India-EU Trade Deal: ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು ಇಂದು ನವದೆಹಲಿಯಲ್ಲಿ 16ನೇ ಭಾರತ-ಯುರೋಪಿಯನ್ ಒಕ್ಕೂಟ (EU) ಶೃಂಗಸಭೆ (India-EU Summit 2026) ಆಯೋಜಿಸಲಿದ್ದಾರೆ. ವ್ಯಾಪಾರ, ಭದ್ರತೆ ಮತ್ತು ತಂತ್ರಜ್ಞಾನ ವಲಯಗಳಲ್ಲಿ ಕಾರ್ಯತಂತ್ರದ ಸಹಭಾಗಿತ್ವ ವೃದ್ಧಿಸುವುದೇ ಇದರ ಮುಖ್ಯ ಗುರಿ. ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಕೋಸ್ಟಾ ಮತ್ತು ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಅವರು ಯುಇಯನ್ನು ಈ ಶೃಂಗಸಭೆಯಲ್ಲಿ ಪ್ರತಿನಿಧಿಸುತ್ತಿದ್ದಾರೆ. ಇನ್ನು ಈ ಶೃಂಗಸಭೆಯಲ್ಲಿ ಮುಖ್ಯವಾಗಿ ವ್ಯಾಪಾರ, ರಕ್ಷಣೆ ಮತ್ತು ಮೆಗಾ ಫ್ರೀ ಟ್ರೇಡ್ ಅಗ್ರಿಮೆಂಟ್ (FTA) ಬಗ್ಗೆ ಚರ್ಚೆ ನಡೆಯಲಿದೆ.

