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್‌ಒ) ಚಂದಾದಾರರಿಗೆ ಸರಕಾರ ಹೊಸ ವರ್ಷದ ಕೊಡುಗೆ ನೀಡಿರುವುದು ನಿಮಗೆಲ್ಲ ಗೊತ್ತಿರುವ ವಿಚಾರವೇ. ಕೇಂದ್ರ ಸರಕಾರದ ಕಾರ್ಮಿಕ ಸಚಿವಾಲಯವು ಇಪಿಎಫ್‌ಒ 3.0 ಯೋಜನೆ ಅಡಿಯಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ ಚಟುವಟಿಕೆಗಳಿಗೆ ಆಧುನಿಕತೆಯ ಟಚ್ ಕೊಡಲು ಮುಂದಾಗಿರುವುದರಿಂದ ಉದ್ಯೋಗಿಗಳು ಇನ್ಮುಂದೆ ಭವಿಷ್ಯ ನಿಧಿಯ ಹಣವನ್ನು ಎಟಿಎಂ ಮೂಲಕ ನೇರವಾಗಿ ಹಿಂಪಡೆಯಬಹುದಾಗಿದೆ . ಇದರಿಂದ ನಿಮ್ಮ ಹಣವನ್ನು ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ ಸುಲಭವಾಗಿ ಪಡೆಯಲು ಸಾಧ್ಯವಾಗುತ್ತದೆ. ಈ ಹೊಸ ವ್ಯವಸ್ಥೆಯಿಂದ ನಿಮ್ಮ ಹಣಕಾಸಿನ ವ್ಯವಹಾರಗಳು ಇನ್ನಷ್ಟು ಸರಳವಾಗಲಿವೆ. ಹಾಗಿದ್ರೆ ಎಟಿಎಂ ಸಿಗುವುದು ಯಾವಾಗ ಎಂಬ ಪ್ರಶ್ನೆ ಮೂಡುವುದು ಸಹಜ ಅದಕ್ಕಾಗಿ ಈ ಸ್ಟೋರಿ ಓದಿ..
ಇಪಿಎಫ್‌ಒ ATM ಕಾರ್ಡ್ ಬಿಡುಗಡೆ ದಿನಾಂಕ
ಇಪಿಎಫ್‌ಒ ATM ಕಾರ್ಡ್ ಬಿಡುಗಡೆ ದಿನಾಂಕವನ್ನು ಕೇಂದ್ರ ಸರಕಾರದ ಕಾರ್ಮಿಕ ಸಚಿವಾಲಯ ಇನ್ನೂ ಅಧಿಕೃತವಾಗಿ ಘೋಷಿಸಲಾಗಿಲ್ಲ. ಆದರೆ ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಅವರು ಈ ವರ್ಷದ ಜೂನ್ ತಿಂಗಳ ಒಳಗೆ ಇಪಿಎಫ್‌ಒ ತನ್ನ ಅತ್ಯಾಧುನಿಕ ಸಾಫ್ಟ್‌ವೇರ್ ವ್ಯವಸ್ಥೆ, ಇಪಿಎಫ್‌ಒ 3.0 ಅನ್ನು ಪರಿಚಯಿಸುವುದಾಗಿ ಹೇಳಿದ್ದಾರೆ . ಇಪಿಎಫ್‌ಒ 3.0 ಬಿಡುಗಡೆಯಾದ ನಂತರ, ಇಪಿಎಫ್‌ಒ ತನ್ನ ಸದಸ್ಯರಿಗೆ ಎಟಿಎಂ ಕಾರ್ಡ್‌ಗಳನ್ನು ಒದಗಿಸುವ ಯೋಜನೆಯನ್ನು ಹೊಂದಿದೆ. ಪರಿಷ್ಕೃತ ಹಿಂಪಡೆಯುವ ಮಾರ್ಗಸೂಚಿಗಳು ಜಾರಿಗೆ ಬಂದ ನಂತರ, ಸದಸ್ಯರು ತಮ್ಮ ಕಾರ್ಡ್‌ಗಳನ್ನು ಬಳಸಿಕೊಂಡು ತಮ್ಮ ಇಪಿಎಫ್ ನಿಧಿಗೆ ತುರ್ತು ಪ್ರವೇಶಿಸಲು ಸಾಧ್ಯವಾಗುತ್ತದೆ

ಎಟಿಎಂ ಮೂಲಕ ಪಿಎಫ್: ಇದು ಹೇಗೆ ಸಾಧ್ಯ ಮತ್ತು ಇದರ ಪ್ರಯೋಜನ
ಈಗಾಗಲೇ ಪಿಎಫ್ ಕ್ಲಿಯರೆನ್ಸ್‌ಗೆ ಅನುಕೂಲವಾಗುವಂತೆ ಸಚಿವಾಲಯವು ತನ್ನ ಐಟಿ ಮೂಲಸೌಕರ್ಯವನ್ನು ನವೀಕರಿಸುತ್ತಿದೆ. ಎಲ್ಲವೂ ಸುಲಲಿತವಾಗಿ ನಡೆದರೆ ಶೀಘ್ರ ಜಾರಿಗೆ ಬರಲಿದೆ.
ನೇರ ಪ್ರವೇಶ: ನಿಮ್ಮ ಭವಿಷ್ಯ ನಿಧಿ ಖಾತೆಯನ್ನು ATM ನೆಟ್ವರ್ಕ್‌ಗೆ ಸಂಯೋಜನೆ ಮಾಡಲಾಗುತ್ತದೆ. ಹೀಗಾಗಿ ಖಾತೆದಾರರು ಯುಎಎನ್ (ಯೂನಿವರ್ಸಲ್ ಅಕೌಂಟ್ ನಂಬರ್) ಅಥವಾ ಲಿಂಕ್ ಮಾಡಿದ ಬ್ಯಾಂಕ್ ಖಾತೆಯನ್ನು ಬಳಸಿಕೊಂಡು ನೀವು ಹಣವನ್ನು ಹಿಂಪಡೆಯಬಹುದು.
ಸುರಕ್ಷತೆ: OTP ಪರಿಶೀಲನೆ ಸೇರಿದಂತೆ ಬಹು-ಅಂಶದ ದೃಢೀಕರಣವನ್ನು ಬಳಸಲಾಗುವುದು. ಇದರಿಂದ ನಿಮ್ಮ ಹಣವನ್ನು ಸುರಕ್ಷಿತವಾಗಿ ಪಡೆಯಲು ಮತ್ತು ಇಪಿಎಫ್‌ಒ ನಿಯಮಗಳನ್ನು ಪಾಲಿಸಲು ಸಹಾಯವಾಗುತ್ತದೆ.
ತಕ್ಷಣದ ಪಾವತಿ: ಹಣವನ್ನು ತಕ್ಷಣವೇ ನಿಮ್ಮ ಖಾತೆಗೆ ಜಮಾ ಮಾಡಲಾಗುವುದು. ಪ್ರಸ್ತುತ ವ್ಯವಸ್ಥೆಯಲ್ಲಿ ಸದಸ್ಯರು ಎದುರಿಸುತ್ತಿರುವ ವಿಳಂಬವನ್ನು ಇಪಿಎಫ್‌ಒ ATM ದೂರಮಾಡುತ್ತದೆ.
