ಮುಂಬರುವ ದಿನಗಳಲ್ಲಿ ನಿಮ್ಮ ಪಿಎಫ್ ಹಣವನ್ನ ನೀವು ಸುಲಭವಗಿ ಪಡೆಯಬಹುದು. ಈಗೆಲ್ಲಾ ಪಿಎಫ್ ಹಣವನ್ನ ಬಿಡಿಸುವುದೇ ಒಂದು ಪಜೀತಿಯಾಗಿ ಬಿಟ್ಟಿದೆ. ಆದ್ರೆ ಇನ್ನು ಮುಂದೆ ಇಂತಹ ಸಂದರ್ಭಗಳನ್ನ ನೀವು ಎದುರಿಸು ಸಗತ್ಯ ಇಲ್ಲ. ಏಕೆಂದರೆ ಕೇಂದ್ರ ಕಾರ್ಮಿಕರ ಸಚಿವಾಲಯ ಪಿಎಫ್ ಹಣನ್ನ ತೆಗೆಯಲು ತುಂಬಾ ಸರಳ ವಿಧಾನವನ್ನ ನಿಮ್ಮ ಮುಂದೆ ಇಡ್ತಿದೆ.
ಇನ್ನು ಮೇಲೆ ನಿಮ್ಮ ಭವಿಷ್ಯ ನಿಧಿ (PF)ಯನ್ನ ನೀವು ಹಿಂಪಡೆಯಲು ಪರದಾಡಬೇಕಿಲ್ಲ. 2025ರ ವೇಳೆಗೆ ಉದ್ಯೋಗಗಳು ತಮ್ಮ ಪಿಎಫ್ ಹಣವನ್ನ ಎಟಿಎಂಗಳ ಮೂಲಕ ಬಿಡಿಸಬಹುದು. ತಂತ್ರಜ್ಞಾನವನ್ನ ಸದುಪಯೋಗ ಪಡಿಸಿಕೊಳ್ಳುವ ಮೂಲಕ ಉದ್ಯೋಗಿಗಳಿಗೆ ಇನ್ನಷ್ಟು ಸುಲಭವಾಗುವ ನಿಟ್ಟಿನಲ್ಲಿ ಕೇಂದ್ರ ಕರ್ಮಿಕ ಸಚಿವಾಲಯ ನಿರಂತರ ಪ್ರತ್ನಿಸುತ್ತಿದ್ದು, ಈಗಲೂ ಕೂಡ ದೇಶದಾದ್ಯಂತ ಇರುವ ಉದ್ಯೋಗಿಗಳಿಗೆ ಈ ಪ್ರಯೋಜನಗಳನ್ನ ಮಾಡಿಕೊಡುತ್ತಿದೆ. ಇನ್ನು ಈ ಕುರಿತು ಕಾರ್ಮಿಕ ಕಾರ್ಯದರ್ಶಿ ಸುಮಿತಾ ದಾವ್ರಾ ಮಾತನಾಡಿದ್ದು, ಉದ್ಯೋಗಿಗಳಿಗಾಗಿ 2025ರ ವೇಳೆಗೆ ಎಟಿಎಂಗಳ ಮೂಲಕವೇ ಪಿಎಫ್ ಹಣವನ್ನ ಪಡೆಯುವ ಅನುಕೂಲವನ್ನ ಮಾಡಿಕೊಡುತ್ತೇವೆ ಎಂದು ಸುಮಿತಾ ದಾವ್ರಾ ಅವರು ಹೇಳಿದ್ದಾರೆ.

ಸಧ್ಯಕ್ಕೆ ಈ ವ್ಯವಸ್ಥೆ ಜಾರಿಯಲ್ಲಿಲ್ಲ. ಹೀಗಾಗಿ ಈಗ ಯರಾದರು ನಿಮ್ಮ ಪಿಎಫ್ ಹಣವನ್ನ ಪಡೆಯಲು ಬಯಸಿದರೆ, ನೀವು ಈಗಿರುವ ಎಲ್ಲಾ ಕ್ರಮಗಳನ್ನ ಪಾಲಿಸಲೇ ಬೇಕಾಗುತ್ತದೆ. ಇನ್ನು ಈ ಸುಲಭ ವಿಧಾನ ಶೀಘ್ರದಲ್ಲೇ ಜಾರಿಯಾಗಲಿದ್ದು, 2025ರವೇಳೆಗೆ ನೀವು ಇದ ಪ್ರಯೋಜನವನ್ನ ಪಡೆದುಕೊಳ್ಳಬಹುದು.
