ಬೆಂಗಳೂರು ವಿಮಾನ ನಿಲ್ದಾಣದಲ್ಲಿ 10% ಹೆಚ್ಚು ಖರೀದಿಸಲಿದೆ ಫೇರ್‌ಫ್ಯಾಕ್ಸ್ ಇಂಡಿಯಾ

ಫೇರ್‌ಫ್ಯಾಕ್ಸ್ ಇಂಡಿಯಾ ಹೋಲ್ಡಿಂಗ್ಸ್ ಕಾರ್ಪೊರೇಷನ್ ಬೆಂಗಳೂರಿನ ಕೆಂಪೇಗೌಡ ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್‌(BIAL)ನಲ್ಲಿ ತನ್ನ ಪಾಲನ್ನ 10% ಹೆಚ್ಚಿಸಿದೆ. ಅಂದರೆ ತನ್ನ ಪಾಲನ್ನು 255 ಮಿಲಿಯನ್‌ ಡಾಲರ್‌ಗೆ ಏರಿಕೆ ಮಾಡುವುದಾಗಿ ಹೇಳಿಕೊಂಡಿದೆ. ಭಾರತದ ಅತ್ಯಂತ ಬ್ಯುಸಿಯೆಸ್ಟ್‌ ವಿಮಾನ ನಿಲ್ದಾಣಗಳಲ್ಲಿ ಒಂದಾಗಿರುವ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ತನ್ನ ಪಾಲನ್ನ ಏರಿಕೆ ಮಾಡಿದೆ.

ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್‌ನಲ್ಲಿ ಕೆನಡಾದ ಬಿಲಿಯನೇರ್‌ ಪ್ರೇಮ್‌ ವಾತ್ಸಾ ಅವರ ಫೇರ್‌ ಫಾಕ್ಸ್‌ ಇಂಡಿಯಾದ ಷೇರು ಮೊದಲು ಶೇಕಡಾ 64 ರಷ್ಟಿತ್ತು ನಂತರ ಈ ಶೇಕಡಾ 10ರಷ್ಟು ಏರಿಕೆ ಮಾಡಿರುವುದರಿಂದ ಶೇಕಡಾ 74 ರಷ್ಟು ಪಾಲನ್ನ ಹೊಂದಲಿದೆ. ಜರ್ಮನಿಯ ಸೀಮೆನ್ಸ್‌ನಿಂದ ಆ 10% ಪಾಲನ್ನು ಖರೀದಿ ಮಾಡಲಿದೆ.

BIALನಲ್ಲಿ 10% ಹೆಚ್ಚು ಖರೀದಿಸಲಿದೆ ಫೇರ್‌ಫ್ಯಾಕ್ಸ್ ಇಂಡಿಯಾ

ಒಟ್ಟಾರೆ 255 ಮಿಲಿಯನ್‌ ಯುಎಸ್‌ ಡಾಲರ್‌ ಅಂದರೆ ಭಾರತದ ಕರೆನ್ಸಿಯಲ್ಲಿ 2,160 ಕೋಟಿ ರೂಪಾಯಿ ವಹಿವಾಟು ಮಾಡಲಿದೆ. ಎರಡು ಇತರ ಷೇರುದಾರರಾಗಿರುವ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಮತ್ತು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಷೇರುಗಳು BIALನಲ್ಲಿ ತಲಾ 13% ಪಾಲನ್ನ ಹೊಂದಿದ್ದು, ಇದರಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಇನ್ನು ಈ ಒಪ್ಪಂದವು ಮಾರ್ಚ್ ತ್ರೈಮಾಸಿಕದಲ್ಲಿ ಮುಕ್ತಾಯಗೊಳ್ಳುವ ನಿರೀಕ್ಷೆಯಿದ್ದು, ಇದರ ಜೊತೆಗೆ ಕೆನಡಾ ಮೂಲದ ಕಂಪಿಯಾಗಿರುವ ಫೇರ್‌ ಫಾಕ್ಸ್‌ ಇಂಡಿಯಾ ಜರ್ಮನಿಯ ಸೀಮೆನ್ಸ್‌ ಫೈನಾನ್ಶಿಯಲ್‌ ಸರ್ವೀಸಸ್‌ನ ಇಕ್ವಿಟಿಯನ್ನು ಖರೀದಿ ಮಾಡುವ ಮೂಲಕ ಬಿಐಎಎಲ್‌ನಲ್ಲಿ ಹಿಡಿತ ಸಾಧಿಸಲಿದೆ. ಇನ್ನು ಈ ಷೇರು ಖರೀದಿಗೆ ಬಹಿರಂಗಪಡಿಸಿದ ಬೆಲೆಯ ಆಧಾರದ ಮೇಲೆ BIAL ಅನ್ನು $2.55 ಬಿಲಿಯನ್‌ಗೆ ಕಾಯಂಗೊಳಿಸುತ್ತದೆ.

