ನವದೆಹಲಿ, ಮಾರ್ಚ್ 19: ಇವತ್ತಿನ ಮಾಡ್ರನ್ ತಂತ್ರಜ್ಞಾನದ ಯುಗದಲ್ಲಿ ಜಗತ್ತು ಸಾಧಿಸಿರುವ ಅಭಿವೃದ್ಧಿಗಾಗಿ ಆಪಲ್‌ನ ಸಹ-ಸ್ಥಾಪಕ ಮತ್ತು ಮಾಜಿ ಸಿಇಒ ಸ್ಟೀವ್ ಜಾಬ್ಸ್ ಅವರನ್ನು ವಿಶ್ವದಾದ್ಯಂತ ಕೋಟ್ಯಂತರ ಜನರು ನೆನಪಿಸಿಕೊಳ್ಳುತ್ತಾರೆ.
ಸ್ಟೀವ್ ತಮ್ಮ ತಾಂತ್ರಜ್ಞಾನದ ಕುರಿತ ಮಾತುಗಳು ಮತ್ತು ಸಾರ್ವಜನಿಕ ಭಾಷಣ ಶೈಲಿಯಿಂದ ಜನರನ್ನ ಆಕರ್ಷಿಸುವ ಖ್ಯಾತಿ ಹೊಂದಿದ್ದರು. ಇದೀಗ ಮೈಕ್ರೋಸಾಫ್ಟ್ ನ ಸಂಸ್ಥಾಪಕ ಬಿಲ್ ಗೇಟ್ಸ್ ಸ್ಟೀವ್ ಜಾಬ್ಸ್ ನ ಈ ಟ್ಯಾಲೆಂಟ್ ಬಗ್ಗೆ ಅಸೂಯೆ ರೂಪದಲ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಸ್ಟೀವ್ ರೀತಿ ವೇದಿಕೆಗಳಲ್ಲಿ ಯಾವುದೇ ತಯಾರಿ ಇಲ್ಲದೆ ಬಹಳ ಸಹಜವಾಗಿ ಮಾತನಾಡಲು ತಮಗೆ ಸಾಧ್ಯವಿಲ್ಲ ಎಂದು ಬಿಲ್ ಗೇಟ್ಸ್ ಹೇಳಿಕೊಂಡಿದ್ದಾರೆ. ಆರ್ಮ್‌ಚೇರ್ ಎಕ್ಸ್‌ಪರ್ಟ್ ಪಾಡ್‌ಕ್ಯಾಸ್ಟ್‌ನಲ್ಲಿ ಡ್ಯಾಕ್ಸ್ ಶೆಪರ್ಡ್ ಜೊತೆಗಿನ ಸಂದರ್ಶನದಲ್ಲಿ, ಬಿಲ್ ಗೇಟ್ಸ್ , ತಂತ್ರಜ್ಞಾನ ಮತ್ತು ಅದರ ಬಳಕೆಯ ಬಗ್ಗೆ ಸ್ಟೀವ್ ಜಾಬ್ಸ್ ಮಾತನಾಡಲು ಮಾಡಿಕೊಳ್ಳುವ ತಯಾರಿ ಮತ್ತು ಅದನ್ನು ಜನರಿಗೆ ತಲುಪಿಸುವ ರೀತಿ ಅಧ್ಬುತ. ನಾನು ಈ ವಿಷ್ಯದಲ್ಲಿ ಎಂದಿಗೂ ಅವರನ್ನು ಹಿಂದಿಕ್ಕಲು ಸಾಧ್ಯವಿಲ್ಲ ಎಂದಿದ್ದಾರೆ.
ಸ್ಟೀವ್ ಜಾಬ್ಸ್ ಓರ್ವ ಮಾಂತ್ರಿಕ ಎಂದ ಬಿಲ್ ಗೇಟ್ಸ್ !
ಇದೇ ಪಾಡ್‌ಕ್ಯಾಸ್ಟ್ ಸಮಯದಲ್ಲಿ, ಬಿಲ್ ಗೇಟ್ಸ್ ಮೈಕ್ರೋಸಾಫ್ಟ್ ಮತ್ತು ಆಪಲ್‌ನ ಪ್ರತಿನಿಧಿಗಳಾಗಿ ತಾವು ಮತ್ತು ಸ್ಟೀವ್ ಜಾಬ್ಸ್ ತಮ್ಮ ತಮ್ಮ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸಿದಿರೋದಾಗಿ ಹೇಳಿಕೊಂಡಿದ್ದಾರೆ. ಈ ಸ್ಪ್ರೆಡ್‌ಶೀಟ್‌ಗಳು ಮತ್ತು ಇಮೇಲ್‌ಗಳಂತಹ ಸಾಧನಗಳು ಎಷ್ಟು ಪ್ರಯೋಜನಕಾರಿ ಎಂದು ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಮನವರಿಕೆ ಮಾಡುವುದು ನಮಗೆ ದೊಡ್ಡ ಸವಾಲಾಗಿತ್ತು ಎಂದು ತಿಳಿಸಿದ್ದಾರೆ.

