ಬೆಂಗಳೂರಲ್ಲಿ ಮನೆ ಕೊಳ್ಳಬೇಕು ಅಂದ್ರೆ ಕೋಟಿ ಕುಳ ಆಗಿರಬೇಕು ಅಂತಾರೆ. ಯಾಕಂದ್ರೆ ಇತ್ತೀಚೆಗೆ ವಸತಿ ಮಾಡುಕಟ್ಟೆ ಮಹತ್ತರ ಬದಲಾವಣೆ ನೋಡುತ್ತಿದೆ. 1 ಕೋಟಿಗಿಂತ ಕಡಿಮೆ ಬೆಲೆಯ ಐಷಾರಾಮಿ ಮನೆಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಈ ಸ್ಥಿತಿಗೆ ಗಮನಹರಿಸಿದಾಗ, ದೇಶದ ವಸತಿ ಅಭಿವೃದ್ಧಿ ಯಾರುಗಾಗಿ? ಎಂಬ ಪ್ರಶ್ನೆ ಉತ್ಪತ್ತಿಯಾಗುತ್ತಿದೆ.

ಕಡಿಮೆ ಬೆಲೆಯ ಮನೆಗಳಿಗೆ ಬೆಲೆ ಕುಸಿತ:
2025ರ ಮೊದಲ ತ್ರೈಮಾಸಿಕದ ಆಧಾರದಲ್ಲಿ, 50 ಲಕ್ಷ ರೂ.ಗಿಂತ ಕಡಿಮೆ ಬೆಲೆಯ ಮನೆಗಳ ಮಾರಾಟವು ಶೇ.9ರಷ್ಟು ಕುಸಿದಿದೆ. 50 ಲಕ್ಷದಿಂದ 1 ಕೋಟಿಯವರೆಗೆ ಬೆಲೆಯ ಮನೆಗಳ ಮಾರಾಟವೂ ಶೇ.6ರಷ್ಟು ಇಳಿಕೆಯಾಗಿದೆ. ಆದರೆ, 2 ಕೋಟಿಯಿಂದ 5 ಕೋಟಿ ಮನೆಗಳ ಮಾರಾಟ ಶೇ.28ರಷ್ಟು ಹೆಚ್ಚಿದರೆ, 50 ಕೋಟಿಗಿಂತ ಮೇಲಿನ ಮನೆಗಳ ಮಾರಾಟದಲ್ಲಿ ಶೇಕಡಾ 483ರಷ್ಟು ಏರಿಕೆಯಾಗಿದೆ. ಇದು ಐಷಾರಾಮಿ ವಸತಿ ಕ್ಷೇತ್ರದ ಭಾರಿ ಬೆಳವಣಿಗೆಗೆ ಸಾಕ್ಷಿಯಾಗಿದೆ.
ಮಧ್ಯಮ ವರ್ಗ ಗೊಂದಲದಲ್ಲಿದೆ:
ವಾಸ್ತವದಲ್ಲಿ, ಭಾರತದಲ್ಲಿ 1 ಕೋಟಿಗಿಂತ ಹೆಚ್ಚಿನ ಬೆಲೆಯ ಮನೆಗಳು ಈಗ ಒಟ್ಟು ವಸತಿ ಮಾರಾಟದ ಶೇ.46ರಷ್ಟು ಪಾಲು ಹೊಂದಿವೆ. ರಿಯಲ್ ಎಸ್ಟೇಟ್ ಡೆವಲಪರ್ ರಾಜ್‌ದೀಪ್ ಚೌಹಾಣ್ ಈ ಬಗ್ಗೆ ಪ್ರಶ್ನಿಸುತ್ತಾರೆ: 25 ಲಕ್ಷ ಸಂಬಳ ಹೊಂದಿರುವ ಸಾಫ್ಟ್‌ವೇರ್ ಎಂಜಿನಿಯರ್‌ಗೂ ಮುಂಬೈ, ಬೆಂಗಳೂರು ಅಥವಾ NCRನಲ್ಲಿ 2BHK ಮನೆ ಖರೀದಿಸಲು ಆಗದಿದ್ದರೆ, ನಾವು ಮನೆಗಳನ್ನು ನಿರ್ಮಿಸುತ್ತಿದ್ದೇವೆ ಎನ್ನಬಹುದು ನಾ ಅಥವಾ ಅಸಮಾನತೆಯನ್ನು?
ಅವರು ಈ ಪ್ರವೃತ್ತಿಯನ್ನು "ಬಾರ್ಬೆಲ್ ಆರ್ಥಿಕತೆ" ಎಂಬುದಾಗಿ ವಿವರಿಸುತ್ತಿದ್ದಾರೆ. ಅಂದರೆ ಡೆವಲಪರ್‌ಗಳು ಹೆಚ್ಚು ಶ್ರೀಮಂತ ಅಥವಾ ಬಡ ಜನರಿಗಾಗಿ ಮಾತ್ರ ಮನೆಗಳನ್ನು ನಿರ್ಮಿಸುತ್ತಿದ್ದಾರೆ. ಮಧ್ಯಮ ವರ್ಗದವರು ಖರೀದಿಸಬಲ್ಲ ಆಯ್ಕೆಗಳಿಲ್ಲದೆ ಹೋಳುತ್ತಿದ್ದುದು ಸ್ಪಷ್ಟವಾಗಿದೆ.