ಜನವರಿ 26, 2026ರ ಸೋಮವಾರ ನವದೆಹಲಿಯಲ್ಲಿ ನಡೆದ 77ನೇ ಗಣರಾಜ್ಯೋತ್ಸವದ ಸಮಾರಂಭಕ್ಕೆ ಯುಇ ಅಧ್ಯಕ್ಷರಾದ ಕೋಸ್ಟಾ ಮತ್ತು ವಾನ್ ಡೆರ್ ಲೇಯೆನ್ ಗೌರವ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಸಹ ಉಪಸ್ಥಿತರಿದ್ದರು. ಇದೀಗ ಗಣರಾಜ್ಯೋತ್ಸವ ಆಚರಣೆ ಬೆನ್ನಲ್ಲೇ ಈ ಶೃಂಗಸಭೆ ನಡೆಸಲು ನಿರ್ಧರಿಸಲಾಗಿದೆ.
ಯುರೋಪಿಯನ್ ಕೌನ್ಸಿಲ್ ಹೇಳಿಕೆಯ ಪ್ರಕಾರ, ಈ ಶೃಂಗಸಭೆ ಭಾರತ-ಯುಇ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಉನ್ನತಗೊಳಿಸುವ ಉದ್ದೇಶವನ್ನು ಹೊಂದಿದೆ. ವ್ಯಾಪಾರ, ಭದ್ರತೆ ಮತ್ತು ರಕ್ಷಣೆ, ಗುಣಮಟ್ಟದ ಇಂಧನ ಪರಿವರ್ತನೆ ಹಾಗೂ ಜನರ ನಡುವಿನ ಸಹಕಾರದಂತಹ ಪ್ರಮುಖ ನೀತಿ ಕ್ಷೇತ್ರಗಳಲ್ಲಿ ಒಪ್ಪಂದವನ್ನು ಬಲಪಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
ಭಾರತ-ಯುಇ ಮುಕ್ತ ವ್ಯಾಪಾರ ಒಪ್ಪಂದ ಯಶಸ್ವಿ!
ವಾಣಿಜ್ಯ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ಅವರು ಶನಿವಾರ, ಭಾರತ-ಯುಇ ಮುಕ್ತ ವ್ಯಾಪಾರ ಒಪ್ಪಂದದ (FTA) ಮಾತುಕತೆಗಳು ಯಶಸ್ವಿಯಾಗಿ ಮುಕ್ತಾಯಗೊಂಡಿವೆ ಎಂದು ಘೋಷಿಸಿದ್ದಾರೆ. ಆದಾಗ್ಯೂ, ಕಾನೂನು ಪರಿಶೀಲನೆಗೆ (legal scrubbing) ಐದರಿಂದ ಆರು ತಿಂಗಳು ಬೇಕಾಗಬಹುದು, ಅದರ ನಂತರವೇ ಒಪ್ಪಂದಕ್ಕೆ ಔಪಚಾರಿಕ ಸಹಿ ಹಾಕಲಾಗುತ್ತದೆ ಎಂದು ಹೇಳಲಾಗುತ್ತದೆ.
ಈ ಒಪ್ಪಂದವು ಯುರೋಪಿಯನ್ ಒಕ್ಕೂಟದ ಜೊತೆಗೆ ಭಾರತದ ಉತ್ತಮ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಿ, ಉಭಯ ರಾಷ್ಟ್ರಗಳ ನಡುವಿನ ವ್ಯಾಪಾರ ಮತ್ತು ಹೂಡಿಕೆಗೆ ಗಮನಾರ್ಹ ಉತ್ತೇಜನ ನೀಡಲಿದೆ ಎಂದರು.
ಇತ್ತೀಚಿನ ವರ್ಷಗಳಲ್ಲಿ ಭಾರತ-ಯುಇ ಸಂಬಂಧಗಳು ಬಹಳಷ್ಟು ಸುಧಾರಿಸಿವೆ. ಎಲ್ಲಾ ಕ್ಷೇತ್ರಗಳಲ್ಲಿ ನಿರಂತರ ಉನ್ನತ ಮಟ್ಟದ ಸಹಭಾಗಿತ್ವದ ಬೆನ್ನಲ್ಲೇ ಈ ಶೃಂಗಸಭೆ ನಡೆಯುತ್ತಿದೆ.
ಯುರೋ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಯುರೋಪಿಯನ್ ಒಕ್ಕೂಟದ ವ್ಯಾಪಾರ ಆಯುಕ್ತ ಮಾರ್ಕೋಸ್ ಸೆಫ್ಕೋವಿಚ್, ಭಾರತದೊಂದಿಗೆ ಪ್ರಸ್ತಾವಿತ ಮುಕ್ತ ವ್ಯಾಪಾರ ಒಪ್ಪಂದವನ್ನು "ಎಲ್ಲಾ ಒಪ್ಪಂದಗಳ ತಾಯಿ" (mother of all deals) ಎಂದು ಬಣ್ಣಿಸಿದ್ದಾರೆ. ಇದು ಭಾರತೀಯ ಮಾರುಕಟ್ಟೆಯನ್ನು ಯುರೋಪಿಯನ್ ವಹಿವಾಟುಗಳಿಗೆ ದಾರಿ ಮಾಡಿಕೊಡಲಿದೆ.
ಭಾರತದಲ್ಲಿ ಕೆಲವು ವಲಯಗಳಲ್ಲಿ ಶೇಕಡಾ 150 ರಷ್ಟಿರುವ ಅಧಿಕ ಆಮದು ಸುಂಕಗಳನ್ನು ಕಡಿಮೆ ಮಾಡಲು ಯುರೋಪಿಯನ್ ಒಕ್ಕೂಟ ಪ್ರಯತ್ನಿಸುತ್ತಿದೆ. ಇದರ ಬಗ್ಗೆಯೂ ಮುಂದಿನ ದಿನಗಳಲ್ಲಿ ಚರ್ಚೆಯಾಗಲಿದೆ ಎಂದು ಹೇಳಿದ್ದಾರೆ.
ಸೆಫ್ಕೋವಿಚ್ ಮಾತನಾಡಿ, "ಕೆಲವು ವಲಯಗಳಲ್ಲಿ, ಭಾರತದಲ್ಲಿ ಶೇಕಡಾ 150 ರಷ್ಟು ಸುಂಕವಿದೆ. ಇದರಿಂದಾಗಿ ಆರ್ಥಿಕತೆಯ ದೊಡ್ಡ ಭಾಗಗಳು ಯುರೋಪಿಯನ್ ರಫ್ತುದಾರರಿಗೆ ಸಂಪೂರ್ಣವಾಗಿ ಮುಚ್ಚಲ್ಪಟ್ಟಿದ್ದವು. ಈಗ ದೊಡ್ಡ ಲಾಭವೆಂದರೆ ಆರ್ಥಿಕತೆಯನ್ನು ತೆರೆಯುವುದು" ಎಂದು ಹೇಳಿದರು.
ಯುರೋಪಿಯನ್ ಒಕ್ಕೂಟ ಮತ್ತು ಭಾರತದ ನಡುವೆ ಭದ್ರತೆ ಹಾಗೂ ರಕ್ಷಣಾ ಸಹಭಾಗಿತ್ವವನ್ನು ಸ್ಥಾಪಿಸುವ ನಿಟ್ಟಿನಲ್ಲಿ ನಿಕಟ ಸಹಕಾರದ ಬಗ್ಗೆಯೂ ನಾಯಕರು ಶೃಂಗಸಭೆಯಲ್ಲಿ ಚರ್ಚಿಸಲಿದ್ದಾರೆ ಎಂದು ಹೇಳಿಕೆ ತಿಳಿಸಿದೆ.
ಇತಿಹಾಸದಲ್ಲಿಯೇ ಅತಿ ದೊಡ್ಡ ವ್ಯಾಪಾರ ಒಪ್ಪಂದ
ಸೆಫ್ಕೋವಿಚ್ ಅವರ ಪ್ರಕಾರ, ಈ ಒಪ್ಪಂದ ಸರಿಸುಮಾರು 2 ಶತಕೋಟಿ ಜನರನ್ನು ಒಳಗೊಂಡ ಮುಕ್ತ ವ್ಯಾಪಾರ ವಲಯವನ್ನು ಸೃಷ್ಟಿಸಲಿದೆ. ಇದು ಯುರೋಪಿಯನ್ ಸರಕುಗಳ ಮೇಲಿನ ಹಲವು ಭಾರತೀಯ ಕಸ್ಟಮ್ಸ್ ಸುಂಕಗಳನ್ನು ತೆಗೆದುಹಾಕಲಿದೆ.
"ಇದು ಇತಿಹಾಸದಲ್ಲಿಯೇ ಅತಿ ದೊಡ್ಡ ವ್ಯಾಪಾರ ಒಪ್ಪಂದವಾಗಿದೆ" ಎಂದು ಸೆಫ್ಕೋವಿಚ್ ಬಣ್ಣಿಸಿದರು. ಪ್ರಸ್ತುತ ಭಾರತದಲ್ಲಿ ಸುಮಾರು 6,000 ಯುರೋಪಿಯನ್ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಅದೇ ಕಾರಣದಿದ ಇದೀಗ ಉಭಯ ರಾಷ್ಟ್ರಗಳ ನಾಯಕರು ಹೊಸ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ.
More From GoodReturns