BIALನಲ್ಲಿ 2017ರಲ್ಲಿ ಆರಂಭವಾದ ನಮ್ಮ ಆರಂಭಿಕ ಹೂಡಿಕೆಯಿಂದ ಹಿಡಿದು ಇಲ್ಲಿಯವರೆಗೆ ಹೊಂದಿರುವ ಉತ್ತಮ ಪಾಲುದಾರಿಕೆಗಾಗಿ ನಾವು ಸೀಮೆನ್ಸ್‌ಗೆ ಧನ್ಯವಾದ ಹೇಳಲು ಬಯಸುತ್ತೇವೆ. BIAL ನಲ್ಲಿನ ಈ ಹೆಚ್ಚುವರಿ ಹೂಡಿಕೆಯು ಮುಂದುವರಿದ ಬೆಳವಣಿಗೆಯ ಅವಕಾಶಗಳಲ್ಲಿ ನಮ್ಮ ನಂಬಿಕೆಗೆ ಸಾಕ್ಷಿಯಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಮಾರಾರ್ ಮತ್ತು ಅವರ ನಿರ್ವಹಣಾ ತಂಡ ದಾಖಲೆಯನ್ನ ಬರೆಯಲಿದೆ ಎಂದು ಕೆನಾಡಾ ಮೂಲದ ಕಂಪನಿಯಾದ ಫೇರ್‌ಫ್ಯಾಕ್ಸ್ ಇಂಡಿಯಾದ ಸಂಸ್ಥಾಪಕ ಪ್ರೇಮ್ ವಾತ್ಸಾ ಹೇಳಿದರು.

ಭಾರತೀಯ-ಕೆನಡಾದ ಬಿಲಿಯನೇರ್ ವಾಟ್ಸಾ ಅವರು ಭಾರತೀಯ ಕಂಪನಿಗಳಲ್ಲಿ ಹೂಡಿಕೆ ಮಾಡಲು 2014ರಲ್ಲಿ ಫೇರ್‌ಫ್ಯಾಕ್ಸ್ ಇಂಡಿಯಾವನ್ನು ಸ್ಥಾಪಿಸಿದರು. ಫೇರ್‌ಫ್ಯಾಕ್ಸ್ ಫೈನಾನ್ಶಿಯಲ್ ಹೋಲ್ಡಿಂಗ್ಸ್ $93 ಶತಕೋಟಿ ಆಸ್ತಿಯನ್ನು ಹೊಂದಿರುವ ಜಾಗತಿಕ ಆಸ್ತಿ ಮತ್ತು ಅಪಘಾತ ವಿಮಾ ಕಂಪನಿಯಾಗಿದ್ದು, ಫೇರ್‌ಫ್ಯಾಕ್ಸ್ ಫೈನಾನ್ಶಿಯಲ್ ಹೋಲ್ಡಿಂಗ್ಸ್ ಲಿಮಿಟೆಡ್ ಕೆನಡಾದ ಮೂಲದ ಕಂಪನಿಯಾಗಿದೆ. ಆಸ್ತಿ ಮತ್ತು ಅಪಘಾತ ವಿಮೆ ಮತ್ತು ಮರುವಿಮೆ ಮತ್ತು ಹೂಡಿಕೆ ನಿರ್ವಹಣೆಯ ವ್ಯವಹಾರದಲ್ಲಿ ತೊಡಗಿಸಿಕೊಂಡಿದೆ. ಪ್ರೇಮ್ ವಾಟ್ಸಾ ಅವರು ಈ ಕಂಪನಿಯನ್ನು ಸ್ಥಾಪಿಸಿದ್ದು, ಜಾಗತಿಕ ಹಣಕಾಸು ಮಾರುಕಟ್ಟೆಗಳಲ್ಲಿ, ವಿಶೇಷವಾಗಿ ವಿಮೆ ಮತ್ತು ಮರುವಿಮೆ ಕ್ಷೇತ್ರಗಳಲ್ಲಿ ಪ್ರಮುಖ ಕಂಪನಿಯಾಗಿ ಗುರುತಿಸಿಕೊಂಡಿದೆ. ಇನ್ನು ವಾಟ್ಸಾ ಅವರು ಫೇರ್‌ಫ್ಯಾಕ್ಸ್ ಹೋಲ್ಡಿಂಗ್ಸ್‌ನ ಅಧ್ಯಕ್ಷರು ಮತ್ತು CEO ಆಗಿದ್ದಾರೆ.