ಹೊಸ ಯೋಜನೆಗಳಲ್ಲೂ ಕಡಿಮೆಯೇ:
50 ಲಕ್ಷಕ್ಕಿಂತ ಕಡಿಮೆ ಬೆಲೆಯ ಹೊಸ ವಸತಿ ಯೋಜನೆಗಳ ಆರಂಭವು ದೇಶದಾದ್ಯಂತ ಶೇ.31ರಷ್ಟು ಕುಸಿತ ಕಂಡಿದೆ. ಬೆಂಗಳೂರಿನಲ್ಲಿ ಈ ಕುಸಿತ ಶೇ.85ರಷ್ಟಿದ್ದು, 2018ರ ಮಟ್ಟಕ್ಕೆ ಹೋಲಿಸಿದರೆ ಅತ್ಯಂತ ಕಡಿಮೆಯಾಗಿದೆ. ಮುಂಬೈನಲ್ಲಿ ಶೇ.11 ಮತ್ತು ಕೋಲ್ಕತ್ತದಲ್ಲಿ ಶೇ.67ರಷ್ಟು ಇಳಿಕೆಯಾಗಿದೆ. ಇದು ಮಧ್ಯಮ ವರ್ಗಕ್ಕೆ ನಿರ್ಮಿಸಲಾಗುತ್ತಿರುವ ಮನೆಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಎಂಬುದನ್ನು ತೋರಿಸುತ್ತದೆ.
ಮಾರುಕಟ್ಟೆಯಲ್ಲಿ ಐಷಾರಾಮಿ ವಸತಿ ಪ್ರಾಬಲ್ಯ:
ಇತ್ತೀಚಿನ ಬೆಳವಣಿಗೆಗಳಿಂದ ಸ್ಪಷ್ಟವಾಗುತ್ತಿದೆ. ಮಾರುಕಟ್ಟೆಯಲ್ಲಿ ಈಗ ಶ್ರೀಮಂತರು ಮಾತ್ರ ಸಕ್ರಿಯರಾಗಿದ್ದಾರೆ. ಮಧ್ಯಮ ವರ್ಗದವರು ಬೆಲೆಗೆ ತಕ್ಕ ಮನೆ ಹುಡುಕುವಲ್ಲಿ ವಿಫಲರಾಗುತ್ತಿದ್ದಾರೆ. ಮನೆ ಖರೀದಿಸಲು ಬೇಕಾದ ಹಣಕಾಸಿನ ಮೂಲಗಳು ಮತ್ತು ಕಡಿಮೆ ಬಡ್ಡಿದರಗಳು ಇದ್ದರೂ, 1 ಕೋಟಿಗಿಂತ ಕಡಿಮೆ ಬೆಲೆಯ ವಸತಿಗೆ ಪೂರೈಕೆ ಇಲ್ಲದಿರುವುದರಿಂದ, ಅವರು ಹಿನ್ನಡೆಯತ್ತ ಹೋಗುತ್ತಿದ್ದಾರೆ.
ಇಂದಿನ ವಾಸ್ತವ ಸ್ಥಿತಿಯಲ್ಲಿ, ವಸತಿ ಯೋಜನೆಗಳು ಎಲ್ಲಾ ವರ್ಗದ ಜನರ ಅಗತ್ಯ ಪೂರೈಸಲು ವಿಫಲವಾಗಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮತ್ತು ಖಾಸಗಿ ಡೆವಲಪರ್‌ಗಳು ಕೈಗೆಟುಕುವ ಮತ್ತು ಮಿತಬದ್ದ ಬಜೆಟ್‌ನ ಮನೆಗಳನ್ನು ಪ್ರಾಮುಖ್ಯತೆಯಿಂದ ಪ್ರೋತ್ಸಾಹಿಸದೆ ಇದ್ದರೆ, ಭಾರತದ ಬಹುತೇಕ ಜನತೆ ಮನೆಮಾಲೀಕತ್ವದ ಕನಸು ಕಂಡು ಕಳೆಯುವ ಸ್ಥಿತಿಗೆ ಹೋಗಬಹುದು. ವಸತಿ ಅಭಿವೃದ್ಧಿ ಸತ್ಯಕ್ಕೂ ಸಮತೋಲನಕ್ಕೂ ಹೊಂದಿಕೊಳ್ಳಬೇಕಾದ ಕಾಲವಿದು.


Click it and Unblock the Notifications