ಈ ವರ್ಷ ಮ್ಯೂಚುಯಲ್ ಫಂಡ್‌ಗಳಲ್ಲಿ ದೊಡ್ಡ ಕುಸಿತವನ್ನೇ ನೋಡಬಹುದಾಗಿದೆ. AMFI..ಅಂದರೆ, ಅಸೋಸಿಯೇಷನ್ ಆಫ್ ಮ್ಯೂಚುಯಲ್ ಫಂಡ್ಸ್ ಇನ್ ಇಂಡಿಯಾ ಡೇಟಾದ ಪ್ರಕಾರ, 2025ರ ಫೆಬ್ರವರಿಯಲ್ಲಿ ಈಕ್ವಿಟಿ ಫಂಡ್‌ಗಳಲ್ಲಿನ ನಿವ್ವಳ ಒಳಹರಿವು (Net Inflow) ಶೇ 26.17ರಷ್ಟು ಇಳಿಕೆ ಕಂಡು ₹29,303 ಕೋಟಿ ರೂ.ಗಳಿಗೆ ತಲುಪಿದೆ. ಇನ್ನು ಜನವರಿಯಲ್ಲಿ ಕಂಡುಬಂದ ₹39,687 ಕೋಟಿ ರೂ.ಗಳೊಂದಿಗೆ ಹೋಲಿಸಿದರೆ, ಮಾರುಕಟ್ಟೆಯ ಏರಿಳಿತ ಹಾಗೂ ಹೂಡಿಕೆದಾರರ ಹಿಂಜರಿಕೆಯೇ ಇದಕ್ಕೆ ಪ್ರಮುಖ ಕಾರಣವಾಗಿದೆ.

ಹಾಗೆಯೇ ನಿರ್ವಹಣೆಯಲ್ಲಿರುವ ಒಟ್ಟು ಆಸ್ತಿಯು (Assets Under Management ) ಕೂಡ ಇಳಿಕೆ ಕಂಡಿದೆ. ಜನವರಿಯಲ್ಲಿ ₹67,25,449.67 ಕೋಟಿ ರೂ. ಇದ್ದ AUM ಫೆಬ್ರವರಿಯಲ್ಲಿ ₹64,53,493 ಕೋಟಿ ರೂ. ಆಗಿದೆ. ಇಂಥ ಒಂದು ದೊಡ್ಡ ಕುಸಿತಕ್ಕೆ ಒಂದು ಬಲವಾದ ಕಾರಣವೂ ಇದೆ. ಅವು ಯಾವುವು ಎಂದು ನೋಡುವುದಾದರೆ..
- ಹೌದು, ಹೂಡಿಕೆದಾರರು ತಮ್ಮ ಹೂಡಿಕೆಗಳನ್ನು ಹಿಂಪಡೆದಿರುವುದು AUM ಕುಸಿತಕ್ಕೆ ಕಾರಣವಾಗಿದೆ. ಮಾರುಕಟ್ಟೆಯ ಇಳಿಮುಖದ ಕಾರಣ ಮ್ಯೂಚುವಲ್ ಫಂಡ್ ಆಸ್ತಿಗಳ ಮೌಲ್ಯ ಕುಸಿದಿದೆ. ಹೂಡಿಕೆದಾರರ ವಲಯ ಮತ್ತು ವಿಷಯಾಧಾರಿತ ನಿಧಿಗಳಿಗೆ ಇನ್ನೂ ಬಲವಾದ ಒಲವು ತೋರಿಸುತ್ತಿದ್ದಾರೆ. ಹೀಗಿದ್ದರೂ ಜನವರಿ ತಿಂಗಳಿಗೆ ಹೋಲಿಸಿದರೆ, ಹೂಡಿಕೆ ಪ್ರಮಾಣದಲ್ಲಿ ಇಳಿಮುಖ ಕಂಡುಬಂದಿದೆ.