ಮೃತ ಸದಸ್ಯರ ವಾರಸುದಾರರಿಗೆ ಪ್ರಯೋಜನ: ಇಪಿಎಫ್‌ಒದ ಉದ್ಯೋಗಿಗಳ ಠೇವಣಿ ಆಧಾರಿತ ವಿಮಾ ಯೋಜನೆಯಡಿಯಲ್ಲಿ, ಮೃತ ಸದಸ್ಯರ ವಾರಸುದಾರರಿಗೆ ಗರಿಷ್ಠ ₹7 ಲಕ್ಷಗಳವರೆಗೆ ಪರಿಹಾರ ನೀಡಲಾಗುತ್ತದೆ. ಈ ಹೊಸ ವ್ಯವಸ್ಥೆಯಲ್ಲಿ, ಮೃತ ಸದಸ್ಯರ ವಾರಸುದಾರರು ಸಹ ATM ಮೂಲಕ ಹಣವನ್ನು ಹಿಂಪಡೆಯಲು ಸಾಧ್ಯವಾಗುತ್ತದೆ.
ಈ ಯೋಜನೆಯ ಪ್ರಾಮುಖ್ಯತೆ:
ಇಪಿಎಫ್‌ಒ 3.0 ಭಾರತದ ಸಾಮಾಜಿಕ ಭದ್ರತಾ ಸೇವೆಗಳನ್ನು ಆಧುನೀಕರಿಸುವ ದೃಷ್ಟಿಯಿಂದ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಪ್ರಸ್ತುತ, ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್‌ಒ) ಚಂದಾದಾರರು ತಮ್ಮ ಕ್ಲೈಮ್‌ಗಳನ್ನು ಆನ್‌ಲೈನ್‌ನಲ್ಲಿ ಇತ್ಯರ್ಥಗೊಳಿಸಲು 7-10 ದಿನಗಳು ಕಾಯಬೇಕಾಗುತ್ತದೆ. ಪರಿಹಾರದ ನಂತರ, ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. ಆದರೆ ಇಪಿಎಫ್‌ಒ ATM ಈ ಸಮಸ್ಯೆಯೂ ದೂರವಾಗುತ್ತದೆ.
ಸುಲಭ ಪ್ರವೇಶ: ಸದಸ್ಯರು ಇನ್ನು ಮುಂದೆ ಭವಿಷ್ಯ ನಿಧಿ ಹಣವನ್ನು ಪಡೆಯಲು ಯಾವುದೇ ವಿಳಂಬವನ್ನು ಅನುಭವಿಸಬೇಕಾಗಿಲ್ಲ.
ಸಾಮಾಜಿಕ ಭದ್ರತಾ ವ್ಯಾಪ್ತಿ ವಿಸ್ತರಣೆ: 2017 ರಿಂದ 7 ಕೋಟಿಗೂ ಹೆಚ್ಚು ಕಾರ್ಮಿಕರು ಭವಿಷ್ಯ ನಿಧಿ ವ್ಯಾಪ್ತಿಗೆ ಸೇರ್ಪಡೆಯಾಗಿದ್ದಾರೆ. ಇದು ಭಾರತದ ಕಾರ್ಮಿಕರನ್ನು ಔಪಚಾರಿಕ ವಲಯಕ್ಕೆ ತರುವ ದಿಶೆಯಲ್ಲಿ ದೊಡ್ಡ ಹೆಜ್ಜೆಯಾಗಿದೆ.
ಪರಿಣಾಮ: ಭಾರತದಲ್ಲಿ 64 ಕೋಟಿಗೂ ಹೆಚ್ಚು ಆರ್ಥಿಕವಾಗಿ ಸಕ್ರಿಯವಾಗಿರುವ ವ್ಯಕ್ತಿಗಳೊಂದಿಗೆ, ಈ ಹೊಸ ಯೋಜನೆ ಕಾರ್ಮಿಕರು ತಮ್ಮ ಹಣಕಾಸಿನ ಸಂಪನ್ಮೂಲಗಳನ್ನು ಈ ಹಿಂದೆ ಪ್ರವೇಶಿಸುತ್ತಿದ್ದ ರೀತಿಯನ್ನು ಪರಿವರ್ತಿಸುವ ಗುರಿಯನ್ನು ಹೊಂದಿದೆ.


Click it and Unblock the Notifications