ಮಾಸ್ಟರ್‌ಕಾರ್ಡ್‌ನ ಮಾಜಿ ಸಿಇಒ ಮತ್ತು ಭಾರತ ಮೂಲದ ಅಜಯ್ ಬಂಗಾರ ಹೆಸರನ್ನು ವಿಶ್ವಸಂಸ್ಥೆ ಅಧ್ಯಕ್ಷ ಸ್ಥಾನಕ್ಕೆ ವಾಷಿಂಗ್ಟನ್ ನಾಮನಿರ್ದೇಶನ (ಶಿಫಾರಸು) ಮಾಡುವುದಾಗಿ ಯುಎಸ್ ಅಧ್ಯಕ್ಷ ಜೋ ಬೈಡೆನ್ ಗುರುವಾರ ಹೇಳಿದ್ದಾರೆ. ಪ್ರಸ್ತುತ ವಿಶ್ವಬ್ಯಾಂಕ್‌ನ ಮುಖ್ಯಸ್ಥರಾದ ಡೇವಿಡ್ ಮಾಲ್ಪಾಸ್ ಶೀಘ್ರ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ ಬಳಿಕ ಯುಎಸ್ ಅಧ್ಯಕ್ಷ ವಿಶ್ವ ಸಂಸ್ಥೆ ಅಧ್ಯಕ್ಷ ಸ್ಥಾನಕ್ಕೆ ಅಜಯ್ ಬಂಗಾರನ್ನು ಶಿಫಾರಸು ಮಾಡಿದ್ದಾರೆ.
ಅಷ್ಟು ಮಾತ್ರವಲ್ಲದೆ ಯುಎಸ್ ಅಧ್ಯಕ್ಷ ಜೋ ಬೈಡೆನ್ ಅಜಯ್ ಬಂಗಾರ ಗುಣಗಾನವನ್ನು ಕೂಡಾ ಮಾಡಿದ್ದಾರೆ. "ಅಜಯ್ ಬಂಗಾ ಮೂರು ದಶಕಕ್ಕೂ ಅಧಿಕ ಸಮಯದಿಂದ ಜಾಗತಿಕವಾಗಿ ಉದ್ಯೋಗ ಸೃಷ್ಟಿ, ದೊಡ್ಡ ಆರ್ಥಿಕತೆಯಲ್ಲಿ ಹೂಡಿಕೆ ಸೃಷ್ಟಿಸುವಲ್ಲಿ, ಹಲವಾರು ಬದಲಾವಣೆಗಳ ಮೂಲಕವೇ ಜಾಗತಿಕವಾಗಿ ಸಂಸ್ಥೆಗಳಿಗೆ ಮಾರ್ಗದರ್ಶನವನ್ನು ಯಶಸ್ವಿಯಾಗಿ ನೀಡುತ್ತಾ ಬಂದಿದ್ದಾರೆ. ಅಂತಹ ವ್ಯಕ್ತಿಯ ಹೆಸರನ್ನು ವಾಷಿಂಗ್ಟನ್ ವಿಶ್ವ ಸಂಸ್ಥೆ ಅಧ್ಯಕ್ಷ ಸ್ಥಾನಕ್ಕೆ ನಾಮನಿರ್ದೇಶಿಸುತ್ತದೆ," ಎಂದಿದ್ದಾರೆ.

ಹಾಗಾದರೆ ಅಜಯ್ ಬಂಗಾ ಯಾರು ಎಂದು ತಿಳಿಯೋಣ ಮುಂದೆ ಓದಿ?
63 ವರ್ಷದ ಅಜಯ್ ಬಂಗಾ ಭಾರತೀಯ-ಅಮೇರಿಕನ್ ಆಗಿದ್ದಾರೆ. ಪ್ರಸ್ತುತ ಈಕ್ವಿಸಿ ಸಂಸ್ಥೆಯಾದ ಜನರಲ್ ಅಟ್ಲಾಟಿಕ್‌ನಲ್ಲಿ ಉಪಾಧ್ಯಕ್ಷರಾಗಿದ್ದಾರೆ. ಅದಕ್ಕೂ ಮುನ್ನ 2021ರಲ್ಲಿ ಆರಂಭವಾದ ಜನರಲ್ ಅಟ್ಲಾಂಟಿಕ್‌ನ ಬಿಯಾಂಡ್‌ನೆಟ್‌ಜಿರೋ ಸಾಹಸೋದ್ಯಮಕ್ಕೆ ಸಲಹೆಗಾರರಾಗಿದ್ದವರು. ಇದಕ್ಕೂ ಹಿಂದೆ ಮಾಸ್ಟರ್‌ಕಾರ್ಡ್‌ನ ಸಿಇಒ ಆಗಿ ಅಜಯ್ ಬಂಗಾ ಕಾರ್ಯನಿರ್ವಹಣೆ ಮಾಡಿದ್ದರು.
ಪ್ರಸ್ತುತ ವಿಶ್ವಬ್ಯಾಂಕ್‌ನ ಅಧ್ಯಕ್ಷ ಡೇವಿಡ್ ಮಾಲ್ಪಾಸ್ ಆಗಿದ್ದು, ತನ್ನ ಅವಧಿ ಪೂರ್ಣವಾಗುವುದಕ್ಕೂ ಮುನ್ನವೇ ಸ್ಥಾನವನ್ನು ತೊರೆಯುವುದಾಗಿ ಘೋಷಣೆ ಮಾಡಿದ್ದಾರೆ. ಆದ್ದರಿಂದಾಗಿ ಯುಎಸ್ ಅಧ್ಯಕ್ಷ ಜೋ ಬೈಡೆನ್ ವಿಶ್ವಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಭಾರತ ಮೂಲದ ಅಜಯ್ ಬಂಗಾ ಹೆಸರು ನಾಮನಿರ್ದೇಶನ ಮಾಡಿದ್ದಾರೆ. ಹಾಗೆಯೇ ಅಜಯ್ ಬಂಗಾರ ಸಾಮರ್ಥ್ಯವನ್ನು ಹಾಡಿಹೊಗಳಿದ್ದಾರೆ.
ಅಜಯ್ ಬಂಗಾ ಮಾಸ್ಟರ್‌ಕಾರ್ಡ್ ಮುಖ್ಯಸ್ಥರಾಗಿ ಮತ್ತು ಅಮೇರಿಕನ್ ರೆಡ್ ಕ್ರಾಸ್, ಕ್ರಾಫ್ಟ್ ಫುಡ್ಸ್ ಮತ್ತು ಡೌ ಇಂಕ್‌ನ ಮಂಡಳಿಗಳಲ್ಲಿಯೂ ಸೇವೆ ನೀಡಿದ್ದಾರೆ. ಒಟ್ಟಾಗಿ ಸುಮಾರು 30 ವರ್ಷಗಳ ಅನುಭವವನ್ನು ಅಜಯ್ ಬಂಗಾ ಹೊಂದಿದ್ದಾರೆ. ಇನ್ನು ನಾಮನಿರ್ದೇಶನಗೊಂಡ ಅಜಯ್ ಬಂಗಾರಿಗೆ ಯುಎಸ್-ಇಂಡಿಯಾ ಸ್ಟ್ರಾಟೆಜಿಕ್ ಪಾರ್ಟ್‌ನರ್‌ಶಿಪ್ ಫಾರಮ್ (ಯುಎಸ್‌ಐಎಸ್‌ಪಿಎಫ್) ಅಭಿನಂದನೆ ಸಲ್ಲಿಸಿದೆ.


Click it and Unblock the Notifications