- ಒಟ್ಟು AUM ಜನವರಿಯ ₹51,839.39 ಕೋಟಿ ರೂ. ಇಂದ ₹55,677.25 ಕೋಟಿ ರೂ. ಗೆ ಏರಿಕೆಯಾಗಿದೆ. ಆದರೆ ನಿವ್ವಳ ಒಳಹರಿವು ಮಾತ್ರ ಕಡಿಮೆಯಾಗಿದೆ. ಅಂದರೆ ಜನವರಿಯಲ್ಲಿ ₹3,751.42 ಕೋಟಿ ರೂ. ಇದ್ದ ಹೂಡಿಕೆ ಫೆಬ್ರವರಿಯಲ್ಲಿ ₹1,979.84 ಕೋಟಿ ರೂ. ಗೆ ಇಳಿದಿದೆ. ಇದು ಚಿನ್ನದ ಮೇಲಿನ ಹೂಡಿಕೆದಾರರ ಆಸಕ್ತಿ ಇರುವುದನ್ನು ತೋರಿಸುತ್ತಿದೆ.
- ಇನ್ನು ಫೆಬ್ರವರಿಯ ಮ್ಯೂಚುವಲ್ ಫಂಡ್ ಹೂಡಿಕೆ ಕುಸಿತವಾಗಲು, ಆಂತರಿಕ ಮತ್ತು ಜಾಗತಿಕ ಕಾರಣಗಳೂ ಕೂಡ ಮುಖ್ಯವಾಗಿದೆ. ಮಾರ್ನಿಂಗ್‌ಸ್ಟಾರ್ ಇನ್ವೆಸ್ಟ್‌ಮೆಂಟ್ ರಿಸರ್ಚ್ ಇಂಡಿಯಾ ಹಿರಿಯ ವಿಶ್ಲೇಷಕ ನೇಹಾಲ್ ಮೆಶ್ರಮ್ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದರ ಪ್ರಕಾರ ಹೂಡಿಕೆದಾರರ ಭಾವನೆ ಕುಸಿಯಲು ಈ ಕಾರಣಗಳೇ ಮುಖ್ಯವಾಗಿವೆ. ಅಂದರೆ ಅಮೆರಿಕದ ಫೆಡರಲ್ ರಿಸರ್ವ್ ತನ್ನ ಬಡ್ಡಿದರಗಳನ್ನು ಹೆಚ್ಚಿಸುವ ಸೂಚನೆ ನೀಡಿದ್ದರಿಂದ, ಹೂಡಿಕೆದಾರರಲ್ಲಿ ಆತಂಕ ಸೃಷ್ಟಿಯಾಗಿದೆ. ಇದರಿಂದ ಅಮೆರಿಕಾದ ಬಾಂಡ್‌ಗಳ ಆಕರ್ಷಣೆ ಹೆಚ್ಚಾಗಿ, ಭಾರತೀಯ ಮಾರುಕಟ್ಟೆಗೆ ಹೂಡಿಕೆ ಕಡಿಮೆಯಾಗುತ್ತಿದೆ.
- ಜಾಗತಿಕ ವ್ಯಾಪಾರ ಉದ್ವಿಗ್ನತೆಗಳು ಕೂಡ ಈ ಕುಸಿತಕ್ಕೆ ಒಂದು ಕಾರಣವಾಗಿವೆ ಎಂದರೆ ತಪ್ಪಾಗಲ್ಲ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇರುವ ಅನಿಶ್ಚಿತತೆ, ಹೂಡಿಕೆದಾರರನ್ನು ಎಚ್ಚರಿಕೆಯಿಂದ ಮುನ್ನಡೆಯುವಂತೆ ಮಾಡಿದೆ. ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು, ಜಾಗತಿಕ ರಾಜಕೀಯ ಉದ್ವಿಗ್ನತೆಗಳು, ಯುದ್ಧ ಮತ್ತು ವಿದೇಶಿ ರಾಜಕೀಯದ ಅನಿಶ್ಚಿತತೆ ಹೂಡಿಕೆ ನಿರ್ಧಾರಗಳ ಮೇಲೆ ಪ್ರಭಾವ ಬೀರುತ್ತಿದೆ.
