ನವದೆಹಲಿ, ಮೇ 6: ಕಾರ್ಪೊರೇಟ್ ಜಗತ್ತಿನಲ್ಲಿ, ಅನೇಕ ಐಟಿ ವೃತ್ತಿಪರರು, ಉದ್ಯಮಿಗಳು ತಮ್ಮ ಬ್ಯುಸಿ ಶೆಡ್ಯೂಲ್ ಗಳ ನಡುವೆ ತಮಗಾಗಿ, ಫ್ಯಾಮಿಲಿಗಾಗಿ ಹಾಗೂ ಆರೋಗ್ಯ ಕಾಪಾಡಲು ವರ್ಕೌಟ್ ಮಾಡಲು ಸಮಯ ಹೊಂದಾಣಿಸಲು ಹೆಣಗಾಡುತ್ತಾರೆ. ಹೆಚ್ಚಿನ ಮಾನಸಿಕ ಒತ್ತಡಗಳ ಕೆಲಸಗಳಿಂದ ತೂಕ ಹೆಚ್ಚಳ, ಬೊಜ್ಜು ಮತ್ತು ಸಂಬಂಧಿತ ಆರೋಗ್ಯ ಸಮಸ್ಯೆ ಗಳಿಗೆಕಾರಣವಾಗುವುದು ಸಹಜ. ಆದರೆ ಇಂತಹ ಬ್ಯುಸಿ ಶೆಡ್ಯೂಲ್ ಗಳ ನಡುವೆ ಆರೋಗ್ಯದೆಡೆ ಗಮನಕೊಟ್ಟು, ತೂಕ ಇಳಿಸಿಕೊಂಡು ಫಿಟ್ ಆಗಿ ಬದಲಾದ ಉದ್ಯಮಿಯೊಬ್ಬರಿಗೆ, ಅದರಿಂದಲೇ ಸಂಕಷ್ಟಕ್ಕೆ ಸಿಲುಕಿದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಉದ್ಯಮಿ ದಿಲೀಪ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ತಮಗೆ ಆದ ಅಚ್ಚರಿಯ ಅನುಭವವನ್ನು ಹಂಚಿಕೊಂಡಿದ್ದಾರೆ. ದಿಲೀಪ್ ಅವರಿಗೆ ವಿಮಾನ ನಿಲ್ದಾಣದಲ್ಲಿ ಈ ವಿಚಿತ್ರ ಅನುಭವವಾಗಿದ್ದು, ತೂಕ ಇಳಿಸಿಕೊಂಡ ಪರಿಣಾಮ ಎದುರಾಗಬಹುದಾದ ಅನಿರೀಕ್ಷಿತ ಸವಾಲುಗಳ ಬಗ್ಗೆ ಬರೆದುಕೊಂಡಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಪರಿಶೀಲನೆಗೆ ಒಳಗಾದ ಸಂದರ್ಭ ಇಮಿಗ್ರೇಷನ್ ಆಫೀಸರ್ ನಡೆಸುವ ಸಾಮಾನ್ಯ ಸಂವಾದವು ಮುಂದೆ ಹೇಗೆ ಅನುಮಾನಕ್ಕೆ ಕಾರಣವಾಯಿತು ಎಂಬುವುದನ್ನು ಬಹಿರಂಗಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದ ಪೋಸ್ಟ್ ನಲ್ಲಿ ದಿಲೀಪ್ ಅವರು, ತಮ್ಮ ಪಾಸ್ಪೋರ್ಟ್ ಪರಿಶೀಲಿಸಿದಾಗ, ಶಂಕೆ ವ್ಯಕ್ತಪಡಿಸಿದ ಮತ್ತು ಇದರ ಸತ್ಯಾಸತ್ಯತೆಯನ್ನು ವಿಚಾರಣೆಗೆ ಒಳಪಡಿಸಿ ಅಧಿಕಾರಿಯ ಪ್ರತಿಕ್ರಿಯೆಯನ್ನು ವಿವರಿಸಿದ್ದಾರೆ. ದಿಲೀಪ್ ಅವರು ತಮ್ಮ ಪಾಸ್ಪೋರ್ಟ್ ಫೋಟೋ ನಿಜಕ್ಕೂ ಅಸಲಿ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಬಳಲಿಸಿಕೊಂಡು ಯಾವುದೇ ಡಿಜಿಟಲ್ ಬದಲಾವಣೆ ಮಾಡಿಲ್ಲ ಎಂದು ಅಧಿಕಾರಿಗೆ ಮನವರಿಕೆ ಮಾಡಿಕೊಡಬೇಕಾದ ಗೊಂದಲದ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದೆ ಎಂದು ಹೇಳಿದ್ದಾರೆ.
ಅವರು ತಮ್ಮ ಎಕ್ಸ್ ಖಾತೆಯಲ್ಲಿ "ಇಂದು ಇಮಿಗ್ರೇಷನ್ ಅಧಿಕಾರಿ ನನ್ನ ಪಾಸ್ಪೋರ್ಟ್ಗಳನ್ನು ಪರಿಶೀಲಿಸಿದರು.. ಇದು ನಿಜವಾಗಿರುವಂಥದ್ದೇ ಎಂದು ಪ್ರಶ್ನಿಸಿದರು. ಇದು ಫೋಟೋಶಾಪ್ ಅಥವಾ AI ರಚಿತವಲ್ಲ ಎಂದು ಅಧಿಕಾರಿಗೆ ಮನವರಿಕೆ ಮಾಡಲು ನನಗೆ ಸಾಕಷ್ಟು ಕಷ್ಟವಾಯಿತು. ಕೆಲವೊಮ್ಮೆ ಫಿಟ್ ಆಗಿರುವುದು ಕೂಡನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು" ಎಂದು ಬರೆದುಕೊಂಡಿದ್ದಾರೆ.
ಅವರ ಹಳೆಯ ಮತ್ತು ಇತ್ತೀಚಿಗೆ ಫೋಟೋದಲ್ಲಿ ಬಹಳಷ್ಟು ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಈ ಸ್ಟೋರಿ ಕೆಲವೊಮ್ಮೆ ದೈಹಿಕವಾಗಿ ಗಮನಾರ್ಹವಾಗಿ ಬದಲಾದಾಗ ಎದುರಿಸಬಹುದಾದ ಸವಾಲುಗಳನ್ನು ಎತ್ತಿ ತೋರಿಸುತ್ತದೆ.


Click it and Unblock the Notifications