Biggest Airport: ಭಾರತದ ಅತಿದೊಡ್ಡ ವಿಮಾನ ನಿಲ್ದಾಣ ಸಂಚಾರಕ್ಕೆ ಸಿದ್ಧ; 45 ದಿನದೊಳಗೆ ಆರಂಭ

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

LPG ಪೂರೈಕೆಯಲ್ಲಿ ಕೊರತೆ; ದೇಶದಲ್ಲಿ ಎಲ್ಪಿಜಿ ಉತ್ಪಾದನೆ 10% ಹೆಚ್ಚಳ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Silver Rate Today: ಒಂದೇ ದಿನ 10,000 ಇಳಿಕೆ ಕಂಡ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Market Prediction: ನಾಳೆ ಹೇಗಿರಲಿದೆ ಷೇರು ಮಾರುಕಟ್ಟೆ? ಲಾಭವೋ? ನಷ್ಟವೋ? ಇಲ್ಲಿದೆ ಓದಿ

iPhone EMI: ಐಫೋನ್ EMIನಲ್ಲಿ ತಗೊಳೋದು ಎಷ್ಟು ಸೇಫ್? ಮಾಸಿಕ ಪಾವತಿ ಸುಲಭ, ಆದರೆ ನಿಮ್ಮ ಹಣಕಾಸು ಸುರಕ್ಷಿತವೇ?



Click it and Unblock the Notifications