ಬಿಐಎಎಲ್ ಹೊರತು ಪಡಿಸಿ, ಫೇರ್‌ಫ್ಯಾಕ್ಸ್ ಇಂಡಿಯಾ ಕೂಡ ಸಿಎಸ್‌ಬಿ ಬ್ಯಾಂಕ್‌ನಲ್ಲಿ ನಿಯಂತ್ರಣ ಷೇರನ್ನು ಹೊಂದಿದೆ. ಹಾಗೆ ಇದರ ಇತರ ಹೂಡಿಕೆಗಳಾದ IIFL ಫೈನಾನ್ಸ್, ಫೇರ್‌ಚೆಮ್ ಆರ್ಗಾನಿಕ್ಸ್, ಸನ್ಮಾರ್ ಮತ್ತು ಸೆವೆನ್ ಐಲ್ಯಾಂಡ್ಸ್ ಶಿಪ್ಪಿಂಗ್‌ನಲ್ಲಿನ ಪಾಲನ್ನು ಒಳಗೊಂಡಿವೆ. ಥಾಮಸ್ ಕುಕ್ ಇಂಡಿಯಾದ ಪಾಲನ್ನು ಕೂಡ ಫೇರ್‌ಫ್ಯಾಕ್ಸ್ ಹೊಂದಿದೆ ಆದರೆ ಅದನ್ನು ನೇರವಾಗಿ ಫೇರ್‌ಫ್ಯಾಕ್ಸ್ ಫೈನಾನ್ಶಿಯಲ್ ಹೋಲ್ಡಿಂಗ್ಸ್ ಹೊಂದಿದೆ.

2016 ರಲ್ಲಿ ಫೇರ್‌ಫ್ಯಾಕ್ಸ್ ತನ್ನ ಹಿಂದಿನ ಷೇರುದಾರ GVK ಪವರ್ ಮತ್ತು ಇನ್‌ಫ್ರಾಸ್ಟ್ರಕ್ಚರ್‌ನಿಂದ BIAL ನಲ್ಲಿ 33% ಪಾಲನ್ನು ಸ್ವಾಧೀನಪಡಿಸಿಕೊಂಡಿತು. GVK ಮತ್ತು ಜ್ಯೂರಿಚ್ ಏರ್‌ಪೋರ್ಟ್ ಮತ್ತು ಸೀಮೆನ್ಸ್‌ನಂತಹ ಇತರ ಷೇರುದಾರರಿಂದ ಹೆಚ್ಚಿನ ಷೇರುಗಳನ್ನು ಖರೀದಿಸುವ ಮೂಲಕ ಫೇರ್‌ ಫಾಕ್ಸ‌ ತನ್ನ ಪಾಲನ್ನು ಹೆಚ್ಚಿಸಿಕೊಂಡಿದೆ.

ಬಿಐಎಎಲ್ ಬೆಂಗಳೂರು ಮೂಲದ ಖಾಸಗಿ ಕಂಪನಿಯಾಗಿದೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮೂಲಕ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಭಿವೃದ್ಧಿ, ವಿನ್ಯಾಸ, ಹಣಕಾಸು, ನಿರ್ಮಾಣ, ಕಾರ್ಯಾರಂಭ, ನಿರ್ವಹಣೆ, ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಪ್ರತ್ಯೇಕವಾಗಿ ಕೈಗೊಳ್ಳಲು 2068ರ ವರೆಗೆ ಭಾರತ ಸರ್ಕಾರದೊಂದಿಗೆ ರಿಯಾಯಿತಿ ಒಪ್ಪಂದವನ್ನು ಹೊಂದಿದೆ.

ಅಲ್ಲದೆ ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್ (BIAL) ಭಾರತದ ಬೆಂಗಳೂರಿನಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (BLR) ಕಾರ್ಯಾಚರಣೆ ಮತ್ತು ನಿರ್ವಹಣೆಯ ಜವಾಬ್ದಾರಿಯುತ ಕಂಪನಿಯಾಗಿದೆ . BIAL ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (PPP) ಸಾಹಸೋದ್ಯಮವಾಗಿದ್ದು, ಇದು ಭಾರತದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣದ ಅಭಿವೃದ್ಧಿ ಮತ್ತು ಕಾರ್ಯನಿರ್ವಹಣೆಯನ್ನು ನೋಡಿಕೊಳ್ಳುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+