- ಹಾಗೆಯೇ ದೇಶದಲ್ಲಿ ಆರ್ಥಿಕ ಬೆಳವಣಿಗೆಯ ನಿಧಾನಗತಿಯಾಗುತ್ತಿರುವುದು ಕೂಡ ಕೆಲವೊಂದು ಅನಿರೀಕ್ಷಿತ ಬೆಳವಣಿಗೆಗೆ ಕಾರಣವಾಗುತ್ತಿರುವುದನ್ನು ನೋಡಬಹುದು. ಅಂದರೆ ಭಾರತದಲ್ಲಿ ನಿರೀಕ್ಷಿತ ವೇಗದಲ್ಲಿ ಆರ್ಥಿಕ ಬೆಳವಣಿಗೆ ನಡೆಯದಿರುವುದು ಹೂಡಿಕೆದಾರರಲ್ಲಿ ಆತಂಕ ಸೃಷ್ಟಿಸಿದೆ.ಎಫ್‌ಐಐಗಳ ಹೊರಹರಿವು..ಅಂದರೆ ಭಾರತೀಯ ಮಾರುಕಟ್ಟೆಯಿಂದ ವಿದೇಶಿ ಹೂಡಿಕೆದಾರರು, ಹೂಡಿಕೆಗಳನ್ನು ಹಿಂತೆಗೆದುಕೊಳ್ಳುತ್ತಿದ್ದಾರೆ. ಇದು ಕೂಡ ಒಂದು ಕಾರಣವಾಗಿದೆ. ಇದರಿಂದ ಭಾರತೀಯ ಷೇರು ಮಾರುಕಟ್ಟೆಗೆ ಒತ್ತಡ ಹೆಚ್ಚಾಗಿದೆ.
ಇನ್ನು ಮ್ಯೂಚುವಲ್ ಫಂಡ್ ಹೂಡಿಕೆಗಳು ಅಲ್ಪಾವಧಿಯಲ್ಲಿ ಏರಿಳಿತ ಅನುಭವಿಸುತ್ತವೆ. ಆದರೆ ಅವುಗಳು ಸುಧಾರಿಸಿಕೊಳ್ಳಲು ಹೆಚ್ಚು ಸಮಯ ಬೇಕಾಗುತ್ತದೆ. ಹೀಗಾಗಿ ಹೂಡಿಕೆದಾರರು ಈ ಸಲಹೆಗಳನ್ನು ಪಾಲಿಸಬಹುದು. ಹೀಗಾಗಿ ಮಾರುಕಟ್ಟೆಯ ಅಲ್ಪಾವಧಿಯ ಏರುಪೇರಿಗೆ ಭಯಪಡದೆ, ಲಾಂಗ್-ಟರ್ಮ್ ಹೂಡಿಕೆ ಮಾಡುವುದು ಉತ್ತಮ. ಹಾಗೆಯೇ ವಸ್ತುಪರ ಚಿನ್ನ, ಬಾಂಡ್‌ಗಳಂತಹ ವಿಭಿನ್ನ ಆಸ್ತಿಗಳಲ್ಲಿ ಹೂಡಿಕೆ ಮಾಡಬೇಕು.ಮಾರುಕಟ್ಟೆ ಏರುಪೇರಿಗೆ ಪರಿಗಣಿಸದೆ, ನಿಯಮಿತ ಹೂಡಿಕೆ ಮಾಡುವುದು ಉತ್ತಮ.
ಒಟ್ಟಿನಲ್ಲಿ ಫೆಬ್ರವರಿ 2025ರ ಮ್ಯೂಚುವಲ್ ಫಂಡ್ ಹೂಡಿಕೆ ಡೇಟಾ ಮಾರುಕಟ್ಟೆಯ ಅನಿಶ್ಚಿತತೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ಹೂಡಿಕೆದಾರರು ಎಚ್ಚರಿಕೆಯಿಂದ ಮುಂದುವರಿಯಬೇಕು. ಹಾಗೆಂದು ಭಯದಿಂದ ಹೂಡಿಕೆ ಸ್ಥಗಿತಗೊಳಿಸಬಾರದು. ಮಾರುಕಟ್ಟೆಯ ಏರುಪೇರಿಯ ನಡುವೆ ಮೌಲ್ಯಯುತ ಹೂಡಿಕೆ ಮತ್ತು ಲಾಂಗ್-ಟರ್ಮ್ ವೈವಿಧ್ಯೀಕರಣ ಹೂಡಿಕೆದಾರರಿಗೆ ಉತ್ತಮ ಫಲಿತಾಂಶ ತರುತ್ತದೆ.


Click it and Unblock the Notifications