ನವದೆಹಲಿ, ಮಾರ್ಚ್ 15: ಮನುಷ್ಯ ತಾಂತ್ರಿಕವಾಗಿ ಅಭಿವೃದ್ಧಿ ಹೊಂದಿದಂತೆ ಆತನ ಬದುಕು ಮತ್ತಷ್ಟು ಸುಲಭವೂ ಮತ್ತು ಸರಳವೂ ಆಗಿದೆ. ಆದರೆ ಇದೇ ತಂತ್ರಜ್ಞಾನ ಒಂದೊಂದು ಬಾರಿ ಮನುಷ್ಯನ ಇಡೀ ಜೀವನವನ್ನೇ ಅಲುಗಾಡಿಸುತ್ತದೆ. ಅಂತಹದ್ದೇ ಘಟನೆ ಇದೀಗ ಮೊಬೈಲ್ ವಿಚಾರದಲ್ಲಿಯು ನಡೆಯುತ್ತಿದೆ. ಈ ಕುರಿತು ಕೇಂದ್ರದಿಂದ ಹೈ ಅಲರ್ಟ್ ಘೋಷಣೆಯಾಗಿದ್ದು, ಆಂಡ್ರಾಯ್ಡ್ ಮೊಬೈಲ್ ಬಳಸುತ್ತಿರುವ ಪ್ರತಿಯೊಬ್ಬರೂ ಈ ಸುದ್ದಿಯನ್ನು ಓದಲೇಬೇಕಿದೆ.
ಭಾರತ ಸರ್ಕಾರ ಲಕ್ಷಾಂತರ ಆಂಡ್ರಾಯ್ಡ್ ಬಳಕೆದಾರರಿಗೆ ಹೊಸ ಭದ್ರತಾ ಎಚ್ಚರಿಕೆಯನ್ನು ಈಗ ನೀಡಿದೆ ಅಂತಾ ವರದಿ ಬಂದಿದೆ. ಅದು ಏನೆಂದರೆ, ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (ಸಿಇಆರ್‌ಟಿ-ಇನ್) ಈ ವಾರ ಇತ್ತೀಚಿನ ಆವೃತ್ತಿಗಳನ್ನು ಚಾಲನೆ ಮಾಡುವ ಆಂಡ್ರಾಯ್ಡ್ ಮೋಬೈಲ್ ಬಳಕೆದಾರರಿಗೆ ಖಡಕ್ ಎಚ್ಚರಿಕೆ ನೀಡಿದೆ. ಅಕಸ್ಮಾತ್ ಮೊಬೈಲ್‌ಗಳ ಬಳಕೆದಾರರು, ಈ ಎಚ್ಚರಿಕೆ ಕಡೆಗಣಿಸಿದರೆ ನಿಮಗೆ ಹಾಗೂ ನಿಮ್ಮ ಮೊಬೈಲ್‌ಗೆ ಸಮಸ್ಯೆ ಕಟ್ಟಿಟ್ಟ ಬುತ್ತಿ. ಈ ಮಾಹಿತಿ ಸಂಪೂರ್ಣವಾಗಿ ನಮ್ಮ ಸುದ್ದಿಯಲ್ಲಿದೆ ಓದಿ ತಿಳಿಯಿರಿ.

ಯಾವ ಮೊಬೈಲ್‌ಗೆ ಸಮಸ್ಯೆ?
ಅಪರಿಚಿತ ಮೂಲಗಳಿಂದ ಸಿಗುವ ಆ್ಯಪ್ ಅಥವಾ ಅಪ್ಲಿಕೇಶನ್ ಡೌನ್ ಲೋಡ್ ಮಾಡಬಾರದು ಎಂಬ ಸಂದೇಶವನ್ನು ಇದೀಗ ಆಂಡ್ರಾಯ್ಡ್ ಬಳಕೆದಾರರಿಗೆ ನೀಡಲಾಗಿದೆ. ಇದರ ಜೊತೆಗೆ, ಅಪರಿಚಿತ ಲಿಂಕ್ ಬಂದಾಗ ಅದರ ಮೇಲೆ ಕ್ಲಿಕ್ ಮಾಡದಂತೆ ಕೂಡ ಎಚ್ಚರಿಕೆ ನೀಡಲಾಗಿದೆ. ಈ ತಪ್ಪು ಮಾಡಿದರೆ, ಇವು ನಿಮ್ಮ ಫೋನ್‌ನಲ್ಲಿ ಅನಿಯಂತ್ರಿತ ಕೋಡ್ ಕಾರ್ಯಗತಗೊಳಿಸಲು ಅನುವು ಮಾಡಿಕೊಡುವ ಸಾಮರ್ಥ್ಯ ಹೊಂದಿವೆ ಎಂದು ಎಚ್ಚರಿಕೆ ನೀಡಲಾಗಿದೆ. ಈ ಹಿಂದೆ ವೈರಸ್ ಮೂಲಕ ಆಟ ಆಡುತ್ತಿದ್ದ ಸೈಬರ್ ಕಳ್ಳರು ಈಗ ಬೇರೆ ಬೇರೆ ಮಾರ್ಗ ಕಂಡುಹಿಡಿದು ಮೊಬೈಲ್ ಬಳಕೆದಾರರನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ಹೀಗಾಗಿ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ. ಹಾಗಾದರೆ ಯಾವ ಯಾವ ಆಂಡ್ರಾಯ್ಡ್ ಮೊಬೈಲ್‌ನಲ್ಲಿ ಸಮಸ್ಯೆ ಎದುರಾಗಿದೆ?