ಇನ್ನು ಈ ಕರಿತು ಎಎನ್‌ಐಗೆ ಜೊತೆ ಕಾರ್ಮಿಕ ಕಾರ್ಯದರ್ಶಿ ಸುಮಿತಾ ದಾವ್ರಾ ಮಾತನಾಡಿದ್ದು, ಎಟಿಎಂ ಮೂಲಕ ಹಣ ಪಡೆಯುವುದಿಂದ ಇದು ಉದ್ಯೋಗಗಳಿಗೆ ಬಹಳ ಅನುಕೂಲವಾಗಲಿದೆ. ಹಾಗೆ ಈಗಾಗಲೇ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು ಪ್ರಸ್ತುತ 70 ಮಿಲಿಯನ್‌ಗಿಂತಲೂ ಹೆಚ್ಚು ಸಕ್ರಿಯ ಕೊಡುಗೆದಾರರಿಗೆ ಸೇವೆ ಸಲ್ಲಿಸುತ್ತಿದೆ. ಅಲ್ಲದೆ ಈ ಸಂಸ್ಥೆ ಪ್ರತಿ ಎರಡು ಮೂರು ತಿಂಗಳಿಗೊಮ್ಮೆ ಹೊಸ ಸುಧಾರಣೆಗಳನ್ನ ತರ್ತಿದೆ. ಇದನ್ನ ನೀವು ಈಗಾಗಲೇ ಗಮನಿಸಿರಬಹುದು. ಅಲ್ಲದೆ ಜನವರಿ 2025 ರ ವೇಳೆಗೆ ಪ್ರಮುಖ ಬದಲಾವಣೆಗಳಾಗಲಿವೆ ಎಂದರು. ಹಾಗೆ ಇನ್ನು ಪಿಎಫ್ ಹಿಂಪಡೆಯುವ ಈ ಹೊಸ ಯೋಜನೆ ಈಗಾಗಲೇ ರೂಪುಗೊಂಡಿದ್ದು, ಇದರ ಬಹಳಷ್ಟು ಕೆಲಸಗಳು ಆಗಿದ್ದು, ಸಧ್ಯಕ್ಕೆ ಈ ಯೋಜನೆ ಅಂತಿಮ ಪ್ರಕ್ರಿಯೆಯಲ್ಲಿದೆ ಎಂದರು. ಆದ್ರೆ ಈ ಯೋಜನೆಯ ಅನುಷ್ಠಾನದ ದಿನಾಂಕದ ಬಗ್ಗೆ ಯಾವುದೇ ಮಾಹಿತಿ ಇಲ್ಲ.
EPFO ಬಗ್ಗೆ ತಿಳಿಯಿರಿ
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಡಿಯಲ್ಲಿ ಬರುವ ಸಂಸ್ಥೆಯಾಗಿದೆ. ಇದು ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಅನ್ನು ನಿರ್ವಹಿಸುತ್ತದೆ, ಇದು ಭಾರತೀಯ ಉದ್ಯೋಗಿಗಳಿಗೆ ನಿವೃತ್ತಿ ಉಳಿತಾಯ ಯೋಜನೆ ಮತ್ತು ಉದ್ಯೋಗಿಗಳಿಗೆ ಪಿಂಚಣಿ ಮತ್ತು ವಿಮೆಯಂತಹ ಸಾಮಾಜಿಕ ಭದ್ರತಾ ಪ್ರಯೋಜನಗಳನ್ನು ಒದಗಿಸುತ್ತದೆ. EPFO ಉದ್ಯೋಗಿಗಳ ಭವಿಷ್ಯ ನಿಧಿಗಳು ಮತ್ತು ವಿವಿಧ ನಿಬಂಧನೆಗಳ ಕಾಯಿದೆ, 1952 ರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಉದ್ಯೋಗಿಗಳು ತಮ್ಮ ಸಂಬಳದ ಒಂದು ಭಾಗವನ್ನು ಇಪಿಎಫ್‌ಗೆ ಕೊಡುಗೆ ನೀಡುತ್ತಾರೆ ಎಂದು ಖಚಿತಪಡಿಸುತ್ತದೆ, ಇದು ಉದ್ಯೋಗದಾತರಿಂದ ಹೊಂದಾಣಿಕೆಯಾಗುತ್ತದೆ.
ನಿವೃತ್ತಿಯ ಸಮಯದಲ್ಲಿ ಅಥವಾ ಉದ್ಯೋಗಿ ಕೆಲಸವನ್ನು ತೊರೆದಾಗ ಸಂಗ್ರಹವಾದ ಹಣವನ್ನು ಬಡ್ಡಿಯೊಂದಿಗೆ ಹಿಂತಿರುಗಿಸಲಾಗುತ್ತದೆ. EPFO ನೌಕರರ ಪಿಂಚಣಿ ಯೋಜನೆ (EPS) ಮತ್ತು ಉದ್ಯೋಗಿಗಳ ಠೇವಣಿ ಲಿಂಕ್ಡ್ ಇನ್ಶುರೆನ್ಸ್ ಸ್ಕೀಮ್ (EDLI) ನಂತಹ ಯೋಜನೆಗಳನ್ನು ಸಹ ನಿರ್ವಹಿಸುತ್ತದೆ. ಇದು ಆನ್‌ಲೈನ್ ಖಾತೆ ಟ್ರ್ಯಾಕಿಂಗ್, ಹಿಂಪಡೆಯುವಿಕೆ ಮತ್ತು ಪಿಂಚಣಿ ಸೇವೆಗಳನ್ನು ಒಳಗೊಂಡಂತೆ ಅನೇಕ ಸೇವೆಗಳನ್ನು ಡಿಜಿಟಲೀಕರಣಗೊಳಿಸುವ ಮೂಲಕ ಇದು ಜನರಿಗೆ ಸುಲಭವಾಗುವಂತೆ ಮಾಡಿದೆ.


Click it and Unblock the Notifications