ಸಾರ್ವಜನಿಕ ಶಿಕ್ಷಣ, ಜಾಗತಿಕ ಆರೋಗ್ಯ ಮತ್ತು AI ಭವಿಷ್ಯಕ್ಕಾಗಿ ಜನರ ಬೆಂಬಲ ಪಡೆಯುವ ಪ್ರಯತ್ನದಲ್ಲಿ, ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಇಂದಿಗೂ ಸ್ಟೀವ್ ಜಾಬ್ಸ್ ಅವರ ಸಂವಹನ ವಿಧಾನವನ್ನು ಅನುಕರಿಸುತ್ತಿದ್ದಾರಂತೆ. ತಂತ್ರಜ್ಞಾನದ ವಿಷಯಗಳನ್ನು ವಿವರಿಸಲು ಮತ್ತು ಪ್ರತಿಕ್ರಿಯೆಯನ್ನು ಪಡೆಯಲು ನಾನು ಇಷ್ಟಪಡುತ್ತೇನೆ - ಅದನ್ನ ಸ್ಟೀವ್ ಜಾಬ್ಸ್ ಅದ್ಬುತವಾಗಿ ಮಾಡುತ್ತಿದರು ಎಂದು ಹೇಳಿದ್ದಾರೆ.
ಅವರ 2015 ರ ಪುಸ್ತಕ "ಬಿಕಮಿಂಗ್ ಸ್ಟೀವ್ ಜಾಬ್ಸ್" ನಲ್ಲಿ, ಲೇಖಕರಾದ ಬ್ರೆಂಟ್ ಸ್ಕ್ಲೆಂಡರ್ ಮತ್ತು ರಿಕ್ ಟೆಟ್ಜೆಲಿ ಮಾಜಿ ಆಪಲ್ ಸಿಇಒ ದೊಡ್ಡ ಭಾಷಣಗಳಿಗೆ ತಿಂಗಳುಗಳ ಮುಂಚಿತವಾಗಿ ಹೇಗೆ ತಯಾರಿ ನಡೆಸುತ್ತಾರೆ ಎಂಬುದನ್ನು ವಿವರಿಸಿದ್ದಾರೆ. ಇದೆಲ್ಲವೂ ತಿಳಿದಿದ್ದರೂ ನನಗೆ ಸಂಪೂರ್ಣ ತಯಾರಿ ನಡೆಸಿ ವೇದಿಕೆಗಳಲ್ಲಿ ಈ ರೀತಿ ಜನರನ್ನು ಸೆಳೆಯುವ ರೀತಿ ಮಾತನಾಡುವ ಕಲೆ ಕರಗತವಾಗಿಲ್ಲ , ಇದರಲ್ಲಿ ನಾನು ಸ್ಟೀವ್ ರೀತಿ ಮಾಂತ್ರಿಕನಾಗಲು ಬಯಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.
ಲಕ್ಷಾಂತರ ಕೋಟಿಗಳ ಒಡೆಯ ಬಿಲ್ ಗೇಟ್ಸ್ ನ ಈ ಮಾತುಗಳು ವೈರಲ್ ಆಗುತ್ತಿದ್ದು.. ಎಂಥ ಆಗರ್ಭ ಶ್ರೀಮಂತರಿಗೂ, ಕುಬೇರರಿಗೂ ಒಂದಲ್ಲ ಒಂದು ಕೊರತೆ ಇದ್ದೇ ಇರುತ್ತದೆ ಎಂದು ಜನ ಇದನ್ನ ಬಣ್ಣಿಸುತ್ತಿದ್ದಾರೆ. ಇದೇ ಸಂದರ್ಬದಲ್ಲಿ ಸ್ಟೀವ್ ಜಾಬ್ಸ್ ನ ಕೂಡ ಜಗತ್ತು ಮತ್ತೊಮ್ಮೆ ನೆನಪಿಸಿಕೊಂಡಿದೆ.


Click it and Unblock the Notifications