ಈಗ ನೀಡಿರುವ ಎಚ್ಚರಿಕೆಯೇ ಹೇಳುವಂತೆ ಆಂಡ್ರಾಯ್ಡ್ ಆವೃತ್ತಿಗಳಾದ 12, 12 ಎಲ್, 13 ಮತ್ತು ಇತ್ತೀಚಿನ 14 ರ ಮೇಲೂ ಈ ರೀತಿ ಪರಿಣಾಮ ಎದುರಾಗುತ್ತಿದೆ. ಅಲ್ಲದೆ ಫ್ರೇಮ್ವರ್ಕ್, ಸಿಸ್ಟಮ್, ಎಆರ್‌ಎಂ ಘಟಕಗಳು & ಮೀಡಿಯಾಟೆಕ್ ಘಟಕಗಳು, ಕ್ವಾಲ್ಕಾಮ್ ಘಟಕ ಹಾಗೂ ಕ್ವಾಲ್ಕಾಮ್ ಕ್ಲೋಸ್-ಸೋರ್ಸ್ ಘಟಕಗಳಲ್ಲಿ ಅನೇಕ ದುರ್ಬಲತೆ ಇದೆ ಎಂಬ ವಿಚಾರ ಕೂಡ ತನಿಖೆಯಲ್ಲಿ ಬಯಲಾಗಿರುವ ಕಾರಣ, ಮೊಬೈಲ್ ಬಳಕೆದಾರರು ಗುರುತು & ಪರಿಚಯವೆ ಇಲ್ಲದ ಅಪ್ಲಿಕೇಷನ್ ಡೌನ್‌ಲೋಡ್ ಮಾಡುವ ಮೊದಲು ಎಚ್ಚರಿಕೆ ವಹಿಸಲು ತಿಳಿಸಲಾಗಿದೆ.
ಸೈಬರ್ ಕಳ್ಳರಿಗೆ ಕಡಿವಾಣ!
ಆಧುನಿಕ ಕಾಲದಲ್ಲಿ ಮೊಬೈಲ್ ಇಲ್ಲದೆಯೇ ಮನುಷ್ಯರು ಬದುಕುವ ಲಕ್ಷಣವೇ ಕಾಣುತ್ತಿಲ್ಲ. ಪ್ರತಿಯೊಂದು ವಿಚಾರಕ್ಕೂ ಮೊಬೈಲ್ ಅತ್ಯಗತ್ಯ. ದುಡ್ಡು ಖರ್ಚು ಮಾಡುವ ವಿಚಾರಕ್ಕೆ ಶುರುವಾಗಿ, ದುಡ್ಡು ಪಡೆಯುವ ವಿಚಾರದ ತನಕ ಮೊಬೈಲ್ ಬೇಕು. ಬೆಳಗ್ಗೆ ಎದ್ದ ತಕ್ಷಣ ಜನರು ಮುಖ ತೊಳೆಯುವ ಮೊದಲು ಮೊಬೈಲ್ ನೋಡುತ್ತಾರೆ ಎಂಬ ಕುಹಕವೂ ಇದೆ. ಹೀಗಿದ್ದಾಗ ಮೊಬೈಲ್ ಬಳಕೆದಾರರನ್ನು ಯಾಮಾರಿಸಿ ಹಣ ಕದಿಯುವ ಸೈಬರ್ ಕಳ್ಳರು, ಪ್ರತಿನಿತ್ಯ ಹಲವು ದಾರಿ ಹುಡುಕಿ ಮೋಸ ಮಾಡುತ್ತಾರೆ. ಹೀಗಾಗಿ ಅನಗತ್ಯ & ಅಪರಿಚಿತ ಅಪ್ಲಿಕೇಷನ್ ಡೌನ್‌ಲೋಡ್ ಮಾಡುವಾಗ ಎಚ್ಚರಿಕೆ ವಹಿಸಿ. ಹಾಗೇ ಸಿಕ್ಕ ಸಿಕ್ಕ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡುವ ಮೊದಲು ಒಮ್ಮೆ ಯೋಚಿಸಿ ನೋಡಿ.


Click it and Unblock the Notifications